ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lucky Plant: ವಾಸ್ತು ಪ್ರಕಾರ ಬದುಕಿಗೆ ಅದೃಷ್ಟ ತಂದುಕೊಡುವ ಸಸ್ಯಗಳಿವು: ಮನೆಯಲ್ಲಿ ಈ ಗಿಡಗಳಿದ್ದರೆ ಲಕ್ಷ್ಮೀ ಒಲಿಯೋದು ಖಂಡಿತ

Lucky Plant: ವಾಸ್ತು ಪ್ರಕಾರ ಬದುಕಿಗೆ ಅದೃಷ್ಟ ತಂದುಕೊಡುವ ಸಸ್ಯಗಳಿವು: ಮನೆಯಲ್ಲಿ ಈ ಗಿಡಗಳಿದ್ದರೆ ಲಕ್ಷ್ಮೀ ಒಲಿಯೋದು ಖಂಡಿತ

Lucky Plant: ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದರಿಂದ ಶುಭವಾಗುತ್ತದೆ. ಇದರಿಂದ ದುಷ್ಟಶಕ್ತಿಗಳ ನಿವಾರಣೆಯಾಗುತ್ತದೆ. ಅಲ್ಲದೇ ಲಕ್ಷ್ಮೀದೇವಿಯ ಅನುಗ್ರಹವನ್ನೂ ಪಡೆಯಬಹುದು. ಹಾಗಿದ್ರೆ ನಿಮಗೆ ಅದೃಷ್ಟ ತಂದುಕೊಡುವ ಆ ಸಸ್ಯಗಳು ಯಾವುವು? ಇಲ್ಲಿದೆ ಓದಿ.

ಮನೆಯಲ್ಲಿ ಈ ಗಿಡಗಳಿದ್ದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ.
ಮನೆಯಲ್ಲಿ ಈ ಗಿಡಗಳಿದ್ದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ. (HT File Photo)

ಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯುತ್ತಾರೆ. ಪ್ರತಿಯೊಬ್ಬರೂ ಈ ದೇವಿಯ ಕೃಪೆಗಾಗಿ ಕಾಯುತ್ತಾರೆ. ಲಕ್ಷ್ಮೀದೇವಿ ಅನುಗ್ರಹವಾದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಸುಖ, ಸಂತೋಷ ಮತ್ತು ಹಣ ಎಲ್ಲವನ್ನೂ ಪಡೆದುಕೊಂಡು ಸಂತೋಷವಾಗಿರಬಹುದು. ವಾಸ್ತು ಪ್ರಕಾರ ಮನೆಯ ಉತ್ತರ ದಿಕ್ಕನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಲಕ್ಷ್ಮೀ ದೇವಿಯು ಈ ದಿಕ್ಕಿನಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ.

ವಾಸ್ತುಶಾಸ್ತ್ರದ ಪ್ರಕಾರ ಲಕ್ಷ್ಮೀ ದೇವಿಯು ನಿಮ್ಮ ಮನೆಯಲ್ಲಿ ನೆಲೆಸಲು ಕೆಲವು ಕೆಲಸಗಳನ್ನು ಮಾಡುವುದು ಒಳ್ಳೆಯದು. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ನೀವು ಮನೆಯಲ್ಲಿ ಕೆಲವು ಗಿಡಗಳನ್ನು ನೆಡಬೇಕು. ಅವುಗಳನ್ನು ಮನೆಯಲ್ಲಿ ನೆಟ್ಟರೆ ಅದೃಷ್ಟ ಮತ್ತು ಧನಾತ್ಮಕ ಶಕ್ತಿ ಬರುತ್ತದೆ. ಬಡತನ ದೂರವಾಗುತ್ತದೆ ಮತ್ತು ಆರ್ಥಿಕ ಸಮಸ್ಯೆಗಳಿಲ್ಲದೆ ಸಂತೋಷದ ಜೀವನ ನಡೆಸಬಹುದಾಗಿದೆ. ಮನೆಯ ಉತ್ತರ ದಿಕ್ಕಿಗೆ ಈ ಗಿಡಗಳನ್ನು ನೆಟ್ಟರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರಲಿ.

