ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾಸ್ತು ಟಿಪ್ಸ್: ಈ ಸಮಯದಲ್ಲಿ ಹಣಕಾಸಿನ ವ್ಯವಹಾರ ಮಾಡಬೇಡಿ, ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಜಾಗ್ರತೆ

ವಾಸ್ತು ಟಿಪ್ಸ್: ಈ ಸಮಯದಲ್ಲಿ ಹಣಕಾಸಿನ ವ್ಯವಹಾರ ಮಾಡಬೇಡಿ, ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಜಾಗ್ರತೆ

ಅನೇಕ ಜನರು ತಮ್ಮ ದೈನಂದಿನ ಬದುಕಿನಲ್ಲಿ ವಾಸ್ತು ಅಳವಡಿಸಿಕೊಂಡಿದ್ದಾರೆ. ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಕೂಡಾ ಸಾಕಷ್ಟು ಜನರು ವಾಸ್ತು ಸಲಹೆಯನ್ನು ಪಾಲಿಸುತ್ತಾರೆ. ಯಾವ ಸಮಯದಲ್ಲಿ ಹಣಕಾಸಿನ ವ್ಯವಹಾರ ಮಾಡಬೇಕು? ಯಾವ ಸಮಯದಲ್ಲಿ ಮಾಡಬಾರದು ಎಂಬುದರ ಕುರಿತು ಇಲ್ಲಿ ಮಾಹಿತಿ ಇದೆ.

ವಾಸ್ತು ಟಿಪ್ಸ್: ಈ ಸಮಯದಲ್ಲಿ ಹಣಕಾಸಿನ ವ್ಯವಹಾರ ಮಾಡಬೇಡಿ, ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಜಾಗ್ರತೆ
ವಾಸ್ತು ಟಿಪ್ಸ್: ಈ ಸಮಯದಲ್ಲಿ ಹಣಕಾಸಿನ ವ್ಯವಹಾರ ಮಾಡಬೇಡಿ, ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಜಾಗ್ರತೆ

ವಾಸ್ತು ಎನ್ನುವುದು ಇಂದು ನಿನ್ನೆಯದಲ್ಲ, ಬಹಳ ಹಿಂದಿನಿಂದಲೂ ಅನೇಕರು ವಾಸ್ತುವನ್ನು ತಮ್ಮ ದೈನಂದಿನ ಭಾಗವನ್ನಾಗಿ ಅಳವಡಿಸಿಕೊಂಡಿದ್ದಾರೆ. ಧರಿಸುವ ಬಟ್ಟೆ, ಪಾದರಕ್ಷೆ, ಪ್ರಯಾಣಿಸುವ ವಾಹನ, ವಾಸಿಸುವ ಮನೆ ಎಲ್ಲದಕ್ಕೂ ವಾಸ್ತು ಅನುಸರಿಸಲಾಗುತ್ತದೆ. ಮನೆಯಲ್ಲಿ ಕೂಡಾ ದೇವರ ಕೋಣೆ, ಅಡುಗೆ ಮನೆ, ಸ್ನಾನದ ಮನೆ ಕೂಡಾ ನಿರ್ದಿಷ್ಟ ದಿಕ್ಕಿನಲ್ಲಿ ಇದ್ದರೆ ಕುಟುಂಬದ ಸದಸ್ಯರು ಸುಖ, ಸಂತೋಷದಿಂದ ಜೀವಿಸುತ್ತಾರೆ ಎಂಬ ನಂಬಿಕೆ ಇದೆ.

