ರಾಮಾಯಣ: ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಶಸ್ತ್ರಾಸ್ತ್ರಗಳ ಬಳುವಳಿ; ತಾನು ಕಲಿತ ವಿದ್ಯೆಯನ್ನು ಲಕ್ಷ್ಮಣನಿಗೆ ಧಾರೆ ಎರೆದ ರಾಮ-vishwamitra preached weapon mantras rama imparted the knowledge he had learned to lakshmana smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಶಸ್ತ್ರಾಸ್ತ್ರಗಳ ಬಳುವಳಿ; ತಾನು ಕಲಿತ ವಿದ್ಯೆಯನ್ನು ಲಕ್ಷ್ಮಣನಿಗೆ ಧಾರೆ ಎರೆದ ರಾಮ

ರಾಮಾಯಣ: ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಶಸ್ತ್ರಾಸ್ತ್ರಗಳ ಬಳುವಳಿ; ತಾನು ಕಲಿತ ವಿದ್ಯೆಯನ್ನು ಲಕ್ಷ್ಮಣನಿಗೆ ಧಾರೆ ಎರೆದ ರಾಮ

ದೇವಾನುದೇವತೆಗಳು ಸಹ ನಿಮ್ಮನ್ನು ಗೆಲ್ಲಲಾರರು. ದಾನವ ಕುಲದವರು ನಿಮ್ಮ ಎದುರು ನಿಲ್ಲಲೇ ಅಂಜುವಂತಾಗುತ್ತದೆ. ಯಕ್ಷರು ಗಂಧರ್ವರು ಯಾರೇ ಆಗಲಿ ನಿಮ್ಮ ಶತ್ರುಗಳಾದಲ್ಲಿ ಅವರಿಗೆ ಅಪಜಯ ಖಂಡಿತ. ಈ ಅಸ್ತ್ರಗಳಿಂದ ಯುದ್ಧದಲ್ಲಿ ಅವರನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದು. (ಬರಹ: ಎಚ್‌.ಸತೀಶ್, ಜ್ಯೋತಿಷಿ)

 ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಶಸ್ತ್ರಾಸ್ತ್ರಗಳ ಬಳುವಳಿ
ಶ್ರೀ ರಾಮನಿಗೆ ವಿಶ್ವಾಮಿತ್ರರಿಂದ ಶಸ್ತ್ರಾಸ್ತ್ರಗಳ ಬಳುವಳಿ (Image: Balvikas -web)

ಸೂರ್ಯನ ಆಗಮನಕ್ಕಿಂತ ಮುಂಚೆಯೇ ವಿಶ್ವಾಮಿತ್ರರು ಎಚ್ಚರಗೊಳ್ಳುತ್ತಾರೆ. ತಾಟಕಿಯ ಸಂಹಾರದಿಂದ ಅವರ ಮುಖದಲ್ಲಿ ಸಂತೋಷ ಎದ್ದು ಕಾಣುತ್ತದೆ. ರಾಮ ಲಕ್ಷ್ಮಣರನ್ನುಕುರಿತು ನಿಮ್ಮಿಂದ ತಾಟಕಿಯ ಸಂಹಾರವಾಯಿತು. ಇದರಿಂದ ಅನೇಕರ ಕಷ್ಟನಷ್ಟಗಳು ದೂರವಾಯಿತು. ಇದರಿಂದಾಗಿ ನಿಮಗೆ ನನ್ನಲ್ಲಿರುವ ಅಸ್ತ್ರಗಳ ಬಗ್ಗೆ ಭೋದಿಸುತ್ತೇನೆ ಎಂದು ಹೇಳುತ್ತಾರೆ. ಅವುಗಳಿಂದ ಅನೇಕ ರೀತಿಯಲ್ಲಿ ನಿಮಗೆ ಉಪಯೋಗವಾಗಲಿದೆ.