ಬಾಳೆ ಮರ

ಬಾಳೆ ಗಿಡಕ್ಕೆ ವಾಸ್ತು ಶಾಸ್ತ್ರದಲ್ಲಿ ಬಹಳ ಮಹತ್ವವಿದೆ. ಮನೆಯ ಉತ್ತರ ದಿಕ್ಕಿಗೆ ಬಾಳೆಗಿಡ ನೆಟ್ಟರೆ ಹಣದ ಕೊರತೆ ಇರುವುದಿಲ್ಲ. ಪ್ರತಿ ಗುರುವಾರದಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ನೀಮಗೆ ದೇವರ ಅನುಗ್ರ ಪಡೆಯಬಹುದಾಗಿದೆ. ಪ್ರತಿ ಗುರುವಾರ ಬಾಳೆಮರದ ಮೇಲೆ ತುಪ್ಪದ ದೀಪವನ್ನು ಬೆಳಗಿಸಿ ಪೂಜಿಸುತ್ತೇವೆ. ಹೀಗೆ ಮಾಡಿದರೆ ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ. ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: Shivabhisheka: ಶಿವನಿಗೆ ಯಾವುದರಿಂದ ಅಭಿಷೇಕ ಮಾಡಿದರೆ ಏನೆಲ್ಲಾ ಫಲ ಸಿಗುತ್ತೆ? ಇಲ್ಲಿದೆ ಅಪರೂಪದ ಮಾಹಿತಿ

ತುಳಸಿ

ತುಳಸಿ ಗಿಡವು ಹಿಂದೂ ಆಚರಣೆಯಲ್ಲಿ ಬಹಳ ಪವಿತ್ರವಾಗಿದೆ. ಎಲ್ಲರೂ ತುಳಸಿ ಕಟ್ಟೆಗೆ ಪೂಜೆ ಮಾಡುತ್ತಾರೆ. ತುಳಸಿಯನ್ನು ಲಕ್ಷ್ಮೀ ದೇವಿಯ ಸಾಕಾರವೆಂದು ಪರಿಗಣಿಸಲಾಗಿದೆ. ಉತ್ತರ ದಿಕ್ಕಿನಲ್ಲಿ ಈ ಗಿಡವನ್ನು ಪೂಜಿಸುವುದರಿಂದ ಸಂಪತ್ತಿನ ಮಳೆಯೇ ಸುರಿಯುತ್ತದೆ. ಅಡಚಣೆಗಳಿಂದ ಸ್ಥಗಿತಗೊಂಡ ಕೆಲಸವನ್ನು ಯಾವುದೇ ತೊಂದರೆಯಿಲ್ಲದೆ ಪೂರ್ಣಗೊಳಿಸಬಹುದು. ಉತ್ತರ ದಿಕ್ಕಿನ ತುಳಸಿ ಗಿಡ ನೆಡುವುದರಿಂದ ಸಾಕಷ್ಟು ಸೂರ್ಯನ ಬೆಳಕು ಸಿಗುತ್ತದೆ.

ಬಿದಿರು

ವಾಸ್ತು ಪ್ರಕಾರ, ಬಿದಿರಿನ ಸಸ್ಯವನ್ನು ಅದೃಷ್ಟದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿಯ ವಿಜ್ಞಾನದ ಪ್ರಕಾರ, ಬಿದಿರನ್ನು ಅದೃಷ್ಟದ ಸಸ್ಯ ಎಂದೂ ಕರೆಯಲಾಗುತ್ತದೆ. ಈ ಗಿಡವನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ನಿಮ್ಮ ಮನೆಗೆ ಅದೃಷ್ಟವನ್ನು ತರುತ್ತದೆ. ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ.

ಮನಿ ಪ್ಲಾಂಟ್

ಅನೇಕ ಮನೆಗಳ ಮುಂದೆ ಕುಂಡಗಳಲ್ಲಿ ಮನಿ ಪ್ಲಾಂಟ್ ಅನ್ನು ಕಾಣಬಹುದು. ಮನಿ ಪ್ಲಾಂಟ್ ಇರುವುದರಿಂದ ಹಣದ ಕೊರತೆ ಇಲ್ಲ ಎನ್ನುತ್ತಾರೆ. ಅದೃಷ್ಟವನ್ನು ಆಕರ್ಷಿಸಲು ಇದನ್ನು ಬೆಳಸಲಾಗುತ್ತದೆ. ಮನಿ ಪ್ಲಾಂಟ್ ಅನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಬಾಟಲಿ ಅಥವಾ ಪಾರದರ್ಶಕ ಕುಂಡದಲ್ಲಿ ನೆಡಬಹುದು. ಆದರೆ ಮನಿ ಪ್ಲಾಂಟ್ ಒಣಗದಂತೆ ನೋಡಿಕೊಳ್ಳಿ. ಆಗ ಮಾತ್ರ ಮನೆಗೆ ಶುಭ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)