Weekly Horoscope: ದೂರದ ಸಂಬಂಧಿಕರ ಜೊತೆ ವಿವಾಹ ನಿಶ್ಚಯ, ಆಸ್ತಿಯಲ್ಲಿ ಪಾಲು; ಮಾ 3ರಿಂದ ಮಾ 9ರವರೆಗಿನ ವಾರಭವಿಷ್ಯ
ಮಾರ್ಚ್ 3ರಿಂದ ಮಾರ್ಚ್ 9 ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ( March 3 to March 9 Weekly Horoscope)
ಮಾರ್ಚ್ 3 ರಿಂದ ಮಾರ್ಚ್ 9 ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (March 3 to March 9 Weekly Horoscope)
ರಾಶಿ ಫಲಗಳು
ಮೇಷ
ಬುದ್ಧಿವಂತಿಕೆಯಿಂದ ಸ್ವಂತ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಅತಿ ಮುಖ್ಯ ವಿಚಾರಗಳನ್ನು ಕುಟುಂಬದೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವಿರಿ. ಶಾಂತಿ ಸಹನೆಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಉದ್ಯೋಗದಲ್ಲಿನ ಸಮಸ್ಯೆಗಳನ್ನು ಎಚ್ಚರಿಕೆಯಿಂದ ಪರಿಹರಿಸುವಿರಿ. ಹಣಕಾಸಿನ ವಿಚಾರದಲ್ಲಿ ಸಮಯಕ್ಕೆ ತಕ್ಕಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಮಕ್ಕಳ ವಿಚಾರದಲ್ಲಿ ಶುಭ ವರ್ತಮಾನವೊಂದು ಬರಲಿದೆ. ಕುಟುಂಬದ ಆಸ್ತಿಯ ವಿಚಾರದಲ್ಲಿ ಮಾನಸಿಕ ಒತ್ತಡ ಉಂಟಾಗಬಹುದು. ಸಂಗೀತ ನಾಟ್ಯದಲ್ಲಿ ಆಸಕ್ತಿ ಮತ್ತು ನೆಮ್ಮದಿ ದೊರೆಯುತ್ತದೆ. ಆದಾಯವು ಹೆಚ್ಚುವ ಸೂಚನೆಗಳಿವೆ. ಎಲ್ಲರೊಂದಿಗೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ.
ವೃಷಭ
ಹಿರಿಯರ ಸಹಕಾರದಿಂದ ಅಮೂಲ್ಯವಾದ ಅವಕಾಶವನ್ನು ಒಪ್ಪಿಕೊಳ್ಳುವಿರಿ. ಉದ್ಯೋಗದಲ್ಲಿ ಮೇಲ್ದರ್ಜೆಗೆ ಏರುವಿರಿ. ಉದ್ಯೋಗವನ್ನು ಬದಲಾಯಿಸುವ ತೀರ್ಮಾನಕ್ಕೆ ಬರುವಿರಿ. ಮೊಮ್ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ತುಂಬಿರುತ್ತದೆ. ಹೊಸ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಸೋದರಿಯಿಂದ ಹಣದ ಸಹಾಯ ದೊರೆಯಬಹುದು. ಬಂಧು ಮಿತ್ರರ ಕಾರ್ಯಕ್ರಮಕ್ಕಾಗಿ ದೂರದ ಸ್ಥಳಕ್ಕೆ ತೆರಳುವಿರಿ. ದುಬಾರಿ ಬೆಲೆಯ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಹಣವನ್ನು ಉಳಿಸುವ ಪ್ರಯತ್ನಕ್ಕೆ ಸಂಗಾತಿಯ ಬೆಂಬಲ ದೊರೆಯಲಿದೆ.
ಮಿಥುನ
ಎಲ್ಲರರಿಗೂ ಅನುಕೂಲತೆಗಳು ದೊರೆವಂತೆ ಮಾಡುವಿರಿ. ಸಂತೃಪ್ತಿಯ ಭಾವನೆಯಿಂದ ಜೀವನ ನಡೆಸುವಿರಿ. ಉದ್ಯೋಗ ಬದಲಿಸುವ ಕಾರಣ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಹಣಕಾಸಿನ ಕೊರತೆ ಇರುವುದಿಲ್ಲ. ಕುಟುಂಬದಲ್ಲಿ ಮಂಗಳ ಕಾರ್ಯವನ್ನು ಆಯೋಜಿಸುವಿರಿ. ಆಡಂಬರದ ಜೀವನಕ್ಕೆ ಮಾರು ಹೋಗುವಿರಿ. ಮನೆಯನ್ನು ನವೀಕರಣಗೊಳಿಸಲು ಹಣ ಖರ್ಚಾಗಬಹುದು. ಹವ್ಯಾಸಕ್ಕಾಗಿ ಆರಂಭಿಸಿದ ಬರವಣಿಗೆ ಜೀವನಾಧಾರವಾಗಲಿದೆ. ಮಕ್ಕಳಿಗೆ ಅಪರೂಪದ ವಿದ್ಯೆಯೊಂದು ಒಲಿಯಲಿದೆ. ಖರ್ಚು ವೆಚ್ಚಗಳಲ್ಲಿ ಮಿತಿ ಇರುವುದು ಒಳ್ಳೆಯದು. ಆತುರ ಪಡದೆ ಸಹನೆಯಿಂದ ಎಲ್ಲರೊಂದಿಗೆ ಸ್ಪಂದಿಸಿ.
