ವೃಷಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ಇವರಿಗೆ ಆರೋಗ್ಯ, ವೃತ್ತಿ, ಪ್ರೀತಿ, ಸಂಪತ್ತು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ಇವರಿಗೆ ಆರೋಗ್ಯ, ವೃತ್ತಿ, ಪ್ರೀತಿ, ಸಂಪತ್ತು

ವೃಷಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ಇವರಿಗೆ ಆರೋಗ್ಯ, ವೃತ್ತಿ, ಪ್ರೀತಿ, ಸಂಪತ್ತು

ವೃಷಭ ರಾಶಿಯ ಯುಗಾದಿ ವರ್ಷ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ವೃಷಭ ರಾಶಿಯವರಿಗೆ ಈ ವರ್ಷ ಅನುಕೂಲಕರ ಫಲಿತಾಂಶಗಳಿವೆ. ಇದು ನಿಮಗೆ ನೆಮ್ಮದಿ ಸಿಗುವ ಮತ್ತು ನಿಮ್ಮ ನೆಮ್ಮದಿ ಹೆಚ್ಚಾಗುವ ವರ್ಷ. ಯಾವ ದೇವರ ಆರಾಧನೆ ಒಳ್ಳೆಯದು ಎಂಬ ಮಾಹಿತಿಯನ್ನೂ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ ಈ ಬರಹದಲ್ಲಿ ನೀಡಿದ್ದಾರೆ.

ವೃಷಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ
ವೃಷಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಯುಗಾದಿ ವರ್ಷ ಭವಿಷ್ಯ 2024: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ವೃಷಭ ರಾಶಿಯವರಿಗೆ ಸಾಧಾರಣದಿಂದ ಅನುಕೂಲಕರ ಅಂಶಗಳಿವೆ. ಇದನ್ನು ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ ಅವರು ಚಿಲಕಮರ್ತಿ ಪಂಚಾಂಗದ ಲೆಕ್ಕಾಚಾರ ಪ್ರಕಾರ ಸರಳವಾಗಿ ವಿವರಿಸಿದ್ದಾರೆ.

ಜನ್ಮರಾಶಿಯಲ್ಲಿ ಗುರು ಸಂಕ್ರಮಣ, ದಶಾಸ್ಥಾನದಲ್ಲಿ ಶನಿ ಸಂಕ್ರಮಣ, ಲಾಭಸ್ಥಾನದಲ್ಲಿ ರಾಹು, ಲಾಭ ಸ್ಥಾನದಲ್ಲಿ ರಾಹು ಸಂಕ್ರಮಣ, ಪಂಚಮದಲ್ಲಿ ಕೇತು ಸಂಕ್ರಮಣ ಮಾಡುವುದರಿಂದ ವೃಷಭ ರಾಶಿಯವರಿಗೆ ಈ ವರ್ಷ ಸಾಧಾರಣದಿಂದ ಅನುಕೂಲಕರ ಫಲಿತಾಂಶಗಳಿವೆ ಎಂದು ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ಥಿ ಪ್ರಭಾಕರ ಚಕ್ರವರ್ತಿ ಶರ್ಮ ತಿಳಿಸಿದ್ದಾರೆ.

ಈ ಸಂವತ್ಸರದಲ್ಲಿ ಜನ್ಮಗುರುವಿನ ಕಾರಣದಿಂದ ಅನಾರೋಗ್ಯ ಸಮಸ್ಯೆಗಳು, ದೈಹಿಕ ಪರಿಶ್ರಮ ಮತ್ತು ಮಾನಸಿಕ ತೊಂದರೆಗಳು ಬಾಧಿಸುತ್ತವೆ. ಹತ್ತನೇ ಮನೆಯಲ್ಲಿ ಶನಿಯ ಅನುಕೂಲಕರ ಪ್ರಭಾವದಿಂದ ವೃತ್ತಿ, ಉದ್ಯೋಗ, ವ್ಯಾಪಾರದಲ್ಲಿ ಅಭಿವೃದ್ಧಿಯಿದ್ದರೂ ಜನ್ಮಗುರುವಿನ ಪ್ರಭಾವದ ಕಾರಣ ಪ್ರತಿಯೊಂದು ಕೆಲಸದಲ್ಲೂ ಕಷ್ಟಪಡಬೇಕಾದ ಪರಿಸ್ಥಿತಿ ಇರಲಿದೆ.

