ವಾಹನ ಖರೀದಿ 2025: ಸಿಂಹ ರಾಶಿಯವರಿಗೆ ಮೇ ನಂತರದ ಅವಧಿ ಸೂಕ್ತವಲ್ಲ, ತುಲಾ ರಾಶಿಯವರು ಯಾವುದೇ ಸಮಯದಲ್ಲಿ ಖರೀದಿಸಬಹುದು
Vehicle Purchase Muhurtham 2025: ಕಳೆದ ವರ್ಷವಾದರೂ ವಾಹನ ಖರೀದಿಸಲಿಲ್ಲ ಮುಂದಿನ ವರ್ಷದಲ್ಲಾದರೂ ವಾಹನ ಖರೀದಿ ಲಾಭವಿರಬಹುದಾ ಎಂದು ಅನೇಕರು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಎಲ್ಲದಕ್ಕೂ ಗ್ರಹಗಳ ಆಶೀರ್ವಾದ ಮುಖ್ಯ 2025 ರಲ್ಲಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ವಾಹನ ಖರೀದಿ ಸಾಧ್ಯತೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ವಾಹನ ಖರೀದಿ 2025: ಸ್ವಂತ ಮನೆ, ಹೊರಗೆ ಓಡಾಡಲು ಸ್ವಂತ ವಾಹನ ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಎಷ್ಟು ದುಡಿದರೂ ಕೆಲವರಿಗೆ ಒಂದು ಸ್ಕೂಟರ್ ಕೊಳ್ಳಲು ಕೂಡಾ ಆಗುವುದಿಲ್ಲ. ಎಲ್ಲರ ಜಾತಕದ 4ನೇ ಮನೆಯು ಜನರ ಜೀವನದಲ್ಲಿ ವಾಹನಗಳ ಭಾಗ್ಯವನ್ನು ಪ್ರತಿನಿಧಿಸುತ್ತದೆ. ಮಾತು, ಬುದ್ಧಿವಂತಿಕೆ ಮತ್ತು ತರ್ಕವನ್ನು ಪ್ರತಿನಿಧಿಸುವ ಬುಧ ಗ್ರಹವು ವಾಣಿಜ್ಯ ವಾಹನಗಳ ಮೇಲೂ ಪ್ರಭಾವ ಬೀರುತ್ತಾನೆ. ವೈಯಕ್ತಿಕ ಬಳಕೆಗಾಗಿ ಬಯಸುವ ವಾಹನವು ಶುಕ್ರನಿಂದ ಪ್ರಭಾವಿತವಾಗಿರುತ್ತದೆ. ಆದರೂ ನವಗ್ರಹಗಳು ಕೂಡಾ ಇದರ ಮೇಲೆ ಪ್ರಭಾವ ಬೀರುತ್ತವೆ. ನೀವು ಖರೀದಿಸುವ ವಾಹನ ನಿಮಗೆ ಅದೃಷ್ಟವೋ, ಇಲ್ಲವೋ ಎಂಬುದು ಕೂಡಾ ಇದರಿಂದಲೇ ನಿರ್ಧಾರವಾಗುತ್ತದೆ.
2024 ಕಳೆದ ಹೊಸ ವರ್ಷ ಬರುತ್ತಿದೆ. ಹೊಸ ವರ್ಷ 2025ರಲ್ಲಿ ಯಾವೆಲ್ಲಾ ರಾಶಿಯವರ ಸ್ವಂತ ವಾಹನಗಳ ಕನಸು ನನಸಾಗುತ್ತದೆ? ಯಾವ ರಾಶಿಯವರಿಗೆ ವಾಹನಗಳನ್ನು ಕೊಳ್ಳುವ ಕನಸು ಮತ್ತೆ ಮುಂದಕ್ಕೆ ಹೋಗಲಿದೆ ನೋಡೋ. ಇಲ್ಲಿ 2025 ರಲ್ಲಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ವಾಹನ ಖರೀದಿ ಸಾಧ್ಯವಿದೆಯೋ, ಇಲ್ಲವೋ ಎಂಬುದನ್ನು ತಿಳಿಸಲಾಗಿದೆ.