ಮೋದಕಿ ಮತ್ತು ಶಿಖರಿ ಎಂಬ ಎರಡು ಗದೆಗಳನ್ನು ನೀಡುತ್ತಾರೆ

ದೇವಾನುದೇವತೆಗಳು ಸಹ ನಿಮ್ಮನ್ನು ಗೆಲ್ಲಲಾರರು. ದಾನವ ಕುಲದವರು ನಿಮ್ಮ ಎದುರು ನಿಲ್ಲಲೇ ಅಂಜುವಂತಾಗುತ್ತದೆ. ಯಕ್ಷರು ಗಂಧರ್ವರು ಯಾರೇ ಆಗಲಿ ನಿಮ್ಮ ಶತ್ರುಗಳಾದಲ್ಲಿ ಅವರಿಗೆ ಅಪಜಯ ಖಂಡಿತ. ಈ ಅಸ್ತ್ರಗಳಿಂದ ಯುದ್ಧದಲ್ಲಿ ಅವರನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದು. ನಿಮಗೆ ಅಸಾಮಾನ್ಯ ಎನಿಸುವ ಸಾಮರ್ಥ್ಯವು ದೊರೆಯುತ್ತದೆ. ವಿಷ್ಣು ಚಕ್ರ, ಇಂದ್ರ ಚಕ್ರ, ಇಂದ್ರನ ವಜ್ರಾಯುಧ, ಪರಮೇಶ್ವರನ ಶೂಲಾಯುದ ಮುಂತಾದುವುಗಳನ್ನು ನಿಮಗೆ ನೀಡುತ್ತೇನೆ. ಇವೆಲ್ಲಕ್ಕಿಂತ ಮೇಲಾಗಿ ಬ್ರಹ್ಮಾಸ್ತ್ರವನ್ನು ದಯಪಾಲಿಸುತ್ತೇನೆ. ಉಡುಗೊರೆಯಾಗಿ ನಿಮಗೆ ಮೋದಕಿ ಮತ್ತು ಶಿಖರಿ ಎಂಬ ಎರಡು ಗದೆಗಳನ್ನು ನೀಡುತ್ತೇನೆ. ಇದರಿಂದ ನಿಮ್ಮ ಯುದ್ದದ ರೀತಿಯೇ ಬದಲಾಗುತ್ತದೆ. ಇವುಗಳಲ್ಲಿ ರಾಕ್ಷಸ ಕುಲದ ಬಳಿ ಇರುವ ಎಲ್ಲಾ ಶಸ್ತ್ರಗಳು ಸೇರಿರುತ್ತವೆ. ಇದರಿಂದಾಗಿ ರಾಕ್ಷಸರು ಯುದ್ಧ ಮಾಡುವ ರೀತಿ ನಿಮಗೆ ಅರಿವಾಗುತ್ತದೆ.

ಅಸ್ತ್ರಗಳ ಮಂತ್ರ

ಮುನಿಶ್ರೇಷ್ಟರಾದ ವಿಶ್ವಾಮಿತ್ರರು ಶುಚಿರ್ಭೂತರಾಗಿ ಪೂರ್ವಕ್ಕೆ ಮುಖ ಮಾಡಿ ಸುಖಾಸನದಲ್ಲಿ ಕುಳಿತುಕೊಳ್ಳುತ್ತಾರೆ. ರಾಮನಿಗೆ ಎಲ್ಲಾಅಸ್ತ್ರಗಳ ಮಂತ್ರಗಳನ್ನು ಉಪಯೋಗಿಸುತ್ತಾರೆ. ಮೂರು ಲೋಕಗಳಲ್ಲಿ ಇನ್ನಾರ ಬಳಿಯೂ ಇಷ್ಟೊಂದು ಅಸ್ತ್ರಗಳು ಇರುವುದಿಲ್ಲ. ಬೇರೆ ಬೇರೆ ರೀತಿಯ ಅಸ್ರಗಳ ಮಂತ್ರಗಳನ್ನು ಪಠಿಸುತ್ತಾ ಇರುವಾಗ, ಆಯಾ ದೇವತೆಗಳು ಅಲ್ಲಿ ಕುಳಿತುಕೊಳ್ಳುತ್ತಾರೆ. ಎಲ್ಲಾ ದೇವತೆಗಳು ಕೈಯನ್ನು ಮುಗಿದು ಶ್ರೀ ರಾಮನನ್ನು ಕುರಿತು ಇಂದಿನಿಂದ ನಾವೆಲ್ಲರೂ ನಿನ್ನ ಅಧೀನದಲ್ಲಿ ಇರುತ್ತೇವೆ.

