ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೈಯಲ್ಲಿ ದುಡ್ಡು ನಿಲ್ತಿಲ್ವಾ; ತ್ವರಿತ ಹಣದ ಹರಿವಿಗೆ ಪರಿಣಾಮಕಾರಿ ವಾಸ್ತು ಸಲಹೆಗಳಿವು

ಕೈಯಲ್ಲಿ ದುಡ್ಡು ನಿಲ್ತಿಲ್ವಾ; ತ್ವರಿತ ಹಣದ ಹರಿವಿಗೆ ಪರಿಣಾಮಕಾರಿ ವಾಸ್ತು ಸಲಹೆಗಳಿವು

ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿದ್ದರೆ ಹಣದ ಸಮಸ್ಯೆಯನ್ನು ಹೋಗಲಾಡಿಸಬಹುದು. ಮನೆಯಲ್ಲಿ ಆರ್ಥಿಕ ಸಮಸ್ಯೆ ನಿಮ್ಮನ್ನೂ ಕಾಡುತ್ತಿದ್ದರೆ, ವಾಸ್ತು ಪ್ರಕಾರ ಪರಿಣಾಮಕಾರಿ ವಾಸ್ತು ಪರಿಹಾರ ಕಂಡುಕೊಳ್ಳುವುದು ಉತ್ತಮ.

ಕೈಯಲ್ಲಿ ದುಡ್ಡು ನಿಲ್ತಿಲ್ವಾ; ತ್ವರಿತ ಹಣದ ಹರಿವಿಗೆ ಪರಿಣಾಮಕಾರಿ ವಾಸ್ತು ಸಲಹೆಗಳಿವು
ಕೈಯಲ್ಲಿ ದುಡ್ಡು ನಿಲ್ತಿಲ್ವಾ; ತ್ವರಿತ ಹಣದ ಹರಿವಿಗೆ ಪರಿಣಾಮಕಾರಿ ವಾಸ್ತು ಸಲಹೆಗಳಿವು

ದಿಢೀರ್ ಶ್ರೀಮಂತರಾಗಬೇಕು ಎಂಬುದು ಹಲವರ ಆಸೆ, ಕನಸು. ಅಪಾರ ಹಣ ಸಂಪಾದನೆ ಮಾಡಬೇಕು, ಆರ್ಥಿಕ ಲಾಭ ಗಳಿಸಬೇಕು ಎಂಬ ನಿರೀಕ್ಷೆ ಮಧ್ಯಮ ವರ್ಗದವರು ಮಾತ್ರವಲ್ಲದೆ ಬಹುತೇಕ ಎಲ್ಲರ ಇರಾದೆ. ಕೆಲವೊಬ್ಬರು ಎಷ್ಟೇ ಹಣ ಸಂಪಾದಿಸಿದರೂ ಕೈಯಲ್ಲಿ ದುಡ್ಡು ಉಳಿಯುವುದಿಲ್ಲ ಎಂಬ ಬೇಸರದಲ್ಲಿರುತ್ತಾರೆ. ಇನ್ನೂ ಕೆಲವರು ವ್ಯಾಪಾರ-ವ್ಯವಹಾರದಲ್ಲಿ ಲಾಭ ಗಳಿಸಲು ಪರದಾಡುತ್ತಾರೆ. ಇದು ಕೆಲವೊಂದು ವಾಸ್ತು ದೋಷಗಳಿಂದಲೂ ಆಗಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಕೆಲವೊಂದು ಏರುಪೇರುಗಳಾದರೆ ಆರ್ಥಿಕ ಸಮಸ್ಯೆ ಸಂಭವಿಸುತ್ತದೆ. ಕಟ್ಟುವ ಮನೆ ಅಥವಾ ಯಾವುದೇ ಕಟ್ಟಡಗಳ ವಿನ್ಯಾಸವು ವಾಸ್ತು ಪ್ರಕಾರ ಇರಬೇಕು. ವಿನ್ಯಾಸ ಸರಿಯಿದ್ದರೆ ಹಣವನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿದ್ದರೆ, ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಬಹುದು. ಹಣಕಾಸಿನ ಸಮಸ್ಯೆ ನಿಮ್ಮನ್ನೂ ಕಾಡುತ್ತಿದ್ದರೆ, ವಾಸ್ತು ಪ್ರಕಾರ ಪರಿಣಾಮಕಾರಿ ವಾಸ್ತು ಪರಿಹಾರಗಳನ್ನು ಮಾಡುವುದು ಉತ್ತಮ. ನಿಮ್ಮ ಮನೆ ಅಥವಾ ಕೆಲಸದ ಸ್ಥಳದಲ್ಲಿ ಈ ಪರಿಹಾರಗಳನ್ನು ಮಾಡುವ ಮೂಲಕ, ನೀವು ಲಕ್ಷ್ಮೀದೇವಿಯ ಅನುಗ್ರಹ ಪಡೆಯಬಹುದು.

