Weekly Horoscope: ಅನಿವಾರ್ಯವಾಗಿ ಮನಸ್ಸಿಗೆ ಒಪ್ಪದ ಕೆಲಸ ಮಾಡುವಿರಿ, ಉದ್ಯೋಗದಲ್ಲಿ ಉತ್ತಮ ಅವಕಾಶ; ಫೆ 25ರಿಂದ ಮಾ 2ರವರೆಗಿನ ವಾರಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಅನಿವಾರ್ಯವಾಗಿ ಮನಸ್ಸಿಗೆ ಒಪ್ಪದ ಕೆಲಸ ಮಾಡುವಿರಿ, ಉದ್ಯೋಗದಲ್ಲಿ ಉತ್ತಮ ಅವಕಾಶ; ಫೆ 25ರಿಂದ ಮಾ 2ರವರೆಗಿನ ವಾರಭವಿಷ್ಯ

Weekly Horoscope: ಅನಿವಾರ್ಯವಾಗಿ ಮನಸ್ಸಿಗೆ ಒಪ್ಪದ ಕೆಲಸ ಮಾಡುವಿರಿ, ಉದ್ಯೋಗದಲ್ಲಿ ಉತ್ತಮ ಅವಕಾಶ; ಫೆ 25ರಿಂದ ಮಾ 2ರವರೆಗಿನ ವಾರಭವಿಷ್ಯ

ಫೆಬ್ರವರಿ 25ರಿಂದ ಮಾರ್ಚ್ 2 ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (February 25 to March 2 Weekly Horoscope)

ವಾರ ಭವಿಷ್ಯ
ವಾರ ಭವಿಷ್ಯ

ಫೆಬ್ರವರಿ 25 ರಿಂದ ಮಾರ್ಚ್ 2 ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (February 25th to March 2nd Weekly Horoscope)

ರಾಶಿ ಫಲಗಳು

ಮೇಷ

ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ. ದುಡುಕಿ ಮಾತನಾಡುವ ಕಾರಣ ವಿವಾದವೊಂದು ಎದುರಾಗಬಹುದು. ಅನವಶ್ಯಕ ಮಾನಸಿಕ ಒತ್ತಡ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಕಾನೂನಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆದರೆ ಕಾರ್ಯರೂಪಕ್ಕೆ ತರುವ ಮುನ್ನ ಒಮ್ಮೆ ಯೋಚಿಸಬೇಕು. ಉತ್ತಮ ಆದಾಯವಿದ್ದರೂ ಖರ್ಚುವೆಚ್ಚಗಳನ್ನು ನಿಯಂತ್ರಿಸದೆ ಹೋದಲ್ಲಿ ತೊಂದರೆ ಇದೆ. ಕೆಲವೊಂದು ಸಮಸ್ಯೆಗಳು ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆ. ಸಮಯಕ್ಕೆ ತಕ್ಕಂತೆ ನಿಮ್ಮ ಮನಸ್ಸು ಸಹ ಬದಲಾಗಬೇಕು. ಸಂಗಾತಿಯ ನೆರವಿನಿಂದ ನಿಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವಿರಿ. ಕುಟುಂಬದ ಜನರಾಗಲಿ ಅಥವಾ ಹೊರಗಿನವರಾಗಲಿ ಅವರೊಂದಿಗಿರುವ ವಿವಾದಗಳಿಗೆ ಪರಿಹಾರ ಕಂಡುಹಿಡಿಯಿರಿ.

ವೃಷಭ

ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ವಯೋವೃದ್ಧರ ಆರೋಗ್ಯದ ಬಗ್ಗೆ ಯೋಚನೆ ಇರುತ್ತದೆ. ಅನವಶ್ಯಕ ಖರ್ಚು ವೆಚ್ಚಗಳು ಬಾಧಿಸಲಿವೆ. ಹಣಕಾಸು ಸಂಸ್ಥೆಯಿಂದ ಹಣ ಪಡೆಯುವ ಸಾಧ್ಯತೆ ಇದೆ. ಸಾಲದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಹೊಸ ಜಮೀನನ್ನು ಕೊಳ್ಳುವ ಮಾತುಕತೆ ನಡೆಯಲಿದೆ. ಮನದಲ್ಲಿ ಯಾವುದಾದರೊಂದು ಯೋಚನೆ ಸದಾ ಕಾಡುತ್ತದೆ. ವಿದೇಶಿ ಸ್ವಾಮ್ಯದ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಮೇಲಧಿಕಾರಿಗಳು ನಿಮ್ಮ ಕಾರ್ಯವೈಖರಿಯನ್ನು ಮೆಚ್ಚುತ್ತಾರೆ. ಸಹೋದ್ಯೋಗಿಗಳ ಬೆಂಬಲ ದೊರೆಯುತ್ತದೆ. ವಿದ್ಯಾರ್ಥಿಗಳು ವಿಚಲಿತರಾಗದೆ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಅತಿಥಿ ಸತ್ಕಾರದ ವೇಳೆ ಸ್ವಂತ ಕಾರ್ಯ ಯೋಜನೆಯನ್ನು ಮರೆತು ಹತಾಶರಾಗುವಿರಿ.

