Vastu Tips: ವಾಸ್ತು ಪ್ರಕಾರ ಮನೆ ಕಟ್ಟೋಕೆ ಆಗದಿದ್ದರೂ ವಾಸ್ತು ದೋಷ ಉಂಟಾಗದಂತೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್-vastu tips what should be done to prevent vastu error even if the house is not taxed according to vastu sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ವಾಸ್ತು ಪ್ರಕಾರ ಮನೆ ಕಟ್ಟೋಕೆ ಆಗದಿದ್ದರೂ ವಾಸ್ತು ದೋಷ ಉಂಟಾಗದಂತೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್

Vastu Tips: ವಾಸ್ತು ಪ್ರಕಾರ ಮನೆ ಕಟ್ಟೋಕೆ ಆಗದಿದ್ದರೂ ವಾಸ್ತು ದೋಷ ಉಂಟಾಗದಂತೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್

Vastu Tips: ವಾಸ್ತುಶಾಸ್ತ್ರದ ಪ್ರಕಾರವೇ ಮನೆ ಕಟ್ಟಬೇಕು ಅನ್ನೋದು ಹಲವರ ಆಲೋಚನೆಯಾಗಿರುತ್ತದೆ. ಸ್ಥಳದ ಅಭಾವ ಸೇರಿದಂತೆ ಕಾರಣಾಂತರ ಅದು ಸಾಧ್ಯವಾಗಿರುವುದಿಲ್ಲ. ವಾಸ್ತು ಪ್ರಕಾರ ಮನೆ ಕಟ್ಟಲು ಸಾಧ್ಯವಾಗದಿದ್ದರೂ ವಾಸ್ತು ದೋಷ ಎದುರಾಗದಂತೆ ನೋಡಿಕೊಳ್ಳಬಹುದು. ಅದು ಹೇಗೆ ಅನ್ನೋದನ್ನು ಜ್ಯೋತಿಷಿ ಎಚ್ ಸತೀಶ್ ಅವರು ತಿಳಿಸಿಕೊಟ್ಟಿದ್ದಾರೆ.

ಮನೆ ಹೆಸರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ: ನೇಮ್‌ ಪ್ಲೇಟ್‌ ವಿಚಾರದಲ್ಲಿ ಈ ವಾಸ್ತು ಅನುಸರಿಸಿ
ಮನೆ ಹೆಸರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ: ನೇಮ್‌ ಪ್ಲೇಟ್‌ ವಿಚಾರದಲ್ಲಿ ಈ ವಾಸ್ತು ಅನುಸರಿಸಿ

Vastu Tips: ವಾಸ್ತುವಿನ ದೋಷ ನಿವಾರಣೆಯಾಗಲು ಹಲವಾರು ಮಾರ್ಗಗಳಿವೆ. ಸಂಪೂರ್ಣ ವಾಸ್ತುವಿನಂತೆ ಮನೆಯನ್ನು ಕಟ್ಟಲು ಸಾಧ್ಯವಾಗದೆ ಹೋಗಬಹುದು. ಆದರೆ ವಾಸ್ತುದೋಷದಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಬಹುದು. ಇದರಲ್ಲಿ ಒಂದು ಬಗೆ ಎಂದರೆ ಪಿರಮಿಡ್‌ಗಳ ಬಳಕೆ. ಜಗತ್ತಿನ ಏಳು ಅದ್ಭುತಗಳಲ್ಲಿ ಪಿರಮಿಡ್ ಸಹ ಒಂದು. ಕುಂಡಲಿಯು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ವಿಚಾರವಾಗುತ್ತದೆ. ಆದರೆ ಮನೆಯ ವಾಸ್ತು ಆ ಮನೆಯಲ್ಲಿ ವಾಸಿಸುವ ಎಲ್ಲಾ ಜನರ ಜೀವನವನ್ನು ನಿರ್ಧರಿಸುವ ಕುಂಡಲಿ ಎಂದು ಹೇಳಬಹುದು. ಪಿರಮಿಡ್ ಆಕಾರವು ನಮ್ಮ ದೇವಾಲಯದ ಗೋಪುರವನ್ನು ಹೋಲುತ್ತದೆ. ಒಂದು ಮನೆಯನ್ನು ತೆಗೆದುಕೊಂಡಾಗ ಆದರ ದಿಕ್ಕುಗಳನ್ನು ಈ ಕೆಳಕಂಡಂತೆ ನಿರ್ಧರಿಸಬಹುದು.

