ಒಂದೇ ಪ್ರದೇಶದಲ್ಲಿ 108 ಮನೆಗಳಿದ್ದರೆ ಅಲ್ಲಿ ವಾಸ್ತು ದೋಷ ಇರೋದಿಲ್ವಾ? ತಿಳಿಯಬೇಕಾದ ಅಂಶಗಳಿವು-vastu tips if there are 108 houses in the same area perfect vastu and things to know rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಒಂದೇ ಪ್ರದೇಶದಲ್ಲಿ 108 ಮನೆಗಳಿದ್ದರೆ ಅಲ್ಲಿ ವಾಸ್ತು ದೋಷ ಇರೋದಿಲ್ವಾ? ತಿಳಿಯಬೇಕಾದ ಅಂಶಗಳಿವು

ಒಂದೇ ಪ್ರದೇಶದಲ್ಲಿ 108 ಮನೆಗಳಿದ್ದರೆ ಅಲ್ಲಿ ವಾಸ್ತು ದೋಷ ಇರೋದಿಲ್ವಾ? ತಿಳಿಯಬೇಕಾದ ಅಂಶಗಳಿವು

ವಾಸ್ತು ಪ್ರಕಾರ ಮನೆ ಕಟ್ಟಿದರೆ ಸಮಸ್ಯೆಗಳು ಎದುರಾಗುವುದಿಲ್ಲ ಎಂಬ ನಂಬಿಕೆ ಸಾಕಷ್ಟು ಮಂದಿಗೆ ಇರುತ್ತೆ. ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶ, ಮನೆಗಳ ಬಗ್ಗೆಯೂ ಕೆಲವರಿಗೆ ಕುತೂಹಲ ಇರುತ್ತದೆ. ಒಂದು ಪ್ರದೇಶದಲ್ಲಿ 108 ಮನೆಗಳಿದ್ದರೆ ಅಲ್ಲಿ ವಾಸ್ತು ದೋಷ ಇರೋದಿಲ್ಲವೇ, ಮನೆಯ ವಾಸ್ತು ಸಂಬಂಧ ತಿಳಿಯಬೇಕಾದ ಅಂಶಗಳು ಇಲ್ಲಿವೆ. (ಬರಹ: ಎಚ್‌. ಸತೀಶ್‌, ಜ್ಯೋತಿಷಿ)

ಮನೆ ಮತ್ತು ಒಂದೇ ಕಡೆ ಹೆಚ್ಚು ಮನೆಗಳಿರುವ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದರ ಕುರಿತ ಆಸಕ್ತಿ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಮನೆ ಮತ್ತು ಒಂದೇ ಕಡೆ ಹೆಚ್ಚು ಮನೆಗಳಿರುವ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದರ ಕುರಿತ ಆಸಕ್ತಿ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಪ್ರತಿಯೊಬ್ಬರು ತಮ್ಮ ಕನಸಿನ ಮನೆಯ ಬಗ್ಗೆ ತುಂಬಾ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಮನೆಯಲ್ಲಿ ಏನೆಲ್ಲಾ ಇರಬೇಕು ಎಂಬುದನ್ನು ಮೊದಲೇ ಪ್ಲಾನ್ ಮಾಡಿರುತ್ತಾರೆ. ಜೊತೆಗೆ ವಾಸ್ತು ಪ್ರಕಾರವೇ ಮನೆ ಕಟ್ಟಬೇಕೆಂದು ಅದಕ್ಕಾಗಿ ಒಂದಿಷ್ಟು ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ. ಮನೆಯನ್ನು ಕಟ್ಟಿಸಿದ ಮೇಲೆ ವಾಸ್ತುವಿನ ಬಗ್ಗೆ ಯೋಚಿಸುವ ಬದಲು ವಾಸ್ತುವನ್ನು ನೋಡಿ ಮನೆಯನ್ನು ಕಟ್ಟುವುದು ಅಥವಾ ಕೊಳ್ಳುವುದು ಒಳ್ಳೆಯದು. ಕೆಲವೊಂದು ಹಳೆಯ ಶಾಸ್ತ್ರೀಯ ಗ್ರಂಥಗಳ ಪ್ರಕಾರ, ಒಂದೇ ಪ್ರದೇಶದಲ್ಲಿ108 ಮನೆಗಳಿದ್ದರೆ ಅಲ್ಲಿ ವಾಸ್ತುವಿನ ದೋಷ ಇರುವುದಿಲ್ಲ. ಹಾಗೆಯೇ ಮನೆ ಅಥವಾ ನಿವೇಶನವು ಚೌಕಾಕಾರ ಅಥವಾ ಆಯತಾಕಾರದಲ್ಲಿ ಇದ್ದರೆ ವಾಸ್ತುವಿನ ದೋಷ ಉಂಟಾಗುವುದಿಲ್ಲ. ಮನೆಗೆ ಸಂಬಂಧಿಸಿದ ವಾಸ್ತು ಕುರಿತ ಪ್ರಮುಖ ಅಂಶಗಳನ್ನು ನೋಡೋಣ.