ವ್ಯಾಪಾರ ವಹಿವಾಟಿಗೂ ಇದೆ ವಾಸ್ತು

ಧಾರ್ಮಿಕ ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಮನೆ ಮತ್ತು ಕೆಲಸದ ಸ್ಥಳದಲ್ಲಿ ವಾಸ್ತು ನಿಯಮಗಳನ್ನು ಪಾಲಿಸಿದರೆ, ಅವನು ಅನೇಕ ತೊಂದರೆಗಳಿಂದ ದೂರವಿರಬಹುದು. ಇಷ್ಟು ಮಾತ್ರವಲ್ಲ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಯಾರೇ ಆಗಲೀ ಈ ವಾಸ್ತು ನಿಯಮಗಳನ್ನು ಅನುಸರಿಸಿದರೆ ಅವರ ಜೀವನದಲ್ಲಿ ಕಷ್ಟ, ಆರ್ಥಿಕ ಸಮಸ್ಯೆಗಳಿಗೆ ಅವಕಾಶವೇ ಇರುವುದಿಲ್ಲ. ಪ್ರತಿದಿನ ನಾವು ಒಂದಲ್ಲಾ ಒಂದು ವಸ್ತುವನ್ನು ಕೊಳ್ಳಲು ಹಣ ಖರ್ಚು ಮಾಡುತ್ತೇವೆ. ಹಾಗೇ ಯಾರಾದರೂ ಕಷ್ಟ ಎಂದು ಮನವಿ ಮಾಡಿದರೆ ಅವರಿಗೆ ಹಣ ನೀಡುತ್ತೇವೆ. ಅಥವಾ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣ ಕೊಡುವುದು ಪಡೆಯುವುದು ಮಾಡುತ್ತೇವೆ. ಆದರೆ ಇವೆಲ್ಲವನ್ನೂ ಒಂದು ನಿರ್ದಿಷ್ಟ ಸಮಯದಲ್ಲಿ ಮಾಡಬೇಕು. ಯಾವ ಸಮಯದಲ್ಲಿ ಬೇಕಾದಂತೆ ಹಣ ಕೊಡುವುದು, ವ್ಯವಹಾರ ಮಾಡುವುದು ಮಾಡಿದರೆ ಆರ್ಥಿಕ ನಷ್ಟ ಖಚಿತ ಎನ್ನುತ್ತದೆ ವಾಸ್ತು.

ಈ ಸಮಯದಲ್ಲಿ ಹಣದ ವ್ಯವಹಾರ ಮಾಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಸಂಜೆ ಅಥವಾ ಸೂರ್ಯೋದಯದ ನಂತರ ಯಾವುದೇ ಕಾರಣಕ್ಕೂ ಹಣದ ವ್ಯವಹಾರ ಮಾಡಬಾರದು. ಅಲ್ಲದೆ, ಈ ಸಮಯದಲ್ಲಿ ಯಾರಿಗೂ ಸಾಲ ನೀಡಬಾರದು ಮತ್ತು ಯಾರಿಂದಲೂ ಸಾಲ ಪಡೆಯಬಾರದು. ಇದರೊಂದಿಗೆ, ಶಾಸ್ತ್ರಗಳ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿಯೂ ಹಣದ ವ್ಯವಹಾರವನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಬ್ರಹ್ಮ ಮುಹೂರ್ತ ಮತ್ತು ಸೂರ್ಯಾಸ್ತದ ನಂತರ ಮಾಡುವ ವ್ಯವಹಾರಗಳು ವ್ಯಕ್ತಿಗೆ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು ಮತ್ತು ಹಣ ಕೈಯಲ್ಲಿ ಉಳಿಯುವುದಿಲ್ಲ. ಏಕೆಂದರೆ ಈ ಸಮಯವನ್ನು ಲಕ್ಷ್ಮಿ ದೇವಿಯ ತಿರುಗಾಟದ ಸಮಯವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ಮಾಡಿದ ವ್ಯವಹಾರಗಳಿಂದ ಲಕ್ಷ್ಮಿ ದೇವಿ ಕೋಪಗೊಳ್ಳಬಹುದು, ಇದರಿಂದಾಗಿ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಆದ್ದರಿಂದ ಎಚ್ಚರದಿಂದ ಇರಿ. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವಾದರೂ ಬೆಳಗ್ಗೆ 9ಗಂಟೆ ನಂತರ ಆರಂಭಿಸಿ ಸಂಜೆ 5ರ ಒಳಗೆ ಮುಗಿಸಿದರೆ ಒಳ್ಳೆಯದು ಎನ್ನುತ್ತದೆ ವಾಸ್ತುಶಾಸ್ತ್ರ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