ಮಿಥುನ

ವಿಶ್ರಾಂತಿ ಇಲ್ಲದೆ ದುಡಿಯುವ ಕಾರಣ ಮನಸ್ಸಿನಲ್ಲಿ ಬೇಸರ ಮೂಡುತ್ತದೆ. ಉತ್ತಮ ದೈಹಿಕ ಚಟುವಟಿಕೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಸೋಲಿನ ಬಗ್ಗೆ ಯೋಚಿಸದೆ ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಕ್ರಮೇಣವಾಗಿ ಹಣಕಾಸಿನ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾಗುತ್ತದೆ. ಕುಟುಂಬದಲ್ಲಿ ಪರಸ್ಪರ ಉತ್ತಮ ಅನುಬಂಧ ಇರುವುದಿಲ್ಲ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವಿರಿ. ಉದ್ಯೋಗದಲ್ಲಿ ಎದುರಾಗುವ ಸವಾಲುಗಳನ್ನು ಗೆಲ್ಲುವಿರಿ. ಸಂಗಾತಿಯೊಂದಿಗೆ ಕೆಲವೊಮ್ಮೆ ಅನಾವಶ್ಯಕ ಮನಸ್ತಾಪ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಆತುರ ಪದಡೆ ಸಹನೆಯಿಂದ ವರ್ತಿಸಿದರೆ ಕಷ್ಟ ನಷ್ಟಗಳು ದೂರವಾಗಲಿವೆ. ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯಲು ಕೆಲ ಸಮಯವನ್ನು ಮೀಸಲಿಡುವಿರಿ.

ಕಟಕ

ಎಡಬಿಡದೆ ಶುಭಕಾರ್ಯಗಳಿಗೆ ತೆರಳುವಿರಿ. ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸುವಿರಿ. ಯಾವುದೇ ಸಮಯವನ್ನು ನಿಮಗೆ ಅನುಕೂಲವಾಗುವಂತೆ ಬಗೆಹರಿಸಿಕೊಳ್ಳಬಲ್ಲಿರಿ. ಉದ್ಯೋಗದಲ್ಲಿ ಎದುರಾಗುವ ಸನ್ನಿವೇಶಗಳನ್ನು ಬೇಸರದಿಂದಲೇ ಎದುರಿಸುವಿರಿ. ನಿಮ್ಮಲ್ಲಿರುವ ನಿತ್ಯ ಜೀವನಕ್ಕೆ ಸಹಕಾರಿಯಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ. ನಿಮ್ಮ ಸಾಮರ್ಥ್ಯ ಅನುಗುಣವಾಗಿ ಕೆಲಸಕಾರ್ಯಗಳನ್ನು ಆಯ್ಕೆ ಮಾಡುವಿರಿ. ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ತಲೆದೋರುತ್ತದೆ. ಆದಾಯದ ಬಗ್ಗೆ ಗಮನವಹಿಸಿ ಸಣ್ಣಪುಟ್ಟ ಹಣಕಾಸಿನ ಯೋಜನೆ ಆರಂಭಿಸುವಿರಿ.

