ಮನೆಯಲ್ಲಿ ಲೋಹದ ಆಮೆ ಇಟ್ಟರೆ ಶುಭವೋ, ಅಶುಭವೋ? ವಾಸ್ತು ಏನು ಹೇಳುತ್ತದೆ ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ಲೋಹದ ಆಮೆ ಇಟ್ಟರೆ ಶುಭವೋ, ಅಶುಭವೋ? ವಾಸ್ತು ಏನು ಹೇಳುತ್ತದೆ ನೋಡಿ

ಮನೆಯಲ್ಲಿ ಲೋಹದ ಆಮೆ ಇಟ್ಟರೆ ಶುಭವೋ, ಅಶುಭವೋ? ವಾಸ್ತು ಏನು ಹೇಳುತ್ತದೆ ನೋಡಿ

ಕೆಲವೊಂದು ಮನೆ ಹಾಗೂ ಕಚೇರಿಗಳಲ್ಲಿ ವಿವಿಧ ಲೋಹಗಳಿಂದ ಮಾಡಿದ ಆಮೆಯನ್ನು ನೀವು ನೋಡಿರಬಹುದು. ಇನ್ನೂ ಕೆಲವೊಬ್ಬರು ಕೈಗೆ ಆಮೆಯ ಉಂಗುರ ಧರಿಸುತ್ತಾರೆ. ವಾಸ್ತು ಪ್ರಕಾರ, ಆಮೆಗೆ ಇಷ್ಟೊಂದು ಮಹತ್ವ ಯಾಕೆ ಎಂದು ನಿಮಗನಿಸಬಹುದು. ಇದಕ್ಕೆ ಕಾರಣಗಳಿವೆ.

ಮನೆಯಲ್ಲಿ ಲೋಹದ ಆಮೆ ಇಟ್ಟರೆ ಶುಭವೋ, ಅಶುಭವೋ
ಮನೆಯಲ್ಲಿ ಲೋಹದ ಆಮೆ ಇಟ್ಟರೆ ಶುಭವೋ, ಅಶುಭವೋ

ಪ್ರತಿಯೊಬ್ಬರೂ ಬದುಕಿನಲ್ಲಿ ಸಂತೋಷದ ಜೀವನವನ್ನು ನಿರೀಕ್ಷಿಸುತ್ತಾರೆ. ಬದುಕಿನಲ್ಲಿ ಸುಖ-ಸಂತೋಷದ ಜೊತೆಗೆ ಸಮೃದ್ಧಿಗಾಗಿ ವಾಸ್ತು ಮೊರೆ ಹೋಗುತ್ತಾರೆ. ವಾಸ್ತು ನಿಯಮಗಳನ್ನು ಪಾಲಿಸುವುದು ನೆಮ್ಮದಿಯ ಜೀವನಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದೇ ರೀತಿ, ವಾಸ್ತು ಪ್ರಕಾರ ಮನೆಯಲ್ಲಿ ಲೋಹದ ಆಮೆ ಇಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣದಿಂದ ಕೆಲವೊಂದು ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ವಿವಿಧ ಲೋಹಗಳಿಂದ ಮಾಡಿದ ಆಮೆಯನ್ನು ನೀವು ನೋಡಿರಬಹುದು. ಇದರಿಂದ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು. ಲೋಹದಿಂದ ಮಾಡಿದ ಆಮೆಯನ್ನು ಮನೆಯಲ್ಲಿ ಇಡುವುದು ವಾಸ್ತು ಪ್ರಕಾರ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಆಮೆ ಇಡುವ ಕುರಿತಾಗಿ ವಾಸ್ತುವಿನಲ್ಲಿ ಯಾವೆಲ್ಲಾ ನಿಯಮಗಳಿವೆ? ಲೋಹದಿಂದ ಮಾಡಿದ ಆಮೆಯನ್ನು ಮನೆಯಲ್ಲಿ ಇಡುವ ನಿಯಮಗಳೇನು ಎಂಬುದನ್ನು ನೋಡೋಣ.

