Vastu Tips: ಇಷ್ಟಪಟ್ಟು ಖರೀದಿಸಿದ ಕಾರಿನಲ್ಲಿ 6 ವಸ್ತುಗಳಿದ್ದರೆ ಸಂತೋಷದ ಜೊತೆಗೆ ಸುರಕ್ಷಿತ ಪ್ರಯಾಣ ನಿಮ್ಮದಾಗುತ್ತೆ
Vastu Tips: ವಾಸ್ತು ಶಾಸ್ತ್ರದಲ್ಲಿ ಹೇಳಿರುವುದನ್ನು ಅನುಸರಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ವಾಸ್ತುವನ್ನು ಅನುಸರಿಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದು ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲು ಸಹಾಯ ಮಾಡುತ್ತದೆ. (ಬರಹ: ಅರ್ಚನಾ ವಿ. ಭಟ್)

ನಮ್ಮ ನಿತ್ಯದ ಜೀವನವು ಆರೋಗ್ಯ, ನೆಮ್ಮದಿ, ಸಂತೋಷಗಳಿಂದ ತುಂಬಿರಲು ಸಹಾಯ ಮಾಡುವ ಅನೇಕ ಸಲಹೆಗಳನ್ನು ವಾಸ್ತು ಶಾಸ್ತ್ರದಲ್ಲಿ ನೀಡಲಾಗಿದೆ. ಆದ್ದರಿಂದ ಅನೇಕರು ವಾಸ್ತು ಶಾಸ್ತ್ರದಲ್ಲಿ ನಂಬಿಕೆಯಿಟ್ಟಿದ್ದಾರೆ. ಅಲ್ಲದೆ, ಅದರಂತೆಯೇ ನಡೆದುಕೊಳ್ಳುತ್ತಾರೆ. ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆ ಮತ್ತು ಜೀವನದಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಜೀವನದಲ್ಲಿ ಸಂತೋಷ ತುಂಬಿರುತ್ತದೆ. ಇಂದಿನ ದಿನಗಳಲ್ಲಿ ಬಹಳಷ್ಟು ಜನರ ಮನೆಯಲ್ಲಿ ಕಾರು ಇರುತ್ತದೆ. ಪ್ರಯಾಣ ಸುಖಮಯವಾಗಿರಲೆಂದು ಕಾರು ಕೊಂಡಿರುತ್ತಾರೆ. ಪ್ರೀತಿಯಿಂದ ಕೊಂಡ ಕಾರಿನಲ್ಲಿ ಧನಾತ್ಮಕ ಶಕ್ತಿ ತುಂಬಿದ್ದರೆ ಪ್ರಯಾಣದ ಸಮಯದಲ್ಲಾಗುವ ತೊಂದರೆಗಳನ್ನು ತಪ್ಪಿಸಬಹುದು, ಸಂತೋಷ, ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ ಎಂಬ ನಂಬಿಕೆಯಿದೆ. ಆದ್ದರಿಂದ ಕಾರಿನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂದು ತಿಳಿಯೋಣ.
ವಾಸ್ತು ಪ್ರಕಾರ ಕಾರಿನಲ್ಲಿ ಇಡಬೇಕಾದ ವಸ್ತುಗಳು
ಈ ವಸ್ತುಗಳನ್ನು ಕಾರಿನಲ್ಲಿ ಇಡುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ. ಸಂತೋಷ ಮತ್ತು ಸುರಕ್ಷಿತ ಪ್ರಯಾಣ ನಿಮ್ಮದಾಗುತ್ತದೆ.
1. ಗಣೇಶ ಮೂರ್ತಿ
ಗಣೇಶನನ್ನು ವಿಘ್ನಗಳನ್ನು ನಿವಾರಿಸುವವನು ಎಂದು ನಂಬಲಾಗಿದೆ. ಆದ್ದರಿಂದ ಗಣೇಶನ ಮೂರ್ತಿಯನ್ನು ಕಾರಿನಲ್ಲಿ ಇಟ್ಟುಕೊಂಡರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಪ್ರಯಾಣದ ಸಮಯದಲ್ಲಾಗುವ ಅಡೆತಡೆಗಳು ನಿವಾರಣೆಯಾಗುತ್ತದೆ. ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.
