Vastu Tips: ವಾಸ್ತು ಶಾಸ್ತ್ರ, ಫೆಂಗ್ ಶೂಯಿ ಪ್ರಕಾರ ಉತ್ತಮ ನಿದ್ರೆಗೆ ಯಾವ ದಿಕ್ಕಿನಲ್ಲಿ ಮಲಗಬೇಕು? ಈ 2 ದಿಕ್ಕುಗಳಲ್ಲಿ ಮಲಗಬಾರದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ವಾಸ್ತು ಶಾಸ್ತ್ರ, ಫೆಂಗ್ ಶೂಯಿ ಪ್ರಕಾರ ಉತ್ತಮ ನಿದ್ರೆಗೆ ಯಾವ ದಿಕ್ಕಿನಲ್ಲಿ ಮಲಗಬೇಕು? ಈ 2 ದಿಕ್ಕುಗಳಲ್ಲಿ ಮಲಗಬಾರದು

Vastu Tips: ವಾಸ್ತು ಶಾಸ್ತ್ರ, ಫೆಂಗ್ ಶೂಯಿ ಪ್ರಕಾರ ಉತ್ತಮ ನಿದ್ರೆಗೆ ಯಾವ ದಿಕ್ಕಿನಲ್ಲಿ ಮಲಗಬೇಕು? ಈ 2 ದಿಕ್ಕುಗಳಲ್ಲಿ ಮಲಗಬಾರದು

Sleeping direction: ಮಲಗುವ ಕೋಣೆಯ ವಿನ್ಯಾಸ ಮಾತ್ರವಲ್ಲದೆ ಮಲಗುವ ದಿಕ್ಕು ಕೂಡ ಬಹಳ ಮುಖ್ಯ. ಸರಿಯಾದ ದಿಕ್ಕಿನಲ್ಲಿ ಮಲಗುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ, ಜೀವಿತಾವಧಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಉತ್ತಮ ನಿದ್ರೆಗೆ ಯಾವ ದಿಕ್ಕಿನಲ್ಲಿ ಮಲಗಬೇಕು
ಉತ್ತಮ ನಿದ್ರೆಗೆ ಯಾವ ದಿಕ್ಕಿನಲ್ಲಿ ಮಲಗಬೇಕು

ಒತ್ತಡ ಮತ್ತು ಆತಂಕದ ಪರಿಸ್ಥಿತಿಗಳು ನಿದ್ರೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಿಮಗೆ ಶಾಂತಿಯುತವಾಗಿ ಸುಖಕರ ನಿದ್ದೆ ಬರಬೇಕೆಂದರೆ ಜೀವನಶೈಲಿಯಲ್ಲಿ ಬದಲಾವಣೆ ಜೊತೆಗೆ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ದಿಕ್ಕಿನಲ್ಲೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸರಿಯಾದ ದಿಕ್ಕಿನಲ್ಲಿ ಮಲಗುವುದು ಗುಣಮಟ್ಟದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ನೀವು ಸಾಕಷ್ಟು ನಿದ್ರೆ ಮಾಡದಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಪ್ಪು ದಿಕ್ಕಿನಲ್ಲಿ ಮಲಗುವುದರಿಂದ ನಿದ್ರೆಯ ಜೊತೆ ಸಂತೋಷ ಮತ್ತು ಸಂಪತ್ತು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಮಲಗುವುದರಿಂದ ಜೀವಿತಾವಧಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಯಾವ ದಿಕ್ಕಿನಲ್ಲಿ ಮಲಗುವುದು ಉತ್ತಮ?

ಪುರಾತನ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ವಿಶ್ರಾಂತಿ ಪಡೆಯುವುದು ಉತ್ತಮ. ಇದು ನಿದ್ರೆ ಮತ್ತು ಶಾಂತತೆಯನ್ನು ಹೆಚ್ಚಿಸುತ್ತದೆ. ದಕ್ಷಿಣ ದಿಕ್ಕಿಗೆ ಮಲಗುವುದು ನಿಮ್ಮ ವಿಶ್ರಾಂತಿಯ ಗುಣಮಟ್ಟವನ್ನು ಸುಧಾರಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಕೂಡ ಮಲಗುವುದು ಒಳ್ಳೆಯದು. ಪೂರ್ವ ಮತ್ತು ದಕ್ಷಿಣಾಭಿಮುಖವಾಗಿ ಮಲಗಿದರೆ ಬುದ್ಧಿವಂತರಾಗುತ್ತಾರೆ. ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಉತ್ತಮ ಎಂದು ವಿಷ್ಣು ಪುರಾಣವೂ ಹೇಳುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಮಲಗಿದರೆ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕಿಗೆ ಮಲಗುವುದರಿಂದ ಸಂಪತ್ತು ಮತ್ತು ದೀರ್ಘಾಯುಷ್ಯ ವೃದ್ಧಿಸುತ್ತದೆ.

ಯಾವ ದಿಕ್ಕಿನಲ್ಲಿ ಮಲಗಬಾರದು? ಏಕೆ?

ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಎಂದಿಗೂ ಮಲಗಬೇಡಿ. ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ರೋಗರುಜಿನಗಳು ಕಾಡುತ್ತವೆ. ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಒತ್ತಡ ಉಂಟಾಗುತ್ತದೆ. ಇದು ತಲೆನೋವಿನಂತಹ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಆದ್ದರಿಂದ ಮಲಗುವ ಕೋಣೆಯಲ್ಲಿ ದಕ್ಷಿಣ ದಿಕ್ಕಿಗೆ ಮಲಗಿದರೆ ಆರೋಗ್ಯಕರ ಗುಣಮಟ್ಟದ ನಿದ್ದೆ ಬರುತ್ತದೆ. ಮಹಾಭಾರತದಲ್ಲಿ ಕೂಡ ಉತ್ತರ ಅಥವಾ ಪಶ್ಚಿಮಕ್ಕೆ ತಲೆ ಇಟ್ಟು ಮಲಗುವುದು ಒಳ್ಳೆಯದಲ್ಲ ಎಂದು ಹೇಳಲಾಗಿದೆ.

ಫೆಂಗ್ ಶೂಯಿ ಏನು ಹೇಳುತ್ತದೆ?

ಭಾರತದಲ್ಲಿ ವಾಸ್ತುಶಾಸ್ತ್ರವಿದ್ದಂತೆ ಚೀನಾದಲ್ಲಿ ಈ ಸಂಸ್ಕೃತಿಯನ್ನು ಫೆಂಗ್ ಶೂಯಿ ಎಂದು ಕರೆಯಲಾಗುತ್ತದೆ. ಫೆಂಗ್ ಶೂಯಿ ಪ್ರಕಾರ ಕೂಡ ನಿದ್ರೆಯ ದಿಕ್ಕು ಸರಿಯಾಗಿರಬೇಕು. ಇದು ಕೂಡ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಸೂಕ್ತ ಎಂದು ಹೇಳುತ್ತದೆ. ದಕ್ಷಿಣದಿಂದ ಬೀಸುವ ಬೆಚ್ಚಗಿನ ಗಾಳಿಯು ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ. ನೀವು ಗುಣಮಟ್ಟದ ನಿದ್ರೆಯನ್ನು ಪಡೆಯಲು ಬಯಸಿದರೆ, ಮಲಗುವ ಕೋಣೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿರಬಾರದು. ಹಾಸಿಗೆಯ ಮುಂದೆ ಕನ್ನಡಿಯನ್ನು ಎಂದಿಗೂ ಇಡಬೇಡಿ. ನಾವು ಎದ್ದಾಗ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡುವುದು ಅಪಶಕುನವಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.