ಕನ್ಯಾ ರಾಶಿ ಭವಿಷ್ಯ ಜುಲೈ 30; ಕೈ ತುಂಬಾ ಹಣ ಓಡಾಡುತ್ತಿದ್ದು, ಸಂಪತ್ತಿನ ನಿರ್ವಹಣೆಯೇ ಮುಖ್ಯ, ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ಯಾ ರಾಶಿ ಭವಿಷ್ಯ ಜುಲೈ 30; ಕೈ ತುಂಬಾ ಹಣ ಓಡಾಡುತ್ತಿದ್ದು, ಸಂಪತ್ತಿನ ನಿರ್ವಹಣೆಯೇ ಮುಖ್ಯ, ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ

ಕನ್ಯಾ ರಾಶಿ ಭವಿಷ್ಯ ಜುಲೈ 30; ಕೈ ತುಂಬಾ ಹಣ ಓಡಾಡುತ್ತಿದ್ದು, ಸಂಪತ್ತಿನ ನಿರ್ವಹಣೆಯೇ ಮುಖ್ಯ, ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ

Virgo Daily Horoscope July 30, 2024: ರಾಶಿಚಕ್ರದ ಆರನೇ ಚಿಹ್ನೆ ಕನ್ಯಾ. ಜನನದ ಸಮಯದಲ್ಲಿ ಚಂದ್ರನು ಕನ್ಯಾರಾಶಿಯಲ್ಲಿ ಸಾಗುತ್ತಿರುವ ಜನರು ಕನ್ಯಾರಾಶಿಯವರು. ಜುಲೈ 30 ರ ಕನ್ಯಾ ರಾಶಿ ಭವಿಷ್ಯ ಪ್ರಕಾರ, ಈ ದಿನ ಕೈ ತುಂಬಾ ಹಣ ಓಡಾಡುತ್ತಿದ್ದು, ಸಂಪತ್ತಿನ ನಿರ್ವಹಣೆಯೇ ಮುಖ್ಯವಾಗಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ ಇರಲಿದೆ. ಉಳಿದ ವಿವರ ಹೀಗಿದೆ.

ಕನ್ಯಾ ರಾಶಿ ಭವಿಷ್ಯ ಜುಲೈ 30; ಕೈ ತುಂಬಾ ಹಣ ಓಡಾಡುತ್ತಿದ್ದು, ಸಂಪತ್ತಿನ ನಿರ್ವಹಣೆಯೇ ಮುಖ್ಯ, ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ ಇರಲಿದೆ.
ಕನ್ಯಾ ರಾಶಿ ಭವಿಷ್ಯ ಜುಲೈ 30; ಕೈ ತುಂಬಾ ಹಣ ಓಡಾಡುತ್ತಿದ್ದು, ಸಂಪತ್ತಿನ ನಿರ್ವಹಣೆಯೇ ಮುಖ್ಯ, ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ ಇರಲಿದೆ.

ಕನ್ಯಾ ರಾಶಿ ಭವಿಷ್ಯ ಜುಲೈ 30: ಸಕಾರಾತ್ಮಕ ಆಲೋಚನೆಗಳಿಗಾಗಿ ಶಕ್ತಿಯನ್ನು ಬಳಸಬೇಕಾಗಬಹುದು. ಇಂದು ಪ್ರೀತಿ ಸಂಬಂಧಿತ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದಕ್ಕೆ ಉತ್ತಮ ದಿನವಾಗಿದ್ದು, ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಅತ್ಯುನ್ನತ ವೃತ್ತಿಪರ ಫಲಿತಾಂಶಗಳನ್ನು ಪಡೆಯಲು ಕೆಲಸದಲ್ಲಿ ಅತ್ಯುತ್ತಮವಾದದ್ದನ್ನು ನೀಡಿ. ಕೆಲಸದಲ್ಲಿ ನಿಮ್ಮ ಶಿಸ್ತು ಧನಾತ್ಮಕ ಫಲಿತಾಂಶಗಳನ್ನು ಹೊಂದಲು ಸಹಾಯ ಮಾಡುತ್ತದೆ. ಇಂದು ಸಂಪತ್ತಿಗೆ ಕೊರತೆ ಇಲ್ಲ. ಸಂಪತ್ತನ್ನು ಸಮರ್ಥವಾಗಿ ನಿಭಾಯಿಸಿ. ಯಾವುದೇ ಪ್ರಮುಖ ಕಾಯಿಲೆಗಳು ಸಹ ಇಂದು ನಿಮ್ಮನ್ನು ತೊಂದರೆಗೊಳಿಸುವುದಿಲ್ಲ. ಕನ್ಯಾ ರಾಶಿಯವರ ದಿನ ಭವಿಷ್ಯದ ಉಳಿದ ವಿವರ ಗಮನಿಸೋಣ.

ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಕನ್ಯಾ ರಾಶಿ ಲವ್ ಲೈಫ್‌ (Virgo Love Horoscope): ಕನ್ಯಾ ರಾಶಿಯವರ ಪ್ರೇಮ ಜೀವನದಲ್ಲಿ ಯಾವುದೇ ದೊಡ್ಡ ಗಂಡಾಂತರಗಳಿಲ್ಲ. ಆದರೆ ಸಣ್ಣ ಪುಟ್ಟ ಸಮಸ್ಯೆ ಸಾಮಾನ್ಯ. ಹಳೆಯ ಪ್ರೇಮ ಸಂಬಂಧ ತೊಂದರೆಗೆ ಕಾರಣವಾಗಬಹುದು. ಪ್ರಬುದ್ಧ ವರ್ತನೆ ತೋರಿ. ಹೊಸ ಸಂಬಂಧದಲ್ಲಿ ಇರುವಂಥವರು ಹೆಚ್ಚು ಸಮಯ ಒಟ್ಟಿಗೆ ಕಳೆಯಬೇಕಾಗುತ್ತದೆ. ಪ್ರೇಮ ಜೀವನದ ಮೇಲೆ ಪರಿಣಾಮ ಬೀರುವ ವಾದ ವಿವಾದಗಳನ್ನು ಇಂದು ತಪ್ಪಿಸಿ. ಕೆಲವು ಪ್ರೇಮ ಸಂಬಂಧಗಳು ಮದುವೆ ಹಂತಕ್ಕೆ ಮುಂದುವರಿಯುತ್ತವೆ. ಆದರೆ ದಿನದ ಎರಡನೇ ಭಾಗ ಕೆಲವು ಕನ್ಯಾ ರಾಶಿಯವರಿಗೆ ಉತ್ತಮವಾಗಿಲ್ಲ. ಬ್ರೇಕ್ ಅಪ್‌, ವಿಚ್ಚೇದನಗಳಾಗಬಹುದು.

ಕನ್ಯಾ ರಾಶಿ ಭವಿಷ್ಯ ಜುಲೈ 30; ಉದ್ಯೋಗ, ಆದಾಯ, ಆರೋಗ್ಯ

ಕನ್ಯಾ ರಾಶಿ ವೃತ್ತಿ ಭವಿಷ್ಯ (Virgo Professional Horoscope): ಇಂದು ಹಿರಿಯರೊಂದಿಗೆ ವಾದಕ್ಕೆ ಇಳಿಯಬೇಡಿ. ತಂಡದ ಸಭೆಗಳಲ್ಲಿ ಹೊಸತನದೊಂದಿಗೆ ವಿಚಾರ ಮಂಡಿಸಿ, ಅಂಥವುಗಳಿಗೆ ಸ್ಪಂದಿಸಿ. ಹೊಸ ಆಲೋಚನೆಗಳು ಬರಬಹುದು. ಆದರೆ ಪಾಲುದಾರರೊಂದಿಗೆ ಚರ್ಚಿಸಿ. ಅಂದಾಜುಗಳನ್ನು ನೀಡುವಾಗ ವಾಸ್ತವ ನೆಲೆಗಟ್ಟು ಮನಸ್ಸಿನಲ್ಲಿರಲಿ. ನೀವು ಕೆಲಸದಲ್ಲಿ ಅನುಷ್ಠಾನ ಸಾಧ್ಯ ನಿಯಮಗಳನ್ನು ಒಪ್ಪಿಕೊಳ್ಳಿ. ನೀವು ಕಚೇರಿ ರಾಜಕೀಯದಿಂದ ದೂರವಿರಬೇಕು. ಕ್ಲೈಂಟ್‌ನೊಂದಿಗಿನ ಉತ್ತಮ ಸಂಬಂಧವು ಪ್ರಾಜೆಕ್ಟ್‌ ವಿಳಂಬವಾದಾಗಲೂ ಸಭೆಗಳಲ್ಲಿ ನಿಮ್ಮನ್ನು ಬಾಧಿಸಲಾರವು. ವ್ಯಾಪಾರಿಗಳಿಗೆ ತಕ್ಷಣದ ಪರಿಹಾರದ ಅಗತ್ಯವಿರುವ ಪರವಾನಗಿ ಸಮಸ್ಯೆಗಳು ಕಾಡಬಹುದು.