ಕಟಕ
ಕುಟುಂಬದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ಯಾರೊಬ್ಬರ ಸಹಕಾರವೂ ದೊರೆಯದೆ ಮಾನಸಿಕ ಒತ್ತಡದಿಂದ ಬಳಲುವಿರಿ. ಕ್ರಿಯಾಶೀಲತೆಯ ಗುಣದಿಂದ ಯಶಸ್ಸನ್ನು ಗಳಿಸುವಿರಿ. ಉತ್ತಮ ಅವಕಾಶ ದೊರೆವ ಕಾರಣ ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸಿ. ವಿದೇಶ ಪ್ರಯಾಣ ಯೋಗವಿದೆ. ಹಣವನ್ನು ಉಳಿಸಲು ಯೋಜನೆ ರೂಪಿಸುವಿರಿ. ಷೇರಿನ ವ್ಯವಹಾರದಲ್ಲಿ ಹಣ ತೊಡಗಿಸುವಿರಿ. ಬಂಧು ವರ್ಗದಿಂದ ಅನಿರೀಕ್ಷಿತ ಸಹಾಯ ಸಹಕಾರ ದೊರೆಯಲಿದೆ. ತಂದೆಯವರ ವ್ಯಾಪಾರದಲ್ಲಿ ಸಹಾಯ ಮಾಡುವಿರಿ. ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ದೊರೆಯಲಿದೆ. ಅತಿಯಾದ ಆತ್ಮವಿಶ್ವಾಸ ಬೇಡ.
ಸಿಂಹ
ಹಠವನ್ನು ಬಿಟ್ಟು ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಿ. ಉದ್ಯೋಗದಲ್ಲಿ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ಸಂಗಾತಿಯಿಂದ ಶುಭ ವಾರ್ತೆಯೊಂದು ಬರಲಿದೆ. ನೇರ ನಿಷ್ಠುರ ಮಾತುಕತೆ ಆತ್ಮೀಯರನ್ನು ದೂರ ಮಾಡಲಿದೆ. ಮಕ್ಕಳ ನಡವಳಿಕೆ ಬೇಸರ ಮೂಡಿಸುತ್ತದೆ. ತಂದೆಯೊಂದಿಗೆ ಇದ್ದ ಹಣಕಾಸಿನ ಭಿನ್ನಾಭಿಪ್ರಾಯ ನಿವಾರಣೆಗೊಳ್ಳುತ್ತದೆ. ದೂರದ ಸಂಬಂಧಿಕರ ಜೊತೆ ವಿವಾಹ ನಿಶ್ಚಯ ಆಗಲಿದೆ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಾರ್ವಜನಿಕ ಸಭೆ ಸಮಾರಂಭಗಳ ನೇತೃತ್ವ ವಹಿಸುವಿರಿ. ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ.
ಕನ್ಯಾ
ಆತಂಕದ ಪರಿಸ್ಥಿತಿಯಲ್ಲಿಯೂ ಜಾಣ್ಮೆಯ ನಿರ್ಧಾರ ತೆಗೆದುಕೊಳ್ಳುವಿರಿ. ದುಡುಕುತನದಿಂದ ಉದ್ಯೋಗದಲ್ಲಿ ಬೇಸರದ ಸನ್ನಿವೇಶವನ್ನು ಎದುರಿಸುವಿರಿ. ಕುಟುಂಬದ ಸದಸ್ಯರೊಂದಿಗೆ ದೀರ್ಘ ಕಾಲದ ಪ್ರವಾಸಕ್ಕೆ ತೆರಳುವಿರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ನೇರ ನಿಷ್ಠುರದ ಮಾತುಕತೆಯಿಂದ ವಿರೋಧಿಗಳು ಹೆಚ್ಚುತ್ತಾರೆ. ವಿವಾಹದ ಬಗ್ಗೆ ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರಬಹುದು. ಸಣ್ಣ ಬಂಡವಾಳದ ಉದ್ದಿಮೆಯನ್ನು ಆರಂಭಿಸುವ ಯೋಚನೆ ಮೂಡುತ್ತದೆ. ಅನಿವಾರ್ಯವಾಗಿ ಬೇರೆಯವರಿಂದ ಹಣವನ್ನು ಪಡೆಯುವಿರಿ. ಮನರಂಜನಾ ಕಾರ್ಯಕ್ರಮಗಳಲ್ಲಿ ವೇಳೆ ಕಳೆಯುವಿರಿ.
