ಕನ್ನಡಿಗೂ ಇದೆ ವಾಸ್ತು ನಿಯಮ; ಮನೆಯ ಯಾವ ಭಾಗದಲ್ಲಿ, ಯಾವ ಆಕಾರದ ಕನ್ನಡಿ ಇದ್ದರೆ ಶುಭ ಫಲ ದೊರೆಯಲಿದೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡಿಗೂ ಇದೆ ವಾಸ್ತು ನಿಯಮ; ಮನೆಯ ಯಾವ ಭಾಗದಲ್ಲಿ, ಯಾವ ಆಕಾರದ ಕನ್ನಡಿ ಇದ್ದರೆ ಶುಭ ಫಲ ದೊರೆಯಲಿದೆ?

ಕನ್ನಡಿಗೂ ಇದೆ ವಾಸ್ತು ನಿಯಮ; ಮನೆಯ ಯಾವ ಭಾಗದಲ್ಲಿ, ಯಾವ ಆಕಾರದ ಕನ್ನಡಿ ಇದ್ದರೆ ಶುಭ ಫಲ ದೊರೆಯಲಿದೆ?

Vastu Tips For Mirror: ಸುಂದರ ಕನ್ನಡಿ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕನ್ನಡಿ ಬಳಸುವಾಗ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕು. ವಾಸ್ತು ಪ್ರಕಾರ ಕನ್ನಡಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ. (ಬರಹ: ಅರ್ಚನಾ ವಿ ಭಟ್‌)

ಕನ್ನಡಿಗೂ ಇದೆ ವಾಸ್ತು ನಿಯಮ; ಮನೆಯ ಯಾವ ಭಾಗದಲ್ಲಿ, ಯಾವ ಆಕಾರದ ಕನ್ನಡಿ ಇದ್ದರೆ ಶುಭ ಫಲ ದೊರೆಯಲಿದೆ?
ಕನ್ನಡಿಗೂ ಇದೆ ವಾಸ್ತು ನಿಯಮ; ಮನೆಯ ಯಾವ ಭಾಗದಲ್ಲಿ, ಯಾವ ಆಕಾರದ ಕನ್ನಡಿ ಇದ್ದರೆ ಶುಭ ಫಲ ದೊರೆಯಲಿದೆ?

ಕನ್ನಡಿಯಿಲ್ಲದ ಮನೆಯೇ ಇಲ್ಲ ಬಿಡಿ. ನಮ್ಮನ್ನು ಅಷ್ಟು ಗಾಢವಾಗಿ ಆವರಿಸಿಕೊಂಡಿರುವ ವಸ್ತುವದು. ನಮ್ಮ ಉಡುಗೆ–ತೊಡುಗೆ, ಅಲಂಕಾರ ಎಲ್ಲವನ್ನು ಪರಿಶೀಲನೆ ಮಾಡಿಕೊಳ್ಳಲು ಇರುವ ಅತ್ಯಂತ ಅಗತ್ಯ ವಸ್ತು ಕನ್ನಡಿ. ಹಾಗಾಗಿ ಮನೆಯಲ್ಲಿ ಕನ್ನಡಿಯನ್ನು ಅನುಕೂಲಕ್ಕೆ ತಕ್ಕಂತೆ ಹಾಕಲಾಗುತ್ತದೆ. ಆದರೆ ಕನ್ನಡಿಯನ್ನು ಸರಿಯಾದ ದಿಕ್ಕು ಮತ್ತು ಜಾಗದಲ್ಲಿ ಇಡದಿದ್ದರೆ ಅನಾಹುತಗಳಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಕನ್ನಡಿಗೂ ಇದೆ ವಾಸ್ತು ನಿಯಮ

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುವನ್ನು ಇಡಲು ಸರಿಯಾದ ಸ್ಥಳ ಮತ್ತು ದಿಕ್ಕನ್ನು ಹೇಳಲಾಗಿದೆ. ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವಾಸ್ತು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ ಮಾಡುವ ಅನೇಕ ಕಾರ್ಯಗಳು ಮನೆಗೆ ಸಂತೋಷವನ್ನು ತರುತ್ತವೆ. ಮನೆಯಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತವೆ. 

ಆದರೆ ಕೆಲವು ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಬಹುದು. ಇದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಅದೇ ರೀತಿ ಮನೆಯಲ್ಲಿ ಕನ್ನಡಿಯನ್ನು ಇಡಲು ಕೆಲವು ನಿಯಮಗಳಿಗೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅವುಗಳನ್ನು ಅನುಸರಿಸುವ ಮೂಲಕ ವಾಸ್ತು ದೋಷಗಳನ್ನು ಹೋಗಲಾಡಿಸಿ ಸುಖಮಯ ಜೀವನ ನಡೆಸಬಹುದು. ಹಾಗಾದ್ರೆ ಮನೆಯಲ್ಲಿ ಕನ್ನಡಿ ಎಲ್ಲಿರಬೇಕು ಎಂದು ನೋಡೋಣ.

ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಎಲ್ಲಿ ಇಡಬೇಕು ಮತ್ತು ಕನ್ನಡಿಗೆ ಸಂಬಂಧಪಟ್ಟ ನಿಯಮಗಳೇನು?

* ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿ ಇಡಬಾರದು. ಕನ್ನಡಿಯಲ್ಲಿ ಹಾಸಿಗೆಯ ಪ್ರತಿಬಿಂಬವನ್ನು ನೋಡಿದರೆ ವಾಸ್ತು ದೋಷ ಉಂಟಾಗುತ್ತದೆ ಎಂದು ಹೇಳಲಾಗಿದೆ. ಇದು ವೈವಾಹಿಕ ಜೀವನದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪತಿ-ಪತ್ನಿಯರ ನಡುವೆ ಜಗಳವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ನೀವು ಹಾಸಿಗೆಯ ಮುಂದೆ ಕನ್ನಡಿ ಹಾಕಬೇಡಿ.

* ಜೀವನದಲ್ಲಿ ಪ್ರಗತಿ ಹೊಂದಲು ಮತ್ತು ಲಾಭ ಗಳಿಸಲು ಮನೆಯ ಉತ್ತರ ಮತ್ತು ಪೂರ್ವ ಗೋಡೆಗಳ ಮೇಲೆ ಕನ್ನಡಿಯನ್ನು ಇರಿಸಬಹುದು ಎಂದು ವಾಸ್ತು ಹೇಳುತ್ತದೆ. ಇದು ಆರ್ಥಿಕ ನಷ್ಟದಿಂದ ನಿಮ್ಮನ್ನು ಉಳಿಸುತ್ತದೆ. ಸಂಪತ್ತು ಹೆಚ್ಚುತ್ತದೆ. ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

* ಕನ್ನಡಿ ಎಂದೂ ಕೊಳಕಾಗಬಾರದು. ಮಬ್ಬಾಗಿರುವ ಕನ್ನಡಿ ಮನೆಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಕನ್ನಡಿಯ ಸ್ವಚ್ಛತೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು.

* ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ದಿನವಿಡೀ ನಕಾರಾತ್ಮಕ ಆಲೋಚನೆಗಳನ್ನು ಹೊಂದುವಂತೆ ಮಾಡುತ್ತದೆ. ಅದಕ್ಕಾಗಿಯೇ ನೀವು ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಬಾರದು.

* ಮನೆಯಲ್ಲಿ ಒಡೆದ ಕನ್ನಡಿ ಅಥವಾ ಒಡೆದ ಗಾಜನ್ನು ಬಳಸಬಾರದು. ಇದು ಜೀವನದಲ್ಲಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

* ವಾಸ್ತು ಪ್ರಕಾರ ಮನೆಯ ಬಾಗಿಲಿನ ಮುಂದೆ ವೃತ್ತಾಕಾರದ ಕನ್ನಡಿಯನ್ನು ಇಡುವುದರಿಂದ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ಇದು ಮನೆಯನ್ನು ಆರ್ಥಿಕ ತೊಂದರೆಗಳಿಂದ ದೂರವಿಡುತ್ತದೆ. ಆದರೆ ಅಪ್ಪಿತಪ್ಪಿಯೂ ಅಡುಗೆ ಮನೆಯಲ್ಲಿ ಕನ್ನಡಿ ಹಾಕಬೇಡಿ. ಇದು ಅಶುಭವೆಂದು ಪರಿಗಣಿಸಲಾಗಿದೆ.

* ಮನೆಯ ದಕ್ಷಿಣ ಮತ್ತು ಪಶ್ಚಿಮ ಗೋಡೆಗೆ ಕನ್ನಡಿ ಹಾಕುವುದು ಒಳ್ಳೆಯದಲ್ಲ. ಇದು ಕುಟುಂಬ ಜೀವನದಲ್ಲಿ ಅಶಾಂತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಹೇಳುತ್ತದೆ. ನೈಋತ್ಯ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದರಿಂದ ನೀವು ಮಾಡುತ್ತಿರುವ ಕೆಲಸಗಳು ಸ್ಥಗಿತಗೊಳ್ಳುತ್ತವೆ.

* ವಾಸ್ತು ಪ್ರಕಾರ ಕೊಳಕಾದ ಮತ್ತು ಮಬ್ಬಾಗಿ ಕಾಣುವ ಗಾಜಿನ ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬಾರದು ಅಥವಾ ಬಳಸಬಾರದು. ಇದು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ.

* ಸ್ಟೋರ್ ರೂಂನಲ್ಲಿ ಕನ್ನಡಿಯನ್ನು ಎಂದಿಗೂ ಹಾಕಬೇಡಿ. ಇದು ಕುಟುಂಬದ ಸದಸ್ಯರಲ್ಲಿ ಭಾವನಾತ್ಮಕ ಒತ್ತಡವನ್ನು ಹೆಚ್ಚಿಸುತ್ತದೆ.

* ಒಡೆದ ಕನ್ನಡಿಯನ್ನು ಹೆಚ್ಚು ಕಾಲ ಮನೆಯಲ್ಲಿ ಇಡಬಾರದು. ತಕ್ಷಣ ಅದನ್ನು ಮನೆಯಿಂದ ತೆಗೆದುಹಾಕಿ. ಅದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್‌

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.