Vastu Tips: ಕಾಲುಗಳನ್ನು ಒರೆಸುವ ಡೋರ್‌ ಮ್ಯಾಟ್‌ಗೂ ಇದೆ ವಾಸ್ತು; ಯಾವ ದಿಕ್ಕಿಗೆ ಯಾವ ಬಣ್ಣದ ಮ್ಯಾಟ್‌ ಬಳಸಿದರೆ ಸೂಕ್ತ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಕಾಲುಗಳನ್ನು ಒರೆಸುವ ಡೋರ್‌ ಮ್ಯಾಟ್‌ಗೂ ಇದೆ ವಾಸ್ತು; ಯಾವ ದಿಕ್ಕಿಗೆ ಯಾವ ಬಣ್ಣದ ಮ್ಯಾಟ್‌ ಬಳಸಿದರೆ ಸೂಕ್ತ? ಇಲ್ಲಿದೆ ಮಾಹಿತಿ

Vastu Tips: ಕಾಲುಗಳನ್ನು ಒರೆಸುವ ಡೋರ್‌ ಮ್ಯಾಟ್‌ಗೂ ಇದೆ ವಾಸ್ತು; ಯಾವ ದಿಕ್ಕಿಗೆ ಯಾವ ಬಣ್ಣದ ಮ್ಯಾಟ್‌ ಬಳಸಿದರೆ ಸೂಕ್ತ? ಇಲ್ಲಿದೆ ಮಾಹಿತಿ

Door Mat Vastu Tips: ಕಾಲುಗಳನ್ನು ಒರೆಸಲು ಮನೆ ಮುಂಭಾಗ ಹಾಕುವ ಡೋರ್‌ ಮ್ಯಾಟ್‌ ಬಗ್ಗೆ ಕೆಲವರು ಅಷ್ಟು ಗಮನ ನೀಡುವುದಿಲ್ಲ. ಆದರೆ ಡೋರ್‌ ಮ್ಯಾಟ್‌ಗೂ ವಾಸ್ತು ಇದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಯಾವ ದಿಕ್ಕಿಗೆ ಯಾವ ಬಣ್ಣದ ಡೋರ್‌ ಮ್ಯಾಟ್‌ ಬಳಸುವುದು ಸೂಕ್ತ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಡೋರ್‌ ಮ್ಯಾಟ್‌ ವಾಸ್ತು ಟಿಪ್ಸ್‌
ಡೋರ್‌ ಮ್ಯಾಟ್‌ ವಾಸ್ತು ಟಿಪ್ಸ್‌ (PC: Unsplash)

ಡೋರ್ ಮ್ಯಾಟ್ ವಾಸ್ತು ಟಿಪ್ಸ್: ಹೊರಗಿನಿಂದ ಬಂದ ಕೂಡಲೇ ಬಾಗಿಲ ಬಳಿ ಹಾಕಿರುವ ಡೋರ್‌ ಮ್ಯಾಟ್‌ಗೆ ಕಾಲು ಒರೆಸಿ ಒಳಗೆ ಬರುತ್ತೇವೆ. ನೆಲ ಕೊಳೆ ಆಗಬಾರದು ಎಂಬ ಕಾರಣಕ್ಕೆ ಎಲ್ಲಾ ಕೋಣೆಯ ಬಳಿಯೂ ಮ್ಯಾಟ್‌ ಬಳಸುತ್ತೇವೆ. ಕೆಲವರು ಬಹಳ ಸಿಂಪಲ್‌ ಡೋರ್‌ ಮ್ಯಾಟ್‌ ಬಳಸಿದರೆ, ಇನ್ನೂ ಕೆಲವರು ಅದಕ್ಕೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಡೋರ್‌ ಮ್ಯಾಟ್‌ಗೆ ಕೂಡಾ ವಾಸ್ತು ಇದೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ.

