ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಆದಾಯದಲ್ಲಿ ಹೆಚ್ಚಳ, ಜೀವನದಲ್ಲಿ ಮಹತ್ತರ ಬದಲಾವಣೆಗೆ ನಾಂದಿ; ಹೀಗಿದೆ ದ್ವಾದಶ ರಾಶಿಯವರ ಈ ವಾರದ ಭವಿಷ್ಯ

Weekly Horoscope: ಆದಾಯದಲ್ಲಿ ಹೆಚ್ಚಳ, ಜೀವನದಲ್ಲಿ ಮಹತ್ತರ ಬದಲಾವಣೆಗೆ ನಾಂದಿ; ಹೀಗಿದೆ ದ್ವಾದಶ ರಾಶಿಯವರ ಈ ವಾರದ ಭವಿಷ್ಯ

Weekly Horoscope May 28 to 03: ವಾರದ ಜಾತಕವನ್ನು ಗ್ರಹಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಗ್ರಹಗಳ ಸಂಚಾರದಿಂದಾಗಿ ಮುಂಬರುವ ವಾರ ಕೆಲವು ರಾಶಿಯವರಿಗೆ ತುಂಬಾ ಶುಭಕರವಾಗಲಿದ್ದು, ಇನ್ನು ಕೆಲವರಿಗೆ ಎಚ್ಚರಿಕೆ ಅಗತ್ಯ. ಇಲ್ಲಿದೆ ಮೇ 28ರಿಂದ ಜೂ 03ರ ವರೆಗಿನ ವಾರ ಭವಿಷ್ಯ.

ಆದಾಯದಲ್ಲಿ ಹೆಚ್ಚಳ, ಜೀವನದಲ್ಲಿ ಮಹತ್ತರ ಬೆಳವಣಿಗೆಗಳಿಗೆ ನಾಂದಿ; ಹೀಗಿದೆ ದ್ವಾದಶ ರಾಶಿಯವರ ಈ ವಾರದ ಭವಿಷ್ಯ
ಆದಾಯದಲ್ಲಿ ಹೆಚ್ಚಳ, ಜೀವನದಲ್ಲಿ ಮಹತ್ತರ ಬೆಳವಣಿಗೆಗಳಿಗೆ ನಾಂದಿ; ಹೀಗಿದೆ ದ್ವಾದಶ ರಾಶಿಯವರ ಈ ವಾರದ ಭವಿಷ್ಯ

ವಾರ ಭವಿಷ್ಯ

ಮೇಷ

ಕೆಲಸ ಕಾರ್ಯಗಳಲ್ಲಿ ಕೊಂಚ ಹಿನ್ನೆಡೆ ಇರುತ್ತದೆ. ಆದರೆ ಕ್ರಮೇಣವಾಗಿ ಶುಭ ಫಲಗಳು ದೊರೆಯುತ್ತವೆ. ಕಷ್ಟದಲ್ಲಿದ್ದಾಗ ಸ್ನೇಹಿತರ ಸಹಾಯವಿರುತ್ತದೆ. ಅತಿಯಾದ ಜವಾಬ್ದಾರಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ. ಕೌಟುಂಬಿಕ ಜೀವನದಲ್ಲಿ ಅನ್ಯೋನ್ಯತೆ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳು ದೊರೆಯುತ್ತವೆ. ಕುಟುಂಬದ ಸಂಪೂರ್ಣ ಜವಾಬ್ದಾರಿಯಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ

ವೃಷಭ

ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರಲಿವೆ. ಸ್ನೇಹಿತರ ಸಹಕಾರದಿಂದಾಗಿ ನೆಮ್ಮದಿ ಇರುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮದಂತಹ ಮಾರ್ಗಗಳ ಮೊರೆಹೋಗಿ. ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಆಹಾರ ಮತ್ತು ದೈನಂದಿನ ಕಾರ್ಯಕ್ರಮಗಳ ಬದಲಾವಣೆ ಮಾಡಬೇಕಾಗಬಹುದು. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಕಂಡುಬರುತ್ತದೆ.

ಮಿಥುನ

ಮನಸ್ಸಿಗೆ ನೆಮ್ಮದಿ ಇರುತ್ತದೆ. ಕುಟುಂಬದಲ್ಲಿ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರಣ ತೊಂದರೆಗಳು ಮರೆಯಾಗಲಿವೆ. ಜೀವನದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಲಿವೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಸರ್ಕಾರದ ಸಹಾಯವಿದೆ. ತಂದೆಯಿಂದ ಹಣದ ಸಹಾಯ ದೊರೆಯಲಿದೆ. ಪದೇ ಪದೇ ಮನಸ್ಸನ್ನು ಬದಲಿಸದಿರಿ. ಮನಸ್ಸು ಒಳ್ಳೆಯದಾದರು ದುಡುಕಿ ಮಾತನಾಡಿ ವಿವಾದವನ್ನು ಎದುರಿಸಬೇಕಾಗುತ್ತದೆ.