ಸಿಂಹ

ಆಹಾರ ಸೇವನೆಯಲ್ಲಿ ಮಿತಿ ಇರುತ್ತದೆ. ಇದರಿಂದ ಸಹಜವಾಗಿ ಉತ್ತಮ ಆರೋಗ್ಯ ದೊರೆಯುತ್ತದೆ. ಕೈ ತುಂಬ ಹಣವಿದ್ದರೂ ಸರಳ ಜೀವನ ನಡೆಸುವಿರಿ. ಸಮಯಕ್ಕೆ ತಕ್ಕಂತೆ ಹಣ ದೊರೆಯುತ್ತದೆ. ಆತುರಪಡದೆ ಸಹನೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಕುಟುಂಬದ ಜವಾಬ್ದಾರಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಮಾನಸಿಕವಾಗಿ ಸದೃಢವಾದ ಕಾರಣ ಯಾವುದೇ ತೊಂದರೆ ಇರದು. ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಹಲವು ಮಾರ್ಗಗಳನ್ನು ಅವಲಂಬಿಸುವಿರಿ. ಉದ್ಯೋಗದ ವಿಚಾರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಆದ್ದರಿಂದ ಸರಿಯಾದ ಕಾರ್ಯತಂತ್ರವನ್ನು ರೂಪಿಸಲು ಪ್ರಯತ್ನಿಸಿ. ಈ ಹಿಂದೆ ಬಾಕಿ ಉಳಿದಿರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿಯಬಹುದು.

ಕನ್ಯಾ

ಕೆಲಸ ಕಾರ್ಯಗಳಲ್ಲಿ ತಾರತಮ್ಯ ತೋರದೆ ಆತ್ಮವಿಶ್ವಾಸದಿಂದ ಕರ್ತವ್ಯ ನಿರ್ವಹಿಸುವಿರಿ. ಆದರೆ ಸ್ತ್ರೀಯರ ಆರೋಗ್ಯದಲ್ಲಿ ಕೊಂಚ ಏರಿಳಿತ ಕಂಡು ಬರುತ್ತದೆ. ಹೆಚ್ಚಿನ ಪರಿಶ್ರಮ ಇರದ ಕೆಲಸ ಕಾರ್ಯಗಳನ್ನು ಮಾತ್ರ ನಿರ್ವಹಿಸುವಿರಿ. ಸಾಧ್ಯವಾದರೆ ವಾದ ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸಿ. ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸುವಿರಿ. ಉತ್ತಮ ಯೋಜನೆಗಳನ್ನು ಸಿದ್ಧಪಡಿಸದೆ ಯಾವುದೇ ಕೆಲಸ ಆರಂಭಿಸುವುದಿಲ್ಲ. ಕುಟುಂಬದ ಸದಸ್ಯರು ಮಧ್ಯಸ್ಥಿಕೆ ವಹಿಸುವ ಕೆಲಸ ಕಾರ್ಯಗಳಲ್ಲಿ ಅಪಜಯ ಕಂಡು ಬರುತ್ತದೆ. ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವಿರಿ. ಸಮಯ ವ್ಯರ್ಥ ಮಾಡದೆ ಯಾವುದಾದರೂ ಒಂದು ಚಟುವಟಿಕೆಗಳಲ್ಲಿ ಭಾಗವಹಿಸುವಿರಿ

ತುಲಾ

ಮನಸ್ಸಿಗೆ ಒಪ್ಪದ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ನಿಮ್ಮ ಉತ್ತಮ ಪ್ರಯತ್ನದಿಂದ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಉಂಟಾಗಲಿದೆ. ಆರೋಗ್ಯದ ವಿಚಾರದಲ್ಲಿಟ್ಟಿನ ಕಟ್ಟುನಿಟ್ಟಿನ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಎಲ್ಲರ ಮನೆಗೆಲ್ಲುವಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ತಡವಾದರೂ ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ಪ್ರಥಮ ಸ್ಥಾನವನ್ನು ಗಳಿಸುತ್ತಾರೆ. ಹಣಕಾಸಿನ ವ್ಯವಹಾರಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಹಿರಿಯರ ಜೊತೆಯಲ್ಲಿ ಮಧುರವಾದ ಸಂಬಂಧ ಇರುವುದಿಲ್ಲ. ಮನದ ಬೇಸರದಿಂದ ಹೊರಬರಲು ಸಂಗಾತಿ ಮತ್ತು ಮಕ್ಕಳ ಜೊತೆ ಪ್ರವಾಸಕ್ಕೆ ತೆರಳುವಿರಿ.

