Vastu Tips: ಮನೆ ಮುಂದಿನ ನಾಮ ಫಲಕಕ್ಕೂ ಇದೆ ವಾಸ್ತು; ಈ ದಿಕ್ಕಿನಲ್ಲಿ ನೇಮ್‌ ಪ್ಲೇಟ್‌ ಇರಿಸಿದರೆ ಮನೆಯಲ್ಲಿ ನೆಲೆಸಲಿದೆ ಸಮೃದ್ಧಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಮನೆ ಮುಂದಿನ ನಾಮ ಫಲಕಕ್ಕೂ ಇದೆ ವಾಸ್ತು; ಈ ದಿಕ್ಕಿನಲ್ಲಿ ನೇಮ್‌ ಪ್ಲೇಟ್‌ ಇರಿಸಿದರೆ ಮನೆಯಲ್ಲಿ ನೆಲೆಸಲಿದೆ ಸಮೃದ್ಧಿ

Vastu Tips: ಮನೆ ಮುಂದಿನ ನಾಮ ಫಲಕಕ್ಕೂ ಇದೆ ವಾಸ್ತು; ಈ ದಿಕ್ಕಿನಲ್ಲಿ ನೇಮ್‌ ಪ್ಲೇಟ್‌ ಇರಿಸಿದರೆ ಮನೆಯಲ್ಲಿ ನೆಲೆಸಲಿದೆ ಸಮೃದ್ಧಿ

Vastu Tips: ಮನೆಯ ಪ್ರತಿ ಕೋಣೆಗೂ, ಬಾಗಿಲಿಗೂ ಹೇಗೆ ವಾಸ್ತು ಬೇಕೋ ಹಾಗೇ ನಾಮಫಲಕ ಅಳವಡಿಸಲು ಕೂಡಾ ವಾಸ್ತು ಬಹಳ ಮುಖ್ಯ. ಯಾವ ದಿಕ್ಕಿಗೆ ನಾಮ ಫಲಕ ಹಾಕಿದರೆ ಒಳಿತು? ಯಾವ ರೀತಿಯ ನಾಮ ಫಲಕ ಹಾಕಿದರೆ ಉತ್ತಮ ಎಂಬುದನ್ನು ತಿಳಿಯಿರಿ.

ವಾಸ್ತು ಪ್ರಕಾರ ನಾಮ ಫಲಕ ಅಳವಡಿಸಿದರೆ ಮನೆಯಲ್ಲಿ ನೆಲೆಸಲಿದೆ ಸುಖ, ಸಮೃದ್ಧಿ
ವಾಸ್ತು ಪ್ರಕಾರ ನಾಮ ಫಲಕ ಅಳವಡಿಸಿದರೆ ಮನೆಯಲ್ಲಿ ನೆಲೆಸಲಿದೆ ಸುಖ, ಸಮೃದ್ಧಿ

ವಾಸ್ತು ಸಲಹೆ: ಇತ್ತೀಚೆಗೆ ಮನೆಗಳ ಮುಂದೆ ನಾಮಫಲಕ ಹಾಕುವ ಟ್ರೆಂಡ್ ಹೆಚ್ಚಾಗುತ್ತಿದೆ. ಮನೆಗೆ ತಕ್ಕಂತೆ ದೇವರ ಹೆಸರು ಅಥವಾ ತಮ್ಮ ಮೆಚ್ಚಿನ ಕುಟುಂಬದ ಸದಸ್ಯರ ಹೆಸರು ಅಥವಾ ತಮಗಿಷ್ಟವಾದ ವೆರೈಟಿ ಡಿಸೈನ್‌ ನಾಮಫಲಕಗಳನ್ನು ಹಾಕಿಸುತ್ತಿದ್ದಾರೆ. ಆದರೆ ನೀವು ನಾಮ ಫಲಕ ಹಾಕುವಾಗ ಕೆಲವೊಂದು ವಾಸ್ತು ಟಿಪ್ಸ್‌ ಅನುಸರಿಸಿದರೆ ಮನೆಗೆ ಒಳ್ಳೆಯದಾಗುತ್ತದೆ.

ವಾಸ್ತು ಅನುಸರಿಸಿದರೆ ಸುಖ, ಸಮೃದ್ಧಿ

ಮನೆಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವೃತ್ತಿ, ಪ್ರೀತಿ, ಹಣಕಾಸು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಲ್ಲದೆ ಕುಟುಂಬದ ಎಲ್ಲಾ ಸದಸ್ಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ. ಆದ್ದರಿಂದ ನೀವು ನಾಮ ಫಲಕ ಹಾಕುವ ಸಂದರ್ಭದಲ್ಲಿ ಈ ವಾಸ್ತು ಸಲಹೆಗಳನ್ನು ಅನುಸರಿಸಬೇಕು.

ನಾಮಫಲಕ ಎಂದಿಗೂ ಕೊಳಕಾಗದಂತೆ ನೋಡಿಕೊಳ್ಳಿ. ನಿಯಮಿತವಾಗಿ ಧೂಳನ್ನು ಒರೆಸಿ ಸ್ಚಚ್ಛವಾಗಿಟ್ಟುಕೊಳ್ಳಿ. ಆಯತಾಕಾರದ ನಾಮಫಲಕವನ್ನು ವಾಸ್ತು ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಬಲ ಭಾಗದಲ್ಲಿರಬೇಕು. ನಾಮಫಲಕದಲ್ಲಿ ಬರೆದಿರುವ ಪದಗಳು ಸ್ಪಷ್ಟವಾಗಿ ಗೋಚರಿಸಬೇಕು.