ಡೋರ್‌ ಮ್ಯಾಟ್‌, ನಿಮ್ಮ ಮನೆಗೆ ಅತಿಥಿಗಳನ್ನು ಆಹ್ವಾನಿಸುವುದು ಮಾತ್ರವಲ್ಲದೆ ನಿಮ್ಮ ಮನೆಗೆ ಸೌಂದರ್ಯವನ್ನು ನೀಡುತ್ತದೆ. ಅದಕ್ಕಾಗಿಯೇ ಮುಖ್ಯದ್ವಾರದ ಬಳಿ ಹಾಕಿರುವ ಡೋರ್ ಮ್ಯಾಟನ್ನು ಬಹಳ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಡುಗೆ ಕೋಣೆ, ವಾಶ್ ರೂಂ, ಲಿವಿಂಗ್ ರೂಮಿನ ಸೋಫಾ, ಬೆಡ್ ರೂಂ ಹಾಗೂ ಇತರೆಡೆ ಡೋರ್‌ ಮ್ಯಾಟ್‌ ಬಳಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಮುಖ್ಯ ಬಾಗಿಲಿನ ದಿಕ್ಕಿನ ಅನುಸಾರ ಸರಿಯಾದ ಬಣ್ಣದ ಡೋರ್ ಮ್ಯಾಟ್ ಆಯ್ಕೆ ಮಾಡಿ. ಆಗ ಮಾತ್ರ ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ.

ಮುಖ್ಯ ಬಾಗಿಲು ಪಶ್ಚಿಮಾಭಿಮುಖವಾಗಿದ್ದರೆ

ಪಶ್ಚಿಮ ದಿಕ್ಕು ಸೃಜನಶೀಲತೆ, ಫಲವತ್ತತೆ ಮತ್ತು ಸಂತೋಷಕ್ಕೆ ಸಂಬಂಧಿಸಿದೆ. ಆದ್ದರಿಂದಲೇ ನಿಮ್ಮ ಮನೆಯ ಮುಖ್ಯ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಕಪ್ಪು ಡೋರ್ ಮ್ಯಾಟ್ ಹಾಕುವುದು ಉತ್ತಮ. ಕಪ್ಪು ಬಣ್ಣ ಶಕ್ತಿಯನ್ನು ಗ್ರಹಿಸುತ್ತದೆ. ಮನೆಯಲ್ಲಿ ಯಾವುದೇ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಸಾಮರಸ್ಯದ ವಾತಾವರಣವನ್ನು ಉತ್ತೇಜಿಸುತ್ತದೆ.

ಉತ್ತರ ಅಥವಾ ಈಶಾನ್ಯ ದಿಕ್ಕು

ಉತ್ತರ ಅಥವಾ ಈಶಾನ್ಯ ದಿಕ್ಕುಗಳು ವೃತ್ತಿ, ಅವಕಾಶಗಳು, ವೈಯಕ್ತಿಕ ಬೆಳವಣಿಗೆಯನ್ನು ಸೂಚಿಸುತ್ತವೆ. ಅದಕ್ಕಾಗಿಯೇ ಮುಖ್ಯ ಬಾಗಿಲಿನ ಬಳಿ ನೀಲಿ ಅಥವಾ ಕಪ್ಪು ಬಣ್ಣದ ಡೋರ್ ಮ್ಯಾಟ್ ಅನ್ನು ಈ ದಿಕ್ಕಿಗೆ ಇಡಬೇಕು. ಇವು ನೀರಿನ ಅಂಶಗಳನ್ನು ಪ್ರತಿನಿಧಿಸುತ್ತವೆ. ಮನೆಗೆ ಸಮೃದ್ಧಿಯನ್ನು ನೀಡುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಕೂಡಾ ಸುಧಾರಿಸಲಿದೆ.