ಕನ್ಯಾ ರಾಶಿ ಹಣಕಾಸು ಭವಿಷ್ಯ (Virgo Money Horoscope): ಷೇರು, ವ್ಯಾಪಾರ ಸೇರಿ ಸ್ಮಾರ್ಟ್ ಹೂಡಿಕೆ ಆಯ್ಕೆಗಳನ್ನು ನೋಡಿ. ನೀವು ಆಸ್ತಿಯನ್ನು ಆನುವಂಶಿಕವಾಗಿ ಪಡೆಯಬಹುದು. ಆದರೆ ಅದೃಷ್ಟದ ಕನ್ಯಾ ರಾಶಿಯವರು ಕಾನೂನು ವಿವಾದಗಳನ್ನು ಗೆಲ್ಲಬಹುದು. ಅದು ಸಹ ಸಂಪತ್ತನ್ನು ಒದಗಿಸುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇಂದು ಉತ್ತಮ ದಿನವಾಗಿದೆ. ವಿದೇಶದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ವೆಚ್ಚವನ್ನು ಪೂರೈಸಲು ಕೆಲವು ವಿದ್ಯಾರ್ಥಿಗಳಿಗೆ ಹಣಕಾಸಿನ ಅಗತ್ಯವಿರುತ್ತದೆ. ಒಡಹುಟ್ಟಿದವರಿಗೆ ಅಗತ್ಯ ಹಣಕಾಸಿನ ನೆರವು ನೀಡಬೇಕಾಗಬಹುದು.

ಕನ್ಯಾ ರಾಶಿ ಆರೋಗ್ಯ ಭವಿಷ್ಯ (Virgo Health Horoscope): ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆ ಇಂದು ನಿಮ್ಮನ್ನು ಕಾಡುವುದಿಲ್ಲ. ಆದಾಗ್ಯೂ, ಕೆಲವು ಕನ್ಯಾ ರಾಶಿಯವರು ಕೀಲುಗಳಲ್ಲಿ ನೋವು, ಕಣ್ಣಿನ ಸೋಂಕು, ವೈರಲ್ ಜ್ವರ ಮತ್ತು ಉಸಿರಾಟದ ತೊಂದರೆ ಸೇರಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊಂದಿರಬಹುದು. ವಾಹನ ಚಾಲನೆ ಮಾಡುವಾಗ, ವಿಶೇಷವಾಗಿ ರಾತ್ರಿಯಲ್ಲಿ ಕಾಳಜಿ ವಹಿಸಬೇಕಾದ್ದು ಅಗತ್ಯ. ಗರ್ಭಿಣಿಯರು ಸಾಹಸ ಕ್ರೀಡೆಗಳಿಂದ ದೂರವಿರಬೇಕು ಮತ್ತು ಅವರ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಹಿರಿಯರನ್ನು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಮಾನಸಿಕ ಒತ್ತಡವೂ ಕಡಿಮೆಯಾಗಲಿದೆ.

ಕನ್ಯಾ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಕನ್ಯಾ ರಾಶಿಯ ಅಧಿಪತಿ: ಬುಧ, ಕನ್ಯಾ ರಾಶಿಯವರಿಗೆ ಶುಭ ದಿನಾಂಕಗಳು: 2, 3, 5, 6, 7, 14, 24, 31, 19. ಕನ್ಯಾ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಕನ್ಯಾ ರಾಶಿಯವರಿಗೆ ಶುಭ ವರ್ಣ: ಹಳದಿ, ಬಿಳಿ ಮತ್ತು ಹಸಿರು. ಕನ್ಯಾ ರಾಶಿಯವರಿಗೆ ಅಶುಭ ವರ್ಣ: ನೀಲಿ ಮತ್ತು ಕೆಂಪು. ಕನ್ಯಾ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ. ಕನ್ಯಾ ರಾಶಿಯವರಿಗೆ ಶುಭ ತಿಂಗಳು: ಜೂನ್ 15ರಿಂದ ಆಗಸ್ಟ್ 14 ಮತ್ತು ಡಿಸೆಂಬರ್ 15ರಿಂದ ಜನವರಿ 14. ಕನ್ಯಾ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ. ಕನ್ಯಾ ರಾಶಿಯವರಿಗೆ ಶುಭ ರಾಶಿ: ಮಕರ, ವೃಷಭ ಮತ್ತು ಮಿಥುನ. ಕನ್ಯಾ ರಾಶಿಯವರಿಗೆ ಅಶುಭ ರಾಶಿ: ವೃಶ್ಚಿಕ, ಮೇಷ ಮತ್ತು ಸಿಂಹ.

ಕನ್ಯಾ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ವಿ‍ಷ್ಣು ಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವ ಕೇಳುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ಮಾನಸಿಕ ಒತ್ತಡವೂ ಕಡಿಮೆ ಆಗುತ್ತದೆ.

2) ಈ ದಾನಗಳಿಂದ ಶುಭ ಫಲ: ಬಿಳಿ ಬಟ್ಟೆ ಮತ್ತು ಗೋಧಿಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ ಮತ್ತು ತೊಗರಿ ಬೇಳೆ ನೀಡುವುದರಿಂದ ಎಲ್ಲ ವಿಧದಲ್ಲಿಯೂ ಪ್ರಗತಿ ದೊರೆಯುತ್ತದೆ. ಶ್ರೀ ದುರ್ಗಾಮಾತೆಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು, ನೀಲಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.