ಕನ್ಯಾ ರಾಶಿ ವಾರ ಭವಿಷ್ಯ: ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯ ಮೂಡಬಹುದು, ಕೆಲಸದಲ್ಲಿ ಸವಾಲುಗಳು ಎದುರಾದರೂ ಯಶಸ್ಸು ಖಚಿತ
Virgo Weekly Horoscope July 28- August 3rd, 2024: ರಾಶಿಚಕ್ರದ ಆರನೇ ಚಿಹ್ನೆ ಕನ್ಯಾ. ಜನನದ ಸಮಯದಲ್ಲಿ ಚಂದ್ರನು ಕನ್ಯಾರಾಶಿಯಲ್ಲಿ ಸಾಗುತ್ತಿರುವ ಜನರು ಕನ್ಯಾರಾಶಿಯವರು. ಜುಲೈ 28 ರಿಂದ ಆಗಸ್ಟ್ 3 ರವರೆಗೆ ಕನ್ಯಾ ರಾಶಿಯವರ ಭವಿಷ್ಯ ಪ್ರಕಾರ, ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಆಹಾರ, ಅಭ್ಯಾಸಗಳ ಮೇಲೆ ಹೆಚ್ಚಿನ ಗಮನವಿರಲಿ.

ಕನ್ಯಾ ರಾಶಿ ವಾರ ( ಜುಲೈ 28-ಆಗಸ್ಟ್ 3) ಭವಿಷ್ಯದಲ್ಲಿ ಈ ವಾರ ನಿಮ್ಮ ಪ್ರೀತಿ ಬದುಕಿನಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ನೀವು ಆದಷ್ಟು ಕೂಲ್ ಆಗಿರಿ. ನಿರೀಕ್ಷೆಗಳನ್ನು ಪೂರೈಸಲು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಿರಿ. ಹಣ, ಆಸ್ತಿ ವ್ಯವಹಾರದಲ್ಲಿ ಜಾಣ್ಮೆಯಿಂದ ವ್ಯವಹರಿಸಿ. ಈ ವಾರ ನಿಮ್ಮ ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ.
ಕನ್ಯಾ ರಾಶಿಯವರ ವಾರದ ಪ್ರೇಮ ಜಾತಕ (Virgo Weekly Love Horoscope)
ಪ್ರಣಯ ಜೀವನದ ಉತ್ತಮ ಕ್ಷಣಗಳನ್ನು ಕಳೆಯಲಿದ್ದೀರಿ. ಪ್ರಿಯಕರನ ಬೇಡಿಕೆಯಂತೆ ಸಂಬಂಧಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಿ. ನೀವು ಭಾವನೆಗಳನ್ನು ಹಂಚಿಕೊಳ್ಳುವಾಗ, ಪ್ರೇಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದನ್ನು ಪರಿಗಣಿಸಿ. ನಿಮ್ಮ ಪ್ರೀತಿ ವಿಚಾರವನ್ನು ಪೋಷಕರೊಂದಿಗೆ ಮಾತನಾಡಿ. ದೂರದ ಪ್ರೇಮ ವ್ಯವಹಾರಗಳು ಸಣ್ಣ ಸಮಸ್ಯೆಗಳನ್ನು ಕಾಣಬಹುದು ಮತ್ತು ಮಾಜಿ ಪ್ರೇಮಿಯೊಂದಿಗೆ ಸಂಪರ್ಕಿಸುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು. ಒಂಟಿಯಾಗುವ ಕನ್ಯಾ ರಾಶಿಯವರಿಗೆ ಹೊಸ ವ್ಯಕ್ತಿಯ ಪರಿಚಯವಾಗಬಹುದು. ಆದರೆ ಪ್ರಪೋಸ್ ಮಾಡಲು ಒಂದಿಷ್ಟು ದಿನ ಕಾಯಿರಿ. ಅಹಂಭಾವ, ಜಗಳಗಳಿಂದ ದೂರವಿರಿ.
ಕನ್ಯಾ ರಾಶಿಯವರ ವಾರದ ವೃತ್ತಿ ಜಾತಕ (Virgo Weekly Professional Horoscope)
ಈ ವಾರ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಖಚಿತ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಸವಾಲುಗಳ ಹೊರತಾಗಿಯೂ, ಸಕಾರಾತ್ಮಕ ಫಲಿತಾಂಶಗಳನ್ನು ಎದುರು ನೋಡಬಹುದು. ಡೆಡ್‌ಲೈನ್ ಇರುವ ಕೆಲಸಗಳನ್ನು ತೆಗೆದುಕೊಳ್ಳಿ. ಇದರಿಂದ ನೀವು ವೃತ್ತಿಜೀವನದ ಸಾಕಷ್ಟು ಕೆಲಸ-ಕಾರ್ಯಗಳಲ್ಲಿ ಸಾಧನೆ ಮಾಡಬಹುದು. ಕೆಲಸ ಬದಲಿಸಲು ಯೋಚನೆ ಮಾಡುತ್ತಿರುವವರು ತಮ್ಮ ಪ್ರೊಫೈಲ್ ಅನ್ನು ಜಾಬ್ ಸೈಟ್‌ಗಳಲ್ಲಿ ಅಪ್‌ಡೇಟ್ ಮಾಡಿ. ನಿಯಮಿತ ವೇಳಾಪಟ್ಟಿಯು ಕೆಲಸದ ವಿಚಾರದಲ್ಲಿ ಶಿಸ್ತು, ಸೃಜನಶೀಲತೆ ಕಾಪಾಡಿಕೊಳ್ಳಲು ನೆರವಾಗುತ್ತದೆ. ವ್ಯಾಪಾರಸ್ಥರು ಈ ವಾರ ಆತ್ಮವಿಶ್ವಾಸದಿಂದ ಹೊಸ ಉದ್ಯಮಗಳನ್ನು ಪ್ರಾರಂಭಿಸಬಹುದು.
