ಮಕರ ರಾಶಿಯಲ್ಲಿ ಶುಕ್ರನ ಪ್ರಯಾಣ; ಧನಸ್ಸು ರಾಶಿಯವರಿಗೆ ವಿದೇಶಕ್ಕೆ ತೆರಳುವ ಅವಕಾಶ, ಮಕರ ರಾಶಿಯವರ ಆರೋಗ್ಯದಲ್ಲಿ ಚೇತರಿಕೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕರ ರಾಶಿಯಲ್ಲಿ ಶುಕ್ರನ ಪ್ರಯಾಣ; ಧನಸ್ಸು ರಾಶಿಯವರಿಗೆ ವಿದೇಶಕ್ಕೆ ತೆರಳುವ ಅವಕಾಶ, ಮಕರ ರಾಶಿಯವರ ಆರೋಗ್ಯದಲ್ಲಿ ಚೇತರಿಕೆ

ಮಕರ ರಾಶಿಯಲ್ಲಿ ಶುಕ್ರನ ಪ್ರಯಾಣ; ಧನಸ್ಸು ರಾಶಿಯವರಿಗೆ ವಿದೇಶಕ್ಕೆ ತೆರಳುವ ಅವಕಾಶ, ಮಕರ ರಾಶಿಯವರ ಆರೋಗ್ಯದಲ್ಲಿ ಚೇತರಿಕೆ

Venus Transit: ಗ್ರಹಗಳು ಆಗ್ಗಾಗ್ಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತವೆ. ಡಿಸೆಂಬರ್‌ 2 ರಿಂದ ಶುಕ್ರನು ಮಕರ ರಾಶಿಗೆ ಸಂಚರಿಸುತ್ತಾನೆ. ಇದರಿಂದ ದ್ವಾದಶ ರಾಶಿಗಳಿಗೆ ವಿವಿಧ ಫಲಗಳು ದೊರೆಯುತ್ತದೆ. ಶುಕ್ರ ಸಂಕ್ರಮಣದಿಂದ ಧನಸ್ಸು, ಮಕರ ರಾಶಿಯವರಿಗೆ ಏನು ಫಲ ದೊರೆಯುತ್ತದೆ? ಇಲ್ಲಿದೆ ವಿವರ.

ಮಕರ ರಾಶಿಯಲ್ಲಿ ಶುಕ್ರನ ಪ್ರಯಾಣ: ಧನಸ್ಸು , ಮಕರ ರಾಶಿಯವರಿಗೆ ದೊರೆಯುವ ಫಲಗಳು
ಮಕರ ರಾಶಿಯಲ್ಲಿ ಶುಕ್ರನ ಪ್ರಯಾಣ: ಧನಸ್ಸು , ಮಕರ ರಾಶಿಯವರಿಗೆ ದೊರೆಯುವ ಫಲಗಳು (PC: Canva)

Venus Transit:  ಶುಕ್ರನು ಡಿಸೆಂಬರ್ 2 ರಿಂದ 28 ರವರೆಗೂ ಮಕರ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯವರ ಜೀವನದಲ್ಲಿ ವಿವಿಧ ಬದಲಾವಣೆಗಳಾಗುತ್ತವೆ. ಧನಸ್ಸು, ಮಕರ ರಾಶಿಯವರಿಗೆ ಶುಕ್ರನ ಸಂಚಾರ ಯಾವ ರೀತಿ ಫಲ ನೀಡಲಿದೆ ನೋಡೋಣ.

