ಚಿನ್ನ ಧರಿಸುವುದರಿಂದ ಅದೃಷ್ಟ ಖುಲಾಯಿಸುವ ರಾಶಿಗಳಿವು; ನಿಮ್ಮದು ಇದೇ ರಾಶೀನಾ, ಚೆಕ್‌ ಮಾಡಿಕೊಳ್ಳಿ-wearing gold is extremely lucky for these zodiac signs importance of gold in astrology horoscope arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚಿನ್ನ ಧರಿಸುವುದರಿಂದ ಅದೃಷ್ಟ ಖುಲಾಯಿಸುವ ರಾಶಿಗಳಿವು; ನಿಮ್ಮದು ಇದೇ ರಾಶೀನಾ, ಚೆಕ್‌ ಮಾಡಿಕೊಳ್ಳಿ

ಚಿನ್ನ ಧರಿಸುವುದರಿಂದ ಅದೃಷ್ಟ ಖುಲಾಯಿಸುವ ರಾಶಿಗಳಿವು; ನಿಮ್ಮದು ಇದೇ ರಾಶೀನಾ, ಚೆಕ್‌ ಮಾಡಿಕೊಳ್ಳಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಅದು ಕೆಲವು ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಸಮೃದ್ಧಿಯನ್ನು ತರುತ್ತದೆ. ಹಾಗಾದರೆ ಚಿನ್ನ ಧರಿಸುವುದರಿಂದ ಯಾವ ರಾಶಿಯವರ ಅದೃಷ್ಟ ಖುಲಾಯಿಸುತ್ತದೆ ನೋಡೋಣ.

ಚಿನ್ನ ಧರಿಸುವುದರಿಂದ ಅದೃಷ್ಟ ಖುಲಾಯಿಸುವ ರಾಶಿಗಳಿವು
ಚಿನ್ನ ಧರಿಸುವುದರಿಂದ ಅದೃಷ್ಟ ಖುಲಾಯಿಸುವ ರಾಶಿಗಳಿವು

ಪ್ರಪಂಚದಲ್ಲಿ ಜನರು ಹಳದಿ ಲೋಹ ಎಂದು ಕರೆಯುವ ಚಿನ್ನಕ್ಕೆ ಬಹಳ ಮಹತ್ವ ನೀಡಿದ್ದಾರೆ. ಅನಾದಿಕಾಲದಿಂದಲೂ ಚಿನ್ನ ಉಳಿದ ಎಲ್ಲ ಲೋಹಗಳಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಬಂಗಾರಕ್ಕೆ ಹೆಚ್ಚಿನ ಮಹತ್ವವಿದೆ. ಅದನ್ನು ಸೂರ್ಯನ ತೇಜಸ್ಸಿಗೆ ಹೋಲಿಸಲಾಗಿದೆ. ಚಿನ್ನವು ಸಕಾರಾತ್ಮಕ ಅಂಶಗಳನ್ನು ವರ್ಧಿಸುತ್ತದೆ ಎಂದು ನಂಬಲಾಗಿದೆ. ಜೊತೆಗೆ ಅದು ಆತ್ಮವಿಶ್ವಾಸ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ಚಿನ್ನದ ವಸ್ತುಗಳನ್ನು ಇಟ್ಟಿಕೊಳ್ಳುವುದು ಮತ್ತು ಚಿನ್ನದ ಆಭರಣಗಳನ್ನು ಧರಿಸುವುದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಬಂಗಾರವನ್ನು ಸಂಪತ್ತು, ಗೌರವ ಹಾಗೂ ಆಧ್ಯಾತ್ಮಿಕ ಸಂಕೇತವೆಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ ಕೆಲವು ದೇವರುಗಳ ಆಶೀರ್ವಾದ ಪಡೆದುಕೊಳ್ಳಲು, ಗ್ರಹ ದೋಷ ಪರಿಹಾರಕ್ಕೆ ಚಿನ್ನವನ್ನು ಧರಿಸಲು ಹೇಳಲಾಗುತ್ತದೆ. ಅದರಿಂದ ಕಷ್ಟಗಳು ದೂರವಾಗುತ್ತವೆ ಎಂದೂ ಹೇಳಲಾಗುತ್ತದೆ. ಹಾಗಾಗಿ ಶುಭ ಸಮಾರಂಭಗಳಲ್ಲಿ ಚಿನ್ನದ ಆಭರಣ ಧರಿಸಲು ಹೇಳುತ್ತಾರೆ. ಕೆಲವು ರಾಶಿಯವರಿಗೆ ಚಿನ್ನ ಧರಿಸುವುದು ಪ್ರಯೋಜನಕಾರಿಯಾಗಿದೆ ಎಂದು ಶಾಸ್ತ್ರ ಹೇಳುತ್ತದೆ. ಚಿನ್ನ ಧರಿಸುವುದರಿಂದ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳು ಯಾವವು ತಿಳಿಯೋಣ.

