ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಸಂಗಾತಿ ಆರೋಗ್ಯದ ಕಡೆಗಿರಲಿ ಗಮನ, ಕುಟುಂಬದಲ್ಲಿ ಮಂಗಳಕಾರ್ಯ ನಡೆಯಲಿದೆ; ವಾರದ ಭವಿಷ್ಯ ಹೀಗಿದೆ

Weekly Horoscope: ಸಂಗಾತಿ ಆರೋಗ್ಯದ ಕಡೆಗಿರಲಿ ಗಮನ, ಕುಟುಂಬದಲ್ಲಿ ಮಂಗಳಕಾರ್ಯ ನಡೆಯಲಿದೆ; ವಾರದ ಭವಿಷ್ಯ ಹೀಗಿದೆ

Weekly Horoscope June 04 to 10: ವಾರದ ಜಾತಕವನ್ನು ಗ್ರಹಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಗ್ರಹಗಳ ಸಂಚಾರದಿಂದಾಗಿ ಮುಂಬರುವ ವಾರ ಕೆಲವು ರಾಶಿಯವರಿಗೆ ತುಂಬಾ ಶುಭಕರವಾಗಲಿದ್ದು, ಇನ್ನು ಕೆಲವರಿಗೆ ಎಚ್ಚರಿಕೆ ಅಗತ್ಯ. ಇಲ್ಲಿದೆ ಜೂನ್ 04‌ ರಿಂದ ಜೂ 10ರ ವರೆಗಿನ ವಾರ ಭವಿಷ್ಯ.

ಸಂಗಾತಿ ಆರೋಗ್ಯದ ಕಡೆಗಿರಲಿ ಗಮನ, ಕುಟುಂಬದಲ್ಲಿ ಮಂಗಳಕಾರ್ಯ ನಡೆಯಲಿದೆ; ವಾರದ ಭವಿಷ್ಯ ಹೀಗಿದೆ
ಸಂಗಾತಿ ಆರೋಗ್ಯದ ಕಡೆಗಿರಲಿ ಗಮನ, ಕುಟುಂಬದಲ್ಲಿ ಮಂಗಳಕಾರ್ಯ ನಡೆಯಲಿದೆ; ವಾರದ ಭವಿಷ್ಯ ಹೀಗಿದೆ

ಮೇಷ

ವಾರದ ಆರಂಭದಲ್ಲಿ ಒತ್ತಡ ಇರುತ್ತದೆ. ನಿರೀಕ್ಷಿಸದ ಜವಾಬ್ದಾರಿಯು ಆತಂಕವನ್ನು ಉಂಟು ಮಾಡುತ್ತದೆ. ಖರ್ಚು ವೆಚ್ಚಗಳು ಹೆಚ್ಚುತ್ತವೆ. ಕ್ರಮೇಣವಾಗಿ ಕುಟುಂಬದ ಸದಸ್ಯರ ಬೆಂಬಲದಿಂದ ತೊಂದರೆಯಿಂದ ಪಾರಾಗುವಿರಿ. ಬಾಕಿ ಉಳಿದಿದ್ದ ಹಣವು ಕೈಸೇರುತ್ತದೆ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಉಂಟಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ವ್ಯಾಪಾರದಲ್ಲಿ ಲಾಭವಿರುತ್ತದೆ.

ವೃಷಭ

ದೈಹಿಕ ಪರಿಶ್ರಮದಿಂದ ಅಸಾಧ್ಯವಾದ ಕೆಲಸವೊಂದನ್ನು ಸಾಧಿಸುವಿರಿ. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯನ್ನು ಎದುರಿಸಬೇಕಾದೀತು. ಶೇರು ಮತ್ತು ಷೇರಿನ ವ್ಯವಹಾರದಲ್ಲಿ ಲಾಭಗಳಿಸುವಿರಿ. ಯಾವುದೇ ವ್ಯಾಪಾರದಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸದಿರಿ. ಆದಾಯಕ್ಕೆ ಸರಿ ಸಮನಾದ ಖರ್ಚು ವೆಚ್ಚಗಳು ನಿಮ್ಮ ನಿದ್ದೆಗೆಡಿಸಲಿದೆ. ಕೂಡಿಟ್ಟ ಹಣವನ್ನೆಲ್ಲಾ ಖರ್ಚುಮಾಡಬೇಕಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಇರಲಿ.

ಮಿಥುನ

ಸ್ಥಿರವಾದ ಮನಸ್ಸಿನ ಅಗತ್ಯವಿದೆ. ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಮಾತಿನಿಂದ ವೈರತ್ವ ಉಂಟಾಗುತ್ತದೆ. ಭೂವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದಲ್ಲಿ ತೊಂದರೆಗೆ ಒಳಗಾಗುವಿರಿ. ಸೋದರಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗ ಬಹುದು. ವಾಹನಗಳ ಚಾಲನೆವೇಳೆ ಎಚ್ಚರಿಕೆ ಇರಲಿ ಇಲ್ಲವಾದಲ್ಲಿ ಸರ್ಕಾರಕ್ಕೆ ಸುಂಕ ಕಟ್ಟಬೇಕಾದೀತು.