ತುಲಾ
ಒತ್ತಡಕ್ಕೆ ಒಳಗಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಸಮಯಕ್ಕೆ ಅನುಗುಣವಾಗಿ ವರ್ತಿಸಿದರೆ ಸುಲಭ ಜಯ ದೊರೆಯುತ್ತದೆ. ಆತುರದಿಂದ ಕೆಲಸ ಕಾರ್ಯವನ್ನು ಆರಂಭಿಸದಿರಿ. ಕಾದು ನೋಡುವ ಗುಣ ಒಳ್ಳೆಯದು. ಹಣಕಾಸಿನ ವ್ಯವಹಾರವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬಲ್ಲಿರಿ. ಸೋದರ ಅಥವಾ ಸೋದರಿಯ ನಡುವಿನ ವಿವಾದ ಕೊನೆಯಾಗುತ್ತದೆ. ವಂಶದಾರಿತ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಯಾರೊಂದಿಗೂ ವಾದ ವಿವಾದ ಮಾಡದಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಆಸಕ್ತಿಯಿಂದ ಸಾಹಸದ ಕ್ರೀಡೆಗಳಲ್ಲಿ ಭಾಗವಹಿಸುವಿರಿ. ವಿವಾಹಯೋಗವಿದೆ. ಸಂಬಂಧಿಕರ ಮನೆಯ ವಿವಾಹಕಾರ್ಯಕ್ಕೆ ಸಹಾಯ ಮಾಡಬೇಕಾಗುತ್ತದೆ.
ವೃಶ್ಚಿಕ
ಆರೋಗ್ಯದಲ್ಲಿ ಕಾಲಕ್ರಮೇಣ ಚೇತರಿಕೆ ಕಂಡು ಬರುತ್ತದೆ. ಅತಿಯಾದ ಕೋಪ ಎಲ್ಲರ ಬೇಸರಕ್ಕೆ ಕಾರಣವಾಗುತ್ತದೆ. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸುವ ಕೆಲಸ ಮಾಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿನ ಕಿರಿಯ ಸದಸ್ಯರ ವಿವಾಹ ನಿಶ್ಚಯವಾಗುತ್ತದೆ. ಹಣಕಾಸಿನ ವ್ಯವಹಾರದ ಬಗ್ಗೆ ಆತ್ಮೀಯರ ಜೊತೆಯಲ್ಲಿ ಮಾತುಕತೆ ನಡೆಯಲಿದೆ. ಆತುರದ ನಿರ್ಧಾರ ತೆಗೆದುಕೊಳ್ಳದಿರಿ. ಹಠದ ಗುಣ ಬಿಟ್ಟು ಹೊಂದಿಕೊಂಡು ಬಾಳಿರಿ. ಸುಲಭವಾಗಿ ಅನ್ಯರ ಪ್ರಭಾವಕ್ಕೆ ಮಣಿಯುವಿರಿ. ಕೈಕಾಲುಗಳಲ್ಲಿ ನೋವು ಹೆಚ್ಚಾಗಬಹುದು. ಕಿರುಪ್ರವಾಸದ ಸೂಚನೆ ಇದೆ.
ಧನಸ್ಸು
ಉದ್ಯೋಗದಲ್ಲಿ ಮಾಡುವ ತಪ್ಪನ್ನು ಮೇಲಧಿಕಾರಿಗಳು ಮನ್ನಿಸುತ್ತಾರೆ. ಕೋಪ ಕಡಿಮೆ ಮಾಡಿಕೊಳ್ಳಿ. ದೃಢವಾದ ಸಂಕಲ್ಪದ ಅವಶ್ಯಕತೆ ಇರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸದಿರಿ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಲಭಿಸಬಹುದು. ವಿನಾಕಾರಣ ಕುಟುಂಬದಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ. ಅನಗತ್ಯ ಹಿರಿಯರ ಜೊತೆ ವಾದ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಅಲ್ಪಮಟ್ಟದ ತೊಂದರೆ ಆಗಬಹುದು. ವ್ಯಾಪಾರ ವ್ಯವಹಾರದಲ್ಲಿ ಪ್ರಸಕ್ತ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಮನದ ಬೇಸರ ಕಳೆಯಲು ಪ್ರವಾಸ ಕೈಗೊಳ್ಳುವಿರಿ. ಮಕ್ಕಳ ತಪ್ಪನ್ನು ಮನ್ನಿಸಿರಿ.
