ಮನೆಯ ವಾತಾವರಣ ಹಾಳು ಮಾಡುತ್ತವೆ ಈ ವರ್ಣ ಚಿತ್ರಗಳು; ನಕಾರಾತ್ಮಕತೆ ಹೋಗಲಾಡಿಸಲು ಇಂಥಹ ಪೇಟಿಂಗ್‌ಗಳಿಂದ ದೂರವಿರಿ
Vastushastra: ಮನೆ ಸುಂದರವಾಗಿರಲು ಅನೇಕ ಅಲಂಕಾರಿಕ ವಸ್ತುಗಳನನ್ನು ತರುತ್ತೇವೆ. ಅದರಲ್ಲಿ ವಾಲ್ ಪೇಂಟಿಂಗ್ ಕೂಡಾ ಒಂದು. ಕೆಲವೊಂದು ಪೇಂಟಿಂಗ್‌ಗಳು ಮನೆಯಲ್ಲಿ ಪಾಸಿಟಿವ್ ವೈಬ್ಸ್ ಸೃಷ್ಟಿಸಿದರೆ, ಕೆಲವು ನಕಾರಾತ್ಮಕ ಅಂಶಗಳನ್ನು ಉತ್ತೇಜಿಸುತ್ತದೆ. ಅಂತಹ ಪೇಂಟಿಂಗ್‌ಗಳನ್ನು ಆದಷ್ಟು ಮನೆಗೆ ತರುವುದನ್ನು ತಪ್ಪಿಸಬೇಕು.
ಮನೆಯನ್ನು ಸುಂದರಗೊಳಿಸುವಲ್ಲಿ ವಾಲ್ ಪೇಟಿಂಗ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಇವು ಕೋಣೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಪಾಸಿಟಿವ್ ವೈಬ್ಸ್ ನೀಡುತ್ತದೆ. ಆ ಮನೆಯ ಸದಸ್ಯರ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಇವು ಉತ್ತಮ ಮಾರ್ಗ ಎಂದೂ ಹೇಳಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ರೀತಿಯ ಪೇಂಟಿಂಗ್‌ಗಳನ್ನು ಅಪ್ಪಿ ತಪ್ಪಿಯೂ ಮನೆಯಲ್ಲಿ ಹಾಕಬಾರದು. ಇವು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ರೀತಿಯ ಪೇಂಟಿಂಗ್‌ಗಳನ್ನು ಇಡಬಾರದು ನೋಡೋಣ.
ಹಿಂಸಾತ್ಮಕ ದೃಶ್ಯಗಳು
ಹಿಂಸೆ, ಯುದ್ಧ, ಹುಲಿ ಮತ್ತು ತೋಳಗಳಂತಹ ಕಾಡು ಮೃಗಗಳ ದೃಶ್ಯಗಳನ್ನು ವರ್ಣಚಿತ್ರಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತಂದು ಹಾಕಬೇಡಿ. ಈ ಚಿತ್ರಗಳು ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಕದಡುವ ಸಾಧ್ಯತೆ ಇದೆ.
ಅಳುತ್ತಿರುವ, ನೋವಿನಲ್ಲಿರುವ ಕಲಾಕೃತಿಗಳು
ಅಳುವ ಅಥವಾ ನೋವನ್ನು ಚಿತ್ರಿಸುವ ಕಲಾಕೃತಿಗಳು ಮನೆಯಲ್ಲಿ ಹಿತವಾದ ವಾತಾವರಣವನ್ನು ಹಾಳು ಮಾಡಬಹುದು. ಇವು ನಕಾರಾತ್ಮಕ ಭಾವನೆಗಳನ್ನು ಉಂಟುಮಾಡುವುದರಿಂದ ಮನೆಯಲ್ಲಿ ಜಗಳ, ಮನಸ್ತಾಪ ಸೇರಿದಂತೆ ಇನ್ನಿತರ ಸಮಸ್ಯೆಗಳು ಉದ್ಭವಿಸಬಹುದು.
ಮುರಿದ ವರ್ಣಚಿತ್ರಗಳು
ಮುರಿದ ಕಟ್ಟಡಗಳು ಮತ್ತು ಶಿಥಿಲಗೊಂಡ ರಚನೆಗಳ ವರ್ಣಚಿತ್ರಗಳನ್ನು ಖರೀದಿಸಿ ತರಬೇಡಿ. ಇವು ಮನೆಯ ಸದಸ್ಯರ ನಡುವೆ ಬಿರುಕು ಮೂಡಿಸಬಹುದು. ವಾಸ್ತು ಪ್ರಕಾರ ಇಂತಹ ವರ್ಣಚಿತ್ರಗಳು ಆರ್ಥಿಕ ಸಂಪತ್ತನ್ನು ಹಾಳು ಮಾಡುತ್ತವೆ.
