Vastu Tips: ಯಶಸ್ಸು, ಖ್ಯಾತಿ ನಿಮ್ಮನ್ನು ಹುಡುಕಿಕೊಂಡು ಬರಲು ಈ ವಾಸ್ತು ನಿಯಮಗಳನ್ನು ಪಾಲಿಸಿ
Vastu Tips: ವಾಸ್ತು ಶಾಸ್ತ್ರವು ವ್ಯಕ್ತಿಯ ಜೀವನವು ಸಂತೋಷದಿಂದ ಕೂಡಿರಲು ಯಾವ ವಸ್ತುಗಳನ್ನು ಹೇಗೆ ಜೋಡಿಸಬೇಕು ಎಂದು ಹೇಳಿದೆ. ವಾಸ್ತು ಪ್ರಕಾರ ಮನೆ ಮತ್ತು ಕಛೇರಿಯನ್ನು ಯಾವ ರೀತಿ ಜೋಡಿಸುವುದರಿಂದ ಧನಾತ್ಮಕ ಶಕ್ತಿ, ಯಶಸ್ಸು, ಖ್ಯಾತಿ ಲಭಿಸುತ್ತದೆ ಇಲ್ಲಿದೆ ಓದಿ.
ಭಾರತದಲ್ಲಿ ವಾಸ್ತು ಶಾಸ್ತ್ರಕ್ಕೆ ಶತಮಾನಗಳಿಂದಲೂ ಗೌರವನ್ನು ನೀಡುತ್ತಾ ಬರಲಾಗಿದೆ. ವಾಸ್ತು ಶಾಸ್ತ್ರವು (Vastu Tips) ನಮ್ಮ ಜೀವನಕ್ಕೆ ಅಗತ್ಯವಿರುವ ಸುಖ, ಶಾಂತಿ, ಸಮೃದ್ಧಿಗಾಗಿ ಹಲವಾರು ಸಲಹೆ ಗಳನ್ನು ನೀಡಿದೆ. ಮನುಷ್ಯನ ಜೀವನ ಬುದ್ಧಿವಂತಿಕೆಯಿಂದ ಕೂಡಿದ್ದರೆ ಜೀವನವು ಸುಖಮಯವಾಗಿರುತ್ತದೆ. ಜೀವನದಲ್ಲಿ ಯಶಸ್ಸು, ಕೀರ್ತಿ ಎಲ್ಲರಿಗೂ ಬಹಳ ಮುಖ್ಯವಾಗಿದೆ. ಅದಕ್ಕಾಗಿ ಕನಸು ಕಾಣುವವರಿದ್ದಾರೆ. ಕಂಡ ಕನಸನ್ನು ನನಸು ಮಾಡಿಕೊಳ್ಳಲು ಅದೆಷ್ಟೋ ಪ್ರಯತ್ನ ಪಡುವವರಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಸುಲಭವಾಗಿ ಯಶಸ್ಸು, ಖ್ಯಾತಿ ಮತ್ತು ಸಮೃದ್ಧಿಯನ್ನು ಗಳಿಸಲು ಕೆಲವು ಸರಳ ಉಪಾಯಗಳನ್ನು ಹೇಳಲಾಗಿದೆ. ಅವುಗಳನ್ನು ಪಾಲಿಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯನ್ನು ಸುಲಭಗೊಳಿಸುತ್ತದೆ.