ಮಕರ
ಕೆಲಸ ಕಾರ್ಯಗಳನ್ನು ಸರಿಯಾದ ಹಾದಿಯಲ್ಲಿ ಪೂರೈಸುವಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಅನುಕೂಲಕರ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ಜನಸೇವೆಯ ಸಲುವಾಗಿ ಸಂಘ ಸಂಸ್ಥೆಯನ್ನು ಆರಂಭಿಸುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯ ಆಗಲಿದೆ. ನಿತ್ಯ ಜೀವನದಲ್ಲಿ ಹೊಸ ಆಶಯ ಸೃಷ್ಟಿಯಾತ್ತದೆ. ಶೀತದ ತೊಂದರೆ ಉಂಟಾಗಬಹುದು. ವಾಹನ ಚಾಲನೆಯ ವೇಳೆ ಎಚ್ಚರಿಕೆ ಇರಲಿ. ಕುಟುಂಬದ ಒಗ್ಗಟ್ಟನ್ನು ಕಾಪಾಡುವಿರಿ. ತಂದೆಯ ಜೊತೆಯಲ್ಲಿ ಆಸ್ತಿಯ ವಿಚಾರದಲ್ಲಿ ಭಿನಾಭಿಪ್ರಾಯ ಇರುತ್ತದೆ.
ಕುಂಭ
ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಸಂತಸ ನೀಡುತ್ತದೆ. ಮನ ಬಿಚ್ಚಿ ಆತ್ಮೀಯರೊಂದಿಗೆ ಮಾತನಾಡಿದಲ್ಲಿ ವಿವಾದವು ಬಗೆಹರಿಯುತ್ತದೆ. ಅನಾವಶ್ಯಕ ವಿಚಾರಗಳ ಬಗ್ಗೆ ಚಿಂತೆ ಇರುತ್ತದೆ. ಕುಟುಂಬದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ರಾಜಕೀಯ ಪ್ರವೇಶಿಸುವ ಸಾಧ್ಯತೆ ಇದೆ. ಹೊಸ ವಾಹನ ಕೊಳ್ಳುವಿರಿ. ಹಣದ ವ್ಯವಹಾರದಲ್ಲಿ ರಹಸ್ಯವನ್ನು ಕಾಪಾಡುವಿರಿ. ಸಂಗಾತಿಯ ಆಸೆ ಆಕಾಂಕ್ಷೆಗಳ ಬಗ್ಗೆ ಯೋಚಿಸುವುದು ಒಳ್ಳೆಯದು. ಸಂತಾನ ಲಾಭವಿದೆ. ಹಣವನ್ನು ಉಳಿಸಲು ಸೋದರಿಯ ಸಹಾಯ ದೊರೆಯುತ್ತದೆ. ಹುಟ್ಟೂರಿಗೆ ಎಲ್ಲರ ಜೊತೆ ಧಾರ್ಮಿಕ ಕಾರ್ಯ ನೆರವೇರಿಸಲು ತೆರಳುವಿರಿ.
ಮೀನ
ಮಕ್ಕಳು ಮತ್ತು ಮೊಮ್ಮಕ್ಕಳ ಆಗಮನ ಸಂತಸ ನೀಡುತ್ತದೆ. ಆಡುವ ಮಾತುಗಳನ್ನು ಅರ್ಥವಾಗುವಂತೆ ಇರಲಿ. ನಿಮ್ಮ ಮನಸ್ಸನ್ನು ಅರಿಯಲು ಸಾಧ್ಯವಾಗದು. ಸಂತಾನ ಲಾಭವಿದೆ. ಉದ್ಯೋಗದಲ್ಲಿ ಹಿತಕರ ಬದಲಾವಣೆಗಳು ಆಗಲಿವೆ. ವಿದ್ಯಾರ್ಥಿಗಳು ಉದ್ಯೋಗ ದೊರೆತು ವಿದೇಶಕ್ಕೆ ತೆರಳಬಹುದು. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಕೃಷಿ ಭೂಮಿಯ ಕೆಲಸದಲ್ಲಿ ಲಾಭ ಇರುತ್ತದೆ. ಹೊಸ ಮನೆಯನ್ನು ಕೊಳ್ಳುವ ಸೂಚನೆಗಳಿವೆ. ಕೆಲವೊಂದು ಕೆಲಸ ಕಾರ್ಯಗಳು ಅಪೂರ್ಣವಾಗಲಿವೆ. ಗಂಟಲು ಅಥವಾ ಬಾಯಿಗೆ ಸಂಬಂಧಿಸಿದಂತೆ ಅನಾರೋಗ್ಯ ಉಂಟಾಗಲಿದೆ. ದೂರದ ಊರಿಗೆ ಎಲ್ಲರೊಂದಿಗೆ ಪ್ರಯಾಣ ಬೆಳೆಸುವಿರಿ. ದಾಂಪತ್ಯದಲ್ಲಿ ವಾದ ವಿವಾದಗಳು ಇರಲಿವೆ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).