ಪಂಚಮದಲ್ಲಿ ಕೇತು ಮತ್ತು ಲಾಭಸ್ಥಾನದಲ್ಲಿ ರಾಹುವಿನ ಹೊಂದಾಣಿಕೆಯಿಂದ ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ವೃಷಭ ರಾಶಿಯವರಿಗೆ ಮಕ್ಕಳಿಂದ ಸುಖ ಸಿಗುತ್ತದೆ. ನೌಕರರು ಈ ವರ್ಷ ಸರಾಸರಿ ಫಲಿತಾಂಶ ಗಳಿಸುತ್ತಾರೆ. ಉದ್ಯೋಗದ ಒತ್ತಡ ಹೆಚ್ಚಾಗಿರುತ್ತದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸಿದರೂ ಹೊಸ ಉದ್ಯೋಗದಲ್ಲೂ ಒತ್ತಡ ಹೆಚ್ಚಾಗುವ ಸೂಚನೆ ಇದೆ. ವೃಷಭ ರಾಶಿಯ ಉದ್ಯಮಿಗಳು ವ್ಯಾಪಾರದಲ್ಲಿ ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿರುತ್ತಾರೆ.

ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಜನ್ಮಗುರುವಿನ ಪ್ರಭಾವದ ಕಾರಣ ಆರೋಗ್ಯ ಸಮಸ್ಯೆ, ಒತ್ತಡ ಸೃಷ್ಟಿಯಾಗುತ್ತದೆ. ಮಹಿಳೆಯರಿಗೆ ಈ ವರ್ಷ ಸರಾಸರಿ ಫಲಿತಾಂಶ. ಮಹಿಳೆಯರಿಗೆ ಮಾನಸಿಕ ಒತ್ತಡ ಮತ್ತು ಸಮಸ್ಯೆಗಳ ಮುನ್ಸೂಚನೆ ಇದೆ. ಮಹಿಳೆಯರು ಕೌಟುಂಬಿಕ ವಿಷಯಗಳು ಮತ್ತು ಆರೋಗ್ಯ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಮಧ್ಯಮದಿಂದ ಅನುಕೂಲಕರ ಫಲಿತಾಂಶಗಳನ್ನು ಹೊಂದಿರುತ್ತಾರೆ. ಅಧ್ಯಯನದಲ್ಲಿ ಒತ್ತಡ ಹೆಚ್ಚುಇರಲಿದೆ. ವಿದೇಶಿ ಶಿಕ್ಷಣದ ಪ್ರಯತ್ನಗಳಲ್ಲಿ ಅಡಚಣೆಯೂ ಉಂಟಾಗುವ ಸೂಚನೆ ಇದೆ.

ಸಿನಿಮಾ ರಂಗ, ಮಾಧ್ಯಮ ರಂಗದಲ್ಲಿರುವವರಿಗೆ ಈ ವರ್ಷ ಅನುಕೂಲಕರ. ರೈತರಿಗೆ ಈ ವರ್ಷ ಸಾಧಾರಣದಿಂದ ಅನುಕೂಲಕರ ಫಲಿತಾಂಶ ನಿರೀಕ್ಷಿಸಬಹುದು. ವೃಷಭ ರಾಶಿಯವರು ಶ್ರೀ ಕ್ರೋಧಿ ಸಂವತ್ಸರದಲ್ಲಿ ಹೆಚ್ಚು ಶುಭ ಫಲಗಳನ್ನು ಪಡೆಯಬೇಕೆಂದರೆ ಗುರುವಾರ ದಕ್ಷಿಣಾಮೂರ್ತಿಯನ್ನು ಪೂಜಿಸಬೇಕು. ದಕ್ಷಿಣಾಮೂರ್ತಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಪಠಿಸಬೇಕು. ಇದರಿಂದ ಉತ್ತಮ ಫಲಿತಾಂಶ ದೊರೆಯಲಿದೆ.

ದಕ್ಷಿಣಾಮೂರ್ತಿ ಸ್ತೋತ್ರವನ್ನು ಗುರುವಾರದಂದು ಪಠಿಸುವುದರಿಂದ ಗ್ರಹದೋಷ ದೂರವಾಗುತ್ತದೆ. ಭಾನುವಾರದಂದು ಆದಿತ್ಯ ಹೃದಯ ಪಾರಾಯಣ ಮಾಡುವುದರಿಂದ ಹೆಚ್ಚಿನ ಶುಭ ಫಲಗಳು ಲಭಿಸಲಿವೆ ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶಾಸ್ತ್ರಿ ಹೇಳುತ್ತಾರೆ.