ಕಟಕ

ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗುತ್ತದೆ. ಕುಟುಂಬದಲ್ಲಿದ್ದ ಬೇಸರವು ಕಣ್ಮರೆ ಆಗುತ್ತದೆ. ಮನದ ಮಹದಾಸೆಯಂತೆ ಸ್ವಂತ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ. ತಿಂಗಳ ಉತ್ತರಾರ್ಧದಲ್ಲಿ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ. ಸಂಗಾತಿಗೆ ಖ್ಯಾತ ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಉದ್ಯೋಗದಲ್ಲಿ ಉತ್ತಮ ಹೆಸರು ಸಂಪಾದಿಸುವಿರಿ. ಸಾಲದ ವ್ಯವಹಾರ ಬೇಡ.

ಸಿಂಹ

ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಲು ಪ್ರಯತ್ನಿಸಿ. ಉದ್ಯೋಗದಲ್ಲಿ ಪರಿಪೂರ್ಣತೆ ಲಭಿಸುತ್ತದೆ. ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ಬಿಡುವಿಲ್ಲದ ಕೆಲಸವಿರುತ್ತದೆ. ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡುವಿರಿ. ಕುಟುಂಬದಲ್ಲಿ ಮಂಗಳಕಾರ್ಯವೊಂದು ನಡೆಯಲು ಕಾರಣರಾಗುವಿರಿ. ಸರ್ಕಾರದ ಅನುಮತಿಯಲ್ಲಿ ಪುಟ್ಟ ವ್ಯಾಪಾರವನ್ನು ಆರಂಭಿಸುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಂಪ್ರದಾಯಿಕ ರೀತಿ ನೀತಿ ಅನುಸರಿಸಿ.

ಕನ್ಯಾ

ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಉಪವೃತ್ತಿಯೊಂದನ್ನು ಆರಂಭಿಸುವಿರಿ. ಅನಾವಶ್ಯಕ ಟೀಕೆಗಳು ಕೇಳುಗರಲ್ಲಿ ಶತೃತ್ವ ಬೆಳೆಸುತ್ತದೆ. ಉದ್ಯೋಗ ಬದಲಿಸುವ ಮಾತಾಗುತ್ತದೆ. ಚೀಟಿ ವ್ಯವಹಾರದ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಒಮ್ಮತ ಇರದು. ಸೋದರಿಯ ದಾಂಪತ್ಯದಲ್ಲಿ ಬೇಸರದ ಸನ್ನಿವೇಶವೊಂದು ನಡೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಮಹನೀಯರೊಬ್ಬರ ಸಹಾಯ ದೊರೆಯುತ್ತದೆ.

ತುಲಾ

ಬೇರೆಯವರ ಸುಖ ಸಂತೋಷಗಳಿಗೆ ಕಾರಣರಾಗುವಿರಿ. ಆತುರದಿಂದ ಕೆಲಸ ಮಾಡಲು ಹೋದಲ್ಲಿ ಹಿನ್ನೆಡೆ ಲಭಿಸುವುದು. ಆತ್ಮವಿಶ್ವಾಸದಿಂದ ಸವಾಲುಗಳನ್ನು ಗೆಲ್ಲುವಿರಿ. ಸಂತಾನ ಲಾಭವಿದೆ. ನೂತನ ಮನೆಯನ್ನು ಕೊಳ್ಳುವ ಅಥವಾ ಕಟ್ಟಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸ್ವಂತ ಉದ್ಯಮವನ್ನು ಆರಂಭಿಸುವ ಬಗ್ಗೆ ಆತ್ಮೀಯರ ಸಹಕಾರ ಕೇಳುವಿರಿ. ಕುಟುಂಬದ ಆಧಾರ ಸ್ತಂಭವಾಗಿ ಮುಂದುವರೆಯುವಿರಿ.

ವೃಶ್ಚಿಕ

ನಾನು ಮಾಡುವುದೇ ಸರಿ ಎಂಬ ಧೋರಣೆ ಬೇಡ. ಅವಶ್ಯಕತೆ ಬಿದ್ದಲ್ಲಿ ಮನೆಯವರ ಮತ್ತು ಸಹೋದ್ಯೋಗಿಗಳ ಸಲಹೆಯನ್ನು ಅಳವಡಿಸಿಕೊಳ್ಳಿರಿ. ಬಿಡುವಿಲ್ಲದ ಕೆಲಸದ ಕಾರಣ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಸ್ವಂತ ವ್ಯಾಪಾರವನ್ನು ಆರಂಭಿಸುವ ವಿಚಾರವನ್ನು ಮುಂದೂಡುವಿರಿ. ವಿವಾಹ ಯೋಗವಿದೆ. ವಾರಾಂತ್ಯಕ್ಕೆ ಅದಾಯದಲ್ಲಿ ಏರಿಕೆ ಕಂಡುಬರುತ್ತದೆ. ಮಕ್ಕಳಿಗೆ ಉದ್ಯೋಗ ಲಭಿಸುತ್ತದೆ.

