ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastushasthra: ವಾಸ್ತುವಿಗೆ ಸಂಬಂಧಿಸಿದಂತೆ ಕೆಲವು ಮಿಥ್ಯೆಗಳಿವು, ನೀವೂ ಹೀಗೇ ಅಂದುಕೊಂಡಿದ್ದೀರಾ?

Vastushasthra: ವಾಸ್ತುವಿಗೆ ಸಂಬಂಧಿಸಿದಂತೆ ಕೆಲವು ಮಿಥ್ಯೆಗಳಿವು, ನೀವೂ ಹೀಗೇ ಅಂದುಕೊಂಡಿದ್ದೀರಾ?

Vastushasthra: ಆಚಾರ, ವಿಚಾರ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಒಂದೊಂದು ರೀತಿಯ ನಂಬಿಕೆ ಇರುತ್ತದೆ. ಪ್ರಾಚೀನ ಭಾರತೀಯ ವಾಸ್ತುಶಾಸ್ತ್ರ ಬಗ್ಗೆ ಕೂಡಾ ಕೆಲವೊಂದು ನಂಬಿಕೆಗಳಿವೆ. ಆದರೆ ಇಲ್ಲೂ ಕೆಲವೊಂದು ಗೊಂದಲಗಳಿವೆ. ವಾಸ್ತುವಿಗೆ ಸಂಬಂಧಿಸಿದಂತೆ ಕೆಲವು ಮಿಥ್ಯೆಗಳಿವು.

ವಾಸ್ತುವಿಗೆ ಸಂಬಂಧಿಸಿದಂತೆ ಕೆಲವು ಮಿಥ್ಯೆಗಳಿವು
ವಾಸ್ತುವಿಗೆ ಸಂಬಂಧಿಸಿದಂತೆ ಕೆಲವು ಮಿಥ್ಯೆಗಳಿವು (PC: pixaby)

ಪ್ರತಿಯೊಂದು ಧರ್ಮದಲ್ಲೂ ಹಬ್ಬ, ಆಚರಣೆಗಳ ಜೊತೆಗೆ ಕೆಲವೊಂದು ಸಂಸ್ಕೃತಿ , ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಹಾಗೇ ಹಿಂದೂ ಧರ್ಮದಲ್ಲಿ ಅನೇಕ ಜನರು ವಾಸ್ತುವನ್ನು ನಂಬುತ್ತಾರೆ, ವಾಸ್ತು ನಿಯಮಗಳನ್ನು ಪಾಲಿಸುತ್ತಾರೆ. ವಾಸ್ತು ಸಲಹೆಗಳನ್ನು ಪಾಲಿಸುವುದು ಮನೆಗೆ ಸಮೃದ್ಧಿ ತರುತ್ತದೆ, ಎಲ್ಲರಿಗೂ ಸುಖ ಸಂತೋಷ ಉಂಟು ಮಾಡುತ್ತದೆ ಎಂದು ಬಲವಾಗಿ ನಂಬಲಾಗಿದೆ.

ಮಿಥ್ಯೆಯು ಸತ್ಯಗಳಿಗಿಂತ ವೇಗವಾಗಿ ಹರಡುತ್ತವೆ. ಪ್ರಾಚೀನ ಭಾರತೀಯ ವಾಸ್ತು ಶಾಸ್ತ್ರ ಕೂಡಾ ಇದಕ್ಕೆ ಹೊರತಾಗಿಲ್ಲ. ಪ್ರಕೃತಿ, ಜ್ಯಾಮಿತಿ, ಗಣಿತ ಮತ್ತು ಖಗೋಳಶಾಸ್ತ್ರದ ಆಧಾರದ ಮೇಲೆ ಅದರ ಸ್ಪಷ್ಟ ತತ್ವಗಳ ಹೊರತಾಗಿಯೂ, ಜನರು ಸಾಮಾನ್ಯವಾಗಿ ವಾಸ್ತುಗೆ ಸಂಬಂಧಿಸಿದ ಮಿಥ್ಯೆಯನ್ನು ನಂಬುತ್ತಾರೆ, ಇದು ಅದರ ಪರಿಣಾಮಕಾರಿತ್ವದ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ಪ್ರಶ್ನೆಗಳಿಗೆ ಕಾರಣವಾಗುತ್ತದೆ. ವಾಸ್ತುವಿಗೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ. ವೈಜ್ಞಾನಿಕ ಅಡಿಪಾಯಗಳ ಮೇಲೆ ಸ್ಪಷ್ಟತೆಯನ್ನು ನೀಡುವ ಪ್ರಯತ್ನವಿದು.