ವೃಷಭ ರಾಶಿಯವರ ವಿವಾಹ ಜೀವನ 2024-25

ಶ್ರೀ ಕ್ರೋಧಿ ನಾಮ ಸಂವತ್ಸರದಲ್ಲಿ ವೃಷಭ ರಾಶಿಯವರಿಗೆ ಪ್ರೇಮ ಸಂಬಂಧಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳ ಸೂಚನೆ ಇದೆ. ಪ್ರೇಮ ವ್ಯವಹಾರಗಳಲ್ಲಿ ವಿವೇಚನೆಯಿಂದ ವರ್ತಿಸುವುದು ಒಳ್ಳೆಯದು.

ವೃಷಭ ರಾಶಿಯವರ ಹಣಕಾಸು ಸ್ಥಿತಗತಿ 2024-25

ವೃಷಭ ರಾಶಿಯವರಿಗೆ ಆರ್ಥಿಕವಾಗಿ ಅನುಕೂಲಕರ ಸಂವತ್ಸರ ಇದಲ್ಲ. ಜನ್ಮಗುರುವಿನ ಪ್ರಭಾವದಿಂದ ಉದ್ವೇಗ ಮತ್ತು ಖರ್ಚು ಅಧಿಕವಾಗಲಿದೆ. ಆರೋಗ್ಯ ಮತ್ತು ಕುಟುಂಬದ ವಿಷಯಗಳಿಗೆ ಸಾಕಷ್ಟು ಖರ್ಚು ಉಂಟಾಗಬಹುದು.

ವೃಷಭ ರಾಶಿಯವರ ವೃತ್ತಿ ಬದುಕು 2024-25

ವೃಷಭ ರಾಶಿಯವರು ವೃತ್ತಿಯಲ್ಲಿ ಸಾಧಾರಣ ಫಲಿತಾಂಶಗಳನ್ನು ಈ ವರ್ಷ ನಿರೀಕ್ಷಿಸಬಹುದು. ವೃತ್ತಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿರುತ್ತದೆ. ದುಡುಕಿನ ನಿರ್ಧಾರಗಳನ್ನು ತಪ್ಪಿಸಲು ಸಲಹೆ ಪಡೆಯುವುದು ಅವಶ್ಯ ಎಂಬ ಸೂಚನೆ ಇದೆ.

ವೃಷಭ ರಾಶಿಯವರ ಆರೋಗ್ಯ 2024-25

ಕ್ರೋಧಿ ನಾಮ ಸಂವತ್ಸರದಲ್ಲಿ ವೃಷಭ ರಾಶಿಯವರ ಆರೋಗ್ಯವು ಅಷ್ಟು ಅನುಕೂಲಕರವಲ್ಲ. ಜನ್ಮಗುರುವಿನ ಪ್ರಭಾವದಿಂದ ಉದ್ವಿಗ್ನತೆ ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಉತ್ತಮ ಆರೋಗ್ಯಕ್ಕಾಗಿ ಗುರು ದಕ್ಷಿಣಾಮೂರ್ತಿಯನ್ನು ಪೂಜಿಸುವುದು ಒಳ್ಳೆಯದು.

ಧರಿಸಬೇಕಾದ ನವರತ್ನ: ವಷಭ ರಾಶಿಯವರು ನವರತ್ನ ವಜ್ರದ ಉಂಗುರವನ್ನು ಧರಿಸಬೇಕು.

ಪ್ರಾರ್ಥಿಸಬೇಕಾದ ದೇವರು: ಶ್ರೀಕೃಷ್ಣನನ್ನು ವೃಷಭ ರಾಶಿಯವರು ಆರಾಧಿಸಬೇಕು. ಶ್ರೀಕೃಷ್ಣನ ಆರಾಧನೆಯು ಉತ್ತಮ ಫಲಿತಾಂಶವನ್ನು ಒದಗಿಸಲಿದೆ.

ವೃಷಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ 2024-25

ಏಪ್ರಿಲ್ 2024: ಸಾಧಾರಣ ಫಲಿತಾಂಶಗಳನ್ನು ಈ ತಿಂಗಳು ನಿರೀಕ್ಷಿಸಬಹುದು. ಅನಿರೀಕ್ಷಿತ ಸಮಸ್ಯೆಗಳು ಉದ್ಭವಿಸುತ್ತವೆ. ಶಾರೀರಿಕ ಶ್ರಮ ಹೆಚ್ಚು. ಧನ ಲಾಭದ ಸುಳಿವು ಇದೆ. ಶುಭ ಕಾರ್ಯಗಳಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಮಾನಸಿಕ ಒತ್ತಡವೂ ಇರಲಿದೆ.

