ಕನ್ಯಾ ರಾಶಿ ಭವಿಷ್ಯ ಆಗಸ್ಟ್ 28: ಪ್ರೀತಿಯಲ್ಲಿ ಆಹ್ಲಾದಕರ ಕ್ಷಣಗಳನ್ನು ಕಳೆಯುತ್ತೀರಿ, ಹಣಕಾಸಿನ ಯಾವುದೇ ಸಮಸ್ಯೆಗಳಿಲ್ಲ
Virgo Daily Horoscope August 28, 2024: ರಾಶಿಚಕ್ರದ ಆರನೇ ಚಿಹ್ನೆ ಕನ್ಯಾ. ಜನನದ ಸಮಯದಲ್ಲಿ ಚಂದ್ರನು ಕನ್ಯಾರಾಶಿಯಲ್ಲಿ ಸಾಗುತ್ತಿರುವ ಜನರು ಕನ್ಯಾರಾಶಿಯವರು. ಆಗಸ್ಟ್ 28ರ ಕನ್ಯಾ ರಾಶಿ ಭವಿಷ್ಯ ಪ್ರಕಾರ, ವಿವಿಧ ಮೂಲಗಳಿಂದ ಹಣ ಗಳಿಸಲಿದ್ದೀರಿ, ಕಚೇರಿ ರಾಜಕೀಯದಿಂದ ದೂರವಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ.
ಕನ್ಯಾ ರಾಶಿ ದಿನ (ಆಗಸ್ಟ್ 28, ಬುಧವಾರ) ಭವಿಷ್ಯದಲ್ಲಿ ಸಂಬಂಧದಲ್ಲಿ ವಾದಗಳನ್ನು ತಪ್ಪಿಸಿ. ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ಇಂದು ನೀವು ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತಜ್ಞರಿಂದ ಸಹಾಯ ಪಡೆಯುತ್ತೀರಿ. ಜೀವನಶೈಲಿಯನ್ನು ಸುಧಾರಿಸಿ. ಇದು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸುತ್ತದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಕನ್ಯಾ ರಾಶಿ ಪ್ರೇಮ ಜಾತಕ (Virgo Love Horoscope): ಒಳ್ಳೆಯ ಮತ್ತು ಕೆಟ್ಟ ಭಾವನೆಗಳನ್ನು ಹಂಚಿಕೊಳ್ಳಲು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯಿರಿ. ಕೆಲವು ಸಂಬಂಧಗಳು ಇಂದು ಕೆಲಸ ಮಾಡದಿರಬಹುದು ಯಾಕೆಂದರೆ ಕೆಲವು ಬಾರಿ ಈ ರೀತಿ ಆಗುತ್ತದೆ. ನೀವು ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು ಹೋಗಿ ಅದು ಇನ್ನೇನೋ ಆಗುವ ಸಾಧ್ಯತೆ ಹೆಚ್ಚಿದೆ. ಭಿನ್ನಾಭಿಪ್ರಾಯಗಳಿರುವಾಗ ಜಾಗರೂಕರಾಗಿರಿ ಮತ್ತು ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಿ. ನೀವು ಪ್ರೀತಿಯ ಸಂಬಂಧವನ್ನು ಗೌರವಿಸಬೇಕು. ಅದೇ ರೀತಿ ಇಬ್ಬರನ್ನೂ ಇಬ್ಬರೂ ಗೌರವಿಸಬೇಕು.
ಕನ್ಯಾರಾಶಿ ವೃತ್ತಿ ಜಾತಕ (Virgo Professional Horoscope): ನಿಮ್ಮ ಕೌಶಲ್ಯವನ್ನು ಸಾಬೀತುಪಡಿಸಲು ಕೆಲಸದ ಸ್ಥಳದಲ್ಲಿ ಹಲವಾರು ಅವಕಾಶಗಳು ಬರುತ್ತವೆ. ಗಾಸಿಪ್ಗಳಿಂದ ದೂರವಿರಿ ಮತ್ತು ನಿಯೋಜಿಸಲಾದ ಕಾರ್ಯಗಳ ಮೇಲೆ ಹೆಚ್ಚಿನ ಎಫರ್ಟ್ ಹಾಕಿ. ವಕೀಲರು, ಶಿಕ್ಷಣ ತಜ್ಞರು, ವಿನ್ಯಾಸಕರು, ಬ್ಯಾಂಕ್ನಲ್ಲಿ ಕೆಲಸ ಮಾಡುವವರು ಮತ್ತು ಬಾಣಸಿಗರು ತಮ್ಮ ಸಾಮರ್ಥ್ಯವನ್ನು ವೃತ್ತಿಪರವಾಗಿ ಸಾಬೀತುಪಡಿಸುವ ಅವಕಾಶಗಳನ್ನು ಇಂದು ಹೆಚ್ಚಾಗಿ ಪಡೆದುಕೊಳ್ಳುತ್ತಾರೆ. ನಿಮ್ಮ ಸಾಮರ್ಥ್ಯದೊಂದಿಗೆ ಕ್ಲೈಂಟ್ ಅನ್ನು ಮೆಚ್ಚಿಸಿ ಮತ್ತು ಕ್ಲೈಂಟ್ನಿಂದ ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸುವ ಸಾದ್ಯತೆ ಇದೆ.