ತ್ವರಿತ ಆರ್ಥಿಕ ಬೆಳವಣಿಗೆಗೆ ವಾಸ್ತು ಸಲಹೆಗಳು

ಉತ್ತರ ದಿಕ್ಕಿನ ಮೇಲೆ ವಿಶೇಷ ಗಮನವಿರಲಿ

ವೃತ್ತಿಯಲ್ಲಿನ ಬೆಳವಣಿಗೆ ಸಾಧಿಸುವುದು ಉತ್ತರ ದಿಕ್ಕಿಗೆ ಸಂಬಂಧಿಸಿದೆ. ಮನೆ ಅಥವಾ ಕಚೇರಿಯ ಉತ್ತರ ದಿಕ್ಕು ಅಸ್ತವ್ಯಸ್ತತೆಯಿಂದ ಇರಬಾರದು. ಮನೆ ಅಥವಾ ವ್ಯಾಪಾರದ ಸ್ಥಳದ ಉತ್ತರ ಭಾಗದಲ್ಲಿ ಮನಿ ಪ್ಲಾಂಟ್ ಅಥವಾ ಸಂಪತ್ತಿನ ಸ್ಫಟಿಕವನ್ನು ಇರಿಸಿ. ನಿಮ್ಮ ಶಕ್ತಿಯನ್ನು ಉತ್ತರ ದಿಕ್ಕಿಗೆ ಸಾಧ್ಯವಾದಷ್ಟು ನಿರ್ದೇಶಿಸುವ ಮೂಲಕ ಹಣಕಾಸಿನಲ್ಲಿ ತ್ವರಿತ ಬೆಳವಣಿಗೆ ಸಾಧಿಸಬಹುದು.

ಅದೃಷ್ಟದ ಬಣ್ಣಗಳನ್ನು ಬಳಸಿ

ವಾಸ್ತು ಮತ್ತು ಬಣ್ಣಗಳಿಗೆ ಸಂಬಂಧವಿದೆ. ಮನೆ ಅಥವಾ ಕಚೇರಿ ಸ್ಥಳಗಳಲ್ಲಿ ಧನಕನಕ ಸಮೃದ್ಧಿಯಾಗಲು ಮನೆಯ ಒಳಾಂಗಣ ವಿನ್ಯಾಸಕ್ಕೆ ಸೂಕ್ತ ಬಣ್ಣಗಳನ್ನು ಬಳಸಬಹುದು. ಅದೃಷ್ಟದ ಬಣ್ಣಗಳನ್ನು ಹಚ್ಚುವುದು ಒಳ್ಳೆಯದು. ನೇರಳೆ ಮತ್ತು ಚಿನ್ನದ ಕಾಂಬಿನೇಶನ್ ಯಶಸ್ಸನ್ನು ಸೂಚಿಸುತ್ತವೆ. ಇದೇ ವೇಳೆ ಹಸಿರು ಬಣ್ಣ ಸಮೃದ್ಧಿಯನ್ನು ಸಂಕೇತಿಸುತ್ತದೆ.