2. ಹನುಮಂತನ ವಿಗ್ರಹ
ಅನೇಕರು ಹನುಮಂತನ ಮೂರ್ತಿಯನ್ನು ಕಾರಿನಲ್ಲಿ ನೇತು ಹಾಕುತ್ತಾರೆ. ಈ ವಿಗ್ರಹವನ್ನು ಇಡುವುದರಿಂದ ಧನಾತ್ಮಕ ಶಕ್ತಿಯು ಬರುತ್ತದೆ. ವಾಸ್ತವವಾಗಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಇಟ್ಟುಕೊಳ್ಳುವುದರಿಂದ ಕೆಟ್ಟ ಪರಿಣಾಮಗಳಿದ್ದರೆ ದೂರವಾಗುತ್ತದೆ. ಹನುಮ ದೇವರು ನಮ್ಮನ್ನು ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಕಾರಿನಲ್ಲಿ ಆಂಜನೇಯನ ವಿಗ್ರಹವನ್ನು ನೇತು ಹಾಕಬಹುದು.
ಇದನ್ನೂ ಓದಿ: ಮಂಗಳ ದೋಷ ಕಡಿಮೆ ಮಾಡಲು ಈ 3 ವಸ್ತುಗಳನ್ನು ದಾನ ಮಾಡಿ
3. ಕಪ್ಪು ಆಮೆ
ನೀವು ಅಂದುಕೊಂಡ ಕೆಲಸ ಒಳ್ಳೆಯ ರೀತಿಯಿಂದ ನಡೆಯಲು, ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಕಾರಿನಲ್ಲಿ ಸಣ್ಣ ಕಪ್ಪು ಆಮೆ ಮೂರ್ತಿಯನ್ನು ಇರಿಸಿಕೊಳ್ಳಬಹುದು. ಇದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
4. ನೈಸರ್ಗಿಕ ಹರಳುಗಳು
ಕಾರಿನಲ್ಲಿ ನೈಸರ್ಗಿಕ ಹರಳುಗಳನ್ನು ಇಟ್ಟುಕೊಳ್ಳುವುದು ಕೂಡ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇವುಗಳನ್ನು ಇಟ್ಟುಕೊಳ್ಳುವುದರಿಂದ ಕಾರನ್ನು ಯಾವಾಗಲೂ ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ ಭೂಮಿಯ ಅಂಶವನ್ನು ಬಲಪಡಿಸುತ್ತದೆ. ಹಾಗಾಗಿ ಕಾರಿನಲ್ಲೂ ನೈಸರ್ಗಿಕ ಹರಳುಗಳನ್ನು ಇಡಿ. ಇದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಇದರಿಂದ ಸಂತೋಷವಾಗಿ ಮತ್ತು ಆರಾಮವಾಗಿ ಪ್ರಯಾಣಿಸಬಹುದು.
5. ಸ್ವಚ್ಛ ನೀರು
ಕಾರಿನಲ್ಲಿ ಸ್ವಚ್ಛ ನೀರು ಇದ್ದರೆ ಒಳ್ಳೆಯದು. ಇದು ಮನಸ್ಸನ್ನು ಬಲಪಡಿಸುವುದಲ್ಲದೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಕಾರಿನಲ್ಲಿ ಸ್ವಚ್ಛ ನೀರನ್ನು ಇಡಿ.
6. ಕಲ್ಲು ಉಪ್ಪು
ಕಲ್ಲು ಉಪ್ಪಿಗೆ ಸ್ವಲ್ಪ ಅಡಿಗೆ ಸೋಡಾವನ್ನು ಬೆರೆಸಿ. ಅದನ್ನು ಕಾಗದದಲ್ಲಿ ಸುತ್ತಿ ಕಾರಿನ ಸೀಟಿನ ಕೆಳಗೆ ಇಡಬೇಕು. ಇದು ನಕಾರಾತ್ಮಕ ಅಂಶಗಳನ್ನು ಹೋಗಲಾಡಿಸುತ್ತದೆ. ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಲ್ಲು ಉಪ್ಪು, ಅಡಿಗೆ ಸೋಡಾ ಮಿಶ್ರಣವನ್ನು ಆಗಾಗ ಬದಲಾಯಿಸುತ್ತಿರುವುದು ಉತ್ತಮ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