ವಿದೇಶಕ್ಕೆ ತೆರಳುವ ಅವಕಾಶ ಪಡೆಯುವ ಧನಸ್ಸು ರಾಶಿ ಜನರು

ಗೆಲುವನ್ನು ಸಂಭ್ರಮದಿಂದ ಆಚರಿಸುವಿರಿ. ಆದರೆ ಸೋಲನ್ನು ಧೈರ್ಯದಿಂದ ಎದುರಿಸುವಿರಿ. ಮಾಡಬೇಕಾದ ಕೆಲಸ ಕಾರ್ಯವನ್ನು ಅರ್ಥೈಸಿಕೊಂಡು ಮುಂದುವರೆಯುವಿರಿ. ಇದರಿಂದ ಸೋಲಿನ ಭಯ ನಿಮ್ಮಲ್ಲಿ ಇರುವುದಿಲ್ಲ. ಸಾಹಸದ ಗುಣವು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ವಂಶದಲ್ಲಿ ಮತ್ತು ಕುಟುಂಬದಲ್ಲಿ ನಿಮಗೆ ವಿಶೇಷ ಗೌರವವಿರುತ್ತದೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಪರೋಪಕಾರದ ಗುಣವಿದ್ದರೂ ಮೊದಲ ಆದ್ಯತೆಯನ್ನು ಸ್ವಂತ ಕೆಲಸಕ್ಕೆ ನೀಡುವಿರಿ. ನಿಮ್ಮಆತ್ಮೀಯರಿಗೆ ಉತ್ತಮ ಸಲಹೆ ಸೂಚನೆಯನ್ನು ನೀಡುವಿರಿ. ಹಣಕಾಸಿನ ಬಗ್ಗೆ ಹೆಚ್ಚಿನ ನಿರೀಕ್ಷೆ ಇರುವುದಿಲ್ಲ. ದೊರೆತ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವಿರಿ.

ನಿಮ್ಮ ವಿರೋಧಿಯೊಬ್ಬರು ನಿಮ್ಮ ಉತ್ತಮ ವ್ಯಕ್ತಿತ್ವವನ್ನು ಮೆಚ್ಚಿ ಸ್ನೇಹವನ್ನು ಬಯಸುತ್ತಾರೆ. ಸ್ವಂತ ಉದ್ದಿಮೆ ಇದ್ದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಧಾರ್ಮಿಕ ಕೇಂದ್ರಕ್ಕೆ ತೆರಳುವಿರಿ. ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವಿರಿ. ಕುಟುಂಬದ ಸಲುವಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರದ ಕಾರಣ ಉದರ ಸಂಬಂಧಿ ದೋಷ ಉಂಟಾಗುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಕಣ್ಣಿನ ಅಥವಾ ಚರ್ಮದ ತೊಂದರೆ ಇದ್ದಲ್ಲಿ ಗುಣವಾಗುತ್ತದೆ. ಕಷ್ಟದಲ್ಲಿಇದ್ದವರಿಗೆ ಸಹಾಯ ಹಸ್ತ ನೀಡುವಿರಿ.

ಮಧ್ಯ ವಯಸ್ಕರಿಗೆ ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಸಂಗೀತ ಅಥವಾ ಹಾಡುಗಾರಿಕೆ ಬಲ್ಲವರಿಗೆ ವಿಶೇಷ ಅವಕಾಶ ದೊರೆಯಲಿದೆ. ಹಣ ಉಳಿಸಲು ಉತ್ತಮ ಯೋಜನೆ ರೂಪಿಸುವುದು ಒಳ್ಳೆಯದು. ತನ್ನದೇ ಆದ ತಪ್ಪಿಗೆ ನಿಮ್ಮ ಸಹೋದರಿ ತೊಂದರೆಗೆ ಸಿಲುಕಬಹುದು. ಮನೆತನದ ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ. ಲೋಹದ ವಸ್ತು ಅಥವಾ ವಾಹನದಿಂದ ತೊಂದರೆ ಆಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ ವಿದ್ಯಾರ್ಥಿಗಳು ತಮ್ಮ ಪಾಲಿನ ಕರ್ತವ್ಯ ಪೂರೈಸುತ್ತಾರೆ. ಜಯದ ಸಮೀಪವಿರುವಾಗ ಆತುರದ ನಿರ್ಧಾರ ತೆಗೆದುಕೊಳ್ಳದಿರಿ.