ನೈಸರ್ಗಿಕ ವಿಕೋಪಗಳು
ಪ್ರವಾಹಗಳು, ಭೂಕಂಪ ಅಥವಾ ಬೆಂಕಿಯಂತಹ ನೈಸರ್ಗಿಕ ವಿಪತ್ತುಗಳನ್ನು ಚಿತ್ರಿಸುವ ವರ್ಣಚಿತ್ರಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇವು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತವೆ. ಕುಟುಂಬದ ಸದಸ್ಯರ ಮನಸ್ಸಿನಲ್ಲಿ ಭಯ ಅಥವಾ ಅನಿಶ್ಚಿತತೆಯ ಭಾವನೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದಲೇ ಈ ಚಿತ್ರಗಳನ್ನು ಮನೆಗೆ ತರಬೇಡಿ.
ಏಕಾಂಗಿಯಾಗಿರುವ ಫೋಟೋಗಳು
ಖಿನ್ನತೆಗೆ ಸಂಬಂಧಿಸಿದ, ಒಂಟಿಯಾಗಿರುವ ವ್ಯಕ್ತಿಗಳು, ಭೂದೃಶ್ಯಗಳು ಮತ್ತು ಕಲಾಕೃತಿಗಳನ್ನು ಮನೆಗೆ ತರಬಾರದು. ಈ ವರ್ಣಚಿತ್ರಗಳು ಒಂಟಿತನ ಮತ್ತು ದುಃಖದ ಭಾವನೆಗಳನ್ನು ತರುತ್ತವೆ.
ಬೆಳಕು ಇಲ್ಲದ ಚಿತ್ರಗಳು
ಗಾಢ ಬಣ್ಣಗಳು, ಕತ್ತಲೆಯಾದ ಥೀಮ್‌ಗಳು, ಬಹಳಷ್ಟು ಕಪ್ಪು ವರ್ಣಚಿತ್ರಗಳನ್ನು ಮಿತವಾಗಿ ಬಳಸಬೇಕು. ಅಂತಹ ಕಲಾಕೃತಿಗಳು ಸುತ್ತಮುತ್ತಲಿನ ಪರಿಸರದಿಂದ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ವಿಕೃತ ಚಿತ್ರಗಳಿಲ್ಲ
ವಿಕೃತ ವರ್ಣಚಿತ್ರಗಳು, ಯಾರನ್ನಾದರೂ ಅಪಹಾಸ್ಯ ಮಾಡುವಂಥ ವರ್ಣಚಿತ್ರಗಳನ್ನು ಮನೆಯಲ್ಲಿಟ್ಟುಕೊಳ್ಳಬೇಡಿ. ಶಾಂತಿ ಕದಡುವ, ಸಾಮರಸ್ಯಕ್ಕೆ ಅಡ್ಡಿಪಡಿಸುವ ಚಿತ್ರಗಳು ಮನೆಯಲ್ಲಿಡಲು ಸೂಕ್ತವಲ್ಲ.
ನಕಾರಾತ್ಮಕ ಥೀಮ್
ನಕಾರಾತ್ಮಕತೆಯನ್ನು ವ್ಯಕ್ತಪಡಿಸುವ ಕನ್ನಡಿಗಳು, ಕಾಗೆಗಳು ಮತ್ತು ಗೂಬೆಗಳಂತಹ ಚಿಹ್ನೆಗಳನ್ನು ಕೆಲವೆಡೆ ಅಶುಭವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಅವುಗಳನ್ನು ತಪ್ಪಿಸಬೇಕು.
ಈ ವರ್ಣಚಿತ್ರಗಳ ಬದಲಿಗೆ ಧನಾತ್ಮಕ, ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಕಲಾಕೃತಿಗಳನ್ನು ಆಯ್ಕೆ ಮಾಡಬಹುದು. ಗಾಢ ಬಣ್ಣಗಳನ್ನು ಹೊಂದಿರುವ ವರ್ಣ ಚಿತ್ರಗಳು, ಹೂವುಗಳು ಅತ್ಯಾಕರ್ಷಕ ವಿಷಯಗಳು, ಪಕ್ಷಿಗಳು, ಶಾಂತಿಯುತ ಭೂದೃಶ್ಯಗಳು, ಆಹ್ಲಾದಕರ ವಾತಾವರಣದೊಂದಿಗೆ ಶುಭ ಚಿಹ್ನೆಗಳನ್ನು ಆಯ್ಕೆ ಮಾಡಬಹುದು. ಇವುಗಳು ನಿಮ್ಮ ಮನೆಯ ಅಲಂಕಾರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ, ವಾಸ್ತು ಸ್ನೇಹಿ ವರ್ಣಚಿತ್ರಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ. ಸಮತೋಲನ ಮತ್ತು ಸಾಮರಸ್ಯದ ವಾತಾವರಣವನ್ನು ರಚಿಸುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.