ಪೂರ್ವದಲ್ಲಿ ಇಂದ್ರನ ಪ್ರಭಾವವಿರುತ್ತದೆ. ಅದೇ ರೀತಿಯಲ್ಲಿ ಆಗ್ನೇಯದಲ್ಲಿ ಅಗ್ನಿ, ದಕ್ಷಿಣದಲ್ಲಿ ಯಮ, ನೈರುತ್ಯದಲ್ಲಿ ನಿರುತಿ ಎಂಬ ರಾಕ್ಷಸ, ಪಶ್ಚಿಮದಲ್ಲಿ ವರುಣ, ವಾಯುವ್ಯದಲ್ಲಿ ವಾಯು, ಉತ್ತರದಲ್ಲಿ ಕುಬೇರ ಮತ್ತು ಈಶಾನ್ಯದಲ್ಲಿ ಸಾಕ್ಷಾತ್ ಪರಮೇಶ್ವರನ ಪ್ರಭಾವ ಇರುತ್ತದೆ. ಮನೆಯಲ್ಲಿ ಉಂಟಾಗುವ ತೊಂದರೆಯನ್ನು ಆಧರಿಸಿ ಸೂಕ್ತ ದಿಕ್ಕಿನಲ್ಲಿ ಪಿರಮಿಡ್ ಅನ್ನು ಇಡುವುದರಿಂದ ವಾಸ್ತುದೋಷವು ಪರಿಹಾರವಾಗುತ್ತದೆ.

ಪಿರಮಿಡ್‌ಗಳನ್ನು ಎಲ್ಲೆಲ್ಲಿ ಬಳಸಬಹುದು?

ಸಾಮಾನ್ಯವಾಗಿ ನಮಗೆ ಮೂರು ಅಥವಾ ಒಂಬತ್ತು ಪಿರಮಿಡ್‌ಗಳು ಇರುವ ಪರಿಕರ ದೊರೆಯುತ್ತದೆ. ಆದರೆ ಅವುಗಳಿಂದ ಉಂಟಾಗುವ ಪದಗಳು ಒಂದೇ ರೀತಿ ಇರುತ್ತದೆ. ಪಿರಮಿಡ್‌ಗಳನ್ನು ಇರಿಸುವಾಗ ಸಮತಟ್ಟಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಮ್ಮೆ ಇಟ್ಟ ಪಿರಮಿಡ್ ಓರೆಯಾಗಿ ಕೆಳಗೆ ಬೀಳಬಾರದು. ಇಟ್ಟ ಸ್ಥಳದಿಂದ ಪದೇ ಪದೇ ಬದಲಿಸಬಾರದು. ಆಗ ಮಾತ್ರ ಧನಾತ್ಮಕ ಶಕ್ತಿಯು ಹೆಚ್ಚುತ್ತದೆ. ಪಿರಮಿಡ್‌ಗಳನ್ನು ಗೋಡೆ, ಮೇಲ್ಛಾವಣಿ, ದಿನನಿತ್ಯ ಬಳಸುವ ಮೇಜು ಮುಂತಾದ ಕಡೆ ಅಂಟಿಸಬಹುದು.

ಖಾಲಿ ನಿವೇಶನದ ಮಧ್ಯಭಾಗದಲ್ಲಿ ಒಂಬತ್ತು ಪಿರಮಿಡ್‌ಗಳನ್ನು ಇರಿಸುವುದು ಒಳ್ಳೆಯದು. ಇದರಿಂದಾಗಿ ಖಾಲಿ ನಿವೇಶನಗಳಲ್ಲಿ ಋಣಾತ್ಮಕ ಶಕ್ತಿ ಇರುವುದಿಲ್ಲ. ಖಾಲಿ ಜಾಗವು ಚೌಕಕಾರ ಅಥವಾ ಆಯತಾಕಾರದಲ್ಲಿ ಇದ್ದರೆ ಪ್ರತಿಯೊಂದು ಮೂಲೆಯಲ್ಲಿ ಮೂರು ಅಥವಾ ಒಂಬತ್ತು ಪಿರಮಿಡ್‌ಗಳನ್ನು ಇಡಬಹುದು. ನೈರುತ್ಯದ ಮೂಲೆಯು ಬೆಳೆದಿದ್ದಲ್ಲಿ ಆಗ್ನೇಯ ಮೂಲೆಗೆ ಸಮಾನಾಂತರವಾಗಿ ಪಶ್ಚಿಮ ದಿಕ್ಕಿನಲ್ಲಿ ಪಿರಮಿಡ್ ಅನ್ನು ಇಡಬೇಕು. ಅಂದರೆ ನೈರುತ್ಯ ಮೂಲೆಯ ಪಕ್ಕದಲ್ಲಿ ನೈರುತ್ಯ ಮೂಲೆ ಸ್ಪರ್ಷಿಸದಂತೆ ಇಡಬೇಕು. ಇದರಿಂದ ನೈರುತ್ಯ ದಿಕ್ಕಿನ ದೋಷವು ಪರಿಹಾರ ಗೊಳ್ಳುತ್ತದೆ. ವಾಯುವ್ಯ ಮೂಲೆಯು ಬೆಳೆದಿದ್ದಲ್ಲಿ ಈಶಾನ್ಯ ಮೂಲೆಗೆ ಸಮಾನಾಂತರವಾಗಿ ಪಶ್ಚಿಮ ದಿಕ್ಕಿನಲ್ಲಿ ಪಿರಮಿಡ್ ಇರಿಸಬೇಕು. ವಾಯುವ್ಯ ಮೂಲೆಗೆ ಸ್ಪರ್ಷಿಸದಂತೆ ಇಡಬೇಕು. ಇದರಿಂದ ವಾಯುವ್ಯದ ವಾಸ್ತುದೋಷವು ಪರಿಹಾರ ಗೊಳ್ಳುತ್ತದೆ.