ವಾಸ್ತು ಒಂದು ಧಾರ್ಮಿಕ ವಿಷಯವಾಗಿದೆ

ವಾಸ್ತು, ಧಾರ್ಮಿಕತೆಗೆ ಸಂಬಂಧಿಸಿದ್ದು ಎಂಬುದು ತಪ್ಪು ಕಲ್ಪನೆ. ಹಿಂದೂ ಸಂಸ್ಕೃತಿಯಲ್ಲಿ ಬಹಳ ಪ್ರಾಚೀನವಾದ ಆಚರಣೆ ಆಗಿದೆ. ಆದರೆ ಇದು ಪ್ರತ್ಯೇಕವಾಗಿ ಧಾರ್ಮಿಕ ಪರಿಕಲ್ಪನೆಯಲ್ಲ. ಬದಲಿಗೆ, ಇದು ಸ್ಥಳಾಕೃತಿ, ರಚನೆಗಳು, ಸೂರ್ಯನ ಪರಿಣಾಮಗಳು, ಭೂಮಿಯ ಕಾಂತೀಯ ಕ್ಷೇತ್ರ ಮತ್ತು ನೈಸರ್ಗಿಕ ಅಂಶಗಳಂತಹ ವಿವಿಧ ಅಂಶಗಳನ್ನು ಪರಿಗಣಿಸುವ ವೈಜ್ಞಾನಿಕ ವಿಧಾನವಾಗಿದೆ . ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಮನೆ, ಕಚೇರಿಯನ್ನು ನಿರ್ಮಿಸುವಾಗ ಈ ಅಂಶಗಳನ್ನು ಅನುಸರಿಸಲಾಗುತ್ತದೆ.

ಮನಿ ಪ್ಲಾಂಟ್ ಸಂಪತ್ತನ್ನು ತರುತ್ತದೆ

ಮನೆಯಲ್ಲಿ ಕೆಲವೊಂದು ಸಸ್ಯಗಳನ್ನು ಬೆಳೆಸುವುದರಿಂದ ಸುಖ, ಸಂತೋಷದ ಜೊತೆಗೆ ಹಣಕಾಸಿನ ಹರಿವು ಹೆಚ್ಚಾಗಿರುತ್ತದೆ ಎಂದು ನಂಬಲಾಗಿದೆ. ಆದರೆ ಮನಿ ಪ್ಲ್ಯಾಂಟ್‌ ತಂದು ಮನೆಯಲ್ಲಿ ಇರಿಸಿದ ಮಾತ್ರಕ್ಕೆ ಹಣ ದೊರೆಯುವುದಿಲ್ಲ. ಹಸಿರಿನ ಜೊತೆಗೆ ಪ್ರಕೃತಿಯ ಅಂಶಗಳು ಮತ್ತು ಶಕ್ತಿಯನ್ನು ಸಮತೋಲನಗೊಳಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ರೂಪುಗೊಳ್ಳುತ್ತದೆ. ಅದರಿಂದ ಮನೆ, ಮನಸ್ಸಿನಲ್ಲಿ ಸಕಾರಾತ್ಮಕ ಅಂಶಗಳು ರೂಪುಗೊಂಡು ಜೀವನದಲ್ಲಿ ಯಶಸ್ಸು ಗಳಿಸಲು ಅನುಕೂಲವಾಗುತ್ತದೆ.

