Kannada News  /  Astrology  /  Weekly Horoscope Astrological Prediction For 2023 May 21 To 27 Mnk
ಮಾತಿನ ಮೇಲಿರಲಿ ಹಿಡಿತ, ವೈವಾಹಿಕ ಜೀವನದಲ್ಲಿ ಮುನಿಸು; ಹೇಗಿದೆ ದ್ವಾದಶ ರಾಶಿಯವರ ಈ ವಾರದ ಭವಿಷ್ಯ?
ಮಾತಿನ ಮೇಲಿರಲಿ ಹಿಡಿತ, ವೈವಾಹಿಕ ಜೀವನದಲ್ಲಿ ಮುನಿಸು; ಹೇಗಿದೆ ದ್ವಾದಶ ರಾಶಿಯವರ ಈ ವಾರದ ಭವಿಷ್ಯ?

Weekly Horoscope: ಮಾತಿನ ಮೇಲಿರಲಿ ಹಿಡಿತ, ವೈವಾಹಿಕ ಜೀವನದಲ್ಲಿ ಮುನಿಸು; ಹೇಗಿದೆ ದ್ವಾದಶ ರಾಶಿಯವರ ಈ ವಾರದ ಭವಿಷ್ಯ?

21 May 2023, 7:00 ISTHT Kannada Desk
21 May 2023, 7:00 IST

Weekly Horoscope May 21 to 27: ವಾರದ ಜಾತಕವನ್ನು ಗ್ರಹಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಗ್ರಹಗಳ ಸಂಚಾರದಿಂದಾಗಿ ಮುಂಬರುವ ವಾರ ಕೆಲವು ರಾಶಿಯವರಿಗೆ ತುಂಬಾ ಶುಭಕರವಾಗಲಿದ್ದು, ಕೆಲವು ರಾಶಿಯವರಿಗೆ ಎಚ್ಚರಿಕೆ ಅಗತ್ಯ. ಇಲ್ಲಿದೆ ಮೇ 21ರಿಂದ 27ರ ವರೆಗಿನ ವಾರ ಭವಿಷ್ಯ.

ವಾರ ಭವಿಷ್ಯ

ಮೇಷ

ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ. ಭೂವ್ಯವಹಾರದಿಂದ ಧನಲಾಭವಿದೆ. ತಾಯಿಯವರ ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಅಡುಗೆಗೆ ಸಂಬಂಧಿಸಿದ ಪರಿಕರಗಳ ವ್ಯಾಪಾರದಲ್ಲಿ ಲಾಭವಿದೆ. ಆತ್ಮೀಯರೊಂದಿಗೆ ಮನಸ್ತಾಪ ಉಂಟಾಗಲಿದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ತೊಂದರೆ ಇದೆ. ಕುಟುಂಬಕ್ಕೆ ಸೇರಿದ ಭೂಮಿ ಅಥವ ಮನೆಯನ್ನು ಮಾರಾಟ ಮಾಡುವ ಸಾಧ್ಯತೆ ಇದೆ. ದುಡುಕಿನ ನಿರ್ಧಾರ ಬೇಡ. ಸೋದರನಿಗೆ ಸಹಾಯದ ಅಗತ್ಯತೆ ಇರುತ್ತದೆ.

‌ವೃಷಭ

ಆದಾಯ ಇರುತ್ತದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಹಣವನ್ನು ಉಳಿಸಲು ಸಾಧ್ಯವಿಲ್ಲ. ಸೋದರ ಸೋದರಿಯ ಜೊತೆಯಲ್ಲಿ ವಿನಾಕಾರಣ ಮನಸ್ತಾಪವೊಂದು ಉಂಟಾಗುತ್ತದೆ. ರಕ್ತಕ್ಕೆ ಸಂಬಂಧಿಸಿದ ದೋಷವಿರುತ್ತದೆ. ಮನದಲ್ಲಿ ಒಂದು ರೀತಿಯ ಅಂಜಿಕೆಯ ಗುಣ ಇರುತ್ತದೆ. ಪಾಲುಗಾರಿಕೆ ವ್ಯಾಪಾರ ಇದ್ದಲ್ಲಿ ಎಚ್ಚರಿಕೆಯಿಂದ ನಿರ್ವಹಿಸಿ. ವೈವಾಹಿಕ ಜೀವನದಲ್ಲಿ ವಿವಾದ ವಿರುತ್ತದೆ. ಚಾಡಿ ಮಾತನ್ನು ನಂಬಿ ಕುಟುಂಬದವರನ್ನು ಅನುಮಾನಿಸದಿರಿ.