ನೀನು ಯಾವುದೇ ಸಂದರ್ಭದಲ್ಲಿ ನಾವು ಮಾಡಬೇಕಾದ ಕೆಲಸವನ್ನು ಹೇಳಿದರೆ ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ ಎಂದು ತಿಳಿಸುತ್ತಾರೆ. ಆಗ ಶ್ರೀರಾಮನು ದೇವತೆಗಳನ್ನು ಕುರಿತು ಇನ್ನು ಮುಂದೆ ನೀವು ನನ್ನ ಮನಸ್ಸಿನಲ್ಲಿ ಇರುತ್ತೀರಿ. ನಿಮಗೆ ನೀಡಬೇಕಾದ ಪೂರ್ಣ ಗೌರವವನ್ನು ಯಾವುದೇ ಚ್ಯುತಿ ಬರದಂತೆ ನೀಡುತ್ತೇನೆ. ಈ ಎಲ್ಲಾ ಪ್ರಸಂಗಗಳಿಂದ ಶ್ರೀರಾಮ ಲಕ್ಷ್ಮಣರಿಗೆ ಸಂತೋಷವಾಗುತ್ತದೆ. ಹೇಳಲು ಆಗದಷ್ಟು ಆನಂದ ಉಂಟಾಗುತ್ತದೆ. ಕೊನೆಗೆ ವಿಶ್ವಾಮಿತ್ರ ಅವರ ಚರಣಕಮಲಗಳಿಗೆ ದೀರ್ಘದಂಡ ನಮಸ್ಕಾರ ಮಾಡಿ ಶ್ರೀರಾಮನು ಮುಂದಿನ ಪ್ರಯಾಣಕ್ಕೆ ಅನುವಾಗುತ್ತಾನೆ. ಯಾವುದೆ ತೊಂದರೆ ಇಲ್ಲದೆ ಹೊರ ಬರುತ್ತಿದ್ದಂತೆ ಅಲ್ಲಿನ ಪ್ರಜೆಗಳು ಶ್ರೀರಾಮನನ್ನು ಪ್ರಶಂಸಿಸುತ್ತಾರೆ. ವಿನಮ್ರ ಮನಸ್ಸಿನಿಂದ ವಿಶ್ವಾಮಿತ್ರರು ಶ್ರೀ ರಾಮ ಲಕ್ಷ್ಮಣರ ಜೊತೆಯಲ್ಲಿ ಅಲ್ಲಿಂದ ಮುಂದೆ ನಡೆಯುತ್ತಾರೆ.