ನಿವೇಶನದ ಯಾವುದೇ ಮೂಲೆಗಳು ಕುತ್ತಾಗಿದ್ದರೆ ಅಥವಾ ತುಂಡಾಗಿದ್ದರೆ ಆ ಭಾಗದಲ್ಲಿ ಮೂರು ಪಿರಮಿಡ್‌ಗಳನ್ನು ಇರಿಸಬೇಕು. ಯಾವುದೇ ಮೂಲೆಯು ಎತ್ತರವಿದ್ದಲ್ಲಿ ಅಭಿಮುಖ ಮೂಲೆಗಳಲ್ಲಿ ಪಿರಮಿಡ್‌ಗಳನ್ನು ಇರಿಸಬೇಕು. ಈಶಾನ್ಯ ಅಥವಾ ನೈರುತ್ಯವು ಎತ್ತರವಾಗಿದ್ದಲ್ಲಿ ಆ ಎರಡು ಮೂಲೆಗಳಲ್ಲಿ ಪಿರಮಿಡ್‌ಗಳನ್ನು ಇರಿಸಬೇಕು. ಹಾಗೆಯೇ ಆಗ್ನೇಯ ಅಥವಾ ವಾಯುವ್ಯ ದಿಕ್ಕುಗಳು ಎತ್ತರವಾಗಿದ್ದಲ್ಲಿ ಆ ಎರಡು ಮೂಲೆಗಳಲ್ಲಿಯೂ ಪಿರಮಿಡ್‌ಗಳನ್ನು ಇರಿಸಬೇಕು.

ಒಂದು ವೇಳೆ ಮನೆಯ ಆಕಾರವು ಚೌಕ ಅಥವಾ ಆಯತಾಕಾರವಾಗಿರದೆ ಅಸ್ತವ್ಯಸ್ತವಾಗಿದ್ದಲ್ಲಿ ಆ ನಿವೇಶನದ ಅಗಲವಾದ ಪ್ರದೇಶದ ಮಧ್ಯಭಾಗದಲ್ಲಿ ಪಿರಮಿಡ್ ಇರಿಸಬೇಕು. ವಜ್ರಾಕೃತಿಯ ಆಕಾರದಲ್ಲಿರುವ ನಿವೇಶನಗಳಲ್ಲಿ ಮನೆಯನ್ನು ಕಟ್ಟಿದರೆ ಅದರಲ್ಲಿ ಋಣಾತ್ಮಕ ಶಿಕ್ಷೆಯು ಅಧಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಆ ಮನೆಯ 4 ಮೂಲೆಗಳಲ್ಲಿಯೂ ಮೂರು ಅಥವಾ ಒಂಬತ್ತು ಪಿರಮಿಡ್‌ಗಳನ್ನು ಇರಿಸುವುದು ಹೆಚ್ಚು ಲಾಭಕರವಾಗುತ್ತದೆ. ಆದರೆ ದೋಷವಿಲ್ಲದ ಪಿರಮಿಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹು ಮುಖ್ಯ. ಪಂಚಲೋಹ ಅಥವಾ ಹಿತ್ತಾಳೆಯ ಪಿರಮಿಡ್ ಗಳನ್ನು ಬಳಸುವುದು ಒಳ್ಳೆಯದು.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.