ಮನೆ ಅಸ್ತವ್ಯಸ್ತವಾಗಿರಬಾರದು, ಸೋರಿಕೆ ತಡೆಗಟ್ಟಿ

ಮನೆಯಲ್ಲಿ ಹಣದ ಹರಿವನ್ನು ಸುಧಾರಿಸಲು ಮನೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಯಾವುದೇ ರೀತಿ ನೀರು ಸೋರಿಕೆಯಾಗದಂತೆ ಬಿರುಕುಗಳಿಲ್ಲದಂತೆ ನೋಡಿಕೊಳ್ಳಿ. ಬಿರುಕು, ಅಡೆತಡೆಗನ್ನು ಸರಿಪಡಿಸಿ. ಹಣದ ನಷ್ಟವನ್ನು ಪ್ರತಿನಿಧಿಸುವುದರಿಂದ ಯಾವುದೇ ಪೈಪ್ ಸೋರುತ್ತಿದ್ದರೆ ಅಥವಾ ನಲ್ಲಿಗಳು ಲೀಕೇಜ್‌ ಇದ್ದರೆ ಸರಿಪಡಿಸಿ. ಶಕ್ತಿಯ ಮುಕ್ತ ಹರಿವನ್ನು ಸುಗಮಗೊಳಿಸಲು, ಸಂಪತ್ತು ಮತ್ತು ಆರ್ಥಿಕ ಬೆಳವಣಿಗೆಯನ್ನು ಸ್ವಾಗತಿಸಲು ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಕ್ರಮಬದ್ಧವಾಗಿ ಇರಿಸಿ.

ಅದೃಷ್ಟದ ಚಿಹ್ನೆಗಳನ್ನು ಬಳಸಿ

ಕೆಲವೊಂದು ಚಿಹ್ನೆಗಳನ್ನು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಇದರಿಂದ ಆರ್ಥಿಕ ಯೋಗಕ್ಷೇಮಕ್ಕೆ ಒಳ್ಳೆಯದು. ಮೂರು ಕಾಲಿನ ಕಪ್ಪೆ, ನಗುತ್ತಿರುವ ಬುದ್ಧ ಇವುಗಳನ್ನು ಸಂಪತ್ತಿನ ಮೂಲೆಯಲ್ಲಿ ಅಥವಾ ಬಾಗಿಲ ಬಳಿ ಇರಿಸಿ. ಇವು ಅದೃಷ್ಟ ಮತ್ತು ಹಣವನ್ನು ಸೆಳೆಯುತ್ತವೆ ಎಂದು ಹೇಳಲಾಗುತ್ತದೆ.

ಸಂಪತ್ತಿನ ಮೂಲೆಯನ್ನು ಸಕ್ರಿಯಗೊಳಿಸಿ

ನಿಮ್ಮ ಮನೆ ಅಥವಾ ವ್ಯಾಪಾರದ ಸ್ಥಳದ ಆಗ್ನೇಯ ಮೂಲೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ಸಂಪತ್ತಿನ ಮೂಲೆ ಎಂದು ಪರಿಗಣಿಸಲಾಗುತ್ತದೆ. ಈ ಪ್ರದೇಶವನ್ನು ಸಕ್ರಿಯವಾಗಿಡಿ. ಮನಿ ಪ್ಲಾಂಟ್, ಸಂಪತ್ತಿನ ದೇವತೆ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ. ಜಾಗವನ್ನು ಅಚ್ಚುಕಟ್ಟಾಗಿಡಿ. ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಂಪತ್ತಿನ ಮೂಲೆಯನ್ನು ಸಕ್ರಿಯವಾಗಿಡುವ ಮಾಡುವ ಹಣ ಗಳಿಸುವ ಅವಕಾಶ ಹೆಚ್ಚಿಸಬಹುದು.

ವಿಭಾಗ