  • ಮಹಡಿಯ ಮನೆಗಳಿದ್ದಲ್ಲಿ ಆ ಕಟ್ಟಡಕ್ಕೆ ಕೆಳಗಿನ ಅಂದರೆ ಮೂಲ ಮನೆಯ ವಾಸ್ತುವೇ ಮುಖ್ಯವಾಗುತ್ತದೆ. ಮೂಲ ಮನೆಯ ವಾಸ್ತು ಶೇಕಡ 75 ರಷ್ಟು ಫಲಗಳನ್ನು ನೀಡುತ್ತದೆ.
  • ಒಂದು ಮನೆಯ ಪೂಜಾಗೃಹದ ಮೇಲೆ ಇನ್ನೊಂದು ಮನೆಯ ಸ್ನಾನದ ಮನೆ ಅಥವಾ ಶೌಚಾಲಯ ಇರಬಾರದು. ಹಾಗೆಯೇ ಒಂದು ಮನೆಯ ಸ್ನಾನದ ಮನೆ ಅಥವಾ ಶೌಚಾಲಯದ ಮೇಲೆ ಇನ್ನೊಂದು ಮನೆಯ ಪೂಜಾಗೃಹ ಇರಬಾರದು.
  • ಸ್ನಾನದ ಗೃಹದಿಂದ ಅಥವಾ ಶೌಚಾಲಯದಿಂದ ಬರುವ ಬೆಳಕಿನಿಂದ ಮನೆಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಬಾರದು. ಸಾಧ್ಯವಾದಷ್ಟು ಉಪಯೋಗವಿಲ್ಲದ ವೇಳೆಯಲ್ಲಿ ಸ್ನಾನದ ಗೃಹ ಮತ್ತು ಶೌಚಾಲಯದ ದೀಪಗಳನ್ನು ಆರಿಸುವುದು ಒಳ್ಳೆಯದು.
  • ಸಾಮಾನ್ಯವಾಗಿ ಸ್ನಾನದ ಗೃಹಗಳು ಮತ್ತು ಶೌಚಾಲಯವು ಮನೆಯ ಒಳಗಡೆ ಮತ್ತು ಪ್ರತಿಯೊಂದು ಕೋಣೆಯಲ್ಲಿಯೂ ಇರುತ್ತದೆ. ಅಂತಹ ಸಂದರ್ಭದಲ್ಲಿ ಸ್ನಾನದ ಕೋಣೆ ಮತ್ತು ಶೌಚಾಲಯಕ್ಕೆ ತಿಳಿಯಾದ ಬಣ್ಣದ ಪರದೆಗಳನ್ನು ಉಪಯೋಗಿಸಬೇಕು.
  • ಶೌಚಾಲಯದಲ್ಲಿ ಕುಳಿತುಕೊಂಡಾಗ ಕಡ್ಡಾಯವಾಗಿ ನಮ್ಮ ಮುಖವು ದಕ್ಷಿಣ ದಿಕ್ಕನ್ನು ನೋಡುವಂತೆ ಇರಬೇಕು.
  • ಸ್ನಾನದ ಗೃಹ ಮತ್ತು ಶೌಚಾಲಯಗಳಲ್ಲಿ ಬಣ್ಣ ಬಣ್ಣದ ದೀಪಗಳನ್ನು ಬಳಸದೆ ಬಿಳಿ ಬಣ್ಣವನ್ನು ಸೂಸುವ ದೀಪವನ್ನು ಬಳಸಬೇಕು. ಸಮ ಸಂಖ್ಯೆಗಳಲ್ಲಿ ದೀಪಗಳು ಇರಬಾರದು. ಬೆಸ ಸಂಖ್ಯೆಗಳಲ್ಲಿ ಅಂದರೆ ಒಂದು, ಮೂರು, ಐದು ಈ ರೀತಿಯಲ್ಲಿ ದೀಪಗಳನ್ನು ಉಪಯೋಗಿಸಬಹುದು.
  • ಸ್ನಾನದ ಗೃಹ ಅಥವಾ ಶೌಚಾಲಯದಿಂದ ಬರುವಾಗ ಕಾಲುಗಳನ್ನು ತೊಳೆದು, ಒರೆಸಿಕೊಂಡ ನಂತರ ಮನೆಯಲ್ಲಿ ಓಡಾಡಬೇಕು. ನೀರಿನಿಂದ ಮೂಡುವ ಹೆಜ್ಜೆಯ ಗುರುತುಗಳು ಕುಟುಂಬದ ಸದಸ್ಯರ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ವಾಸ್ತು ಪ್ರಕಾರ ಮನೆಯಲ್ಲಿ ಕನ್ನಡಿ ಎಲ್ಲಿ ಇಡಬೇಕು? ಮನೆಯ ಅದೃಷ್ಟ ಹೆಚ್ಚಿಸಲು ಈ ಅಂಶಗಳು ನಿಮಗೆ ತಿಳಿದಿರಲಿ

