ಕನ್ನಡ ಸುದ್ದಿ  /  Astrology  /  Visit Sita Ki Rasoi In Uttar Pradesh Ayodhya Which Mata Sita Devi Was Cooking For Her Family Rsm

Sita Ki Rasoi: ಉತ್ತರ ಪ್ರದೇಶದಲ್ಲಿದೆ ಸೀತಾ ಮಾತೆ ಅಡುಗೆ ಮಾಡುತ್ತಿದ್ದ ಕೋಣೆ ಸೀತಾ ಕಿ ರಸೋಯಿ: ಅಯೋಧ್ಯೆಗೆ ಹೋದರೆ ಇಲ್ಲಿಗೂ ಹೋಗಿ ಬನ್ನಿ

Sita Ki Rasoi: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೀತಾ ಮಾತೆ ಅಡುಗೆ ಮಾಡುತ್ತಿದ್ದ ಸೀತಾ ಕಿ ರಸೋಯಿ ಇಂದಿಗೂ ಇದೆ. ಅಯೋಧ್ಯೆಗೆ ಬರುವವರು ಈ ಸ್ಥಳಕ್ಕೆ ತಪ್ಪದೆ ಬರುತ್ತಾರೆ. ಸೀತೆಯು ಈ ಸ್ಥಳದಲ್ಲಿ ತನ್ನ ಕುಟುಂಬದವರಿಗೆ ಅಡುಗೆ ಮಾಡುತ್ತಿದ್ದಳೆಂದು ನಂಬಲಾಗಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸೀತಾ ಕಿ ರಸೋಯಿ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸೀತಾ ಕಿ ರಸೋಯಿ (PC: @Vikash_Hope)

ಉತ್ತರ ಪ್ರದೇಶ: ರಾಮಾಯಣವು ಹಿಂದೂಗಳಿಗೆ ಅತ್ಯಂತ ಪವಿತ್ರ ಗ್ರಂಥ. ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ಹಿಂದೂಗಳಿಗೆ ಬಹಳ ಮುಖ್ಯ. ಸೀತಾದೇವಿಯು ನಿಜವಾದ ಶ್ರೀ ಮಹಾಲಕ್ಷ್ಮಿ ಎಂದು ನಂಬಲಾಗಿದೆ. ಶ್ರೀ ರಾಮನನ್ನು ಶ್ರೀ ಮಹಾವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಸೀತಾದೇವಿಯು ಶ್ರೀರಾಮನ ಪತ್ನಿ. ಸೀತಾದೇವಿಗೆ ಜಾನಕಿ, ವೈದೇಹಿ, ಮೈಥಿಲಿ ಹೀಗೆ ಹಲವು ಹೆಸರುಗಳಿವೆ.

ಪತಿ ಶ್ರೀರಾಮ ಕಷ್ಟ ಸುಖಗಳಲ್ಲಿ ಭಾಗಿಯಾದ ಸೀತಾಮಾತೆ ಎಲ್ಲಾ ಮಹಿಳೆಯರಿಗೂ ಆದರ್ಶ. ಕಾಡಿಗೆ ಹೋಗಿ ಹುಲ್ಲಿನ ಮೇಲೆ ಮಲಗಿದರೂ ಅದು ನನಗೆ ಮೆತ್ತನೆಯ ಹಾಸಿಗೆಯಂತೆ ಭಾವಿಸಿ ಪತಿಯೊಂದಿಗೆ ವನವಾಸ ಅನುಭವಿಸಿದಳು. ರಾಮನೊಂದಿಗೆ ಸೀತೆ ವನವಾಸಕ್ಕೆ ಹೋದಾಗ ಆಕೆಗೆ ಕೇವಲ 18 ವರ್ಷ ವಯಸ್ಸು ಎಂದು ಕಥೆಗಳಲ್ಲಿ ಉಲ್ಲೇಖವಾಗಿದೆ. ಸೀತಾದೇವಿಗೆ ಸಂಬಂಧಿಸಿದ ಅನೇಕ ಕಥೆಗಳು, ಸೀತಾದೇವಿಗೆ ಸಂಬಂಧಿಸಿದ ಬಹಳಷ್ಟು ವಿಚಾರಗಳು ಇದುವರೆಗೂ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ. ಅದರಲ್ಲಿ ಅಯೋಧ್ಯೆಯ ಸೀತಾ ಕಿ ರಸೋಯ್‌ ಕೂಡಾ ಒಂದು.