ಮೇ 2024: ವೃಷಭ ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರವಲ್ಲ. ಕೆಲವು ವಿಷಯಗಳಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು. ಹಣಕಾಸು ನಷ್ಟ ಉಂಟಾಗಬಹುದು. ದಿಗಿಲುಗೊಳ್ಳುವ ಸಂದರ್ಭವೂ ಇದೆ. ಶ್ರಮಕ್ಕೆ ತಕ್ಕ ಫಲವೂ ಇಲ್ಲ. ಪ್ರಶಂಸೆಯೂ ಸಿಗದು. ವೃತ್ತಿ ಕ್ಷೇತ್ರದಲ್ಲಿ ಅನಿರೀಕ್ಷಿತ ಹೊಣೆಗಾರಿಕೆವಹಿಸಿಕೊಳ್ಳಬೇಕಾಗಿ ಬರಬಹುದು.

ಜೂನ್ 2024: ಈ ತಿಂಗಳಲ್ಲಿ ಉತ್ತಮ ಫಲಿತಾಂಶಗಳಿವೆ. ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳ ಒಲವು ಗಳಿಸಬಹುದು. ಕೆಲವು ವ್ಯವಹಾರಗಳು, ಕೆಲಸಗಳು ಮುಂದೂಡಲ್ಪಡಬಹುದು. ಮಾನಸಿಕ ಚಿಂತೆಗಳು ಕಾಡುತ್ತಿದ್ದರೂ ಒಳ್ಳೆಯ ಕೆಲಸದ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ಜುಲೈ 2024: ವೃಷಭ ರಾಶಿಯವರಿಗೆ ಜುಲೈ ಹೆಚ್ಚು ಅನುಕೂಲಕರವಾಗಿಲ್ಲ. ಆರೋಗ್ಯ ಮುಂಜಾಗ್ರತೆ ವಹಿಸಬೇಕು. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ. ಕುಟುಂಬದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕಿರಿಕಿರಿ ಮತ್ತು ತೊಂದರೆಗಳಿರುತ್ತವೆ. ಕೆಲವು ಉತ್ತಮ ಫಲಿತಾಂಶಗಳು ಕಂಡುಬರುತ್ತವೆ.

ಆಗಸ್ಟ್‌ 2024: ವೃಷಭ ರಾಶಿಯವರಿಗೆ ಆಗಸ್ಟ್ ತಿಂಗಳು ಹೆಚ್ಚು ಅನುಕೂಲಕರವಲ್ಲ. ಒಳ್ಳೆಯ ಕೆಲಸದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಪ್ರೇಮ ವ್ಯವಹಾರಗಳು ಅನುಕೂಲಕರ. ಮಗ ಮತ್ತು ಸಹೋದರಿಯರ ನಡುವೆ ಜಗಳ ಉಂಟಾಗಬಹುದು. ವ್ಯಾಪಾರಿಗಳಿಗೆ ಸ್ವಲ್ಪ ಅನುಕೂಲಕರ ಸಮಯ. ಉದ್ಯೋಗಿಗಳ ವರ್ಗಾವಣೆ ನಿರೀಕ್ಷಿಸಬಹುದು.

ಸೆಪ್ಟೆಂಬರ್ 2024: ನೀವು ಈ ತಿಂಗಳು ಸಾಧಾರಣ ಫಲಿತಾಂಶಗಳನ್ನು ಹೊಂದಿದ್ದೀರಿ. ವೃತ್ತಿಪರವಾಗಿ ಸೂಕ್ತವಾಗಿದೆ. ಕೆಲವು ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಈ ತಿಂಗಳು ಪ್ರಯೋಜನಕಾರಿ. ಸರ್ಕಾರದ ಕೆಲಸಗಳಲ್ಲಿ ಲಾಭ. ಮಹಿಳೆಯರಿಗೆ ಪ್ರಯೋಜನ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ.

ಅಕ್ಟೋಬರ್ 2024: ವೃಷಭ ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರವಾಗಿಲ್ಲ. ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಗೌರವಕ್ಕೆ ಚ್ಯುತಿ ಬರಬಹುದು. ಪ್ರೇಮ ಸಮಸ್ಯೆಗಳಿರಬಹುದು. ದುಡಿಮೆ ಹೆಚ್ಚು ಇದ್ದು, ಕೆಲವು ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆ ಕಾಡಬಹುದು. ಹಿರಿಯರ ಆರೋಗ್ಯಕ್ಕೆ ಸರಿಯಾದ ಆರೈಕೆಯ ಅಗತ್ಯವಿದೆ.