ಚಿನ್ನ ಧರಿಸುವುದರಿಂದ ಅದೃಷ್ಟ ಖುಲಾಯಿಸುವ ರಾಶಿಗಳು

ಸಿಂಹ ರಾಶಿ

ಮೂಲತಃ ಆತ್ಮವಿಶ್ವಾಸದ ಗುಣವನ್ನು ಹೊಂದಿರುವ ಸಿಂಹ ರಾಶಿಯವರಿಗೆ ಚಿನ್ನವು ಮಂಗಳಕರವಾಗಿದೆ. ಬೆಂಕಿಯ ಬಣ್ಣ ಮತ್ತು ಸೂರ್ಯನಿಂದ ಆಳಲ್ಪಡುವ ಈ ರಾಶಿಯ ವರ್ಚಸ್ಸನ್ನು ಇದು ಹೆಚ್ಚಿಸುತ್ತದೆ. ಸಿಂಹ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸು ಅವರನ್ನು ಹುಡುಕಿ ಬರುತ್ತದೆ. ಅವರ ಜೀವನದಲ್ಲಿ ಧನಾತ್ಮಕ ಅಂಶ ಹೆಚ್ಚಾಗುತ್ತದೆ. ಅವರ ಸಾಧನೆಯನ್ನು ಎಲ್ಲರೂ ಗುರುತಿಸುವಂತಾಗುತ್ತದೆ. ಚಿನ್ನವು ಅವರಿಗೆ ಪರಿಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ.

ಧನು ರಾಶಿ

ಈ ರಾಶಿಯವರಿಗೆ ಚಿನ್ನವು ಮಂಗಳಕರವಾದ ಲೋಹವಾಗಿದೆ. ಏಕೆಂದರೆ ಅದು ಅವರ ಸಾಹಸ ಹಾಗೂ ಆಶಾವಾದಿತ್ವ ಸ್ವಭಾವಕ್ಕೆ ಪೂರಕವಾಗಿದೆ. ಈ ಅಮೂಲ್ಯ ಲೋಹವು ಅವರಲ್ಲಿ ಉತ್ಸಾಹ, ಆತ್ಮವಿಶ್ವಾಸ ಮತ್ತು ಅವರಿಗಿರುವ ಜೀವನ ಪ್ರೀತಿ ಹೆಚ್ಚಿಸುತ್ತದೆ. ಚಿನ್ನದ ಗುಣವು ಧನು ರಾಶಿಯವರಲ್ಲಿ ಸ್ವಾಭಾವಿಕ ಕುತೂಹಲ, ಅನ್ವೇಷಣೆ ಮತ್ತು ಬೆಳವಣಿಗೆಗಳನ್ನು ಹೆಚ್ಚಿಸುತ್ತದೆ. ಬಂಗಾರವು ಅವರಲ್ಲಿ ಸಮೃದ್ಧಿ ಮತ್ತು ಅದೃಷ್ಟವನ್ನು ತರಲು ಸಹಾಯ ಮಾಡುತ್ತದೆ. ಅವರು ಚಿನ್ನವನ್ನು ಧರಿಸುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ. ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಉತ್ತೇಜಿಸುವುದರ ಮೂಲಕ ಯಶಸ್ಸು ಮತ್ತು ಉನ್ನತಿಯ ಹಾದಿಯನ್ನು ತಲುಪಲು ನೆರವಾಗುತ್ತದೆ.

