ಕನ್ಯಾ ರಾಶಿ ಭವಿಷ್ಯ 2025: ಸಹೋದ್ಯೋಗಿಗಳ ಜೊತೆ ವಾದ ವಿವಾದ, ಕುಟುಂಬದಲ್ಲಿ ನಡೆಯಬೇಕಿದ್ದ ಶುಭ ಕಾರ್ಯಗಳಿಗೆ ಅಡಚಣೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ಯಾ ರಾಶಿ ಭವಿಷ್ಯ 2025: ಸಹೋದ್ಯೋಗಿಗಳ ಜೊತೆ ವಾದ ವಿವಾದ, ಕುಟುಂಬದಲ್ಲಿ ನಡೆಯಬೇಕಿದ್ದ ಶುಭ ಕಾರ್ಯಗಳಿಗೆ ಅಡಚಣೆ

ಕನ್ಯಾ ರಾಶಿ ಭವಿಷ್ಯ 2025: ಸಹೋದ್ಯೋಗಿಗಳ ಜೊತೆ ವಾದ ವಿವಾದ, ಕುಟುಂಬದಲ್ಲಿ ನಡೆಯಬೇಕಿದ್ದ ಶುಭ ಕಾರ್ಯಗಳಿಗೆ ಅಡಚಣೆ

Virgo Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ಕನ್ಯಾ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಕನ್ಯಾ ರಾಶಿ ಭವಿಷ್ಯ 2025
ಕನ್ಯಾ ರಾಶಿ ಭವಿಷ್ಯ 2025 (PC: canva)

ಕನ್ಯಾ ರಾಶಿ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಕನ್ಯಾ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ಕುಟುಂಬದ ಜವಾಬ್ದಾರಿ ಹೊರಲಿದ್ದೀರಿ

ನಿಮ್ಮ ಮನಸ್ಸಿನ ಆಶಯಗಳು ತಡವಾದರೂ ಕೈಗೂಡಲಿವೆ. ಆತ್ಮೀಯರಿಗೆ ಅವಶ್ಯಕ ಅನುಕೂಲತೆಗಳನ್ನು ಕಲ್ಪಿಸುವಿರಿ. ಸಮಯಕ್ಕೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದ ಜವಾಬ್ದಾರಿಗಳು ನಿಮ್ಮ ಪಾಲಾಗುತ್ತವೆ. ತಪ್ಪು ಮಾಡಿದವರನ್ನು ಕ್ಷಮಿಸದೆ ಟೀಕಿಸುವಿರಿ. ಇದರಿಂದ ನಿಮ್ಮ ಬಳಿ ಸ್ನೇಹ ಬೆಳೆಸಲು ಸಹ ಕೆಲವರು ಹಿಂಜರಿಯುತ್ತಾರೆ. ಶಾಂತಿಯಿಂದ ವರ್ತಿಸಿದಷ್ಟು ನಿಮ್ಮ ಮನಸ್ಸು ಹಗುರವಾಗಿರುತ್ತದೆ. ನಿಮ್ಮ ವಿರೋಧಿಗಳನ್ನು ಸಹ ಸ್ನೇಹಿತರಂತೆ ಕಾಣುವಿರಿ. ಸೇವಾ ಮನೋಭಾವನೆ ಇರುವ ಕಾರಣ ಮಾನಸಿಕ ನೆಮ್ಮದಿ ಇರುತ್ತದೆ. ಕುಟುಂಬದ ಒಳಿತಿಗಾಗಿ ಸದಾ ಕಾಲ ಶ್ರಮಿಸುವಿರಿ.

ವಾಸಸ್ಥಳವನ್ನು ವಿಶಾಲವಾದ ಸ್ಥಳಕ್ಕೆ ಬದಲಿಸುವಿರಿ. ಅತಿಯಾದ ಜವಾಬ್ದಾರಿಯಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ನಿಮ್ಮಲ್ಲಿನ ನೇರ ನಿಷ್ಟುರದ ಗುಣದಿಂದಾಗಿ ಬಂಧು ಬಳಗದವರು ದೂರ ಉಳಿಯುತ್ತಾರೆ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ಗೆಲುವುದನ್ನೇ ಅಭ್ಯಾಸ ಮಾಡಿಕೊಂಡ ನೀವು ಇತರರಿಗೆ ಮಾದರಿಯಾಗುವಿರಿ. ಕುಟುಂಬದ ಹಿರಿಯರನ್ನು ಆಗೌರವದಿಂದ ಕಾಣುವಿರಿ. ತಪ್ಪನ್ನು ಒಪ್ಪಿ ಕ್ಷಮೆ ಕೇಳಿದರೂ ಉಪಯೋಗವಿಲ್ಲದಂತೆ ಆಗಲಿದೆ. ಕ್ರಮೇಣವಾಗಿ ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಂಡು ಎಲ್ಲರೊಡನೆ ಸ್ನೇಹದಿಂದ ವರ್ತಿಸುವಿರಿ. ಸಮಾಜದಲ್ಲಿ ಗೌರವ ಗಳಿಸುವಿರಿ. ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ನಾಯಕತ್ವದ ಗುಣವು ಬೆಳೆಯಲಿದೆ. ದೊರೆಯುವ ಅವಕಾಶವನ್ನು ಬಳಸಿಕೊಂಡು ಹೊಸ ವಿಚಾರಗಳನ್ನು ಕಲಿಯುವ ಮೂಲಕ ಎಲ್ಲರ ಗಮನ ಸೆಳೆಯಬಹುದು. ಆದರೆ ಮನದಲ್ಲಿ ಅನಾವಶ್ಯಕ ಭಯ ಮನೆ ಮಾಡಿರುತ್ತದೆ. ಕುಟುಂಬದಲ್ಲಿ ನಡೆಯಬೇಕಿದ್ದ ಮಂಗಳ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗುತ್ತವೆ.

