Weekly Horoscope: ಆದಾಯದಲ್ಲಿ ಹೆಚ್ಚಳ, ಆರೋಗ್ಯದಲ್ಲಿ ಚೇತರಿಕೆ, ನೀರಿನೊಂದಿಗೆ ಚೆಲ್ಲಾಟ ಬೇಡ; ಫೆ 18ರಿಂದ 24 ರವರೆಗಿನ ವಾರಭವಿಷ್ಯ
ಫೆಬ್ರವರಿ 18 ರಿಂದ 24 ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (February 18 to February 24 Weekly Horoscope)
ಫೆಬ್ರವರಿ 18 ರಿಂದ 24 ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (February 18th to February 24th Weekly Horoscope)
ರಾಶಿ ಫಲಗಳು
ಮೇಷ
ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ಆದರೆ ದಿಟ್ಟತನದಿಂದ ಯಶಸ್ಸನ್ನು ಗಳಿಸುವಿರಿ. ಕ್ರಮೇಣವಾಗಿ ಆರ್ಥಿಕಾಭಿವೃದ್ಧಿ ಇರುತ್ತದೆ. ಕುಟುಂಬದಲ್ಲಿ ಶುಭಕಾರ್ಯಕ್ರಮಗಳು ನಡೆಯಲಿವೆ. ಕಷ್ಟದಲ್ಲಿದ್ದಾಗ ಸ್ನೇಹಿತರ ಸಹಾಯ ದೊರೆಯುತ್ತದೆ. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಕೌಟುಂಬಿಕ ಜೀವನದಲ್ಲಿ ಅನ್ಯೋನ್ಯತೆ ಇರುತ್ತದೆ. ಉದ್ಯೋಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಎದುರಾಗುತ್ತವೆ. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಯಾವುದೇ ತೊಂದರೆ ಬಾರದು. ಮಾನಸಿಕ ಒತ್ತಡ ಹೆಚ್ಚುತ್ತದೆ. ಭವಿಷ್ಯದ ಜೀವನಕ್ಕಾಗಿ ಹಣವನ್ನು ಉಳಿಸುವ ಯೋಜನೆ ರೂಪಿಸುವಿರಿ.
ವೃಷಭ
ಜೀವನದಲ್ಲಿನ ಉತ್ತಮ ಬದಲಾವಣೆಗಳು ಸಂತಸ ತರಲಿವೆ. ಸ್ನೇಹಿತರ ಸಹಕಾರ ಹೊಸ ಹುಮ್ಮಸ್ಸನ್ನು ಉಂಟುಮಾಡುತ್ತದೆ. ಹಠದ ಸ್ವಭಾವದಿಂದಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತ್ನಿಸುವಿರಿ. ಯೋಗ ಪ್ರಾಣಾಯಾಮಗಳ ಅಭ್ಯಾಸದಿಂದ ಅನುಕೂಲವಿದೆ. ಸಂಗೀತ ನಾಟ್ಯದಂತಹ ಪ್ರಾಚೀನ ಕಲೆಗಳಲ್ಲಿ ಸಾಧನೆ ಮಾಡುವಿರಿ. ಉದ್ಯೋಗದಲ್ಲಿ ಉನ್ನತಿ ನಿರೀಕ್ಷಿಸಬಹುದು. ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಕಾಗಬಹುದು. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಕಂಡುಬರುತ್ತದೆ. ಪ್ರವಾಸ ಮಾಡಲು ಸಾದ್ಯವಾಗುವುದಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ನಡೆದಲ್ಲಿ ತೊಂದರೆ ಇರದು.
ಮಿಥುನ
ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಕುಟುಂಬದ ತೊಂದರೆಗಳು ಕಡಿಮೆಯಾಗಲಿವೆ. ಜೀವನದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಲಿವೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಸರ್ಕಾರದ ಸಹಾಯದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ತಂದೆಯಿಂದ ಹಣದ ಸಹಾಯ ದೊರೆಯಲಿದೆ. ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ. ಮನಸ್ಸು ಒಳ್ಳೆಯದಾದರು ದುಡುಕಿ ಮಾತನಾಡಿ ವಿವಾದವನ್ನು ಎದುರಿಸಬೇಕಾಗುತ್ತದೆ. ಆದಾಯದಲ್ಲಿ ಪ್ರಗತಿ ಕಂಡುಬರಲಿದೆ. ಸಾಲದ ವ್ಯವಹಾರದಿಂದ ದೂರ ಉಳಿಯುವಿರಿ. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಪ್ರೀತಿ ತುಂಬಿದ ಮಾತುಗಳು ಹೊಸ ನಿರೀಕ್ಷೆಗಳಿಗೆ ಕಾರಣವಾಗಲಿವೆ.
