ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅದೃಷ್ಟಕ್ಕಾಗಿ ಆಮೆ ಉಂಗುರ ಧರಿಸಬೇಕು ಎಂದುಕೊಂಡಿದ್ದೀರಾ? ಅದಕ್ಕೂ ಮುನ್ನ ಈ ಪ್ರಮುಖ ವಾಸ್ತು ನಿಯಮಗಳನ್ನು ತಿಳಿದುಕೊಳ್ಳಿ

ಅದೃಷ್ಟಕ್ಕಾಗಿ ಆಮೆ ಉಂಗುರ ಧರಿಸಬೇಕು ಎಂದುಕೊಂಡಿದ್ದೀರಾ? ಅದಕ್ಕೂ ಮುನ್ನ ಈ ಪ್ರಮುಖ ವಾಸ್ತು ನಿಯಮಗಳನ್ನು ತಿಳಿದುಕೊಳ್ಳಿ

Vastu Tips: ವಾಸ್ತುವಿನಲ್ಲಿ ಆಮೆಗೆ ಬಹಳ ಪ್ರಾಮುಖ್ಯತೆ ಇದೆ. ಆಮೆಯನ್ನು ವಿಷ್ಣುವಿನ ಪ್ರತಿರೂಪ ಎಂದು ನಂಬಲಾಗಿದೆ. ಆದ್ದರಿಂದ ಬಹಳ ಜನ ಆಮೆ ವಿಗ್ರಹವನ್ನು ಮನೆಗೆ ತರುತ್ತಾರಾರೆ, ಜೊತೆಗೆ ಆಮೆ ಉಂಗುರವನ್ನೂ ಧರಿಸುತ್ತಾರೆ. ನೀವು ಅದೃಷ್ಟಕ್ಕಾಗಿ ಆಮೆ ಉಂಗುರ ಧರಿಸಬೇಕು ಎಂದುಕೊಂಡಿದ್ದೀರಾ? ಅದಕ್ಕೂ ಮುನ್ನ ಈ ಪ್ರಮುಖ ವಾಸ್ತು ನಿಯಮಗಳನ್ನು ತಿಳಿದುಕೊಳ್ಳಿ.

ಅದೃಷ್ಟಕ್ಕಾಗಿ ಆಮೆ ಉಂಗುರ ಧರಿಸಬೇಕು ಎಂದುಕೊಂಡಿದ್ದೀರಾ? ಅದಕ್ಕೂ ಮುನ್ನ ಈ ಪ್ರಮುಖ ವಾಸ್ತು ನಿಯಮಗಳನ್ನು ತಿಳಿದುಕೊಳ್ಳಿ
ಅದೃಷ್ಟಕ್ಕಾಗಿ ಆಮೆ ಉಂಗುರ ಧರಿಸಬೇಕು ಎಂದುಕೊಂಡಿದ್ದೀರಾ? ಅದಕ್ಕೂ ಮುನ್ನ ಈ ಪ್ರಮುಖ ವಾಸ್ತು ನಿಯಮಗಳನ್ನು ತಿಳಿದುಕೊಳ್ಳಿ (PC: Pixabay)

ವಾಸ್ತು ಇಂದು ನಿನ್ನೆಯದಲ್ಲ, ಬಹಳ ಪುರಾತನವಾದುದು, ಹಿಂದಿನ ಕಾಲದ ಮನೆಗಳನ್ನು ನೋಡಿದರೆ ಎಲ್ಲವೂ ವಾಸ್ತು ಪ್ರಕಾರ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಸ್ತು ಬಹಳ ಪ್ರಸಿದ್ಧಿ ಪಡೆಯುತ್ತಿದೆ. ಮನೆ, ಕಚೇರಿಯಲ್ಲಿ ಇಂತಿಥ ಕೋಣೆಗಳು ನಿರ್ದಿಷ್ಟ ದಿಕ್ಕಿನಲ್ಲಿರಬೇಕು. ಇಂಥ ವಸ್ತುಗಳು ಹೀಗೇ ಇರಬೇಕು ಎಂಬ ನಿಯಮವಿದೆ.

ವಾಸ್ತು ನಿಯಮವನ್ನು ಸೂಕ್ತ ರೀತಿಯಲ್ಲಿ ಅನುಸರಿಸಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಅದೇ ರೀತಿ ವಾಸ್ತುವಿನ ಆಭರಣಗಳನ್ನು ಧರಿಸಿದರೆ ಕೂಡಾ ವೈಯಕ್ತಿಕವಾಗಿ ಏಳಿಗೆ ಕಾಣಬಹುದು. ಸರ, ಕೈ ಕಡಗ ಸೇರಿದಂತೆ ವಾಸ್ತುಶಾಸ್ತ್ರದಲ್ಲಿ ಆಮೆ ಉಂಗುರಕ್ಕೂ ಬಹಳ ಪ್ರಾಮುಖ್ಯತೆ ಇದೆ. ಆಮೆಯ ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ವಿಷ್ಣುವಿನ ಎರಡನೇ ಅವತಾರವೇ ಕೂರ್ಮಾವತಾರ. ಆದ್ದರಿಂದ ಆಮೆ ಪ್ರತಿಮೆ ಮನೆಯಲ್ಲಿದ್ದರೆ, ಅಥವಾ ಉಂಗುರ ಧರಿಸಿದರೆ ಮನೆಗೆ ಬಹಳ ಒಳ್ಳೆಯದು ಎಂದು ನಂಬಲಾಗಿದೆ.

ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಕೂಡಾ ಆಮೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಸಂಪತ್ತಿಗೆ ಸಂಬಂಧಿಸಿದೆ. ಈ ಆಮೆ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯು ಲಕ್ಷ್ಮಿ ದೇವಿಯ ಅನುಗ್ರಹ ಪಡೆಯುತ್ತಾನೆ. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುತ್ತಾನೆ, ವಿವಿಧ ಮೂಲಗಳಿದಂದ ಆದಾಯ ದೊರೆಯಲಿದೆ. ಇಷ್ಟೆಲ್ಲಾ ಪ್ರಯೋಜನ ನೀಡುವ ಆಮೆ ಉಂಗುರವನ್ನು ಧರಿಸುವ ಮುನ್ನ ನೀವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಇದರಿಂದ ಅದರನ್ನು ಧರಿಸುವ ವ್ಯಕ್ತಿಯು ಸಂಪೂರ್ಣ ಪ್ರಯೋಜನ ಪಡೆಯಬಹುದು.

ಆಮೆ ಉಂಗುರ ಧರಿಸುವ ಮುನ್ನ ಈ ನಿಯಮಗಳನ್ನು ಅನುಸರಿಸಿ

 

  • ಬೆಳ್ಳಿಯಿಂದ ಮಾಡಿದ ಆಮೆಯ ಉಂಗುರವನ್ನು ಧರಿಸುವುದು ಬಹಳ ಪ್ರಯೋಜನಕಾರಿ
  • ಆಮೆಯ ಉಂಗುರವನ್ನು ಧರಿಸುವಾಗ, ಆಮೆಯ ಮುಖವು ನಿಮ್ಮ ಕಡೆಗೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.
  • ಉಂಗುರವನ್ನು ಉಂಗುರದ ಬೆರಳು ಅಥವಾ ತೋರು ಬೆರಳಿಗೆ ಧರಿಸಬೇಕು.
  • ಆಮೆಯ ಉಂಗುರವನ್ನು ಧರಿಸುವ ಮೊದಲು ಅದನ್ನು ಹಾಲಿನಿಂದ ಶುದ್ಧೀಕರಿಸಿ ನಂತರ ಗಂಗಾಜಲದಿಂದ ಶುದ್ಧೀಕರಿಸಬೇಕು.
  • ಉಂಗುರವನ್ನು ಸ್ವಚ್ಛಮಾಡಿದ ನಂತರ ಲಕ್ಷ್ಮಿ ದೇವಿಯ ಪಾದಗಳಿಗೆ ಉಂಗುರವನ್ನು ಅರ್ಪಿಸಿ ಮತ್ತು ಶ್ರೀ ಸೂಕ್ತವನ್ನು ಪಠಿಸಿ ನಂತರವಷ್ಟೇ ಆಮೆಯ ಉಂಗುರವನ್ನು ಧರಿಸಬೇಕು.

ಇದನ್ನೂ ಓದಿ: ಮೇ 21 ರಿಂದ ಲಕ್ಷ್ಮೀ ನಾರಾಯಣ ಯೋಗ; ಈ 5 ರಾಶಿಯವರಿಗೆ ಇನ್ಮುಂದೆ ಸಂತೋಷವೇ ಎಲ್ಲ, ಸಮಸ್ಯೆಗೆ ಅವಕಾಶವೇ ಇಲ್ಲ

  • ಆಮೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ, ಆದ್ದರಿಂದ ಶುಕ್ರವಾರದಂದು ಈ ಉಂಗುರವನ್ನು ಧರಿಸುವುದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ.
  • ಒಂದು ವೇಳೆ ನೀವು ಉಂಗುರವನ್ನು ತೆಗೆಯಬೇಕಾಗಿ ಬಂದಲ್ಲಿ, ಲಕ್ಷ್ಮಿ ದೇವಿಯ ಪಾದಕ್ಕೆ ಸ್ಪರ್ಶಿಸಿ ನಂತರವಷ್ಟೇ ಮತ್ತೆ ಉಂಗುರವನ್ನು ಧರಿಸಬೇಕು.
  • ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆಮೆಯ ಉಂಗುರವನ್ನು ಧರಿಸುವುದರಿಂದ ನಿಮ್ಮಲ್ಲಿ ತಾಳ್ಮೆ ಮತ್ತು ಶಾಂತಿಯನ್ನು ಆವರಿಸುತ್ತದೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ.
  • ಇದನ್ನು ಧರಿಸುವುದರಿಂದ ಜೀವನದಲ್ಲಿ ಅನೇಕ ದೋಷಗಳು ನಿವಾರಣೆಯಾಗುತ್ತವೆ ಹಾಗೂ ಆಮೆಯ ಉಂಗುರವನ್ನು ಧರಿಸುವುದರಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)