ಅವಕಾಶಗಳನ್ನು ಕಳೆದುಕೊಳ್ಳುವ ಮಕರ ರಾಶಿಯ ಜನರು

ನಿಮ್ಮಲ್ಲಿನ ಸಹಜವಾದ ನಡವಳಿಕೆ ಎಲ್ಲರ ಗಮನ ಸೆಳೆಯುತ್ತದೆ. ಜೀವನದಲ್ಲಿ ಅನಿರೀಕ್ಷಿತವಾದ ಫಲಗಳು ದೊರೆಯುತ್ತವೆ. ನಿಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯದೇ ಹೋದರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಬೇಡದ ವಿಚಾರಗಳಿಗೆ ಯೋಚನೆ ಮಾಡುವಿರಿ. ಅಪೂರ್ಣಗೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸಭೆ ಸಮಾರಂಭಗಳಲ್ಲಿ ಎಲ್ಲರ ಗಮನ ಸೆಳೆಯುವಿರಿ. ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳಲು ತಡವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನೀವು ಸಮಸ್ಯೆಗೆ ಸಿಲುಕಿದಾಗ ನಿಮ್ಮ ಮಕ್ಕಳಿಂದ ಉತ್ತಮ ಸಲಹೆ ದೊರೆಯುತ್ತವೆ. ಮಕ್ಕಳ ಜೊತೆ ಉತ್ತಮ ಅನುಬಂಧ ಇರುತ್ತದೆ.

ಅದೃಷ್ಟದಲ್ಲಿ ನಂಬಿಕೆ ಇಡುವ ಕಾರಣ ಕೆಲವೊಂದು ಅವಕಾಶಗಳು ನಿಮ್ಮಿಂದ ದೂರವಾಗಬಹುದು. ನಿಮ್ಮ ನಿರ್ಧಾರಗಳನ್ನು ಸುಲಭವಾಗಿ ಬದಲಾಯಿಸುವುದಿಲ್ಲ. ಕುಟುಂಬದ ಒಳಿತಿಗಾಗಿ ಶ್ರಮಿಸುವಿರಿ. ಬರವಣಿಗೆಯಲ್ಲಿ ಆಸಕ್ತಿ ಇರುತ್ತದೆ. ಮನೆಯಲ್ಲಿ ಇರುವ ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಹಣಕಾಸಿನ ವಿಚಾರದಲ್ಲಿ ಕ್ರಮೇಣ ಪ್ರಗತಿ ದೊರೆಯುತ್ತದೆ. ಸುಖ ಜೀವನ ನಡೆಸುವಿರಿ. ಹಣಕಾಸಿನ ವ್ಯವಹಾರವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸಂಗಾತಿ ಜೊತೆಯಲ್ಲಿ ಉತ್ತಮ ಸ್ನೇಹಿತರಂತೆ ಬಾಳುವಿರಿ. ಮನಸ್ಸಿಗೆ ಇಷ್ಟವಾಗುವ ದುಬಾರಿ ಬೆಲೆಯ ವಸ್ತ್ರಗಳನ್ನು ಕೊಳ್ಳುವಿರಿ.

ಎಲ್ಲರೊಂದಿಗೆ ಹೊಂದಿಕೊಂಡು ಹೋಗುವಿರಿ. ಹೊಗಳಿಕೆಯ ಮಾತಿಗೆ ಮರುಳಾಗಿ ಮೋಸ ಹೋಗುವ ಸಾಧ್ಯತೆಗಳಿವೆ. ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವಿರಿ. ನೋಡಲು ಶಾಂತವಾಗಿ ಕಂಡರೂ ಕೋಪಗೊಂಡಾಗ ಉದ್ವೇಗದಿಂದ ವರ್ತಿಸುವಿರಿ. ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳದಿರಿ. ಅಪರಿಚಿತರಿಂದ ಸಹಾಯ ಪಡೆಯುವಿರಿ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದಲ್ಲಿ ತೊಂದರೆಗೆ ಸಿಲುಕುವಿರಿ. ಕಲಾವಿದರಿಗೆ ಅಪರೂಪದ ಅವಕಾಶಗಳು ದೊರೆಯಲಿವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.