  • ಸೊಳ್ಳೆಯ ಬತ್ತಿಯನ್ನಾಗಲಿ ಅಥವಾ ಊದಿನ ಕಡ್ಡಿಯನ್ನಾಗಲಿ ಸ್ನಾನದ ಗೃಹ ಅಥವಾ ಶೌಚಾಲಯದ ಬಳಿ ಇಡಬಾರದು.
  • ಆಹಾರ ಸೇವಿಸಿದ ನಂತರ ತಟ್ಟೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಶೌಚಾಲಯ ಅಥವಾ ಸ್ನಾನದ ಗೃಹಕ್ಕೆ ಎಸೆಯಬಾರದು. ತಟ್ಟೆಯಲ್ಲಿಉಳಿದ ಆಹಾರ ಪದಾರ್ಥವನ್ನುಅಡುಗೆಯ ಮನೆಯಲ್ಲಿ ಸಣ್ಣ ಪಾತ್ರೆಯಲ್ಲಿ ಶೇಕರಿಸಿ ಇಡಬೇಕು.
  • ಪ್ರತಿದಿನವೂ ಪಕ್ಷಿಗಳಿಗೆ ಕುಡಿಯಲು ನೀರು ಅಥವಾ ಆಹಾರವನ್ನು ಮಹಡಿಯ ಮೇಲೆ ಇಟ್ಟಲ್ಲಿ ವಾಸ್ತುದೋಷವು ಕಡಿಮೆಯಾಗುತ್ತದೆ. ಆದರೆ ಪಕ್ಷಿಗಳಿಗಾಗಿ ಆಹಾರವನ್ನಾಗಲಿ ಅಥವಾ ನೀರನ್ನಾಗಲಿ ಮನೆಯ ಮುಂದಿನ ಕಾಂಪೌಂಡ್ ಮೇಲೆ ಇಡಬಾರದು.