ವೃಷಭ ರಾಶಿ

ಈ ರಾಶಿಯವರಿಗಿರುವ ಐಷಾರಾಮಿ ಮತ್ತು ಸುಭದ್ರ ಜೀವನ ಪ್ರೀತಿಗೆ ಚಿನ್ನವು ಮಂಗಳಕರವಾಗಿದೆ. ಈ ಅಮೂಲ್ಯ ಲೋಹವು ಅವರಲ್ಲಿ ಉತ್ಸಾಹ, ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಚಿನ್ನವು ಇವರಲ್ಲಿ ಸಮೃದ್ಧಿ ಮತ್ತು ಅದೃಷ್ಟವನ್ನು ಆಕರ್ಷಿಸುವಂತೆ ಮಾಡುತ್ತದೆ. ವೃಷಭ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಅವರ ಭಾವನೆಗಳು ಸ್ಥಿರಗೊಳ್ಳುತ್ತದೆ ಮತ್ತು ಅವರಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. ಚಿನ್ನವು ವೃಷಭ ರಾಶಿಯವರಿಗೆ ಭಾಂದವ್ಯ, ಪ್ರೀತಿ, ಆರ್ಥಿಕ ಸ್ಥಿರತೆ ಮತ್ತು ಉನ್ನತಿಯನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

ತುಲಾ ರಾಶಿ

ಚಿನ್ನವು ತುಲಾ ರಾಶಿಯವರಿಗೆ ಸೌಂದರ್ಯ, ಸಮೃದ್ಧಿ ಮತ್ತು ಐಶ್ವರ್ಯವನ್ನು ಹೆಚ್ಚಿಸಲು ಮಂಗಳಕರವಾಗಿದೆ. ಅದು ಅವರಲ್ಲಿರುವ ಸ್ವಾಭಾವಿಕ ಗುಣ, ರಾಜತಾಂತ್ರಿಕತೆ ಮತ್ತು ಸಾಮಾಜಿಕ ಕೌಶಲವನ್ನು ಹೆಚ್ಚಿಸುತ್ತದೆ. ಬಂಗಾರದ ಹೊಳೆಯುವ ಗುಣ ಸಂಬಂಧಗಳಲ್ಲಿ ಸಕಾರಾತ್ಮಕತೆ, ಸಮೃದ್ಧಿ ಮತ್ತು ಅದೃಷ್ಟವನ್ನು ಆಕರ್ಷಿಸುತ್ತದೆ. ಇದು ತುಲಾ ರಾಶಿಯವರ ದಯೆ ಮತ್ತು ಮಹತ್ವಾಕಾಂಕ್ಷೆಯ ಗುಣದೊಂದಿದೆ ಹೊಂದಿಕೊಳ್ಳುತ್ತದೆ. ಈ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಸ್ವಾಭಿಮಾನ ಹೆಚ್ಚುತ್ತದೆ ಮತ್ತು ಅವರು ನ್ಯಾಯದ ದಾರಿಯಲ್ಲಿ ನಡೆದುಕೊಳ್ಳುತ್ತಾರೆ. ತುಲಾ ರಾಶಿಯವರ ಜೀವನ ಪ್ರೀತಿ, ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಂಡು ಯಶಸ್ಸಿನ ಹಾದಿಯನ್ನು ಹಿಡಿಯಲು ಪೂರಕವಾಗಿದೆ.

ಮಿಥುನ ರಾಶಿ

ಅಮೂಲ್ಯ ಲೋಹ ಎಂದು ಕರೆಯಿಸಿಕೊಳ್ಳುವ ಚಿನ್ನವು ಮಿಥುನ ರಾಶಿಯವರ ನೈಜ ಗುಣವಾದ ಬುದ್ಧಿವಂತಿಕೆ ಮತ್ತು ಸಂವಹನ ಕೌಶಲಗಳನ್ನು ಹೆಚ್ಚಿಸುತ್ತದೆ. ಇದು ಅವರಲ್ಲಿ ಅವಕಾಶ, ಸಮೃದ್ಧಿ ಮತ್ತು ಅದೃಷ್ಟವನ್ನು ಆಕರ್ಷಿಸುತ್ತದೆ. ಮಿಥುನ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಅವರಲ್ಲಿರುವ ಸೃಜನಶೀಲತೆ ಇನ್ನಷ್ಟು ಹೆಚ್ಚುತ್ತದೆ. ಇವರು ಸಮಾಜದಲ್ಲಿ ಜನರನ್ನು ಗಳಿಸುತ್ತಾರೆ. ಮಿಥುನ ರಾಶಿಯವರ ಜ್ಞಾನ ಮತ್ತು ಬುದ್ಧಿವಂತಿಕೆ ಹೆಚ್ಚುತ್ತದೆ. ಅವರು ಸಮಾಜದ ಜನರೊಂದಿಗೆ ಹೆಚ್ಚು ಬೆರೆಯುತ್ತಾರೆ. ಇದು ಅವರ ವರ್ಚಸ್ಸನ್ನು ಹೆಚ್ಚುವಂತೆ ಮಾಡುತ್ತದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.