ಕನ್ಯಾ ರಾಶಿ ಆರ್ಥಿಕ ಜಾತಕ (Virgo Money Horoscope): ಆರ್ಥಿಕ ಸ್ಥಿತಿ ಉತ್ತಮವಾಗಿದೆ ಮತ್ತು ನಿಮ್ಮ ಬಹುದಿನಗಳ ಆಸೆಯ ಕನಸುಗಳಿಗಾಗಿ ನೀವು ಖರ್ಚು ಮಾಡುತ್ತೀರಿ. ನೀವು ಐಷಾರಾಮಿ ವಸ್ತುಗಳ ಮೇಲೆ ಖರ್ಚು ಮಾಡುವುದನ್ನು ಕಾಣುತ್ತೀರಿ. ನೀವು ಚಾರಿಟಿಗೆ ಹಣವನ್ನು ಒದಗಿಸಬಹುದು ಅಥವಾ ಕಚೇರಿ ಅಥವಾ ಕುಟುಂಬದೊಳಗೆ ಏನಾದರೂ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲು ಹಣ ವಿನಿಯೋಗ ಮಾಡುತ್ತೀರಾ. ಇದರಿಂದ ನಿಮಗೆ ನಷ್ಟವಾದರೂ ಅಷ್ಟೇ ಸಂತೋಷ ದೊರೆಯುತ್ತದೆ.
ಕನ್ಯಾ ರಾಶಿ ಆರೋಗ್ಯ ಜಾತಕ (Virgo Health Horoscope): ಆರೋಗ್ಯವು ಉತ್ತಮವಾಗಿದ್ದರೂ, ಸಣ್ಣ ಅಲರ್ಜಿಗಳು ಸಾಮಾನ್ಯವಾಗಿರುತ್ತದೆ, ಇದು ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೀಲುಗಳಲ್ಲಿ, ವಿಶೇಷವಾಗಿ ಮೊಣಕೈಯಲ್ಲಿ ನೋವು ಕೂಡ ಕಾಣಿಸಿಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ಪೋಷಕಾಂಶಗಳು, ಜೀವಸತ್ವಗಳು ಮತ್ತು ಪ್ರೋಟೀನ್ ತಿನ್ನುವುದರಿಂದ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ. ಒತ್ತಡ ಮತ್ತು ನಕಾರಾತ್ಮಕ ಮನಸ್ಥಿತಿಯ ಜನರಿಂದ ದೂರವಿರಿ.
ಕನ್ಯಾ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಕನ್ಯಾ ರಾಶಿಯ ಅಧಿಪತಿ: ಬುಧ, ಕನ್ಯಾ ರಾಶಿಯವರಿಗೆ ಶುಭ ದಿನಾಂಕಗಳು: 2, 3, 5, 6, 7, 14, 24, 31, 19. ಕನ್ಯಾ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಕನ್ಯಾ ರಾಶಿಯವರಿಗೆ ಶುಭ ವರ್ಣ: ಹಳದಿ, ಬಿಳಿ ಮತ್ತು ಹಸಿರು. ಕನ್ಯಾ ರಾಶಿಯವರಿಗೆ ಅಶುಭ ವರ್ಣ: ನೀಲಿ ಮತ್ತು ಕೆಂಪು. ಕನ್ಯಾ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ. ಕನ್ಯಾ ರಾಶಿಯವರಿಗೆ ಶುಭ ತಿಂಗಳು: ಜೂನ್ 15ರಿಂದ ಆಗಸ್ಟ್ 14 ಮತ್ತು ಡಿಸೆಂಬರ್ 15ರಿಂದ ಜನವರಿ 14. ಕನ್ಯಾ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ. ಕನ್ಯಾ ರಾಶಿಯವರಿಗೆ ಶುಭ ರಾಶಿ: ಮಕರ, ವೃಷಭ ಮತ್ತು ಮಿಥುನ. ಕನ್ಯಾ ರಾಶಿಯವರಿಗೆ ಅಶುಭ ರಾಶಿ: ವೃಶ್ಚಿಕ, ಮೇಷ ಮತ್ತು ಸಿಂಹ.
ಕನ್ಯಾ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ವಿಷ್ಣು ಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವ ಕೇಳುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ಮಾನಸಿಕ ಒತ್ತಡವೂ ಕಡಿಮೆ ಆಗುತ್ತದೆ.
2) ಈ ದಾನಗಳಿಂದ ಶುಭ ಫಲ: ಬಿಳಿ ಬಟ್ಟೆ ಮತ್ತು ಗೋಧಿಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ ಮತ್ತು ತೊಗರಿ ಬೇಳೆ ನೀಡುವುದರಿಂದ ಎಲ್ಲ ವಿಧದಲ್ಲಿಯೂ ಪ್ರಗತಿ ದೊರೆಯುತ್ತದೆ. ಶ್ರೀ ದುರ್ಗಾಮಾತೆಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು, ನೀಲಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.