ಕನ್ಯಾ ರಾಶಿ ಭವಿಷ್ಯ ಜುಲೈ 22: ಆರೋಗ್ಯದ ನಿರ್ಲಕ್ಷ್ಯ ಸಲ್ಲ; ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲಿದ್ದೀರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ಯಾ ರಾಶಿ ಭವಿಷ್ಯ ಜುಲೈ 22: ಆರೋಗ್ಯದ ನಿರ್ಲಕ್ಷ್ಯ ಸಲ್ಲ; ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲಿದ್ದೀರಿ

ಕನ್ಯಾ ರಾಶಿ ಭವಿಷ್ಯ ಜುಲೈ 22: ಆರೋಗ್ಯದ ನಿರ್ಲಕ್ಷ್ಯ ಸಲ್ಲ; ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲಿದ್ದೀರಿ

Virgo Daily Horoscope July 22, 2024: ರಾಶಿಚಕ್ರದ ಆರನೇ ಚಿಹ್ನೆ ಕನ್ಯಾ. ಜನನದ ಸಮಯದಲ್ಲಿ ಚಂದ್ರನು ಕನ್ಯಾರಾಶಿಯಲ್ಲಿ ಸಾಗುತ್ತಿರುವ ಜನರು ಕನ್ಯಾರಾಶಿಯವರು. ಜುಲೈ 22ರ ಕನ್ಯಾ ರಾಶಿ ಭವಿಷ್ಯ ಪ್ರಕಾರ, ಇಂದು ಹಣಕಾಸಿನ ಸಮಸ್ಯೆ ಇರುವುದಿಲ್ಲ. ಪ್ರೇಮಜೀವನವು ಚೆನ್ನಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ.

ಕನ್ಯಾ ರಾಶಿ ಭವಿಷ್ಯ ಜುಲೈ 22: ಆರೋಗ್ಯದ ನಿರ್ಲಕ್ಷ್ಯ ಸಲ್ಲ; ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲಿದ್ದೀರಿ
ಕನ್ಯಾ ರಾಶಿ ಭವಿಷ್ಯ ಜುಲೈ 22: ಆರೋಗ್ಯದ ನಿರ್ಲಕ್ಷ್ಯ ಸಲ್ಲ; ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲಿದ್ದೀರಿ

ಕನ್ಯಾ ರಾಶಿ ಭವಿಷ್ಯ ಜುಲೈ 22: ನೀವು ಇಂದು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಬಹುದು. ಜೀವನದಲ್ಲಿ ಸೆಟಲ್‌ ಆಗಬೇಕು ಎನ್ನುವ ನಿಮ್ಮ ಕನಸಿಗೆ ರೆಕ್ಕೆ ಮೂಡಬಹುದು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನಿರೀಕ್ಷಿತ ಅವಕಾಶಗಳು ಹುಡುಕಿ ಬರಬಹುದು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಹಣಕಾಸನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಿ. ಎಲ್ಲಾ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಕನ್ಯಾ ರಾಶಿ ಪ್ರೇಮ ಜಾತಕ (Virgo Love Horoscope)

ಇಂದು ಗ್ರಹಗಳ ಜೋಡಣೆಯ ಪ್ರಕಾರ ನೀವು ನಿಮ್ಮ ಮನದ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಏಕಾಂಗಿಯಾಗಿರಲಿ ಅಥವಾ ಸಂಬಂಧದಲ್ಲಿರಲಿ ಮುಕ್ತ ಸಂವಹನ ಬಹಳ ಮುಖ್ಯ. ನೀವು ಒಂಟಿಯಾಗಿದ್ದರೆ ಇಂದು ನಿಮ್ಮ ಬದುಕಿನಲ್ಲಿ ಆಸಕ್ತಿದಾಯಕ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಂಬಂಧದಲ್ಲಿ ಇರುವವರು ಭವಿಷ್ಯದ ಯೋಜನೆಗಳು ಮತ್ತು ಹಂಚಿಕೆಯ ಗುರಿಗಳನ್ನು ಚರ್ಚಿಸಲು ಸಮಯ ತೆಗೆದುಕೊಳ್ಳಿ. ತಪ್ಪು ತಿಳುವಳಿಕೆಗಳ ಬಗ್ಗೆ ಗಮನವಿರಲಿ ಮತ್ತು ತಾಳ್ಮೆ ಮತ್ತು ಸಹಾನುಭೂತಿಯಿಂದ ಅವುಗಳನ್ನು ಪರಿಹರಿಸಿ.

ಕನ್ಯಾರಾಶಿ ವೃತ್ತಿ ಜಾತಕ (Virgo Professional Horoscope)

ಕೆಲಸ-ಕಾರ್ಯಗಳ ಮೇಲೆ ಹೆಚ್ಚು ಗಮನ ಹರಿಸಿ. ವೃತ್ತಿಪರ ಬೆಳವಣಿಗೆಗೆ ನೀವು ಹೊಸ ಅವಕಾಶಗಳನ್ನು ಕಂಡುಕೊಳ್ಳಬಹುದು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಹೋದ್ಯೋಗಿಗಳು ನಿಮ್ಮ ವಿಶ್ವಾಸಾರ್ಹತೆ ಮತ್ತು ಸಂಘಟಿತರಾಗಿ ಉಳಿಯುವ ಮನೋಭಾವವನ್ನು ಪ್ರಶಂಸಿಸುತ್ತಾರೆ. ನೀವು ಹೊಸ ಆಲೋಚನೆಗಳು ಅಥವಾ ಯೋಜನೆಗಳನ್ನು ಪ್ರಸ್ತಾಪಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದನ್ನು ಮಾಡಲು ಇಂದು ಅನುಕೂಲಕರ ದಿನವಾಗಿದೆ. ನಿಮ್ಮ ಗೆಳೆಯರು ಹಾಗೂ ಪರಿಚಯಸ್ಥರು ನಿಮ್ಮ ಆಲೋಚನೆಗಳಿಗೆ ಸ್ಪಂದಿಸುತ್ತಾರೆ.