ಮಿಥುನ

ಆದಾಯದಲ್ಲಿ ಏರಿಕೆ ಇಲ್ಲದ್ದಿದ್ದರೂ ಹಣದ ಕೊರತೆ ಕಾಣದು. ಹಿರಿಯ ಸೋದರ ಅಥವಾ ಸೋದರಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಲಿದೆ. ಕುಟುಂಬದಲ್ಲಿ ಒಮ್ಮತ ಇರುವುದಿಲ್ಲ. ದುಡುಕಿ ಮಾತನಾಡಿದಲ್ಲಿ ವಿವಾದವನ್ನು ಎದುರಿಸಬೇಕಾಗುತ್ತದೆ. ಭೂವಿವಾದವೊಂದು ಪರಿಹಾರಗೊಳ್ಳಲಿದೆ. ಉದ್ಯೋಗಸ್ಥರಾದಲ್ಲಿ ವಿಶ್ರಾಂತಿ ಇರದು. ಅರೋಗ್ಯದ ಬಗ್ಗೆ ಕಾಳಜಿ ಇರಲಿ. ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ. ಪತಿಯ ಹಣದ ವ್ಯವಹಾರದಲ್ಲಿ ಸಹಾಯ ಮಾಡುವಿರಿ.

ಕಟಕ

ಮನದಲ್ಲಿ ಅಳುಕಿನ ಭಾವನೆ ಇರುತ್ತದೆ. ಸದಾ ಚುರುಕಿನಿಂದ ಇರುವ ನಿಮಗೆ ಯಾವ ಕೆಲಸವೂ ಅಸಾಧ್ಯವಲ್ಲ. ಹಣಕಾಸಿನ ವಿವಾದವೊಂದು ದೂರವಾಗುವುದು. ತವರು ಮನೆಯಿಂದ ಹಣದ ಸಹಾಯ ದೊರೆಯುತ್ತದೆ. ಬೃಹತ್ ವ್ಯವಹಾರ ಸಂಸ್ಥೆಯಲ್ಲಿ ಅಧಿಕಾರಿಯ ಸ್ಥಾನ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುತ್ತಾರೆ. ಕುಟುಂಬದ ಜವಾಬ್ದಾರಿ ಹೆಚ್ಚುತ್ತದೆ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ರೂಪುರೇಷೆ ಸಿದ್ದಪಡಿಸುವಿರಿ.

ಸಿಂಹ

ವಾಸಸ್ಥಳವನ್ನು ಬದಲಾಯಿಸುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಬ್ಯಾಂಕ್ ಅಥವ ಇನ್ನಿತರ ವಾಣಿಜ್ಯ ಸಂಸ್ಥೆಯಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಜಮೀನು ಅಥವ ಮನೆಯನ್ನು ಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ. ಅನಾವಶ್ಯಕ ಖರ್ಚು ವಿವಾದಕ್ಕೆ ಕಾರಣವಾಗುತ್ತದೆ. ತಂದೆಯ ಜೊತೆಯಲ್ಲಿ ವಿರಸ ಇರುತ್ತದೆ. ವಿದ್ಯಾರ್ಥಿಗಳಿಗೆ ಓದು ಮುಗಿವ ಮುನ್ನವೇ ಉದ್ಯೋಗ ಲಭಿಸುತ್ತದೆ. ಪತಿಯ ಕಾರಣ ಖರ್ಚು ವೆಚ್ಚಗಳು ಹೆಚ್ಚಲಿವೆ.