  • ವಾಸ್ತುಶಾಸ್ತ್ರದ ಪ್ರಕಾರ, ಜೀವಂತ ಆಮೆಯನ್ನು ಮನೆಯಲ್ಲಿ ಇಡಬಾರದು. ಇಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ ಕೌಟುಂಬಿಕ ಜೀವನದಲ್ಲಿ ಗಲಿಬಿಲಿ ಹೆಚ್ಚಬಹುದು.
  • ಮನೆ ಅಥವಾ ಕಚೇರಿಯಲ್ಲಿ ನೀವು ಆಮೆಯನ್ನು ಇರಿಸಲು ಬಯಸಿದರೆ, ಮರದಿಂದ ಮಾಡಿದ ಅಥವಾ ಲೋಹದಿಂದ ಮಾಡಿದ ಆಮೆಯನ್ನು ಸ್ಥಾಪಿಸಬಹುದು.
  • ಮನೆಯಲ್ಲಿ ಆಮೆಯ ವಿಗ್ರಹವನ್ನು ಪ್ರತಿಷ್ಠಾಪಿಸುವುದಕ್ಕೆ ವಾಸ್ತು ಪ್ರಕಾರ ಶುಕ್ರವಾರ, ಬುಧವಾರ ಮತ್ತು ಗುರುವಾರ ಉತ್ತಮ ದಿನ.
  • ಮನೆಯ ಉತ್ತರ ದಿಕ್ಕನ್ನು ಕುಬೇರ ಮೂಲೆಯೆಂದು ಪರಿಗಣಿಸಲಾಗುತ್ತದೆ. ಆಮೆಯ ವಿಗ್ರಹವನ್ನು ಈ ದಿಕ್ಕಿನಲ್ಲಿ ಪ್ರತಿಷ್ಠಾಪಿಸುವುದರಿಂದ ಕುಟುಂಬದದಲ್ಲಿ ಸಂತೋಷ ಮತ್ತು ಅದೃಷ್ಟ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆ ಮೂಲಕ ಆರ್ಥಿಕ ಲಾಭ ಸಾಧ್ಯ.
  • ಮನೆಯ ಆಗ್ನೇಯ ದಿಕ್ಕಿನಲ್ಲಿ ಮರದಿಂದ ಮಾಡಿದ ಆಮೆಯನ್ನು ಸ್ಥಾಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ರೋಗಗಳು ಮತ್ತು ಕೆಲವೊಂದು ದೋಷಗಳಿಂದ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.
  • ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಬೆಳ್ಳಿಯ ಆಮೆಯನ್ನು ಕಚೇರಿ ಸ್ಥಳದಲ್ಲಿ ಇರಿಸಬಹುದು.

ಇದನ್ನೂ ಓದಿ | ಸ್ವಸ್ತಿಕ್‌ ಪದದ ಅರ್ಥವೇನು? ಮನೆ ಮುಂದೆ ಸ್ವಸ್ತಿಕ್ ಚಿಹ್ನೆ ಹೇಗೆ ಬರೆಯಬೇಕು, ಇದರಿಂದ ಏನು ಲಾಭ?

  • ಇದೇ ವೇಳೆ ಮಕ್ಕಳ ಅಧ್ಯಯನ ಕೊಠಡಿಯ ವಾಯುವ್ಯ ದಿಕ್ಕಿನಲ್ಲಿ ಲೋಹದ ಆಮೆಯನ್ನು ಇಡುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ ಎನ್ನಲಾಗುತ್ತದೆ.

ಲೋಹದ ಆಮೆ ಇಟ್ಟುಕೊಳ್ಳುವುದರಿಂದ ಆಗುವ ಪ್ರಯೋಜನಗಳೇನು?

  • ಮನೆಯ ಆಗ್ನೇಯ ದಿಕ್ಕಿನಲ್ಲಿ ಸ್ಫಟಿಕದಿಂದ ಮಾಡಿದ ಆಮೆಯನ್ನು ಇಡುವುದರಿಂದ ಸಾಮಾಜಿಕ ಸ್ಥಾನಮಾನ ಹೆಚ್ಚುತ್ತದೆ ಎಂದು ನಂಬಲಾಗಿದೆ.
  • ಪ್ರತಿ ಮನೆಯಲ್ಲಿ ಮರ ಅಥವಾ ಲೋಹದಿಂದ ಮಾಡಿದ ಆಮೆಯನ್ನು ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
  • ಸಂಪತ್ತು ವೃದ್ಧಿಸುವುದರ ಜೊತೆಗೆ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ.
  • ಮನೆಯ ಮುಖ್ಯದ್ವಾರದಲ್ಲಿ ಆಮೆಯನ್ನು ಇಡುವುದರಿಂದ ನಕಾರಾತ್ಮ ಶಕ್ತಿ ದೂರ ಹೋಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಹೆಚ್ಚಲು ಸಾಧ್ಯವಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.