ನವೆಂಬರ್ 2024: ಹೆಚ್ಚು ಅನುಕೂಲಕರವಲ್ಲದ ತಿಂಗಳು ಇದಾಗಿದ್ದು, ವೃಷಭ ರಾಶಿಯ ಉದ್ಯೋಗಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಈ ತಿಂಗಳಲ್ಲಿ ಅವರು ಆಧ್ಯಾತ್ಮಕ ಕಡೆಗೆ ಗಮನಹರಿಸುತ್ತಾರೆ. ಗುತ್ತಿಗೆ ವ್ಯಾಪಾರ ಕ್ಷೇತ್ರದವರು ಅನಿರೀಕ್ಷಿತ ನಷ್ಟಕ್ಕೆ ಗುರಿಯಾಗುತ್ತಾರೆ. ದೂರದ ಪ್ರಯಾಣ ನಿರೀಕ್ಷಿತ.

ಡಿಸೆಂಬರ್ 2024: ಈ ತಿಂಗಳು ಸಾಧಾರಣ ಫಲಿತಾಂಶ ನಿರೀಕ್ಷಿಸಬಹುದು. ವ್ಯಾಪಾರಿಗಳಿಗೆ ಸರಾಸರಿ ಸಮಯ, ಮಿಶ್ರಫಲ. ಸಂಬಂಧಿಕರೊಂದಿಗೆ ಘರ್ಷಣೆಯ ಮುನ್ಸೂಚನೆ ಇದೆ. ಖಿನ್ನತೆ ಕಾಡಬಹುದು. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗದಂತೆ ವರ್ತಿಸಬೇಕಾದ್ದು ಅವಶ್ಯ. ದೂರದ ಸಂಬಂಧಿಕರ ಭೇಟಿ. ದನ ನಷ್ಟ ಉಂಟಾಗಬಹುದು. ವಿವಾಹ ನಿಶ್ಚಯವಾಗಬಹುದು. ಕೆಲವರಿಗೆ ಅನುಕೂಲಕರ ಸಮಯ.

ಜನವರಿ 2025: ವೃಷಭ ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರವಾಗಿರಲ್ಲ. ಶಸ್ತ್ರಚಿಕಿತ್ಸೆಯ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಆದಾಯ ಹೆಚ್ಚಾಗಬಹುದು. ಧೈರ್ಯದ ಕೊರತೆಯಿದೆ. ವೃತ್ತಿಪರ ವ್ಯಾಪಾರದಲ್ಲಿ ಅಭಿವೃದ್ಧಿ. ಹಣದ ಸಮಸ್ಯೆ ಉಂಟಾಗಬಹುದಾಗಿದ್ದು, ಅದರಿಂದ ತೊಂದರೆ ಉಂಟಾಗಬಹುದು.

ಫೆಬ್ರವರಿ 2025: ಸಾಧಾರಣ ಫಲಿತಾಂಶಗಳಿರುವ ಈ ತಿಂಗಳಲ್ಲಿ ಮೇಷ ರಾಶಿಯವರಲ್ಲಿ ಪೈಕಿ ಅರ್ಹರಿಗೆ ಮದುವೆ ಮತ್ತು ಗೃಹಪ್ರವೇಶದಂತಹ ಶುಭ ಕಾರ್ಯಗಳು ನಡೆಯಲಿವೆ. ವ್ಯಾಪಾರದ ಮೇಲೆ ಗಮನ ಕೇಂದ್ರೀಕರಿಸಿದರೆ, ಬೆಳವಣಿಗೆಯ ದರವು ಹೆಚ್ಚಾಗುತ್ತದೆ. ಹಿಂದಿನ ಆಸ್ತಿಗಳಿಗೆ ಸಂಬಂಧಿಸಿ ಸಂಬಂಧಿಕರೊಂದಿಗೆ ವಿವಾದಗಳಾಗುವ ಸಾಧ್ಯತೆಯಿದೆ.

ಮಾರ್ಚ್ 2025: ವೃಷಭ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿಲ್ಲ. ವೆಚ್ಚಗಳು ಹೆಚ್ಚು. ಮನೆಕೆಲಸ ವಿಳಂಬವಾಗುತ್ತದೆ. ವ್ಯಾಪಾರಿಗಳಿಗೆ ಕೆಲವು ಶುಭ ಸಮಯ. ರಾಜಕಾರಣಿಗಳಿಗೆ ಸ್ವಲ್ಪ ಮನ್ನಣೆ ದೊರೆಯಲಿದೆ.

ಜ್ಯೋತಿಷಿ ಶ್ರೀ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ

ಜ್ಯೋತಿಷಿ ಶ್ರೀ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ
ಜ್ಯೋತಿಷಿ ಶ್ರೀ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.