ಧನಸ್ಸು

ದೈವಾನುಗ್ರಹದಿಂದ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆ ಕಾರಣೀಭೂತರಾಗುತ್ತಾರೆ. ದೊಡ್ಡ ಮಟ್ಟದ ಉದ್ಧಿಮೆಯನ್ನು ಆರಂಭಿಸುವಲ್ಲಿ ಯಶಸ್ಸನ್ನು ಗಳಿಸುವಿರಿ. ಅವಿವಾಹಿತರಿಗೆ ಪರಿಚಯಸ್ಥರ ಜೊತೆಯಲ್ಲಿ ವಿವಾಹ ಆಗಲಿದೆ. ಗಾನ ನಾಟ್ಯವನ್ನು ಬಲ್ಲವರು ದೇಶ ವಿದೇಶಗಳಲ್ಲಿ ಅವಕಾಶವನ್ನು ಪಡೆಯಲಿದ್ದಾರೆ. ತಿನ್ನುವುದರಲ್ಲಿ ಮಿತಿ ಇದ್ದರೆ ಒಳಿತು.

ಮಕರ

ಕಷ್ಟ ಜೀವಿಗಳು. ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಹಿಂಜರಿಯುವುದಿಲ್ಲ. ಹಿರಿಯ ಅಧಿಕಾರಿಗಳ ಒಲವನ್ನು ಗಳಿಸುವಿರಿ. ಯಂತ್ರೋಪಕರಣಗಳ ಆಮದು ಮತ್ತು ರಪ್ತಿನ ವ್ಯಾಪಾರದಲ್ಲಿ ಲಾಭಗಳಿಸುವಿರಿ. ಕುಟುಂಬದ ದೊಡ್ಡ ವಿವಾದವೊಂದನ್ನು ಸರಿಪಡಿಸುವಿರಿ. ಸರಕಾರದ ಉದ್ದಿಮೆಯ ಜವಾಬ್ದಾರಿಯು ದೊರೆವ ಸಾಧ್ಯತೆ ಇದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹಿನ್ನೆಡೆ ಉಂಟಾಗುತ್ತದೆ.

ಕುಂಭ

ಮನಬಿಚ್ಚಿ ಮಾತನಾಡಿದರೆ ಕುಟುಂಬದವರ ಸಹಾಯ ಸಹಕಾರ ದೊರೆಯುತ್ತದೆ. ಯಾರನ್ನೂ ಅನುಮಾನದಿಂದ ನೋಡದಿರಿ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿಯು ಎದುರಾಗುತ್ತದೆ. ಕುಟುಂಬದ ಆದಾಯ ಹೆಚ್ಚಿಸುವ ಸಲುವಾಗಿ ವ್ಯಾಪಾರಿ ಸಂಸ್ಥೆಯೊಂದನ್ನು ಆರಂಭಿಸುವಿರಿ. ಸೋದರನ ಒಡನೆ ಇದ್ದ ಭೂವಿವಾದ ಕೊನೆಯಾಗುತ್ತದೆ. ಸಾಲದ ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಬೇಸರ ಕಳೆಯಲು ಪ್ರವಾಸ ಹೋಗುವಿರಿ.

ಮೀನ

ನಿಮ್ಮ ಮಾತನ್ನು ಮೀರುವ ಸಾಹಸ ಯಾರೂ ಮಾಡಲಾರರು. ಹೊಸ ಆದಾಯದ ಮಾರ್ಗವನ್ನು ಹುಡುಕುವಿರಿ. ದೊಡ್ಡ ಮಟ್ಟದಲ್ಲಿ ಹೋಟೆಲ್ ಆರಂಭಿಸುವ ಸಾಹಸಕ್ಕೆ ಕೈಹಾಕುವಿರಿ. ಯಶಸ್ಸು ನಿಮ್ಮ ಬೆನ್ನಿಗಿರುತ್ತದೆ. ಗುರು ಬಲದಿಂದಾಗಿ ಮಾತಿನಲ್ಲಿಯೇ ಮೋಡಿ ಮಾಡಬಲ್ಲಿರಿ. ಉದ್ಯೋಗಿಗಳಿಗೆ ಯಾವುದೇ ತೊಂದರೆ ಬಾರದು. ಹಣಕಾಸಿನ ಸಂಸ್ಥೆಯ ಒಡೆತನ ದೊರೆಯುತ್ತದೆ. ಆರೋಗ್ಯದಲ್ಲಿ ಏರು ಪೇರು ಇರುತ್ತದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.