Vedic astrology: ವೈದಿಕ ಜ್ಯೋತಿಷ್ಯ ಶಾಸ್ತ್ರ ಎಂದರೇನು, ಇದರ ಮಹತ್ವವೇನು ಪುರಾಣ ಏನು ಹೇಳುತ್ತದೆ..?-vedic astrology meaning significance difference between vedic and western astrology rsa ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vedic Astrology: ವೈದಿಕ ಜ್ಯೋತಿಷ್ಯ ಶಾಸ್ತ್ರ ಎಂದರೇನು, ಇದರ ಮಹತ್ವವೇನು ಪುರಾಣ ಏನು ಹೇಳುತ್ತದೆ..?

Vedic astrology: ವೈದಿಕ ಜ್ಯೋತಿಷ್ಯ ಶಾಸ್ತ್ರ ಎಂದರೇನು, ಇದರ ಮಹತ್ವವೇನು ಪುರಾಣ ಏನು ಹೇಳುತ್ತದೆ..?

Vedic Astrology: ಹಿಂದೂ ಧರ್ಮದಲ್ಲಿ ವೈದಿಕ ಜ್ಯೋತಿಷ್ಯಕ್ಕೆ ಸಾಕಷ್ಟು ಮಹತ್ವವಿದೆ. ಈ ವೈದಿಕ ಜ್ಯೋತಿಷ್ಯ ಎಂದರೇನು? ಒಬ್ಬ ವ್ಯಕ್ತಿಯ ಜೀವನದಲ್ಲಿ ಇದರ ಮಹತ್ವವೇನು ಎಂಬುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ

ವೈದಿಕ ಜ್ಯೋತಿಷ್ಯದ ಮಹತ್ವ
ವೈದಿಕ ಜ್ಯೋತಿಷ್ಯದ ಮಹತ್ವ (PC: Pixabay )

Vedic Astrology: ವೈದಿಕ ಜ್ಯೋತಿಷ್ಯವನ್ನು ನಾವು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರ ಎಂದು ಕರೆಯುತ್ತೇವೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿ ಇರುವ ಈ ಜ್ಯೋತಿಷ್ಯ ಶಾಸ್ತ್ರವು ರಾಶಿ ಹಾಗೂ ನಕ್ಷತ್ರಗಳ ಜೊತೆಯಲ್ಲಿ ಸಂಬಂಧವನ್ನು ಹೊಂದಿರುತ್ತದೆ. ವೈದಿಕ ಎಂಬ ಪದವು ವೇದ ಎಂಬ ಪದದಿಂದ ಬಂದಿದೆ.

ಸಾವಿರಾರು ವರ್ಷಗಳಿಂದ ಅಸ್ವಿತ್ವದಲ್ಲಿರುವ ಜ್ಯೋತಿಷ್ಯ ಶಾಸ್ತ್ರ

ಭಾರತದಲ್ಲಿ ಸಹಸ್ರಾರು ವರ್ಷಗಳ ಹಿಂದೆ ವೇದ ಕಾಲಗಳು ಇದ್ದವು ಎಂಬುದನ್ನು ನಾವು ಪುರಾಣಗಳಲ್ಲಿ ಕಲಿತಿದ್ದೇವೆ. ಜ್ಯೋತಿಷ್ಯ ಎಂಬ ಪದವು ಸಂಸ್ಕೃತದಿಂದ ಬಂದಿದ್ದು ರಾಶಿ ಹಾಗೂ ನಕ್ಷತ್ರಗಳನ್ನು ಆಧರಿಸಿ ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

ವೈದಿಕ ಜ್ಯೋತಿಷ್ಯ ಹಾಗೂ ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ಸಾಕಷ್ಟು ಬದಲಾವಣೆಗಳಿದ್ದು ಇವರಡು ಗ್ರಹಗತಿಗಳಲ್ಲಿ ಆಗುವ ಬದಲಾವಣೆಗಳನ್ನು ಯಾವ ರೀತಿ ನಿರ್ಧರಿಸುತ್ತವೆ ಎಂಬುದನ್ನು ಆಧರಿಸಿದೆ. ವೈದಿಕ ಜ್ಯೋತಿಷ್ಯದಲ್ಲಿ ನಕ್ಷತ್ರಗಳ ಸ್ಥಾನ ಅಥವಾ ಗ್ರಹಗಳು ನಿಖರವಾಗಿ ಯಾವ ಸ್ಥಳದಲ್ಲಿ ಇವೆ ಎಂಬುದನ್ನು ಆಧರಿಸಿ ಇರುತ್ತವೆ. ಆದರೆ ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ಸೂರ್ಯನ ಚಲನೆಯನ್ನು ಆಧರಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