ಗಣೇಶ, ಸ್ವಸ್ತಿಕ್‌ ಚಿಹ್ನೆ ಇದ್ದರೆ ಶುಭ

ನಾಮಫಲಕದಲ್ಲಿ ಗಣೇಶ ಅಥವಾ ಸ್ವಸ್ತಿಕ್‌ ಚಿಹ್ನೆ ಇದ್ದರೆ ಬಹಳ ಒಳ್ಳೆಯದು. ವಾಸ್ತು ಪ್ರಕಾರ ಪ್ಲಾಸ್ಟಿಕ್‌ನಿಂದ ಮಾಡಿದ ನಾಮ ಫಲಕಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ. ತಾಮ್ರ, ಉಕ್ಕು ಅಥವಾ ಹಿತ್ತಾಳೆ ಲೋಹದಿಂದ ಮಾಡಿದ ನಾಮ ಫಲಕಗಳನ್ನು ಬಳಸಬಹುದು. ಇವುಗಳೊಂದಿಗೆ ಮರ ಅಥವಾ ಕಲ್ಲಿನಿಂದ ಮಾಡಿದ ನಾಮಫಲಕವನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಾಮಫಲಕ ಸರಿಯಾದ ದಿಕ್ಕಿನಲ್ಲಿರುವುದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ.

ನಿಮ್ಮ ಮನೆಯ ದಿಕ್ಕಿಗೆ ಅನುಗುಣವಾಗಿ ನಾಮ ಫಲಕದ ಬಣ್ಣವನ್ನು ಆರಿಸಿಕೊಳ್ಳುವುದು ಉತ್ತಮ. ವಾಸ್ತು ಪ್ರಕಾರ, ನಿಮ್ಮ ಮನೆ ಪೂರ್ವಕ್ಕೆ ಮುಖವಾಗಿದ್ದರೆ ಹಳದಿ ನಾಮ ಫಲಕವನ್ನು ಹಾಕಿ. ಮನೆ ಉತ್ತರಾಭಿಮುಖವಾಗಿದ್ದರೆ ಹಸಿರು ಬಣ್ಣದ ನಾಮಫಲಕ, ದಕ್ಷಿಣ ದಿಕ್ಕಿನ ಮನೆಗೆ ಕೆಂಪು ಬಣ್ಣದ ನಾಮಫಲಕ ಹಾಗೂ ಪಶ್ಚಿಮಾಭಿಮುಖವಾಗಿರುವ ಮನೆಗೆ ಹಳದಿ ಅಥವಾ ಬೆಳ್ಳಿಯ ನಾಮಫಲಕ ಆಯ್ಕೆ ಮಾಡುವುದು ಉತ್ತಮ.

ಮರದ ಬಾಗಿಲಿನ ಮೇಲೆ ನಾಮಫಲಕ

ಹಲವರು ಬಾಗಿಲಿಗೆ ನಾಮಫಲಕ ಹಾಕುತ್ತಾರೆ. ಮರದ ಬಾಗಿಲಿನ ಮೇಲೆ ನಾಮಫಲಕವನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣದ ನಾಮ ಫಲಕವು ನಿಮ್ಮ ಮನೆಗೆ ಶಾಂತಿ ತರುತ್ತದೆ. ಕೆಲವರು ನಾಮಫಲಕ ನೇತು ಹಾಕುತ್ತಾರೆ. ಇದಕ್ಕಾಗಿ ಓವಲ್ ಆಕಾರದ ನಾಮ ಫಲಕವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದು ನಿಮ್ಮ ಮನೆಗೆ ಅದ್ಧೂರಿ ಲುಕ್‌ ನೀಡುತ್ತದೆ.

ಚೌಕವಾದ ನಾಮ ಫಲಕದಲ್ಲಿ ಕುಟುಂಬದ ಸದಸ್ಯರ ಹೆಸರನ್ನು ಬರೆಯಬಹುದು. ಮತ್ತು ಕೆಲವರು ಪಾರದರ್ಶಕ ನಾಮ ಫಲಕವನ್ನು ಬಳಸಲು ಇಷ್ಟಪಡುತ್ತಾರೆ. ಅಂತವರು ಗಾಜಿನಿಂದ ಮಾಡಿದ ನಾಮಫಲಕವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಯಾವಾಗಲೂ ಸ್ವಚ್ಛ ಮತ್ತು ಧೂಳು ಮುಕ್ತವಾಗಿರುವಂತೆ ನೋಡಿಕೊಳ್ಳಿ. ಮರದ ಬಾಗಿಲಿನ ಮೇಲೆ ಚಿನ್ನದ ಬಣ್ಣದ ನಾಮ ಫಲಕವನ್ನು ಹಾಕುವುದರಿಂದ ನಿಮ್ಮ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಇದು ಪ್ರಕಾಶಮಾನವಾಗಿ ಕಾಣುತ್ತದೆ.

ನಾಮ ಫಲಕವನ್ನು ಎಂದಿಗೂ ಬಿರುಕುಗೊಳಿಸಬಾರದು, ಸಡಿಲಗೊಳಿಸಬಾರದು ಅಥವಾ ರಂಧ್ರಗಳನ್ನು ಹೊಂದಿರಬಾರದು. ನಾಮಫಲಕ ಒಡೆದು ಬಣ್ಣ ಮಾಸಿದ ತಕ್ಷಣ ಅದನ್ನು ತೆರವುಗೊಳಿಸಿ ಹೊಸದು ಹಾಕಬೇಕು. ಅವುಗಳ ಹಿಂದೆ ಯಾವುದೇ ಜೇಡಗಳು, ಹಲ್ಲಿಗಳು ಅಥವಾ ಪಕ್ಷಿ ಗೂಡುಗಳು ಇರಬಾರದು. ಬಿಳಿ, ಹಳದಿ, ಕೇಸರಿ ಬಣ್ಣಗಳಿರುವ ನಾಮ ಫಲಕವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.