ವೃಶ್ಚಿಕ

ಸುಖ ಸಂತೋಷದಿಂದ ಜೀವನ ನಡೆಸಲು ಇಷ್ಟಪಡುವಿರಿ. ಹಣದ ಕೊರತೆ ಇರುವುದಿಲ್ಲ. ನಿಮ್ಮ ಜವಾಬ್ದಾರಿಗಳನ್ನು ಬೇರೆಯವರು ನಿರ್ವಹಿಸಬೇಕಾದಬಹುದು. ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ. ಯಾವುದೇ ವಿಚಾರದಲ್ಲಿ ದಿಢೀರನೆ ಅಂತಿಮ ತೀರ್ಮಾನಕ್ಕೆ ಬರಬೇಡಿರಿ. ಕಾದು ನೋಡುವ ಅಭ್ಯಾಸ ನಿರೀಕ್ಷಿತ ಫಲಗಳನ್ನು ನೀಡುತ್ತದೆ. ಸ್ವಂತ ಕೆಲಸ ಕಾರ್ಯಗಳಲ್ಲಿ ತೊಂದರೆಗಳನ್ನು ಎದುರಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಲೆಕ್ಕಪತ್ರಗಳನ್ನು ಕೂಲಂಕುಶವಾಗಿ ಪರಿಶೀಲಿಸಿ. ಕುಟುಂಬದ ಸದಸ್ಯರಿಂದ ನಿರೀಕ್ಷಿತ ಸಹಾಯ ಸಹಕಾರ ದೊರೆಯುತ್ತದೆ. ಅತಿಯಾದ ಆಸೆ ಆಕಾಂಕ್ಷೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ದೊರೆಯಲಿದೆ.

ಧನಸ್ಸು

ಮನದಲ್ಲಿರುವ ಚಿಂತೆಯ ಕಾರಣ ಯಾವುದೇ ಹೊಸ ಕೆಲಸ ಆರಂಭಿಸುವುದಿಲ್ಲ. ಆತ್ಮೀಯರ ಸಹಯೋಗದಲ್ಲಿ ಮನರಂಜನ ಕಾರ್ಯಕ್ರಮವನ್ನು ಆಯೋಜಿಸುವಿರಿ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಕೈಕಾಲುಗಳಲ್ಲಿ ನೋವು ಸಹಜವಾಗಿರುತ್ತದೆ. ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ದೊರೆಯುವ ಅವಕಾಶವನ್ನು ಸರಿಯಾದ ಹಾದಿಯಲ್ಲಿ ಬಳಸಿಕೊಳ್ಳಿರಿ. ಅನಾವಶ್ಯಕವಾಗಿ ಕುಟುಂಬದ ಹಿರಿಯರ ಮೇಲೆ ಕೋಪಗೊಳ್ಳುವಿರಿ. ವಿದ್ಯಾರ್ಥಿಗಳು ಗುರಿ ತಲುಪಲು ಹೆಚ್ಚಿನ ಪ್ರಯತ್ನ ಮಾಡಬೇಕು. ಸೋಲು ಗೆಲುವನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸುವಿರಿ. ಸಂಗಾತಿಯ ಜೊತೆಯಲ್ಲಿ ಹಣಕಾಸಿಗೆ ಸಂಬಂಧಪಟ್ಟಂತೆ ಮನಸ್ತಾಪ ಉಂಟಾಗಬಹುದು. ಅನಿವಾರ್ಯವಾಗಿ ವಾಸಸ್ಥಳವನ್ನು ಬದಲಾಯಿಸಬೇಕಾದ ಬಹುದು. ಸುಲಭವಾಗಿ ಯಾರ ಪ್ರಭಾವಕ್ಕೂ ಮಣಿಯುವುದಿಲ್ಲ.