ಸೀತಾ ಮಾತೆ ಅಡುಗೆ ಮಾಡುತ್ತಿದ್ದ ಕೋಣೆ

ಸೀತಾ ಕಿ ರಸೋಯಿ ಎಂದರೆ ಸೀತಾ ದೇವಿ ಅಡುಗೆ ಮಾಡಿದ ಕೋಣೆ ಎಂದರ್ಥ. ಕ್ರಮೇಣ ಈ ಸ್ಥಳ ದೇವಸ್ಥಾನವಾಗಿ ಬದಲಾಗಿದೆ. ಇಂದಿಗೂ ಅನೇಕ ಭಕ್ತರು ಈ ದೇವಾಲಯಕ್ಕೆ ಬಂದು ಸೀತಾದೇವಿಯನ್ನು ಪೂಜಿಸುತ್ತಾರೆ. ಒಂದು ಕಾಲದಲ್ಲಿ ಅಡುಗೆ ಮನೆಯಾಗಿದ್ದ ಈ ಸ್ಥಳವು ಸೀತಾದೇವಿಯ ಗುಣಗಳಿಂದಾಗಿ ಇಂದು ದೊಡ್ಡ ದೇವಾಲಯವಾಗಿ ಮಾರ್ಪಾಡಾಗಿದೆ. ದೇವಾಲಯವು ಕೆಲವು ಅವಶೇಷಗಳು ಮತ್ತು ಕಲಾಕೃತಿಗಳನ್ನು ಸಹ ಹೊಂದಿದೆ. ಭಕ್ತರು ಇಲ್ಲಿ ಬಂದು ಹರಕೆ ಅವರಿಗೆ ಹರಕೆ ತೀರಿಸುತ್ತಾರೆ.

ಸೀತಾದೇವಿಯನ್ನು ಅನ್ನಪೂರ್ಣ ದೇವಿ ಎಂದೂ ಕರೆಯುತ್ತಾರೆ. ಆದ್ದರಿಂದ ಸೀತಾ ಕಿ ರಸೋಯಿಗೆ ಬರುವ ಭಕ್ತರು ಸೀತೆಗೆ ಆಹಾರ ಮತ್ತು ಪೋಷಣೆ ನೀಡುವಂತೆ ಪ್ರಾರ್ಥಿಸುತ್ತಾರೆ. ಇಂದಿಗೂ ಈ ದೇವಸ್ಥಾನದಲ್ಲಿ ಉಚಿತ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ. ಅನೇಕ ಸ್ಥಳೀಯ ದಂತಕಥೆಗಳು ಮತ್ತು ನಂಬಿಕೆಗಳ ಪ್ರಕಾರ, ಸ್ವತಃ ಸೀತಾ ಮಾತೆ ಈ ಅಡುಗೆ ಮನೆಯಲ್ಲಿ ಎಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಿದ್ದಳು. ಅಲ್ಲದೆ ಶ್ರೀರಾಮನ ಕುಟುಂಬದವರು ಈ ಸ್ಥಳದಲ್ಲೇ ಊಟವನ್ನೂ ಮಾಡಿದ್ದರಿಂದ ಇದು ಆಧ್ಯಾತ್ಮಿಕ ಸ್ಥಳವಾಗಿದೆ ಹೆಸರಾಗಿದೆ ಎಂದು ಹೇಳಲಾಗುತ್ತದೆ.

ಅಯೋಧ್ಯೆಯಲ್ಲಿರುವ ಸೀತಾ ಕಿ ರಸೋಯಿ

ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರು ತಪ್ಪದೆ, ಈ ಸೀತಾ ಕಿ ರಸೋಯಿ ಪ್ರದೇಶಕ್ಕೂ ಭೇಟಿ ನೀಡುತ್ತಾರೆ. ಈ ಅಡುಗೆ ಮನೆಯಲ್ಲಿ ಸೀತಾ ಮಾತೆ ಎಷ್ಟೋ ಮಂದಿಗೆ ಅಡುಗೆ ಮಾಡಿ ಅನ್ನಪೂರ್ಣೆ ಎನಿಸಿಕೊಂಡಳು ಎಂಬ ಕಥೆ ಪ್ರಚಲಿತದಲ್ಲಿದೆ. ಈ ಅಡುಗೆ ಮನೆಯ ಪಕ್ಕದಲ್ಲಿಯೇ ಜಾನಕಿ ಕುಂಡವಿದೆ. ಅಡುಗೆ ಮಾಡುವ ಮೊದಲು ಸೀತಾ ದೇವಿಯು ಈ ಕೊಳದಲ್ಲಿ ಸ್ನಾನ ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.