ದಕ್ಷಕನ್ಯೆಯಾದ ಸುಪ್ರಭೆಯ ಮಕ್ಕಳ ಶಕ್ತಿ

ಮಾರ್ಗ ಮದ್ಯದಲ್ಲಿ ಶ್ರೀರಾಮನು ವಿಶ್ವಾಮಿತ್ರರನ್ನು ಕುರಿತು ನಿಮ್ಮ ಈ ಅನುಗ್ರಹದಿಂದ ನನಗೆ ಈ ದಿವ್ಯಾಸ್ತ್ರಗಳು ದೊರೆತಿವೆ. ಇದರಿಂದಾಗಿ ನಾನು ದೇವದಾನವರಿಗೆ ಸಮನಾಗಿ ನಿಲ್ಲಬಲ್ಲೆ. ಆದರೂ ನನ್ನ ಜ್ಞಾನದ ತೃಷೆ ಕಡಿಮೆಯಾಗಿಲ್ಲ. ನಿಮ್ಮಿಂದ ಇನ್ನಷ್ಟು ವಿಚಾರಗಳನ್ನು ಮತ್ತು ಶಸ್ತ್ರಗಳ ಬಳಕೆಯನ್ನು ತಿಳಿಯುವ ಆಸೆ ನನಗಿದೆ ಎಂದು ಹೇಳುತ್ತಾನೆ. ಆಗ ವಿಶ್ವಾಮಿತ್ರರು ದಕ್ಷಕನ್ಯೆಯಾದ ಸುಪ್ರಭೆಯ ಐವತ್ತು ಮಂದಿ ಮಕ್ಕಳನ್ನು ರಾಮನಿಗೆ ಶಸ್ತ್ರದ ರೂಪದಲ್ಲಿ ನೀಡುತ್ತಾರೆ.

ತಾನು ಕಲಿತ ವಿದ್ಯೆಯನ್ನು ತಮ್ಮನಿಗೆ ಧಾರೆ ಎರೆದ ಲಕ್ಷ್ಮಣ

ಮಂತ್ರಗಳ ಉಪದೇಶದ ವೇಳೆ ಆ ಶಸ್ತ್ರಗಳಿಗೆ ಸಂಬಂಧಿಸಿದ ದೇವತೆಗಳು ಶ್ರೀ ರಾಮನ ಬಳಿ ಉಪಸ್ಥಿತರಾಗುತ್ತಾರೆ. ಆದರೆ ಶ್ರೀ ರಾಮನು ಎಲ್ಲರನ್ನೂ ಅವರ ಇಚ್ಛೆ ಇರುವ ಸ್ಥಳಕ್ಕೆ ತೆರಳಲು ತಿಳಿಸುತ್ತಾನೆ. ಕೇವಲ ಶತ್ರು ಸಂಹಾರದ ವೇಳೆ ನನಗೆ ನೀವು ಸಹಾಯ ಮಾಡಿದಂದು ವಿನಂತಿಸಿಕೊಳ್ಳುತ್ತಾನೆ. ಈ ಮಾತಿಗೆ ಒಪ್ಪಿದ ಆ ದೇವತೆಗಳು ರಾಮನಿಗೆ ವಂದಿಸಿ ತಮ್ಮ ತಮ್ಮ ಸ್ಥಳಗಳಿಗೆ ಮರಳುತ್ತವೆ. ವಿಶ್ವಾಮಿತ್ರರ ಅಪ್ಪಣೆಯಂತೆ ಶ್ರೀ ರಾಮನು ತಾನುಕಲಿತ ಎಲ್ಲಾ ವಿದ್ಯೆಯನ್ನು ತನ್ನ ಸೋದರನಾದ ಲಕ್ಷ್ಮಣನಿಗೆ ಧಾರೆ ಎರೆಯುತ್ತಾನೆ. ಈ ರೀತಿ ಸಾಗುತ್ತಿರುವಾಗ ಪರ್ವತವೊಂದು ಎದುರಾಗುತ್ತದೆ. ಕಾಣಲು ಮನಮನೋಹರವಾಗಿರುತ್ತದೆ. ಇದರಿಂದ ಕುತೂಹಲಕೊಂಡ ಶ್ರೀರಾಮನುಈ ಪರಿಸರವು ನನಗೆ ಹೊಸ ಅನುಭವವನ್ನು ನೀಡುತ್ತಿದೆ. ಈ ಪ್ರದೇಶವು ಯಾರಿಗೆ ಸೇರಿದೆ ಎಂಬ ವಿಚಾರವನ್ನೆಲ್ಲ ಪೂರ್ಣವಾಗಿ ತಿಳಿಸಿ ಎಂದು ವಿನಂತಿಸಿಕೊಳ್ಳುತ್ತಾನೆ.

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.