ವೇದಿಕ ಜ್ಯೋತಿಷ್ಯವನ್ನು ನಾವು ಸಾಕಷ್ಟು ಕಾರ್ಯಗಳಲ್ಲಿ ಬಳಕೆ ಮಾಡುತ್ತೇವೆ. ಭವಿಷ್ಯದಲ್ಲಿ ಏನಾಗಲಿದೆ..? ಯಾವುದಾದರೂ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಗೊಂದಲವುಂಟಾದಾಗ ಅಥವಾ ಒಬ್ಬರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಹೀಗೆ ನಾನಾ ಕಾರಣಗಳಿಗೆ ವೈದಿಕ ಜ್ಯೋತಿಷ್ಯವನ್ನು ಬಳಕೆ ಮಾಡಲಾಗುತ್ತದೆ. ಇಲ್ಲಿ ನಕ್ಷತ್ರಗಳ ಚಲನೆ, ಗ್ರಹಗಳ ಸ್ಥಾನಪಲ್ಲಟ, ಯೋಗ ಹೀಗೆ ನಾನಾ ಬಗೆಯಿಂದ ಜ್ಯೋತಿಷ್ಯವನ್ನು ನೋಡಲಾಗುತ್ತದೆ.

ವೈದಿಕ ಜ್ಯೋತಿಷ್ಯದ ಬಳಕೆ

ನಕ್ಷತ್ರಗಳು : ಇಲ್ಲಿ ಒಬ್ಬು 27 ನಕ್ಷತ್ರಗಳನ್ನು ವೈದಿಕ ಜ್ಯೋತಿಷ್ಯವು ಬಳಕೆ ಮಾಡುತ್ತದೆ. ಒಬ್ಬ ವ್ಯಕ್ತಿಯು ಜನಿಸಿದಾಗ ಯಾವ ನಕ್ಷತ್ರದ ಚಲನೆಯಿದೆ ಎಂಬುದನ್ನು ನೋಡಿಕೊಂಡು ವೈದಿಕ ಜ್ಯೋತಿಷ್ಯವನ್ನು ನಿರ್ಧರಿಸಲಾಗುತ್ತದೆ . ಮಗು ಜನಿಸಿದಾಗ ಚಂದ್ರನು ಯಾವ ಸ್ಥಾನದಲ್ಲಿದ್ದಾನೆ ಎಂಬುದನ್ನು ನೋಡಿಕೊಂಡು ಆ ಮಗುವಿನ ನಕ್ಷತ್ರವನ್ನು ನಿರ್ಧರಿಸಲಾಗುತ್ತದೆ.

ಗ್ರಹಗಳ ಸ್ಥಾನ : ಪಾಶ್ಚಾತ್ಯ ಜ್ಯೋತಿಷ್ಯದಂತೆಯೇ ವೈದಿಕ ಜ್ಯೋತಿಷ್ಯದಲ್ಲಿಯೂ ಸೌರಮಂಡಲದಲ್ಲಿರುವ ಗ್ರಹ ಗತಿಗಳ ಚಲನೆಯನ್ನು ಆಧರಿಸಿ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

ಕುಂಡಲಿ ಯೋಗ: ಇದು ಒಬ್ಬ ಮಗುವು ಜನಿಸಿದಾಗ ಯಾವ್ಯಾವ ಗ್ರಹಗಳು ಯಾವ ಸ್ಥಾನದಲ್ಲಿದ್ದವು ಎಂಬುದನ್ನು ಆಧರಿಸಿ ಚಿತ್ರಿಸಲಾಗುತ್ತದೆ. ಗ್ರಹಗತಿಗಳ ಸ್ಥಾನವನ್ನು ನೋಡಿ ಆ ಮಗುವಿನ ಯೋಗವನ್ನು ನಿರ್ಧರಿಸಬಹುದಾಗಿದೆ. ಈ ಗ್ರಹಗತಿಗಳು ಮನುಷ್ಯರ ಮೇಲೆ ಧನಾತ್ಮಕ ಹಾಗೂ ನಕಾರಾತ್ಮಕ ಹೀಗೆ ಎರಡೂ ಪರಿಣಾಮಗಳನ್ನು ಬೀರುತ್ತವೆ.

ದಶ ವ್ಯವಸ್ಥೆ: ಗ್ರಹಗಳು ಯಾವ ರೀತಿಯಲ್ಲಿ ಸಂಯೋಜನೆಗೊಂಡಿವೆ, ಗ್ರಹಗಳ ಅವಧಿ ಹೇಗಿದೆ ಇವೆಲ್ಲವೂ ದಶ ವ್ಯವಸ್ಥೆಯ ಅಡಿಯಲ್ಲಿ ಬರುತ್ತವೆ, ದಶ ವ್ಯವಸ್ಥೆಯಲ್ಲಿ ಗ್ರಹಗಳ ಸ್ಥಾನಕ್ಕೆ ಅನುಗುಣವಾಗಿ ಒಬ್ಬ ವ್ಯಕ್ತಿಗೆ ಯೋಗವು ಕೆಟ್ಟದಾಗಿದೆಯೋ ಅಥವಾ ಒಳ್ಳೆಯದಾಗಿದೆಯೋ ಎಂಬುದನ್ನು ನಿರ್ಧರಿಸಬಹುದಾಗಿದೆ ಎಂದು ವೈದಿಕ ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.