ಕಟಕ

ಖರ್ಚು ವೆಚ್ಚಗಳಿಗೆ ಸಮನಾದ ಆದಾಯ ಇರುತ್ತದೆ. ಜನ್ಮಸ್ಥಳಕ್ಕೆ ಭೇಟಿ ನೀಡುವಿರಿ. ಮನೆಯನ್ನು ಅಲಂಕರಿಸಲು ದುಬಾರಿ ವೆಚ್ಚದ ಪದಾರ್ಥಗಳನ್ನು ಕೊಳ್ಳುವಿರಿ. ಮುಂಜಾಗರೂಕತೆಯಿಂದ ಕೆಲಸ ಕಾರ್ಯದಲ್ಲಿ ತಲ್ಲೀನರಾಗುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಭವಿಷ್ಯಕ್ಕಾಗಿ ಹಣ ಉಳಿಸುವ ಯೋಜನೆಯನ್ನು ರೂಪಿಸುವಿರಿ. ಸರ್ಕಾರದ ಅನುಮತಿಯಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಸ್ವಗೃಹ ಭೂಲಾಭವಿದೆ.

ಸಿಂಹ

ಸಿಡುಕುತನ ತೋರದೆ ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ಸುಖಮಯ ಜೀವನ ನಡೆಸಬಹುದು. ಉದ್ಯೋಗವನ್ನು ಬದಲಾಯಿಸುವ ಅವಕಾಶ ದೊರೆಯುತ್ತದೆ. ಭೂವಿವಾದವನ್ನು ಎದುರಿಸಬೇಕಾಗುತ್ತದೆ. ಜನಸೇವೆಯಲ್ಲಿ ಸಂತಸವನ್ನುಕಾಣುವಿರಿ. ವ್ಯಾಪಾರದಲ್ಲಿ ತೊಂದರೆ ಕಾಣದು. ಐಷಾರಾಮಿ ವಾಹನವನ್ನು ಕೊಳ್ಳುವಿರಿ. ಅದೃಷ್ಟದ ಜೀವನ ನಿಮದಾಗುತ್ತದೆ. ಮಕ್ಕಳ ಜೊತೆಯಲ್ಲಿ ಬೇಸರದಿಂದ ದೂರಾಗಲು ದೀರ್ಘಕಾಲದ ಪ್ರವಾಸ ಮಾಡುವಿರಿ.

ಕನ್ಯಾ

ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಉದ್ಯೋಗದಲ್ಲಿ ಆತಂಕದ ಕ್ಷಣಗಳು ದೂರವಾಗುತ್ತವೆ. ಬೇರೆಯವರ ಮಾತನ್ನು ಕೇಳದೆ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ನೂತನ ವಾಹನವನ್ನು ಕೊಳ್ಳುವೈರಿ. ಕುಟುಂಬದಲ್ಲಿ ಶಾಂತಿ ಸಾಮರಸ್ಯ ಕಂಡುಬರುತ್ತದೆ. ಭೂವ್ಯಹಾರದ ಮದ್ಯಸ್ಥಿಕೆಯ ಮೂಲಕ ಹೇರಳ ಹಣ ಸಂಪಾದಿಸುವಿರಿ. ಸ್ನೇಹಿತರ ಸಹಯೋಗದಲ್ಲಿ ದೊಡ್ಡ ಪ್ರಮಾಣದ ವ್ಯಾಪಾರೀ ಸಂಸ್ಥೆಯೊಂದನ್ನು ಆರಂಭಿಸುವಿರಿ.

ತುಲಾ

ಜನ ಸಾಮಾನ್ಯರ ಜೊತೆಯಲ್ಲಿ ಬೆರೆತು ಸಮಾಜದ ಕೇಂದ್ರಬಿಂದುವಾಗುವಿರಿ. ಫಲಿತಾಂಶದ ಬಗ್ಗೆ ಯೋಚಿಸದೆ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಪ್ರತಿಷ್ಠಿತ ಕಂಪನಿಯೊಂದರ ಪಾಲುದಾರಿಕೆ ದೊರೆಯುತ್ತದೆ. ಸುಖ ಮತ್ತು ಸಂತೃಪ್ತಿಯ ಜೀವನ ನಡೆಸುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಿರಿ. ವಂಶದ ಹಿರಿಯರ ಸಹಾಯ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಕೃಷಿ ಸಂಪನ್ಮೂಲಗಳ ವ್ಯಾಪಾರ ವಹಿವಾಹಿಟಿನಿಂದ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ.