ಬಣ್ಣಗಳು
ಜೀವನದಲ್ಲಿ ಬಣ್ಣಗಳು ಬಹಳಷ್ಟು ಪ್ರಭಾವ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದು ನಮ್ಮ ಮನಸ್ಸು, ಶಕ್ತಿಯ ಮೇಲೂ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಯಶಸ್ಸು ಮತ್ತು ಖ್ಯಾತಿ ಗಳಿಸಲು ನಿಮ್ಮ ಕೆಲಸದ ಮತ್ತು ವಾಸಿಸುವ ಸ್ಥಳದಲ್ಲಿ ಕೆಂಪು, ಕಿತ್ತಳೆ ಮತ್ತು ಹಳದಿಯಂತಹ ಆಕರ್ಷಕ ಬಣ್ಣಗಳನ್ನು ಬಳಸಿ. ಇದು ಸೃಜನಶೀಲತೆ ಮತ್ತು ಯಶಸ್ಸನ್ನು ಒಳಗೊಂಡಿರುವುದಿರಂದ ನಿಮಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಜೊತೆಗೆ ನಿಮಗೆ ಪ್ರೇರಣೆ, ಸ್ಪೂರ್ತಿಯನ್ನು ನೀಡುತ್ತದೆ. ಇದರಿಂದ ನಿಮ್ಮ ಸಾಧನೆಯ ಸಾಮರ್ಥ್ಯವನ್ನು ಹೆಚ್ಚಿಸಿ, ಪ್ರಯತ್ನಗಳು ಫಲಿಸಿ, ಯಶಸ್ಸು ಸಿಗುವಂತಹ ವಾತಾವರಣ ನಿರ್ಮಿಸುತ್ತದೆ.
ಯಶಸ್ಸನ್ನು ಪ್ರೇರೇಪಿಸುವಂತಹ ವಾತಾವರಣ ಸೃಷ್ಟಿಸಿಕೊಳ್ಳಿ
ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸಕಾರಾತ್ಮಕ ಪ್ರಭಾವ ಬೀರುವಂತೆ ರೂಪಿಸಿಕೊಳ್ಳಿ. ನಿಮ್ಮ ವೈಯಕ್ತಿಕ ಆಸೆಯನ್ನು ಪ್ರತಿನಿಧಿಸುವ ಚಿತ್ರ ಅಥವಾ ವಸ್ತುಗಳನ್ನು ಇರಿಸಿಕೊಳ್ಳಿ. ವಾಸ್ತು ಪ್ರಕಾರ ಅವುಗಳು ನಿಮ್ಮ ಗುರಿ ತಲುಪಲು ನಿಮಗೆ ಆಗಾಗ ಜ್ಞಾಪಿಸುವುದರ ಜೊತೆಗೆ ದೃಢ ಮನಸ್ಸನ್ನು ನೀಡುತ್ತದೆ. ನಿಮ್ಮ ಸಾಧನೆಯ ಕಡೆಗೆ ಗಮನವನ್ನು ಕೇಂದ್ರೀಕರಿಸಲು ಮತ್ತು ಉತ್ತೇಜಿಸಲು ನೆರವಾಗುತ್ತದೆ. ಉದಯಿಸುವ ಸೂರ್ಯ, ಚಿಮ್ಮುವ ಕಾರಂಜಿಯಂತಹ ಚಿತ್ರಗಳು ನಿಮ್ಮನ್ನು ಉತ್ತೇಜಿಸುವುದರ ಜೊತೆಗೆ ಯಶಸ್ಸಿನಡೆಗೆ ನಿಮ್ಮನ್ನು ಕೊಂಡೊಯ್ಯುತ್ತದೆ.
ಕೆಲಸ ಮಾಡಲು ಈ ದಿಕ್ಕು ಆಯ್ದುಕೊಳ್ಳಿ
ನೀವು ಕೆಲಸ ಮಾಡುವ ಸ್ಥಳವು ಮಂಗಳಕರವಾಗಿದ್ದರೆ ಸಾಧನೆಗೆ ಅನುಕೂಲಕರವಾಗಿರುತ್ತದೆ. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನಿಮ್ಮ ಟೇಬಲ್ ಮತ್ತು ಚೇರ್ ಅನ್ನು ಇರಿಸಿಕೊಳ್ಳುವುದರಿಂದ ಕೆಲಸದಲ್ಲಿ ಉತ್ಪಾದಕತೆ ಹೆಚ್ಚುತ್ತದೆ ಎಂದು ವಾಸ್ತು ಹೇಳುತ್ತದೆ. ಅಷ್ಟೇ ಅಲ್ಲದೇ ಬಾಗಿಲಿಗೆ ಎದುರಾಗಿ ಕುಳಿತು ಕೆಲಸ ಮಾಡಿ. ಅದು ನಿಮ್ಮ ಗಮನ, ಸೃಜನಶೀಲತೆ ಮತ್ತು ಸಾಧನೆಯನ್ನು ಉತ್ತೇಜಿಸುತ್ತದೆ. ಅಭಿವೃದ್ಧಿ ಹೊಂದುವ ವಾತಾವರಣ ಸೃಷ್ಟಿಸುತ್ತದೆ. ಜೊತೆಗೆ ನೀವು ಕೆಲಸ ಮಾಡುವ ಜಾಗದಲ್ಲಿ ಹಚ್ಚ ಹಸಿರು ಬಣ್ಣ ಮತ್ತು ನೈಸರ್ಗಿಕ ಬೆಳಕು ಇರುವಂತೆ ನೋಡಿಕೊಳ್ಳಿ.