ಕಟಕ
ಖರ್ಚು ವೆಚ್ಚಗಳಿಗೆ ಸಮನಾದ ಆದಾಯ ಇರುತ್ತದೆ. ಬಹುದಿನದ ನಂತರ ಜನ್ಮಸ್ಥಳಕ್ಕೆ ಭೇಟಿ ನೀಡುವಿರಿ. ಮನೆಗೆ ಅವಶ್ಯಕವಾದ ಆಕರ್ಷಕ ಪದಾರ್ಥಗಳನ್ನು ಕೊಳ್ಳುವಿರಿ. ಜಾಗರೂಕತೆಯಿಂದ ಕೆಲಸ ಕಾರ್ಯದಲ್ಲಿ ತಲ್ಲೀನರಾಗುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಭವಿಷ್ಯದ ಬಗ್ಗೆ ಕಾಳಜಿ ಇರುತ್ತದೆ. ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. ಸರ್ಕಾರದ ಅನುಮತಿಯಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಸ್ವಗೃಹ- ಭೂಲಾಭವಿದೆ. ಸಂಗಾತಿಯ ಜೊತೆಯಲ್ಲಿ ಇದ್ದ ಬೇಸರ ಮರೆಯಾಗಲಿದೆ. ವಾಹನವೊಂದನ್ನು ಕೊಳ್ಳುವಿರಿ. ದ್ರವಾಹಾರ ಸೇವಿಸುವ ವಿಚಾರದಲ್ಲಿ ಎಚ್ಚರಿಕೆ ಇರಲಿ.
ಸಿಂಹ
ಸಿಡುಕುತನ ತೋರದಿರಿ. ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ. ಭೂವಿವಾದವು ಅಂತ್ಯಗೊಳ್ಳಲಿದೆ. ವ್ಯಾಪಾರದಲ್ಲಿ ಪ್ರತಿಸ್ಪರ್ದೆಯನ್ನು ಎದುರಿಸಬೇಕಾಗುತ್ತದೆ. ಜನಸೇವೆಯಲ್ಲಿ ಸಂತಸವನ್ನುಕಾಣುವಿರಿ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಐಷಾರಾಮಿ ವಾಹನವನ್ನು ಕೊಳ್ಳುವಿರಿ. ಅನಗತ್ಯ ಖರ್ಚುವೆಚ್ಚಗಳು ಇರುತ್ತವೆ. ಅದೃಷ್ಟದ ಜೀವನ ನಿಮದಾಗುತ್ತದೆ. ಮಕ್ಕಳ ಜೊತೆಯಲ್ಲಿ ಸಂತಸದಿಂದ ಕಾಲಕಳೆಯುವಿರಿ. ಸ್ವಂತ ಕೆಲಸಕಾರ್ಯದಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದ ಹಿರಿಯರ ಜೊತೆಯಲ್ಲಿ ವಾಗ್ವಾದ ಇರುತ್ತದೆ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ.
ಕನ್ಯಾ
ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಉದ್ಯೋಗದಲ್ಲಿನ ಆತಂಕದ ಕ್ಷಣಗಳು ದೂರವಾಗುತ್ತವೆ. ಪ್ರತಿಯೊಂದು ವಿಚಾರವನ್ನು ಟೀಕಿಸುವಿರಿ. ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ನೂತನ ವಾಹನವನ್ನು ಕೊಳ್ಳುವಿರಿ. ದಿನ ಕಳೆದಂತೆ ಕುಟುಂಬದಲ್ಲಿ ಶಾಂತಿ ಸಾಮರಸ್ಯ ಕಂಡುಬರುತ್ತದೆ. ಭೂ ವ್ಯಹಾರದ ಮದ್ಯಸ್ಥಿಕೆಯ ಮೂಲಕ ಹಣ ಸಂಪಾದಿಸುವಿರಿ. ಸ್ನೇಹಿತರ ಸಹಯೋಗದಲ್ಲಿ ಹಣಕಾಸಿನ ಸಂಸ್ಥೆಯೊಂದನ್ನು ಆರಂಭಿಸುವ ಇಂಗಿತ ಇರುತ್ತದೆ. ಮನಸಿಗೊಪ್ಪುವ ಕೆಲಸವನ್ನು ಮಾತ್ರ ಮಾಡಲು ಇಚ್ಚಿಸುವಿರಿ. ಗಂಟಲ ಬೇನೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ತೋರುವಿರಿ. ಎಲ್ಲರೊಂದಿಗೆ ಆತ್ಮೀಯತೆ ರೂಡಿಸಿಕೊಳ್ಳಿರಿ.