ಕನ್ಯಾ

ತವರಿನಿಂದ ಉಡುಗೊರೆಯಾಗಿ ನೀರಾವರಿ ಭೂಮಿಯು ದೊರೆಯುತ್ತದೆ. ಆರಂಭಿಸುವ ಕೆಲಸ ಕಾರ್ಯಗಳು ಪೂರ್ಣವಾಗುವವರೆಗೂ ಮನಸ್ಸನ್ನು ಬದಲಿಸದಿರಿ. ಅದೃಷ್ಟವಂತರು. ಸಂಸಾರದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಹಣದ ಗಳಿಕೆಯಲ್ಲಿ ಹಿನ್ನೆಡೆ ಉಂಟಾದಲ್ಲಿ ಸಹನೆ ಕಳೆದುಕೊಳ್ಳುವಿರಿ. ನಿಮ್ಮ ತಪ್ಪಿಗೆ ಬೇರೆಯವರನ್ನು ನಿಂದಿಸುವಿರಿ. ಸ್ವಂತ ವ್ಯಾಪಾರವೊಂದನ್ನು ಆರಂಭಿಸುವಿರಿ. ಕುಟುಂಬದ ಒಳಗೂ ಹೊರಗೂ ಉನ್ನತ ಗೌರವ ಸ್ಥಾನ ಮಾನ ಲಭಿಸುತ್ತದೆ.

ತುಲಾ

ದೈಹಿಕವಾಗಿ ಸದೃಢರಾದ ನೀವು ಸದಾ ಕಾಲ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವಿರಿ. ಅಂಜಿಕೆ ಇಲ್ಲದೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವಿರಿ. ನಿಮ್ಮ ನೇರ ನಡೆ ನುಡಿ ವಿವಾದಕ್ಕೆ ಕಾರಣವಾಗುತ್ತದೆ. ಉದ್ಯೋಗದಲ್ಲಿ ತೊಂದರೆ ಇರದು. ಕಷ್ಟದಲ್ಲಿ ಇದ್ದವರಿಗೆ ಸಹಾಯವನ್ನು ಮಾಡುವಿರಿ. ರಾಜಕೀಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುವಿರಿ. ವಿವಾಹಯೋಗವಿದೆ. ಪತಿಯ ಜೊತೆಯಲ್ಲಿ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ಸೂಚನೆಯಿದೆ.

ವೃಶ್ಚಿಕ

ಜನ್ಮದಿಂದಲೇ ಹಠ ಮತ್ತು ಕೋಪ ಬಂದಿದೆ. ಸೋಲನ್ನು ಒಪ್ಪುವುದಿಲ್ಲ. ತೆಗೆದು ಕೊಳ್ಳುವ ನಿರ್ಧಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಕ್ಷಮಾಗುಣ ಇರದು. ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಸೋದರರ ಪ್ರೀತಿ ನಿಮಗೆ ದೊರೆಯುತ್ತದೆ. ಪತಿಯು ನಿಮ್ಮ ಮಾತಿಗೆ ಎದುರಾಡುವುದಿಲ್ಲ. ಯಾರಿಗೂ ಮೋಸ ಮಾಡದೆ ಜೀವನದಲ್ಲಿ ಮುಂದುವರಿಯಿವಿರಿ. ಬೇರೊಬ್ಬರ ಅಧೀನದಲ್ಲಿ ಕೆಲಸ ಮಾಡಲು ಇಚ್ಚಿಸುವುದಿಲ್ಲ.

ಧನಸ್ಸು

ತಂದೆಗೆ ಅಥವಾ ಮಾವನಿಗೆ ಅನಾರೋಗ್ಯ ಇರುತ್ತದೆ. ಸ್ಥಿರವಾದ ಮನಸ್ಸಿರುವುದಿಲ್ಲ. ಒಳ್ಳೆಯ ಮನಸ್ಕರು. ಸೇಡಿನ ಪ್ರವೃತ್ತಿ ಇರುತ್ತದೆ. ಎಲ್ಲರಿಗೂ ಶುಭ ಕೋರುವಿರಿ. ಪರೋಪಕಾರದ ಗುಣ ನಿಮ್ಮಲ್ಲಿರುತ್ತದೆ. ಕೋಪ ಬಂದರೂ ತೋರ್ಪಡಿಸುವುದಿಲ್ಲ. ಕುಟುಂಬದಲ್ಲಿ ನಿಮ್ಮಿಂದ ಶಾಂತಿ ನೆಮ್ಮದಿ ನೆಲೆಸುತ್ತದೆ. ಸೋಲೆಂಬ ಮಾತಿಲ್ಲ. ಹಣಕಾಸಿನ ತೊಂದರೆ ಬಾರದು. ಸ್ವತಂತ್ರವಾಗಿ ವ್ಯಾಪಾರವೊಂದನ್ನು ನಿರ್ವಹಿಸಿ ಹಣ ಸಂಪಾದಿಸುವಿರಿ. ಉದ್ಯೋಗದಲ್ಲಿ ಅಧಿಕಾರ ಲಭಿಸುತ್ತದೆ.