ಕೆಲಸದ ಜಾಗವನ್ನು ವ್ಯವಸ್ಥಿತವಾಗಿ ಜೋಡಿಸಿ
ವಾಸ್ತು ಶಾಸ್ತ್ರದ ಪ್ರಕಾರ ಯಶಸ್ಸು ಮತ್ತು ಖ್ಯಾತಿ ಗಳಿಸಲು ಮೊದಲು ಕೆಲಸ ಮಾಡುವ ಜಾಗವು ವ್ಯವಸ್ಥಿತವಾಗಿರಬೇಕು. ಅಸ್ತವ್ಯಸ್ತದಿಂದ ಕೂಡಿರುವ ಪರಿಸರವು ಸಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ ಮತ್ತು ಬೆಳವಣಿಗೆಯನ್ನು ತಡೆಯುತ್ತದೆ. ಪ್ರಶಾಂತ ವಾತಾವರಣದಲ್ಲಿ ಸ್ಥಿರ ಮನಸ್ಸು ಹೊಂದುವುದು ಸುಲಭವಾಗಿದೆ. ಕೆಲಸದ ಮೇಲೆ ಗಮನವಹಿಸಲು, ಉತ್ಪಾದಕತೆ ಹೆಚ್ಚಿಸಲು ಮತ್ತು ಹೊಸ ಕೆಲಸ ನಿರ್ವಹಿಸಲು ಸಹಾಯ ಮಾಡುತ್ತದೆ. ನಿಮ್ಮ ಗುರಿಗಳತ್ತ ನಿಮ್ಮನ್ನು ಮುನ್ನಡೆಸುತ್ತದೆ.
ಜೀವನ ಮತ್ತು ಕೆಲಸ ಬ್ಯಾಲೆನ್ಸ್ ಮಾಡಿ
ವಾಸ್ತು ಶಾಸ್ತ್ರದ ಪ್ರಕಾರ ಯಶಸ್ಸು ಮತ್ತು ಖ್ಯಾತಿ ಗಳಿಸಲು ಜೀವನ ಮತ್ತು ಕೆಲಸ ಎರಡನ್ನೂ ಸಮತೋಲನದಿಂದ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಮನೆ ಮತ್ತು ಕಚೇರಿ ಪೀಠೋಪಕರಣಗಳನ್ನು ವಾಸ್ತು ಪ್ರಕಾರ ಜೋಡಿಸಿ. ಅದು ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮಗೆ ಸ್ಪೂರ್ತಿ ನೀಡುವಂತಹ ವಾತಾವರಣವನ್ನು ಅಲ್ಲಿರುವಂತೆ ನೋಡಿಕೊಳ್ಳಿ. ನಿಮ್ಮ ಗುರಿಯನ್ನು ನೆನಪಿಸುವ ಚಿತ್ರಗಳನ್ನು ಸಹ ಇರಿಸಿಕೊಳ್ಳಿ. ಲಶ್ ಗಿಡಗಳನ್ನು ನಿಮ್ಮ ಕೆಲಸ ಮಾಡುವ ಮತ್ತು ಮನೆಯಲ್ಲಿ ಇಟ್ಟುಕೊಳ್ಳಿ. ಧನಾತ್ಮಕ ಅಂಶಗಳನ್ನು ಆಕರ್ಷಿಸುವಂತಹ ಸ್ಥಳವನ್ನು ರಚಿಸಿ. ನಿಮ್ಮ ಕನಸುಗಳನ್ನು ನನಸಾಗಿಸಲು ಅವು ನಿಮ್ಮನ್ನು ಪ್ರೇರೇಪಿಸುತ್ತವೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.