ಇದನ್ನೂ ಓದಿ: ಚಿನ್ನದ ಬಣ್ಣ ಇರುವ ಮೀನಿನ ಫೋಟೊ ಮನೆಯಲ್ಲಿದ್ದರೆ ಯಾವ ರಾಶಿಯವರಿಗೆ ಏನು ಲಾಭವಿದೆ? ಕುದುರೆ, ಆನೆ ಚಿತ್ರಗಳಿಂದಲೂ ಪ್ರಯೋಜನವಿದೆ

  • ಹಸು ಅಥವಾ ಕರುಗಳು ಬಂದಲ್ಲಿ ಸಾಧ್ಯವಾದಷ್ಟು ಮನೆಯ ಒಳಗೆ ಅಥವಾ ಮನೆಯ ಕಾಂಪೌಂಡಿನ ಒಳಗೆ ಅವುಗಳಿಗೆ ಆಹಾರವನ್ನು ನೀಡಬೇಕು. ಆ ನಂತರ ಕುಡಿಯುವ ನೀರನ್ನು ನೀಡುವುದು ಅತಿ ಮುಖ್ಯ. ಇದರಿಂದ ಮನೆಯ ಒಳಗಿರುವ ಋಣಾತ್ಮಕ ಶಕ್ತಿಯು ಕಡಿಮೆಯಾಗಿ ಧನಾತ್ಮಕ ಶಕ್ತಿಯು ಹೆಚ್ಚುತ್ತದೆ.
  • ಮನೆಯ ಹೊರಗಿನ ಭಾಗಕ್ಕೆ ಎಂದಿಗೂ ಕಪ್ಪು ಬಣ್ಣವನ್ನು ಹಚ್ಚಬಾರದು. ಮನೆಯ ಹೊರಭಾಗಕ್ಕೆ ಬಿಳಿಯ ಬಣ್ಣವನ್ನು ಹಚ್ಚಿದಲ್ಲಿ ವಾಸ್ತುವಿನ ಬಲವು ಹೆಚ್ಚುತ್ತದೆ.
  • ನೀರಿನ ತೊಟ್ಟಿಗೆ ಕಪ್ಪು ಅಥವಾ ನೀಲಿ ಬಣ್ಣವಿರಬೇಕು. ಯಾವುದೇ ಕಾರಣಕ್ಕೂ ಬಿಳಿ ಮತ್ತು ಕೆಂಪು ಬಣ್ಣಗಳನ್ನು ಬಳಸಬಾರದು.

ಇದನ್ನೂ ಓದಿ: ವಾಸ್ತು ಪ್ರಕಾರ ಅಡುಗೆಮನೆಗೆ ಯಾವ ಬಣ್ಣ ಬಳಸಿದರೆ ಉತ್ತಮ? ಆಕರ್ಷಕವಾಗಿ ಕಾಣಿಸಲು ಬಣ್ಣಗಳನ್ನು ಈ ರೀತಿ ಸಂಯೋಜಿಸಿ ಬಳಸಿ

  • ಸೂರ್ಯನು ಮುಳುಗಿದ ನಂತರ ಮುಂಭಾಗಲಿನಲ್ಲಿ ಬೆಳಕಿರಬೇಕು. ಆದ್ದರಿಂದ ಕೇವಲ ಶುಕ್ರವಾರವಲ್ಲದೆ ಪ್ರತಿನಿತ್ಯವೂ ಹೊಸ್ತಿಲಿನ ಎರಡು ಬದಿಗಳಲ್ಲಿ ದೀಪಗಳನ್ನು ಹಚ್ಚುವುದರಿಂದ ಆ ಮನೆಯಲ್ಲಿ ವಾಸಿಸುವವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುತ್ತದೆ.
  • ಸೂರ್ಯನು ಮುಳುಗಿದ ಮೇಲೆಕುಟುಂಬದ ಹಿರಿಯರ ಜೊತೆಯಲ್ಲಿ ಮನೆಯ ಮುಂಭಾಗದಲ್ಲಿ ಕುಳಿತುಕೊಂಡು ಮನಸ್ಸಿಗೆ ಸಮಾಧಾನವಾಗುವಂತಹ ಮಾತುಗಳನ್ನು ಆಡುವುದು ಶ್ರೇಯಸ್ಕರ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.