ಮಕರ

ಗಂಟಲು ಅಥವಾ ಮೂಗಿನ ಸಮಸ್ಯೆಯಿಂದ ಬಳಲಬಹುದು. ಕೆಲಸ ಕಾರ್ಯಗಳಲ್ಲಿ ನಿಧಾನವಾಗಿ ಭಾಗವಹಿಸುವಿರಿ. ನಿಮ್ಮ ಕಾಲಿಗೆ ನಿಮ್ಮ ಕಾರ್ಯ ನೀತಿಗೆ ಎಲ್ಲರ ಪ್ರಶಂಸೆ ಲಭಿಸುತ್ತದೆ. ದುಡುಕದೆ ಶಾಂತಿ ಸಂಯಮದಿಂದ ಎಲ್ಲರೊಡನೆ ಬೆರೆಯುವಿರಿ. ವಿದ್ಯಾರ್ಥಿಗಳಿಗೆ ವಿಶೇಷವಾದ ಅನುಕೂಲತೆಗಳು ದೊರೆಯಲಿವೆ. ಅನಾವಶ್ಯಕ ಓಡಾಟ ಇರಲಿದೆ. ವಾಹನ ಚಾಲನೆ ಮಾಡುವ ವೇಳೆ ಮನಸ್ಸು ಹಿಡಿತದಲ್ಲಿ ಇರಲಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಉದ್ಯೋಗಕ್ಕೆ ಸಂಬಂಧಪಟ್ಟಂತೆ ಗಡಿಬಿಡಿಯ ಸನ್ನಿವೇಶವನ್ನು ಎದುರಾಗಲಿದೆ. ಯೋಗ ಮತ್ತು ಪ್ರಾಣಾಯಾಮದಿಂದ ಅತ್ಮವಿಶ್ವಾಸ ಹೆಚ್ಚಿಸಿಕೊಳ್ಳುವಿರಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗಲಿವೆ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳದಿರಿ.

ಕುಂಭ

ವಿಶ್ರಾಂತಿಯನ್ನು ಬಯಸುವಿರಿ. ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳದೆ ಹೋದಲ್ಲಿ ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಉತ್ತಮ ಆರೋಗ್ಯವನ್ನು ಗಳಿಸಲು ಪ್ರಯತ್ನಿಸುವಿರಿ. ಬೇಡದ ವಿಚಾರಗಳಿಗೆ ಚಿಂತೆ ಮಾಡಬೇಡಿ. ಹಿರಿಯ ಸೋದರ ಅಥವಾ ಸೋದರಿಯ ಸಲುವಾಗಿ ಹೆಚ್ಚಿನ ಹಣದ ಅವಶ್ಯಕತೆ ಇದೆ. ಸೋಲಿನ ದವಡೆಯಲ್ಲಿ ಇರುವವರಿಗೆ ಸ್ಪೂರ್ತಿ ತುಂಬುವಿರಿ. ಸುಧೀರ್ಘವಾಗಿ ಕಾಡುತ್ತಿದ್ದ ಆರೋಗ್ಯದಲ್ಲಿನ ಸಮಸ್ಯೆ ನಿವಾರಣೆಯಾಗಲಿದೆ. ಹಣಕಾಸಿನ ಕೊರತೆ ಬಹುವಾಗಿ ಕಾಡಬಹುದು. ಕುಟುಂಬದ ಹಿರಿಯರ ಆದೇಶದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಮನಸ್ಸಿಗೆ ಸಂತಸ ನೀಡುವ ವರ್ತಮಾನವೊಂದು ಬರಲಿದೆ. ಸಂಗಾತಿಯೊಂದಿಗೆ ಸುಖ ಜೀವನ ನಡೆಸುವಿರಿ.

ಮೀನ

ಕುಟುಂಬದಲ್ಲಿ ಆರೋಗ್ಯಕರ ವಾತಾವರಣ ಇರುತ್ತದೆ. ಇದರಿಂದಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ವನ್ನು ಗಳಿಸುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ವಂಶಕ್ಕೆ ಸಂಬಂಧಿಸಿದ ಹಣವು ಕೈ ಸೇರಬಹುದು. ಹಣಕಾಸಿನ ತೊಂದರೆ ಇರುವುದಿಲ್ಲ. ಯಾವುದೇ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಲಾಭದ ಲೆಕ್ಕಾಚಾರ ಮಾಡುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಅನಾವಶ್ಯಕವಾದ ವಿವಾದಗಳಿಂದ ಖಿನ್ನತೆಗೆ ಒಳಗಾಗುವಿರಿ. ಆತಂಕದ ಪರಿಸ್ಥಿತಿಯಲ್ಲಿ, ಸರಿಯಾದ ಮಾರ್ಗದಲ್ಲಿ ಕುಟುಂಬದ ನಡೆಸುವಿರಿ. ಆತ್ಮೀಯರ ಸಲಹೆಯನ್ನು ಪಾಲಿಸಿದರೆಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ವಿದ್ಯಾರ್ಥಿಗಳು ಪೋಷಕರು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಲಿದ್ದಾರೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.