ಮಕರ

ಆಡುವ ಮಾತಿಗೆ ಕೊನೆಯಿಲ್ಲ. ಆದರೆ ಕೆಲಸ ಕಾರ್ಯಗಳನ್ನು ನಿಧಾನವಾಗಿಯಾದರೂ ಪರಿಪೂರ್ಣಗೊಳಿಸುವಿರಿ. ಹೊಸ ಮನೆ ಕೊಳ್ಳು ಇಂಗಿತದಿಂದ ಗೃಹಕೈಗಾರಿಕೆಯನ್ನು ಆರಂಭಿಸುವಿರಿ. ಎಲ್ಲರ ಪ್ರೀತಿ ಗಳಿಸಿ ಸಮಾಜದಲ್ಲಿ ಮುಖ್ಯ ವ್ಯಕ್ತಿಯಾಗುವಿರಿ. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ಮನಸ್ಸು ಒಳ್ಳೆಯದಾದರೂ ಮಾತಿನಿಂದ ಕೆಟ್ಟ ಹೆಸರು ಗಳಿಸುವಿರಿ. ವಿವಾಹ ಯೋಗವಿದೆ. ಯಾರನ್ನೂ ಕಡೆಗಣ್ಣಿನಿಂದ ನೋಡದಿರಿ. ಹಣದ ತೊಂದರೆ ಬಾರದು.

ಕುಂಭ

ಧೈರ್ಯ ಸಾಹಸದ ಗುಣ ಇರುತ್ತದೆ. ಕ್ರೀಡಾಳುಗಳಿಗೆ ವಿಶೇಷವಾದ ಅವಕಾಶ ದೊರೆಯಲಿದೆ. ಮನಬಿಚ್ಚಿ ಮಾತನಾಡಿದಲ್ಲಿ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ. ಉದ್ಯೋಗದಲ್ಲಿ ತೊಂದರೆ ಇರದು. ಭೂವಿವಾದವೊಂದು ನೆಮ್ಮದಿ ಕೆಡಿಸುತ್ತದೆ. ಬೆಣ್ಣೆ ಮತ್ತು ತುಪ್ಪದ ವ್ಯಾಪಾರದಲ್ಲಿ ಲಾಭವಿದೆ. ವಿದ್ಯಾರ್ಥಿಗಳು ಅಂತರ್ಮುಖಿಯಾಗಿ ವರ್ತಿಸುತ್ತಾರೆ. ಹಣಕಾಸಿನ ತೊಂದರೆ ಇರದು. ಮನೆಯ ನವೀಕರಣಕ್ಕಾಗಿ ಹಣವನ್ನು ಎರವಲು ಪಡೆಯುವಿರಿ.

ಮೀನ

ಆತ್ಮವಿಶ್ವಾಸದಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಿರಿ. ದುಡಿಯುವ ಜನರಿಗೆ ಸಹಾಯ ಮಾಡುವಿರಿ. ಹಣದ ತೊಂದರೆ ಬಾರದು. ಗೆಲ್ಲುವವರೆಗೂ ವಿರಮಿಸುವುದಿಲ್ಲ. ಯೋಗ ಭರತನಾಟ್ಯದಂತಹ ಸಾಂಪ್ರದಾಯಕ ಕಲೆ ಬಲ್ಲವರಿಗೆ ದೇಶವಿದೇಶಗಳಲ್ಲಿಅವಕಾಶ ದೊರೆಯಲಿದೆ. ಉದ್ಯೋಗದಲ್ಲಿ ತೊಂದರೆ ಇಲ್ಲ. ತಂದೆಯವರ ಕೆಲಸವೊಂದು ಕಾರ್ಯಗತವಾಗಲು ಪರೋಕ್ಷವಾಗಿ ಕಾರಣರಾಗುವಿರಿ. ಧಿಡೀರ್ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.

ವಿಭಾಗ