ತುಲಾ
ಜನ ಸಾಮಾನ್ಯರ ಜೊತೆಯಲ್ಲಿ ಸ್ನೇಹದಿಂದ ವರ್ತಿಸುವಿರಿ. ಕೆಲಸ ಕಾರ್ಯದ ಮುಖೇನ ಸಮಾಜದ ಕೇಂದ್ರಬಿಂದುವಾಗುವಿರಿ. ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ಯೋಚಿಸದೆ ಕರ್ತವ್ಯದಲ್ಲಿ ಮಗ್ನರಾಗುವಿರಿ. ಕೌಟುಂಬಿಕ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಪ್ರತಿಷ್ಠಿತ ಕಂಪನಿಯೊಂದರ ಪಾಲುದಾರಿಕೆ ದೊರೆಯುತ್ತದೆ. ಸುಖ ಮತ್ತು ಸಂತೃಪ್ತಿಯ ಜೀವನ ನಡೆಸುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಿರಿ. ವಂಶದ ಹಿರಿಯರ ಸಹಾಯ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಕೃಷಿ ಸಂಪನ್ಮೂಲಗಳ ವ್ಯಾಪಾರ ವಹಿವಾಹಿಟಿನಿಂದ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ. ಹಣದ ಆಸೆ ಇರದು. ಉತ್ತಮ ಸ್ಥಾನಮಾನವನ್ನು ನಿರೀಕ್ಷಿಸುವಿರಿ. ಶಾಂತಿ ಸಂಯಮದಿಂದ ವರ್ತಿಸಿ.
ವೃಶ್ಚಿಕ
ಕೌಟುಂಬಿಕ ವಿಚಾರದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡುಬರಲಿದೆ. ಕೈ ತಪ್ಪಿಹೋಗಿದ್ದ ವ್ಯಾಪಾರ ಮರಳಿ ದೊರೆಯಲಿದೆ. ಅನಾಯಾಸವಾಗಿ ಹೆಚ್ಚಿನ ಆದಾಯ ದೊರೆಯುತ್ತದೆ. ಮಕ್ಕಳು ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಇರುತ್ತದೆ. ವಿದೇಶದಲ್ಲಿ ಉದ್ಯೋಗ ಮುಂದುವರೆಸುವಿರಿ. ಸಂಗಾತಿಯ ಸಹಕಾರ ದೊರೆಯುತ್ತದೆ. ತಂದೆಗೆ ಸೇರಿದ ಆಸ್ತಿಯಲ್ಲಿ ನ್ಯಾಯಯುತ ಪಾಲು ನಿಮ್ಮದಾಗಲಿದೆ. ಭೂ ಮಾರಾಟದಿಂದ ಹಣ ಗಳಿಸುವಿರಿ. ನೂತನ ವ್ಯಾಪಾರಿ ಸಂಸ್ಥೆಯನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಿವೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುವಿರಿ.
ಧನಸ್ಸು
ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಜೀವನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಸಮಾಜದಲ್ಲಿ ಮುಖ್ಯಸ್ಥರಾಗಿ ಜೀವನ ನಡೆಸುವಿರಿ. ವ್ಯಾಪಾರೋದ್ದೇಶಕ್ಕಾಗಿ ಬೃಹತ್ ವಾಹನವನ್ನು ಖರೀದಿಸುವಿರಿ. ಸಂತಾನ ಲಾಭವಿದೆ. ವಂಶದ ಹಿರಿಯರಿಗೆ ಸೇರಿದ ಆಸ್ತಿಯಲ್ಲಿನ ಪಾಲು ದೊರೆಯುತ್ತದೆ. ದೃಢ ಸಂಕಲ್ಪದಿಂದ ಯಾವ ಕೆಲಸವನ್ನಾದರೂ ಸಾಧಿಸಬಲ್ಲಿರಿ. ಎಡೆಬಿಡದ ಕಾರ್ಯಕ್ರಮದ ನಡುವೆ ವಿಶ್ರಾಂತಿಯನ್ನೂ ಪಡೆಯಿರಿ. ಮಕ್ಕಳ ವಿಚಾರದಲ್ಲಿ ಯೋಚನೆ ಇರುತ್ತದೆ. ಅವಶ್ಯಕತೆ ಇದ್ದಲ್ಲಿ ಉದ್ಯೋಗ ಬದಲಿಸಬಹುದು. ಹಣಕಾಸಿನ ವಿಚಾರದಲ್ಲಿ ದೃಡವಾದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಕೈ ಕಾಲುಗಳಲ್ಲಿ ನೋವಿನ ಬಾದೆ ಇರುತ್ತದೆ.