ಉದ್ಯೋಗದಲ್ಲಿ ದೊರೆಯುವ ಅವಕಾಶಗಳು ದೂರಾಗುತ್ತವೆ

ಮನಸಿಟ್ಟು ಅಭ್ಯಾಸ ಮಾಡುವ ಕಾರಣ ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುವಿರಿ. ಅತಿಯಾದ ಆಸೆ ಒಳ್ಳೆಯದಲ್ಲ. ನಿರಾಸೆಯನ್ನು ಭರಿಸುವ ಶಕ್ತಿ ನಿಮಗೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಕಾಡುತ್ತದೆ. ಮಾಡದ ತಪ್ಪಿಗೆ ದಂಡ ತೆರಬೇಕಾಗುತ್ತದೆ. ಉನ್ನತ ವಿದ್ಯಾಭ್ಯಾಸಕ್ಕೆ ಗುರುಗಳ ಸಹಾಯ ಮತ್ತು ಸಲಹೆ ದೊರೆಯುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ಗೆಲ್ಲಲೇಬೇಕೆಂಬ ಹಟವಿರುತ್ತದೆ. ಆದರೆ ಅನಾರೋಗ್ಯದಿಂದ ತೊಂದರೆ ಉಂಟಾಗಬಹುದು. ಸರಳವಾದ ದೈಹಿಕ ವ್ಯಾಯಾಮ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಉತ್ತಮಪಡಿಸುತ್ತದೆ. ಗೃಹಿಣಿಯರಿಗೆ ಕುಟುಂಬದ ಹೆಚ್ಚಿನ ಜವಾಬ್ದಾರಿಯು ಇರುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯುವ ಕಾರಣ ದೈಹಿಕವಾಗಿ ಬಳಲುವಿರಿ. ಹಣಕಾಸಿನ ವಿಚಾರದಲ್ಲಿ ಕುಟುಂಬದಲ್ಲಿ ಸ್ತ್ರೀಯರ ಮಾತಿಗೆ ಮೊದಲ ಆದ್ಯತೆ ದೊರೆಯುತ್ತದೆ. ಹೆಣ್ಣು ಮಕ್ಕಳಿಗೆ ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ.

ನಿಮ್ಮದು ಚಂಚಲವಾದ ಮನಸ್ಸು. ಇದರಿಂದ ಉದ್ಯೋಗದ ವಿಚಾರದಲ್ಲಿ ದೊರೆಯುವ ಅವಕಾಶಗಳು ದೂರವಾಗುತ್ತವೆ. ಸಹೋದ್ಯೋಗಿಗಳ ಜೊತೆ ಅನಾವಶ್ಯಕವಾದಂತಹ ವಾದ ವಿವಾದಗಳು ಎದುರಾಗುತ್ತವೆ. ಮನಸ್ಸಿಲ್ಲದೆ ಹೋದರು ಒತ್ತಡಕ್ಕೆ ಮಣಿದು ಉದ್ಯೋಗ ಬದಲಿಸುವಿರಿ. ಅನಾವಶ್ಯಕವಾದ ಖರ್ಚು ವೆಚ್ಚಗಳಿರುತ್ತವೆ. ನಿಮ್ಮ ಮನಸ್ಸಿಗೆ ಬೇಸರವೆನಿಸುವ ಘಟನೆಗಳು ನಡೆಯಲಿವೆ. ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಕಾರ್ಯವಿಧಾನವನ್ನು ಬದಲಿಸುವಿರಿ. ಚರ್ಮಕ್ಕೆ ಸಂಬಂಧಪಟ್ಟ ದೋಷವು ನಿಮಗಿರುತ್ತದೆ. ದಂಪತಿಗಳ ನಡುವೆ ಅನಾವಶ್ಯಕವಾದ ಭಿನ್ನಾಭಿಪ್ರಾಯ ಇರಲಿವೆ. ವಿರೋಧಿಗಳ ಜೊತೆ ಇದ್ದ ಮನಸ್ತಾಪ ದೂರವಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಸಂಗಾತಿಯ ಸಹಾಯದಿಂದ ಜೀವನದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಕುಟುಂಬದ ಹಿರಿಯರಿಗೆ ವಂಶದ ಆಸ್ತಿ ವಿಚಾರದಲ್ಲಿ ರಕ್ತ ಸಂಬಂಧಿಕರ ಜೊತೆಯಲ್ಲಿ ವಿವಾದ ಉಂಟಾಗುತ್ತದೆ. ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಲ್ಲಿ ಮೊದಲ ಸ್ಥಾನ ಗಳಿಸುತ್ತಾರೆ. ವಯಸ್ಸಿನ ಅಂತರವಿಲ್ಲದೆ ದುಡಿಯಲೇಬೇಕಾದ ಅವಶ್ಯಕತೆ ವಯೋವೃದ್ದರಿಗೆ ಇರುತ್ತದೆ. ಕುಟುಂಬದ ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಪೂರೈಸಿಕೊಳ್ಳಲು ವ್ಯಾಪಾರವನ್ನು ಆರಂಭಿಸುವಿರಿ. ಸಾಲದ ವ್ಯವಹಾರ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಚ್ಚರಿಕೆ ಇರಲಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.