ಈ 5 ಪ್ರಾಣಿಗಳ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಿ: ಅದೃಷ್ಟದ ಜೊತೆಗೆ ಆರ್ಥಿಕ ಸಮಸ್ಯೆ ದೂರವಾಗಿ ನೆಮ್ಮದಿ ಸಿಗುತ್ತದೆ
ವಾಸ್ತು ಶಾಸ್ತ್ರದಲ್ಲಿರುವ ಸಲಹೆಗಳನ್ನು ಪಾಲಿಸುವುದರಿಂದ ಸಂತೋಷ ಮತ್ತು ಅದೃಷ್ಟ ಲಭಿಸುತ್ತದೆ ಎಂಬ ನಂಬಿಕೆಯಿದೆ. ಅದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ. ಕೆಲವು ಪ್ರಾಣಿಗಳ ಪ್ರತಿಮೆಯನ್ನು ಮನೆಯಲ್ಲಿರಿಸಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆ ದೂರವಾಗಿ ಸಂತೋಷದ ಜೀವನ ನಡೆಸಬಹುದಾಗಿದೆ. (ಬರಹ: ಅರ್ಚನಾ ವಿ. ಭಟ್)

ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಾರೆ. ಅದಕ್ಕಾಗಿ ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ದೇವರ ಪೂಜೆ, ಪ್ರಾರ್ಥನೆಗಳನ್ನು ಮಾಡುತ್ತಾರೆ. ಆದರೆ ಕೆಲವೊಮ್ಮೆ ಅವರು ನಿರೀಕ್ಷಿಸಿದಷ್ಟು ಅದೃಷ್ಟ ಅವರ ಪಾಲಿಗೆ ಸಿಗುವುದಿಲ್ಲ. ಅಂತವರು ವಾಸ್ತು ಸಲಹೆಗಳನ್ನು ಪಾಲಿಸಿದರೆ ಸಂತೋಷ ಮತ್ತು ಅದೃಷ್ಟವು ಅವರ ಜೀವನದಲ್ಲಿ ಬರಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಸಲಹೆಗಳನ್ನು ಅನುಸರಿಸಿದರೆ ಒಳ್ಳೆಯದಾಗುತ್ತದೆ. ಜೀವನದಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಕೆಲವು ಪ್ರಾಣಿಗಳ ಪ್ರತಿಮೆಯು ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅದೃಷ್ಟ ಒಲಿದು, ನೆಮ್ಮದಿಯಿಂದ ಬದುಕಬಹುದಾಗಿದೆ. ಹಾಗಾದರೆ ಅದೃಷ್ಟವನ್ನು ತರುವ ಅಂತಹ ಪ್ರಾಣಿಗಳ ಪ್ರತಿಮೆಗಳು ಯಾವುವು ಎಂದು ತಿಳಿದುಕೊಳ್ಳೋಣ.
ಅದೃಷ್ಟವನ್ನು ತರುವ ಪ್ರಾಣಿಗಳ ಪ್ರತಿಮೆಗಳು
1. ಆನೆ
ಆನೆಯ ಪ್ರತಿಮೆ ಅಥವಾ ಆನೆಯ ಫೋಟೋ ಅದೃಷ್ಟವನ್ನು ತರುತ್ತದೆ ಎಂದು ವಾಸ್ತು ಹೇಳುತ್ತದೆ. ಮನೆಯಲ್ಲಿ ಆನೆಯ ಪ್ರತಿಮೆ ಇರಿಸಿಕೊಳ್ಳುವುದು ಅದೃಷ್ಟವನ್ನು ತರುತ್ತದೆ. ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ. ಹಾಗಾಗಿ ಆದಷ್ಟು ಮನೆಯಲ್ಲಿ ಆನೆಯ ಪ್ರತಿಮೆ ಅಥವಾ ಆನೆಯ ಫೋಟೋ ಇಟ್ಟುಕೊಳ್ಳುವುದು ಉತ್ತಮ.
2. ಕಪ್ಪೆ
ಫೆಂಗ್ ಶೂಯಿ ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪೆ ಸಂಪತ್ತನ್ನು ತರುತ್ತದೆ. ಮನೆಯಲ್ಲಿ ಕಪ್ಪೆಯ ಚಿತ್ರ ಅಥವಾ ಕಪ್ಪೆಯ ಆಟಿಕೆಗಳನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಹಣವನ್ನು ಆಕರ್ಷಿಸಲು ಕಪ್ಪೆ ಅದ್ಭುತವಾಗಿ ಕೆಲಸ ಮಾಡುತ್ತದೆ. ಮನೆಯಲ್ಲಿ ಕಪ್ಪೆಯ ಪ್ರತಿಮೆಯನ್ನು ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
3. ಗೋಲ್ಡ್ ಫಿಷ್
ಅನೇಕ ಜನರು ಮನೆಯಲ್ಲಿ ಮೀನು ಸಾಕುತ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಗೋಲ್ಡ್ ಫಿಷ್ ಸಾಕಿದರೆ ಧನಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಹಣದ ಹರಿವು ಹೆಚ್ಚುತ್ತದೆ. ಮನೆಯಲ್ಲಿ ಅಕ್ವೇರಿಯಂ ಅಥವಾ ಫಿಶ್ ಬೌಲ್‌ಗಳಲ್ಲಿ ಮೀನುಗಳನ್ನು ಇಡುವಾಗ ಗೋಲ್ಡ್ ಫಿಷ್ ಅನ್ನು ಖಂಡಿತವಾಗಿ ಇಟ್ಟುಕೊಳ್ಳಿ. ಅದು ನಿಮಗೆ ಅದೃಷ್ಟವನ್ನು ತರುತ್ತದೆ.
4. ಕುದುರೆ
ಕುದುರೆಯು ವೇಗ, ದಕ್ಷತೆ ಮತ್ತು ಯಶಸ್ಸಿನ ಸಂಕೇತವಾಗಿದೆ. ಮನೆಯಲ್ಲಿ ಕುದುರೆಯ ಫೋಟೋ ಅಥವಾ ಕುದುರೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಲು ಸಹಾಯ ಮಾಡುತ್ತದೆ. ಅದೃಷ್ಟ ಕೂಡ ಬರುತ್ತದೆ. ವೃತ್ತಿಯಲ್ಲಿಯೂ ಬೆಳವಣಿಗೆ ಕಂಡುಬರಲಿದೆ. ಉತ್ತಮ ಫಲಿತಾಂಶಗಳಿಗಾಗಿ ಇದನ್ನು ಮನೆಯಲ್ಲಿಯೇ ಇರಿಸಿಕೊಳ್ಳಿ.
5. ಆಮೆ
ಇದು ಸ್ಥಿರತೆಯ ಸಂಕೇತವಾಗಿದೆ. ಮನೆಯಲ್ಲಿ ಆಮೆಯ ಪ್ರತಿಮೆ ಅಥವಾ ಆಮೆಯ ಫೋಟೋವನ್ನು ಇಡುವುದು ಒಳ್ಳೆಯದು. ಇದರಿಂದ ಅದೃಷ್ಟ ಕೂಡಿ ಬರುತ್ತದೆ. ಧನಾತ್ಮಕ ಶಕ್ತಿ ಹರಿಯುತ್ತದೆ. ಒಳ್ಳೆಯ ಬದಲಾವಣೆ ತರುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