ಕನ್ಯಾ ರಾಶಿಯ ಆರ್ಥಿಕ ಜಾತಕ (Virgo Money Horoscope)

ನಿಮ್ಮ ಬಜೆಟ್‌ ಪರಿಶೀಲನೆಗೆ ಹಾಗೂ ಹಣಕಾಸಿನ ವಿಚಾರವನ್ನು ಟ್ರ್ಯಾಕ್‌ ಮಾಡಲು ಇಂದು ಉತ್ತಮ ದಿನವಾಗಿದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿ, ಉಳಿತಾಯದ ಮೇಲೆ ಗಮನ ಹರಿಸಿ. ನಿಮಗೆ ಉಳಿತಾಯ ಮಾಡಲು ಯಾವುದಾದರು ಮಾರ್ಗ ಕಾಣಿಸಬಹುದು. ಹಾಗಾಗಿ ತೆರೆದ ಮನಸ್ಸಿನಿಂದ ಯೋಚಿಸಿ ನೋಡಿ. ಭವಿಷ್ಯದ ಸ್ಥಿರತೆಗಾಗಿ ಉತ್ತಮ ಅವಕಾಶಗಳಿಗಾಗಿ ಹುಡುಕುತ್ತಿದ್ದರೆ ಆರ್ಥಿಕ ಸಲಹೆಗಾರರನ್ನು ಭೇಟಿ ಮಾಡಿ.

ಕನ್ಯಾ ರಾಶಿಯ ಆರೋಗ್ಯ ಜಾತಕ (Virgo Health Horoscope)

ನೀವು ಇಂದು ಕೆಲಸ ಮತ್ತು ವಿಶ್ರಾಂತಿಯನ್ನು ಸಮತೋಲನಗೊಳಿಸುವುದು ಬಹಳ ಮುಖ್ಯವಾಗಿದೆ. ಸಣ್ಣ ಆರೋಗ್ಯ ಸಮಸ್ಯೆಗಳನ್ನೂ ನಿರ್ಲಕ್ಷ್ಯ ಮಾಡಬೇಡಿ. ಯಾವುದೇ ಸಮಸ್ಯೆ ದೊಡ್ಡದಾಗುವ ಮೊದಲು ಅದನ್ನು ಪರಿಹರಿಸಿ. ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ. ವಾಕಿಂಗ್‌, ಯೋಗ ಅಥವಾ ಜಿಮ್‌ಗೆ ಸೇರಿಕೊಳ್ಳಿ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಹಾಗಾಗಿ ಒತ್ತಡ ನಿವಾರಿಸಿಕೊಂಡು ವಿಶ್ರಾಂತಿ ತೆಗೆದುಕೊಳ್ಳಲು ಗಮನ ಹರಿಸಿ. ಧ್ಯಾನದಿಂದ ಗಮನಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಆಹಾರದ ಮೇಲೆ ಗಮನ ನೀಡಿ. ಹೈಡ್ರೇಟ್‌ ಆಗಿರುವುದು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಉತ್ತಮ.

ಕನ್ಯಾ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಕನ್ಯಾ ರಾಶಿಯ ಅಧಿಪತಿ: ಬುಧ, ಕನ್ಯಾ ರಾಶಿಯವರಿಗೆ ಶುಭ ದಿನಾಂಕಗಳು: 2, 3, 5, 6, 7, 14, 24, 31, 19. ಕನ್ಯಾ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಕನ್ಯಾ ರಾಶಿಯವರಿಗೆ ಶುಭ ವರ್ಣ: ಹಳದಿ, ಬಿಳಿ ಮತ್ತು ಹಸಿರು. ಕನ್ಯಾ ರಾಶಿಯವರಿಗೆ ಅಶುಭ ವರ್ಣ: ನೀಲಿ ಮತ್ತು ಕೆಂಪು. ಕನ್ಯಾ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ. ಕನ್ಯಾ ರಾಶಿಯವರಿಗೆ ಶುಭ ತಿಂಗಳು: ಜೂನ್ 15ರಿಂದ ಆಗಸ್ಟ್ 14 ಮತ್ತು ಡಿಸೆಂಬರ್ 15ರಿಂದ ಜನವರಿ 14. ಕನ್ಯಾ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ. ಕನ್ಯಾ ರಾಶಿಯವರಿಗೆ ಶುಭ ರಾಶಿ: ಮಕರ, ವೃಷಭ ಮತ್ತು ಮಿಥುನ. ಕನ್ಯಾ ರಾಶಿಯವರಿಗೆ ಅಶುಭ ರಾಶಿ: ವೃಶ್ಚಿಕ, ಮೇಷ ಮತ್ತು ಸಿಂಹ.

ಕನ್ಯಾ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ವಿ‍ಷ್ಣು ಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವ ಕೇಳುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ಮಾನಸಿಕ ಒತ್ತಡವೂ ಕಡಿಮೆ ಆಗುತ್ತದೆ.

2) ಈ ದಾನಗಳಿಂದ ಶುಭ ಫಲ: ಬಿಳಿ ಬಟ್ಟೆ ಮತ್ತು ಗೋಧಿಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ ಮತ್ತು ತೊಗರಿ ಬೇಳೆ ನೀಡುವುದರಿಂದ ಎಲ್ಲ ವಿಧದಲ್ಲಿಯೂ ಪ್ರಗತಿ ದೊರೆಯುತ್ತದೆ. ಶ್ರೀ ದುರ್ಗಾಮಾತೆಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು, ನೀಲಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.