ಉತ್ತರ ದಿಕ್ಕು ಬಹಳ ಮಂಗಳಕರ

ಪ್ರಮುಖ ದಿಕ್ಕುಗಳು ವಾಸ್ತು ಪ್ರಕಾರ ಒಳ್ಳೆಯದು, ಈ ದಿಕ್ಕು ಜೀವನದಲ್ಲಿ ಯಶಸ್ಸು ತಂದುಕೊಡುತ್ತದೆ ಎನ್ನುವುದು ತಪ್ಪು ತಿಳುವಳಿಕೆ. ಆದರೆ ವಾಸ್ತು ಒಂದೇ ದಿಕ್ಕಿಗೆ ಅನ್ವಯವಾಗುವುದಿಲ್ಲ ಹಾಗೂ ಅದು ಪರಿಣಾಮಕಾರಿ ಆಗಿರುವುದಿಲ್ಲ. ವಾಸ್ತು ಕಲ್ಪನೆಗಳು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ ಮತ್ತು ಕೇವಲ ಒಂದೇ ದಿಕ್ಕು ಯಾವಾಗಲೂ ಮಂಗಳಕರ ಎಂದು ಹೇಳಲಾಗುವುದಿಲ್ಲ.

ಕನ್ನಡಿಯು ಋಣಾತ್ಮಕತೆಯನ್ನು ತರುತ್ತದೆ

ಮನೆಯಲ್ಲಿ ಕನ್ನಡಿಯನ್ನು ಸೂಕ್ತ ಸ್ಥಳದಲ್ಲಿ ಸೂಕ್ತ ದಿಕ್ಕಿನಲ್ಲಿ ಇರಿಸಿದಾಗ ನೈಸರ್ಗಿಕ ಬೆಳಕನ್ನು ವರ್ಧಿಸುತ್ತದೆ. ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆ, ಮನಸ್ಸು ಧನಾತ್ಮಕವಾಗಿರುವಾಗ ಸಾಮಾನ್ಯವಾಗಿ ಎಲ್ಲರೂ ಖುಷಿಯಿಂದ ಇರುತ್ತೇವೆ. ನಾವು ಮಾಡುವ ಕೆಲಸದಲ್ಲೂ ಯಶಸ್ಸನ್ನು ಗಳಿಸಬಹುದು.

ಮುಖ್ಯ ಬೆಡ್‌ ರೂಮನ್ನು ಹಿರಿಯರಿಗೆ ಬಿಡಬೇಕು

ಕುಟುಂಬದ ಹಿರಿಯರಿಗೆ ಮುಖ್ಯ ಬೆಡ್‌ ರೂಮ್‌ ಒದಗಿಸಿಕೊಡಬೇಕು ಎಂದು ವಾಸ್ತು ಹೇಳುತ್ತದೆ. ಆದರೆ ಮಾಸ್ಟರ್ ಬೆಡ್‌ರೂಮ್ ಪರಿಕಲ್ಪನೆಯು ನೈಋತ್ಯ ದಿಕ್ಕಿಕ್ಕೆ ಸೇರಿದೆ. ಇದನ್ನು ನಾಯಕತ್ವದ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಕುಟುಂಬದ ನಾಯಕ ಮನೆ ಮಗನಾಗಿರಬಹುದು, ಅಥವಾ ಮಗಳು ಅಥವಾ ಯಾರಾದರೂ ಆಗಿರಬಹುದು, ಈ ಜಾಗವನ್ನು ಹಿರಿಯ ಸದಸ್ಯರಿಗೆ ಪ್ರತ್ಯೇಕವಾಗಿ ನಿಯೋಜಿಸಬೇಕು ಎಂಬುದು ವಾಸ್ತು ಅಲ್ಲ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