ದಕ್ಷಿಣ ಅಥವಾ ಆಗ್ನೇಯ ದಿಕ್ಕು

ದಕ್ಷಿಣ ಅಥವಾ ಆಗ್ನೇಯ ದಿಕ್ಕುಗಳು ಉತ್ಸಾಹ, ಖ್ಯಾತಿ, ಸಂಪತ್ತಿಗೆ ಸಂಬಂಧಿಸಿವೆ. ನಿಮ್ಮ ಮುಖ್ಯ ಬಾಗಿಲು ದಕ್ಷಿಣಕ್ಕೆ ಇದ್ದರೆ, ಕೆಂಪು ಅಥವಾ ಹಸಿರು ಬಣ್ಣದ ಡೋರ್ ಮ್ಯಾಟ್ ಆಯ್ಕೆಮಾಡಿ. ಕೆಂಪು ಬಣ್ಣವು ಶಕ್ತಿ ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಹಸಿರು ಬೆಳವಣಿಗೆ, ಸಮತೋಲನವನ್ನು ಪ್ರತಿನಿಧಿಸುತ್ತದೆ. ನೀವು ಕೆಂಪು ಬಣ್ಣವನ್ನು ಆಯ್ಕೆ ಮಾಡಿದರೆ ನಿಮ್ಮ ಮನೆಯು ಉತ್ತಮವಾಗಿರುತ್ತದೆ. ಅದೃಷ್ಟವು ನಿಮ್ಮನ್ನು ಹಿಂಬಾಲಿಸುತ್ತದೆ.

ನೈರುತ್ಯ ದಿಕ್ಕು

ನಿಮ್ಮ ಮನೆಯ ಮುಖ್ಯ ಬಾಗಿಲು ನೈರುತ್ಯ ದಿಕ್ಕಿನಲ್ಲಿದ್ದರೆ ಹಳದಿ ಮತ್ತು ಚಿನ್ನದ ಬಣ್ಣದ ಡೋರ್ ಮ್ಯಾಟ್ ಬಳಸುವುದು ಉತ್ತಮ. ಇದು ಪ್ರೀತಿ ಮತ್ತು ಸ್ಥಿರತೆಗೆ ಸಂಬಂಧಿಸಿದೆ. ಈ ಬಣ್ಣದ ಡೋರ್ ಮ್ಯಾಟ್‌ಗಳನ್ನು ಹಾಕುವುದರಿಂದ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ನೈರುತ್ಯ ಮುಖ್ಯ ದ್ವಾರದಲ್ಲಿ ಈ ಬಣ್ಣಗಳಿರುವ ಡೋರ್ ಮ್ಯಾಟ್ ಬಳಸಿದರೆ ನಿಮ್ಮ ಮನೆ ಮನದಲ್ಲಿ ಸದಾ ಸಂತೋಷ ತುಂಬಿರುತ್ತದೆ.

ಪೂರ್ವ ದ್ವಾರ

ನಿಮ್ಮ ಮನೆಯ ಮುಖ್ಯ ದ್ವಾರವು ಪೂರ್ವ ದಿಕ್ಕಿನಲ್ಲಿದ್ದರೆ ಹಸಿರು ಅಥವಾ ನೀಲಿ ಬಣ್ಣದ ಡೋರ್ ಮ್ಯಾಟ್‌ಗಳನ್ನು ಆರಿಸಿ. ಈ ದಿಕ್ಕು ಆರೋಗ್ಯ, ಕುಟುಂಬ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಆರೋಗ್ಯ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ನೀಲಿ ಶಾಂತತೆಯನ್ನು ನೀಡುತ್ತದೆ. ಅದಕ್ಕಾಗಿಯೇ ನಿಮ್ಮ ಮನೆಯ ಬಾಗಿಲು ಪೂರ್ವ ದಿಕ್ಕಿನಲ್ಲಿದ್ದರೆ, ಈ ಬಣ್ಣದ ಡೋರ್ ಮ್ಯಾಟ್‌ಗಳನ್ನು ಹಾಕುವುದರಿಂದ ಮನೆಯಲ್ಲಿ ಶಾಂತಿಯುತ ವಾತಾವರಣ ಉಂಟಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.