2025 ರಲ್ಲಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಕಟಕ ರಾಶಿಯವರಿಗೆ ವಾಹನ ಖರೀದಿ ಶುಭ ಸಮಯ
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯು ವಾಹನ ಖರೀದಿಗೆ ಬಹಳ ಶುಭವಾಗಿದೆ. ಆದರೆ ಮಾರ್ಚ್ ಮತ್ತು ಮೇ ನಡುವಿನ ಸಮಯವು ಸೂಕ್ತವಾದ ವಾಹನಗಳ ಖರೀದಿಗೆ ಸರಾಸರಿ ಫಲಿತಾಂಶ ನೀಡುತ್ತದೆ. ನಂತರದ ಅವಧಿಯಲ್ಲಿ, ಅಗತ್ಯವಿದ್ದರೆ ಮಾತ್ರ ನೀವು ವಾಹನ ಖರೀದಿ ಮಾಡಬಹುದು. ವಾಹನ ಖರೀದಿಸುವ ಮುನ್ನ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಿ. ತಜ್ಞರೊಂದಿಗೆ ಸಮಾಲೋಚಿಸಿ, ಇಲ್ಲದಿದ್ದರೆ ಉತ್ಸಾಹದಿಂದ ವಾಹನಕ್ಕೆ ದುಡ್ಡು ಸುರಿದು ತೊಂದರೆ ತಂದುಕೊಳ್ಳಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ 2025 ಜನವರಿಯಿಂದ ಮಾರ್ಚ್ ವರೆಗಿನ ಅವಧಿಯು ವಾಹನ ಖರೀದಿಸುವ ದೃಷ್ಟಿಯಿಂದ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ನಿಮಗೆ ಸೂಕ್ತವಾದ ವಾಹನವನ್ನು ಖರೀದಿಸಲು ಶುಭ ಸಮಯವಾಗಿರುತ್ತದೆ. ಅಗತ್ಯವಿದ್ದಾಗ ವಾಹನಗಳ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವಷ್ಟೇ ಖರೀದಿ ಮಾಡಿ, ಅತುರವಾಗಿ ಖರೀದಿಸಿ ಹಣ ಕಳೆದುಕೊಳ್ಳಬೇಡಿ.
ತುಲಾ ರಾಶಿ
ತುಲಾ ರಾಶಿಯವರು 2025 ರಲ್ಲಿ ವಾಹನ ಖರೀದಿ ಮಾಡಿಸಲು ಹೇಳಿ ಮಾಡಿಸಿದಂಥ ಸಮಯ. ನಿಮ್ಮಿಷ್ಟದ ಯಾವುದೇ ವಾಹನಗಳನ್ನು ನೀವು ಮುಂಬರುವ ವರ್ಷದಲ್ಲಿ ಕೊಂಡುಕೊಳ್ಳಬಹುದು. ತುಲಾ ರಾಶಿಯವರಿಗೆ ಶುಕ್ರ ಮತ್ತು ಗುರುಗಳ ಸಂಕ್ರಮಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವಾಹನ ಖರೀದಿ ಮಾತ್ರವಲ್ಲದೆ ವೃತ್ತಿ, ಹಣಕಾಸು, ಆರೋಗ್ಯ ಎಲ್ಲಾ ವಿಚಾರದಲ್ಲೂ ತುಲಾ ರಾಶಿಯವರಿಗೆ 2025 ಉತ್ತಮ ವರ್ಷವಾಗಿದೆ.
ವೃಶ್ಚಿಕ ರಾಶಿ
ವಾಹನವನ್ನು ಖರೀದಿಸುವ ದೃಷ್ಟಿಯಿಂದ ವೃಶ್ಚಿಕ ರಾಶಿಯವರಿಗೆ 2025 ಮಂಗಳಕರವಾಗಿದೆ, ಮುಂಬರುವ ವರ್ಷದಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹೊಸ ವಾಹನವನ್ನು ಖರೀದಿಸಲು ಯೋಚಿಸುತ್ತಿರುವ ವ್ಯಕ್ತಿಗಳಿಗೆ, ಏಪ್ರಿಲ್ ನಿಂದ ಮೇ 2025 ರ ಅವಧಿಯು ತುಂಬಾ ಮಂಗಳಕರವಾಗಿರುತ್ತದೆ. ನಂತರದ ಅವಧಿಯಲ್ಲಿ, ಖರೀದಿಸುವ ಮೊದಲು ವಾಹನದ ಸಂಪೂರ್ಣ ಪರೀಕ್ಷೆಯ ನಂತರ ಮಾತ್ರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
ವಿಭಾಗ