Vastu Tips: ಪ್ರವಾಸ, ಯಾತ್ರೆಗೆ ಹೊರಟಾಗ ವಾಸ್ತು ಹೇಗಿರಬೇಕು; ಶುಭಫಲಗಳಿಗಾಗಿ ಈ 5 ನಿಯಮಗಳನ್ನು ತಪ್ಪದೇ ಪಾಲಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಪ್ರವಾಸ, ಯಾತ್ರೆಗೆ ಹೊರಟಾಗ ವಾಸ್ತು ಹೇಗಿರಬೇಕು; ಶುಭಫಲಗಳಿಗಾಗಿ ಈ 5 ನಿಯಮಗಳನ್ನು ತಪ್ಪದೇ ಪಾಲಿಸಿ

Vastu Tips: ಪ್ರವಾಸ, ಯಾತ್ರೆಗೆ ಹೊರಟಾಗ ವಾಸ್ತು ಹೇಗಿರಬೇಕು; ಶುಭಫಲಗಳಿಗಾಗಿ ಈ 5 ನಿಯಮಗಳನ್ನು ತಪ್ಪದೇ ಪಾಲಿಸಿ

Vastu Tips: ವಾಸ್ತು ಶಾಸ್ತ್ರದಲ್ಲಿ, ಆಹ್ಲಾದಕರ ಮತ್ತು ಮಂಗಳಕರ ಪ್ರಯಾಣಕ್ಕಾಗಿ ಹಲವು ನಿಯಮಗಳನ್ನು ವಿವರಿಸಲಾಗಿದೆ. ಪ್ರಯಾಣದ ವೇಳೆ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಅಶುಭ ಫಲಿತಾಂಶಗಳಿಗೆ ಕಾರಣವಾಗುತ್ತವೆ ಎಂದು ನಂಬಲಾಗಿದೆ. ನೀವು ಪ್ರಯಾಣಕ್ಕೆ ಹೊರಟಿದ್ದರೆ ಇಲ್ಲಿ ಹೇಳಿರುವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. (ಬರಹ: ಅರ್ಚನಾ ಭಟ್‌)

ಪ್ರವಾಸ, ಯಾತ್ರೆಗೆ ಹೊರಟಾಗ ವಾಸ್ತು ಹೇಗಿರಬೇಕು?
ಪ್ರವಾಸ, ಯಾತ್ರೆಗೆ ಹೊರಟಾಗ ವಾಸ್ತು ಹೇಗಿರಬೇಕು? (PC: Canva)

ವಾಸ್ತು ಶಾಸ್ತ್ರವು ನಮ್ಮ ಜೀವನವು ಸಂತೋಷ ಮತ್ತು ಸುಂದರವಾಗಿರಲು ಅಗತ್ಯವಿರುವ ಅನೇಕ ಸಲಹೆಗಳನ್ನು ನೀಡುತ್ತದೆ. ಮನೆ ಕಟ್ಟುವಾಗ ಯಾವ ದಿಕ್ಕಿನಲ್ಲಿ ಏನು ಇರಬೇಕು ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಿಲಾಗಿದೆ. ಅದರಿಂದ ಸಕಾರಾತ್ಮಕ ಶಕ್ತಿ ಮನೆಯೊಳಗೆ ನೆಲೆಸುತ್ತದೆ. ಅಲ್ಲಿ ವಾಸಿಸುವವರ ಜೀವನವು ಸುಖಮಯದಿಂದ ಕೂಡಿರುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ವಾಸ್ತು ಶಾಸ್ತ್ರವು ಹೊಸ ಕೆಲಸ ಪ್ರಾರಂಭಿಸುವಾಗ ಹಾಗೂ ಪ್ರಯಾಣದ ಸಮಯದಲ್ಲೂ ಕೆಲವು ನಿಯಮಗಳನ್ನು ಹೇಳುತ್ತದೆ. ಆಹ್ಲಾದಕರ ಮತ್ತು ಸುಖಮಯ ಪ್ರಯಾಣಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಅನೇಕ ವಾಸ್ತು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸುವ ಮೂಲಕ ಪ್ರವಾಸ ಅಥವಾ ಪ್ರಯಾಣವನ್ನು ಮಂಗಳಕರವಾಗಿಸಬಹುದು ಎಂದು ನಂಬಲಾಗಿದೆ. ಆದ್ದರಿಂದ, ಯಾವುದೇ ರೀತಿಯ ಪ್ರಯಾಣ ಅಥವಾ ಯಾತ್ರೆಗೆ ಹೋಗುವ ಮೊದಲು ವಾಸ್ತುವಿನಲ್ಲಿ ಹೇಳಿರುವ ಕೆಲವು ಅಂಶಗಳನ್ನು ತಪ್ಪದೇ ನಿರ್ವಹಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಪ್ರಯಾಣದ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಬಹುದು. ಪ್ರಯಾಣ ಮಾಡುವಾಗ ಯಾವ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಈ ಕೆಲಸ ಎಂದಿಗೂ ಮಾಡಬೇಡಿ