ವೃಶ್ಚಿಕ

ಮಾನಸಿಕ ಒತ್ತಡಕ್ಕೆ ಒಳಗಾಗದಿರಿ. ಆರೋಗ್ಯದಲ್ಲಿ ಏರಿಳಿತ ಕಂಡುಬರಲಿದೆ. ಅದೃಷ್ಟವಶಾತ್ ಕೈ ತಪ್ಪಿಹೋಗಿದ್ದ ವ್ಯಾಪಾರ ಮತ್ತೊಮ್ಮೆ ನಿಮಗೆ ದೊರೆಯಲಿದೆ. ಆದಾಯದಲ್ಲಿ ಉನ್ನತಿ ಇರುತ್ತದೆ. ಮಕ್ಕಳಿಗೆ ಪರಸ್ಥಳದಲ್ಲಿ ಉದ್ಯೋಗ ದೊರೆಯುತ್ತದೆ. ತಂದೆಗೆ ಸೇರಿದ ಭೂಮಿಯನ್ನು ಮಾರಾಟದ ಮಾಡಿ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಿವೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯಿರಿ.

ಧನಸ್ಸು

ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಜೀವನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಸಮಾಜದಲ್ಲಿ ಮುಖ್ಯಸ್ಥರಾಗಿ ಜೀವನ ನಡೆಸುವಿರಿ. ವ್ಯಾಪಾರೋದ್ದೇಶಕ್ಕಾಗಿ ಬೃಹತ್ ವಾಹನವನ್ನು ಖರೀದಿಸುವಿರಿ. ಸಂತಾನ ಲಾಭವಿದೆ. ವಂಶದ ಹಿರಿಯರಿಗೆ ಸೇರಿದ ಆಸ್ತಿಯಲ್ಲಿನ ಪಾಲು ದೊರೆಯುತ್ತದೆ. ದೃಢ ಸಂಕಲ್ಪದಿಂದ ಯಾವ ಕೆಲಸವನ್ನಾದರೂ ಸಾಧಿಸಬಲ್ಲಿರಿ. ಎಡೆಬಿಡದ ಕಾರ್ಯಕ್ರಮದ ನಡುವೆ ವಿಶ್ರಾಂತಿಯನ್ನೂ ಪಡೆಯಿರಿ

ಮಕರ

ಕೆಲಸ ಕಾರ್ಯಮಾಡುವ ರೀತಿಗೆ ಎಲ್ಲರಿಗೂ ಮಾದರಿಯಾಗುವಿರಿ. ಕಷ್ಟ ನಷ್ಟಗಳಿಗೆ ಭಯ ಪಡದೆ ನ್ಯಾಯದ ಪಕ್ಷಪಾತಿಯಾಗುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಒಂದೇ ಭಾವನೆಯಿಂದ ನೋಡುವಿರಿ. ಉದ್ಯೋಗದಲ್ಲಿ ಉನ್ನತ ದರ್ಜೆಯನ್ನು ತಲುಪುವಿರಿ. ಮಕ್ಕಳು ಸರ್ಕಾರದ ಸಹಕಾರದಿಂದ ವಿದೇಶಕ್ಕೆ ತೆರಳಲಿದ್ದಾರೆ. ಕುಟುಂಬದ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸಿಕೊಡುವಿರಿ.

ಕುಂಭ

ಮನಬಿಚ್ಚಿ ಮಾತನಾಡಿದಲ್ಲಿ ಮನದ ಅಭೀಷ್ಟಗಳೆಲ್ಲವೂ ಸುಲಭದಲ್ಲಿ ಈಡೇರಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆತು ದೂರದ ಊರನ್ನು ತಲುಪಬೇಕಾಗುತ್ತದೆ. ಮಕ್ಕಳಿಗೆ ಪ್ರಖ್ಯಾತ ಸಂಸ್ಥೆಯಲ್ಲಿ ಉನ್ನತಾಧಿಕಾರ ದೊರೆಯಲಿದೆ. ಅವಕಾಶವಾದಿಗಳು. ಕುಟುಂಬದಲ್ಲಿ ಬೇಸರದ ಸನ್ನಿವೇಶವೊಂದು ನಡೆಯಲಿದೆ. ತಾಯಿಗೆ ಸೇರಬೇಕಾಗಿದ್ದ ಆಸ್ತಿಯ ಕೆಲ ಭಾಗ ಪರರ ಪಾಲಾಗಲಿದೆ. ಮನಸ್ಸಿಗೆ ಒಪ್ಪುವಂತಹ ಕೆಲಸಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಿರಿ.

ಮೀನ

ಅವಕಾಶಗಳಿಗೆ ಬರವಿಲ್ಲ. ಅದರ ಸದುಪಯೋಗ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಅದೃಷ್ಟವಿದೆ. ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ನಡೆಯುತ್ತಾರೆ. ಧಾರ್ಮಿಕ ಕಾರ್ಯವೊಂದಕ್ಕೆ ಹೆಚ್ಚಿನ ಹಣ ವೆಚ್ಚವಾಗುತದೆ. ಸಂತಾನಲಾಭವಿದೆ. ವಿದೇಶದಲ್ಲಿ ಉದ್ಯೋಗ ಲಭಿಸುತ್ತದೆ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ವಿಚಾರ ಮಾಡುವಿರಿ.

ವಿಭಾಗ