ಮಕರ
ಕೆಲಸ ಕಾರ್ಯಮಾಡುವ ರೀತಿಗೆ ಎಲ್ಲರೂ ಶ್ಲಾಘಿಸುತ್ತಾರೆ. ಎಲ್ಲರಿಗೂ ಮಾದರಿಯಾಗಿ ಬಾಳುವರು. ಕಷ್ಟ ನಷ್ಟಗಳಿಗೆ ಭಯ ಪಡದೆ ನ್ಯಾಯದ ಪಕ್ಷಪಾತಿಯಾಗುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಗೌರವಿಸುವಿರಿ. ಉದ್ಯೋಗದಲ್ಲಿ ಉನ್ನತ ದರ್ಜೆಯನ್ನು ತಲುಪುವಿರಿ. ಮಕ್ಕಳು ಸರ್ಕಾರದ ಸಹಕಾರದಿಂದ ವಿದೇಶಕ್ಕೆ ತೆರಳಲಿದ್ದಾರೆ. ಕುಟುಂಬದ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸಿಕೊಡುವಿರಿ. ಶೀತದ ದೋಷ ಬಹುವಾಗಿ ಕಾಡಲಿದೆ. ಒಳ್ಳೆಯ ಹೆಸರು ಗಳಿಸಲು ಬೇರೆಯವರ ಕೆಲಸವನ್ನೂ ಮಾಡುವಿರಿ. ವ್ಯಾಪಾರದಲ್ಲಿ ಹಿನ್ನಡೆ ಇರುತ್ತದೆ. ನಿಧಾನಗತಿಯಲ್ಲಿ ಕೆಲಸವನ್ನು ಆರಂಭಿಸುವಿರಿ. ಪ್ರಯಾಣವೊಂದನ್ನು ಮುಂದೂಡುವಿರಿ
ಕುಂಭ
ಮೌನದಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಮನಬಿಚ್ಚಿ ಮಾತನಾಡಿದಲ್ಲಿ ಮನದ ಅಭೀಷ್ಟಗಳೆಲ್ಲವೂ ಸುಲಭದಲ್ಲಿ ಈಡೇರಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆತು ವಿದೇಶಕ್ಕೆ ತೆರಳುವಿರಿ. ಮಕ್ಕಳಿಗೆ ಪ್ರಖ್ಯಾತ ಸಂಸ್ಥೆಯಲ್ಲಿ ಉನ್ನತಾದಿಕಾರ ದೊರೆಯಲಿದೆ. ಅವಕಾಶವಾದಿಗಳು. ಕುಟುಂಬದಲ್ಲಿ ಬೇಸರದ ಸನ್ನಿವೇಶವೊಂದು ನಡೆಯಲಿದೆ. ತಾಯಿಗೆ ಸೇರಬೇಕಾಗಿದ್ದ ಆಸ್ತಿಯಲ್ಲಿ ವಿವಾದ ಇರುತ್ತದೆ. ದುಡಿದ ಕೆಲ ಭಾಗವನ್ನು ಜನಸೇವೆಗೆ ಮೀಸಲಾಗಿಡುವಿರಿ. ಮನಸ್ಸಿಗೆ ಒಪ್ಪುವಂತಹ ಕೆಲಸಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸುವುದಿಲ್ಲ. ನೀರಿನ ಜೊತೆಯಲ್ಲಿ ಚೆಲ್ಲಾಟ ಆಡದಿರಿ. ನೂತನ ವಾಹನ ಲಾಭವಿದೆ.
ಮೀನ
ಅವಕಾಶಗಳಿಗೆ ಬರವಿಲ್ಲ. ಅದರ ಸದುಪಯೋಗ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿರಿ. ಕೊಟ್ಟ ಮಾತನ್ನು ಉಳಿಸಿಕೊಂಡು ಜನಮನ ಗೆಲ್ಲುವಿರಿ. ಸತತ ಪ್ರಯತ್ನದಿಂದ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಅದೃಷ್ಟದಿಂದ ವಿವಾದವೊಂದನ್ನು ಗೆಲ್ಲುವಿರಿ. ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ನಡೆಯುತ್ತಾರೆ. ಧಾರ್ಮಿಕ ಕಾರ್ಯವೊಂದರ ಮುಂದಾಳತ್ವ ವಹಿಸುವಿರಿ. ಮಕ್ಕಳ ಸಲುವಾಗಿ ಹೆಚ್ಚಿನ ಹಣ ವೆಚ್ಚವಾಗುತದೆ. ಸಂತಾನ ಲಾಭವಿದೆ. ವಿದೇಶದಲ್ಲಿ ಉದ್ಯೋಗ ಲಭಿಸುತ್ತದೆ. ಸ್ವಂತ ಭೂಮಿ ಅಥವ ಮನೆಯನ್ನು ಕೊಳ್ಳುವ ವಿಚಾರ ಮಾಡುವಿರಿ. ಮನದಲ್ಲಿ ಆತಂಕವಿದ್ದರೂ ಶಾಂತಿಯಿಂದ ವರ್ತಿಸುವಿರಿ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).