Vastu Tips: ಗಿಳಿಯೇ ಗಿಳಿಯೇ ಬಣ್ಣದ ಗಿಳಿಯೇ; ಮನೆಯಲ್ಲಿ ಗಿಳಿ ಸಾಕುವುದು ಶುಭವೇ? ವಾಸ್ತುಶಾಸ್ತ್ರಜ್ಞರು ಏನಂತಾರೆ?
Vastu Tips: ಮನೆಯಲ್ಲಿ ಕೆಲವೊಂದು ಪ್ರಾಣಿ ಪಕ್ಷಿಗಳನ್ನು ಸಾಕುವುದರಿಂದ ಶುಭ, ಇನ್ನೂ ಕೆಲವು ಪ್ರಾಣಿಗಳನ್ನು ಸಾಕಿದರೆ ಅಶುಭ ಎಂದು ನಂಬಲಾಗಿದೆ. ಆದರೆ ಗಿಳಿ ವಿಚಾರದಲ್ಲಿ ವಾಸ್ತು ಏನು ಹೇಳುತ್ತದೆ. ಮನೆಯಲ್ಲಿ ಗಿಳಿ ಸಾಕುವುದು ಶುಭವೇ? ವಾಸ್ತುಶಾಸ್ತ್ರಜ್ಞರು ನೀಡಿರುವ ಸಲಹೆ ಇಲ್ಲಿದೆ ನೋಡಿ.
ಜ್ಯೋತಿಷ್ಯದಲ್ಲಿ ಕೆಲವೊಂದು ಪ್ರಾಣಿ ಪಕ್ಷಿಗಳನ್ನು ದೇವರ ರೂಪದಲ್ಲಿ ನೋಡುತ್ತೇವೆ. ಕೆಲವೊಂದು ಪ್ರಾಣಿಗಳು ಶುಭ ಎನಿಸಿದರೆ ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತವೆ ಎಂಬ ನಂಬಿಕೆ ಕೆಲವರಲ್ಲಿದೆ. ಆದ್ದರಿಂದ ಕೆಲವೊಂದು ಪ್ರಾಣಿ, ಪಕ್ಷಿಗಳನ್ನು ಮನೆಯಲ್ಲಿ ಸಾಕಲು ಹಿಂಜರಿಯುತ್ತಾರೆ.
ನಾಯಿ, ಬೆಕ್ಕು, ಮೀನು, ಮೊಲ, ಗಿಳಿ ಸೇರಿದಂತೆ ಅನೇಕ ಪ್ರಾಣಿಗಳನ್ನು ನಾವು ಸಾಕುತ್ತೇವೆ. ಕೆಲವರು ಪಂಜರಗಳ ಸಹಿತ ಪಕ್ಷಿಗಳನ್ನೂ ಮನೆಗೆ ತರುತ್ತಾರೆ. ಕೆಲವೊಂದು ಪ್ರಾಣಿಗಳನ್ನು ಸಾಕಿದರೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಂಟು ಮಾಡುತ್ತದೆ. ಮನೆಗೆ ಬಹಳ ಶುಭ ಎಂದು ಕಾಪಾಡಿಕೊಳ್ಳುತ್ತದೆ ಎಂದು ಜನರು ನಂಬುತ್ತಾರೆ. ಆದರೆ ಅಂಥಹ ಪ್ರಾಣಿಗಳಲ್ಲಿ ಕೆಲವರು ಗಿಳಿಯನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಮನೆಯಲ್ಲಿ ಗಿಳಿ ಸಾಕುವುದು ಶುಭವೋ ಅಶುಭವೋ ಎಂಬುದರ ಬಗ್ಗೆ ಅನೇಕರಿಗೆ ಬಹಳ ಗೊಂದಲವಿದೆ. ಆದರೆ ವಾಸ್ತುವಿನಲ್ಲಿ ಗಿಳಿಗಳನ್ನು ಸಾಕುವುದಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ಗಿಳಿ ಸಾಕುವುದರಿಂದ ಸುಖ, ಸಂತೋಷ, ಸೌಭಾಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಮನೆಯಲ್ಲಿ ಗಿಳಿ ಸಾಕಲು ಏನೆಲ್ಲಾ ವಾಸ್ತು ನಿಯಮವಿದೆ ನೋಡೋಣ.