ವಾಸ್ತು ಪ್ರಕಾರ, ಪ್ರಯಾಣ ಮಾಡುವಾಗ ಇತರರನ್ನು ಅವಮಾನಿಸುವುದು ಅಥವಾ ನಿಂದಿಸುವುದನ್ನು ಮಾಡಬಾರದು. ನಕಾರಾತ್ಮಕ ಪದಗಳನ್ನು ಬಳಸುವುದನ್ನು ತಪ್ಪಿಸಬೇಕು. ಪ್ರಯಾಣಕ್ಕೆ ಹೋಗುವ ಮೊದಲು ದೇವರು, ದೇವತೆ, ಹಿರಿಯರು, ಪೋಷಕರು ಅಥವಾ ಯಾವುದೇ ಮಹಿಳೆಯನ್ನು ಅವಮಾನಿಸುವುದು ಅಥವಾ ನಿಂದಿಸುವುದನ್ನು ಮಾಡಬಾರದು.

ದಾನ ಮಾಡಿ

ಪ್ರವಾಸ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ಹಸುವಿಗೆ ಹಸಿರು ಹುಲ್ಲು ಮತ್ತು ರೊಟ್ಟಿಯನ್ನು ತಿನ್ನಿಸಬೇಕು. ಬಡವರಿಗೆ ದಾನ ಮಾಡುವುದು ಕೂಡಾ ಉತ್ತಮ.

ಗಾಯತ್ರಿ ಮಂತ್ರ ಪಠಿಸಿ

ಪ್ರಯಾಣ ಆರಂಭಿಸುವ ಮೊದಲು ಗಾಯತ್ರಿ ಮಂತ್ರವನ್ನು ಪಠಿಸಿ. ಇದನ್ನು ಮಾಡುವುದರಿಂದ ಪ್ರಯಾಣವು ಮಂಗಳಕರ ಮತ್ತು ಪ್ರಯೋಜನಕಾರಿಯಾಗುತ್ತದೆ ಎಂದು ನಂಬಲಾಗಿದೆ.

ಪ್ರಯಾಣದ ನಿಯಮಗಳು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ ಮತ್ತು ಶನಿವಾರದಂದು ಪೂರ್ವ ದಿಕ್ಕಿನಲ್ಲಿ ಪ್ರಯಾಣ ಮಾಡಬಾರದು. ಸೋಮವಾರ ಮತ್ತು ಗುರುವಾರ ಆಗ್ನೆಯ ದಿಕ್ಕಿನಲ್ಲಿ ಪ್ರಯಾಣಿಸಬಾರದು. ಬುಧವಾರ ಮತ್ತು ಶನಿವಾರದಂದು ಈಶಾನ್ಯ ದಿಕ್ಕಿನಲ್ಲಿ ಪ್ರಯಾಣಿಸದಂತೆ ಸಲಹೆಗಳನ್ನು ನೀಡಲಾಗುತ್ತದೆ. ಅದೇ ಸಮಯದಲ್ಲಿ, ಭಾನುವಾರದಂದು ಪಶ್ಚಿಮ ಮತ್ತು ನೈಋತ್ಯ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.

ಮಂಗಳವಾರ ನೀವು ಉತ್ತರ ದಿಕ್ಕಿನಲ್ಲಿ ಪ್ರಯಾಣಿಸುತ್ತೀರಿ ಎಂದಾದರೆ, ಬೆಲ್ಲವನ್ನು ಸೇವಿಸಿದ ನಂತರ ಹೊರಗೆ ಹೋಗಿ. ಬುಧವಾರ ಉತ್ತರ ದಿಕ್ಕಿಗೆ ಪ್ರಯಾಣಿಸಬೇಕಾದರೆ ಎಳ್ಳು-ಬೆಲ್ಲ ತಿಂದ ನಂತರ ಹೊರಡಬೇಕು.

ಒಂದು ದಿನದ ಪ್ರವಾಸದಲ್ಲಿ ಏನು ಮಾಡಬೇಕು?

ನೀವು ಗುರುವಾರದಂದು ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದರೆ ಮೊದಲು ಮೊಸರು ಸೇವಿಸಿ ಹೊರಡಬೇಕು. ಶುಕ್ರವಾರ, ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸಬೇಕಾದರೆ ಬಾರ್ಲಿ ತಿಂದ ನಂತರ ಮನೆಯಿಂದ ಹೊರಡಬೇಕು. ಶನಿವಾರ ಪೂರ್ವ ದಿಕ್ಕಿಗೆ ಪ್ರಯಾಣ ಮಾಡುವುದಾದರೆ ಒಂದು ತುಂಡು ಶುಂಠಿ ಅಥವಾ ಕಪ್ಪು ಉದ್ದಿನ ಬೇಳೆಯಿಂದ ತಯಾರಿಸಿದ ಆಹಾರ ತಿಂದು ಹೊರಡಬೇಕು. ಈ ಕ್ರಮಗಳನ್ನು ಪಾಲಿಸುವುದರಿಂದ ದುಷ್ಪರಿಣಾಮಗಳಿಂದ ದೂರವಿರಿಸುತ್ತದೆ ಮತ್ತು ಮಂಗಳಕರ ಪ್ರಯಾಣಕ್ಕೆ ಕಾರಣವಾಗುತ್ತವೆ ಎಂದು ನಂಬಲಾಗಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.