ಕನ್ಯಾ ರಾಶಿಯವರ ವಾರದ ಆರ್ಥಿಕ ಜಾತಕ (Virgo Weekly Money Horoscope)
ಹಣ ಉಳಿತಾಯದ ಮೇಲೆ ಹೆಚ್ಚಿನ ನಿಗಾ ವಹಿಸಿ. ಕನ್ಯಾ ರಾಶಿಯ ಕೆಲವರು ಹೊರಗಿನ ಮೂಲಗಳಿಂದ ಹಣ ಪಡೆಯಲಿದ್ದೀರಿ. ಹಣಕಾಸಿನ ಯೋಜನೆ ನಿರೀಕ್ಷೆಯಂತೆ ನಡೆಯುತ್ತಿಲ್ಲ ಎನ್ನಿಸಿದರೆ ಹಣಕಾಸು ತಜ್ಞರನ್ನು ಭೇಟಿ ಮಾಡಿ. ದಾನ ಮಾಡುವ ಗುಣ ರೂಢಿಸಿಕೊಳ್ಳಿ. ಆನ್‌ಲೈನ್ ವ್ಯವಹಾರ ನಡೆಸುತ್ತಿದ್ದರೆ ಅದರಿಂದ ನಿಮಗೆ ಒಳಿತಾಗಲಿದೆ. ಕೆಲವು ವಹಿವಾಟಿನಲ್ಲಿ ಹಣಕಾಸಿನ ತೊಂದರೆ ಎದುರಾಗಬಹುದು.
ಕನ್ಯಾ ರಾಶಿಯವರ ವಾರದ ಆರೋಗ್ಯ ಜಾತಕ (Virgo Weekly Health Horoscope)
ಈ ವಾರ ಆರೋಗ್ಯದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೂ ನಿಮ್ಮ ಆಹಾರ ಮತ್ತು ಅಭ್ಯಾಸಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಕೆಲವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮಸಾಲೆ ಮತ್ತು ಎಣ್ಣೆಯುಕ್ತ ಆಹಾರ ಸೇವನೆ ತಪ್ಪಿಸುವುದು ಉತ್ತಮ. ಸಣ್ಣ ಅಪಘಾತ ಸಂಭವಿಸಬಹುದು. ಶ್ವಾಸಕೋಶ ಅಥವಾ ಎದೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವ ಕಾರಣ ಎಚ್ಚರ ವಹಿಸುವುದು ಉತ್ತಮ. ಹಿರಿಯರಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.
ಕನ್ಯಾ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಕನ್ಯಾ ರಾಶಿಯ ಅಧಿಪತಿ: ಬುಧ, ಕನ್ಯಾ ರಾಶಿಯವರಿಗೆ ಶುಭ ದಿನಾಂಕಗಳು: 2, 3, 5, 6, 7, 14, 24, 31, 19. ಕನ್ಯಾ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಕನ್ಯಾ ರಾಶಿಯವರಿಗೆ ಶುಭ ವರ್ಣ: ಹಳದಿ, ಬಿಳಿ ಮತ್ತು ಹಸಿರು. ಕನ್ಯಾ ರಾಶಿಯವರಿಗೆ ಅಶುಭ ವರ್ಣ: ನೀಲಿ ಮತ್ತು ಕೆಂಪು. ಕನ್ಯಾ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ. ಕನ್ಯಾ ರಾಶಿಯವರಿಗೆ ಶುಭ ತಿಂಗಳು: ಜೂನ್ 15ರಿಂದ ಆಗಸ್ಟ್ 14 ಮತ್ತು ಡಿಸೆಂಬರ್ 15ರಿಂದ ಜನವರಿ 14. ಕನ್ಯಾ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ. ಕನ್ಯಾ ರಾಶಿಯವರಿಗೆ ಶುಭ ರಾಶಿ: ಮಕರ, ವೃಷಭ ಮತ್ತು ಮಿಥುನ. ಕನ್ಯಾ ರಾಶಿಯವರಿಗೆ ಅಶುಭ ರಾಶಿ: ವೃಶ್ಚಿಕ, ಮೇಷ ಮತ್ತು ಸಿಂಹ.
ಕನ್ಯಾ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1)ವಿಷ್ಣು ಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವ ಕೇಳುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ಮಾನಸಿಕ ಒತ್ತಡವೂ ಕಡಿಮೆ ಆಗುತ್ತದೆ.
2)ಈ ದಾನಗಳಿಂದ ಶುಭ ಫಲ: ಬಿಳಿ ಬಟ್ಟೆ ಮತ್ತು ಗೋಧಿಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3)ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ ಮತ್ತು ತೊಗರಿ ಬೇಳೆ ನೀಡುವುದರಿಂದ ಎಲ್ಲ ವಿಧದಲ್ಲಿಯೂ ಪ್ರಗತಿ ದೊರೆಯುತ್ತದೆ. ಶ್ರೀ ದುರ್ಗಾಮಾತೆಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ:ಹಸಿರು, ನೀಲಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.