ಗಿಳಿಗೆ ಸಂಬಂಧಿಸಿದಂತೆ ವಾಸ್ತುಶಾಸ್ತ್ರ
- ವಾಸ್ತು ಪ್ರಕಾರ, ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಗಿಳಿಯ ಪಂಜರವನ್ನು ಇಡುವುದು ಮಂಗಳಕರ. ಇದು ಕುಬೇರ, ಲಕ್ಷ್ಮೀಗೆ ಸಂಬಂಧಿಸಿದ ದಿಕ್ಕು ಆದ್ದರಿಂದ ಶುಭವೆಂದು ಪರಿಗಣಿಸಲಾಗುತ್ತದೆ.
- ಗಿಳಿಯನ್ನು ಪಂಜರದಲ್ಲಿ ಇರಿಸಿದರೆ, ಅದು ಸದಾ ಖುಷಿಯಿಂದ ಆಟವಾಡುವಂತೆ ನೋಡಿಕೊಳ್ಳಿ. ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ.
- ಜೀವಂತ ಗಿಳಿಯನ್ನು ತರಲು ಆಗದಿದ್ದರೆ ಮನೆಯಲ್ಲಿ ಗಿಳಿಯ ಚಿತ್ರ ಹಾಕುವುದು ಕೂಡ ತುಂಬಾ ಶ್ರೇಯಸ್ಕರ. ಇದರಿಂದ ಜಾತಕದಲ್ಲಿರುವ ಗ್ರಹದೋಷಗಳಿಂದ ಪರಿಹಾರ ದೊರೆಯುತ್ತದೆ.
- ಗಿಳಿಗೆ ಸಮಯಕ್ಕೆ ತಕ್ಕಂತೆ ನೀರು, ಆಹಾರ ನೀಡುವುದು ಅಗತ್ಯ, ಅಲ್ಲದೆ ಆಗ್ಗಾಗ್ಗೆ ಶುಚಿಗೊಳಿಸುವುದು, ಅದರ ಪಂಜರವನ್ನು ಶುಚಿಗೊಳಿಸುವುದನ್ನೂ ಮಾಡಬೇಕು.
- ಮನೆಯಲ್ಲಿ ಗಿಳಿಯನ್ನು ಸಾಕಿದರೆ ರಾಹು-ಕೇತು ಮತ್ತು ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ವೃಷಭ ರಾಶಿಯಲ್ಲಿ ಸೂರ್ಯ, ಬುಧ ಸಂಯೋಜನೆಯಿಂದ ಬುಧಾದಿತ್ಯ ರಾಜಯೋಗ; ಈ ರಾಶಿಯವರಿಗೆ ಸರ್ಕಾರಿ ಕೆಲಸ ಗ್ಯಾರಂಟಿ
- ಮನೆಯ ಸದಸ್ಯರಿಗೆ ಯಾವುದೇ ದೋಷ ಇದ್ದರೂ ಗಿಳಿಯು ತನ್ನ ಮೇಲೆ ತೆಗೆದುಕೊಂಡು ನಿಮ್ಮನ್ನು ರಕ್ಷಿಸುತ್ತದೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಣಿ ಸಾಕುವುದರಿಂದ ರೋಗಗಳು ಮತ್ತು ಜಾತಕ ದೋಷಗಳಿಂದಲೂ ಪರಿಹಾರ ದೊರೆಯುತ್ತದೆ.
- ಗಿಳಿಯನ್ನು ಸಾಕುವುದರಿಂದ ಮಕ್ಕಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡುತ್ತಾರೆ ಎಂದು ವಾಸ್ತು ಹೇಳುತ್ತದೆ.
- ಮನೆಯಲ್ಲಿ ಗಿಳಿ ಸಾಕುವುದರಿಂದ ಪತಿ-ಪತ್ನಿಯರ ಬಾಂಧವ್ಯ ಸುಧಾರಿಸುತ್ತದೆ. ಆದರೆ ಮೊದಲೇ ತಿಳಿಸಿದಂತೆ ಗಿಳಿಯು ಲವಲವಿಕೆಯಿಂದ ಇಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಆವರಿಸುತ್ತದೆ. ಕುಟುಂಬದ ಸದಸ್ಯರು ಆರ್ಥಿಕ ಸಮಸ್ಯೆಯನ್ನು ಎದುರಿಸಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)