Weekly Horoscope: ಮನದಾಸೆಯಂತೆ ಜೀವನದಲ್ಲಿ ಕೆಲವು ಬದಲಾವಣೆಯಾಗಲಿದೆ, ಅತಿಯಾದ ವಿಶ್ವಾಸ ಅನಾಹುತಕ್ಕೆ ಕಾರಣವಾಗಬಹುದು; ವಾರಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಮನದಾಸೆಯಂತೆ ಜೀವನದಲ್ಲಿ ಕೆಲವು ಬದಲಾವಣೆಯಾಗಲಿದೆ, ಅತಿಯಾದ ವಿಶ್ವಾಸ ಅನಾಹುತಕ್ಕೆ ಕಾರಣವಾಗಬಹುದು; ವಾರಭವಿಷ್ಯ

Weekly Horoscope: ಮನದಾಸೆಯಂತೆ ಜೀವನದಲ್ಲಿ ಕೆಲವು ಬದಲಾವಣೆಯಾಗಲಿದೆ, ಅತಿಯಾದ ವಿಶ್ವಾಸ ಅನಾಹುತಕ್ಕೆ ಕಾರಣವಾಗಬಹುದು; ವಾರಭವಿಷ್ಯ

ಜೂನ್‌ 30 ರಿಂದ ಜುಲೈ 6ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ವಾರ ಭವಿಷ್ಯ ನೋಡಿ. (30th June 2024 to 6th July Weekly Horoscope)

ಮನದಾಸೆಯಂತೆ ಜೀವನದಲ್ಲಿ ಕೆಲವು ಬದಲಾವಣೆಯಾಗಲಿದೆ, ಅತಿಯಾದ ವಿಶ್ವಾಸ ಅನಾಹುತಕ್ಕೆ ಕಾರಣವಾಗಬಹುದು; ವಾರಭವಿಷ್ಯ
ಮನದಾಸೆಯಂತೆ ಜೀವನದಲ್ಲಿ ಕೆಲವು ಬದಲಾವಣೆಯಾಗಲಿದೆ, ಅತಿಯಾದ ವಿಶ್ವಾಸ ಅನಾಹುತಕ್ಕೆ ಕಾರಣವಾಗಬಹುದು; ವಾರಭವಿಷ್ಯ

ವಾರ ಭವಿಷ್ಯ:‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (30th June 2024 to 6th July Weekly Horoscope)

ರಾಶಿಫಲ

ಮೇಷ

ನಿಮ್ಮ ಮನದಾಸೆಯಂತೆ ಜೀವನದಲ್ಲಿ ಕೆಲವು ಬದಲಾವಣೆಗಳು ಉಂಟಾಗಲಿವೆ. ಸುಖ-ಸಂತೋಷದ ಸಂಸಾರ ನಿಮ್ಮದಾಗಲಿದೆ. ಅತಿಯಾದ ಆತ್ಮವಿಶ್ವಾಸದಿಂದ ಅನಾವಶ್ಯಕ ಖರ್ಚು ವೆಚ್ಚಗಳು ಇರಲಿವೆ. ಒಳ್ಳೆಯ ಅಭ್ಯಾಸಗಳಿಂದ ಆರೋಗ್ಯ ಸುಧಾರಣೆ ಕಾಣಲಿದೆ. ಧ್ಯಾನ, ಯೋಗದಲ್ಲಿ ಆಸಕ್ತಿ ಮೂಡುತ್ತದೆ. ಉತ್ತಮ ಗೆಳೆತನ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಮಕ್ಕಳಿಗಾಗಿ ಹಣಕಾಸಿನ ಯೋಜನೆಯಲ್ಲಿ ಹಣವನ್ನು ಹೂಡುವಿರಿ. ಸಹೋದರ ಸಹೋದರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಸ್ವಂತ ನಿರ್ಧಾರದಿಂದ ವಾಸಸ್ಥಳ ಬದಲಿಸುವಿರಿ. ನಿಮ್ಮ ವೈಯಕ್ತಿಕ ಅಭಿಪ್ರಾಯಗಳು ಉತ್ತಮ ಯಶಸ್ಸನ್ನು ನೀಡುತ್ತದೆ. ವಿರೋಧಿಗಳು ಹೆಚ್ಚಬಹುದು ಎಚ್ಚರಿಕೆ ಇರಲಿ.

ವೃಷಭ

ಅನಿವಾರ್ಯವಾಗಿ ಬದಲಾದ ಜೀವನಶೈಲಿ ಶಾಂತಿ-ನೆಮ್ಮದಿಗೆ ಭಂಗ ತರಲಿದೆ. ಹಣಕಾಸಿನ ವಿಚಾರದಲ್ಲಿ ಆತ್ಮೀಯರ ಸಹಾಯ ದೊರೆತು ತೊಂದರೆ ದೂರವಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಇರಲಿವೆ. ಉದ್ಯೋಗದಲ್ಲಿನ ತೊಂದರೆ ದೂರವಾಗಲಿದೆ. ಕುಟುಂಬದ ಮಂಗಳ ಕಾರ್ಯವೊಂದು ಯಶಸ್ವಿಯಾಗಲಿದೆ. ಮನೆಮಂದಿಯ ಜೊತೆ ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮಧ್ಯಮಗತಿಯ ಫಲ ಗಳಿಸುತ್ತಾರೆ. ಉದ್ಯೋಗವನ್ನು ಬದಲಿಸುವ ಅವಕಾಶ ಬಳಿಸಿಕೊಳ್ಳುವುದಿಲ್ಲ. ಸಂದರ್ಭವನ್ನು ಅರ್ಥಮಾಡಿಕೊಂಡು ವಿವಾದದಿಂದ ದೂರ ಉಳಿಯುವಿರಿ. ಮೊದಲ ಆದ್ಯತೆಯನ್ನು ಸ್ವಂತ ಕೆಲಸಕ್ಕೆ ನೀಡುವಿರಿ. ಸಂಗಾತಿಯಿಂದ ಹಣ ಸಹಾಯ ದೊರೆಯುತ್ತದೆ.

ಮಿಥುನ

ಉಪಯುಕ್ತ ಅಧ್ಯಯನಕ್ಕಾಗಿ ಕೊಂಚ ಸಮಯ ಮೀಸಲಿಡುವಿರಿ. ಅನಾವಶ್ಯಕವಾಗಿ ದುಡುಕಿ ಸಮಸ್ಯೆಗಳನ್ನು ಬರಮಾಡಿಕೊಳ್ಳುವಿರಿ. ಆತ್ಮವಿಶ್ವಾಸದ ಕಾರಣ ಮನದಲ್ಲಿರುವ ಆತಂಕ ದೂರಾಗುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಅನಾವಶ್ಯಕ ಊಹೆಗಳಿಂದ ಬೇಸರ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಆರಂಭದಲ್ಲಿ ತೊಂದರೆ ಕ್ರಮೇಣವಾಗಿ ಕಡಿಮೆ ಆಗುತ್ತದೆ. ಕುಟುಂಬದ ಸದಸ್ಯರ ಸಲಹೆಯಂತೆ ವ್ಯಾಪಾರವನ್ನು ಆರಂಭಿಸುವ ತೀರ್ಮಾನ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡುಬರಬಹುದು. ವಂಶಾಧಾರಿತ ಕೆಲಸವೊಂದನ್ನು ಆರಂಭಿಸುವಿರಿ. ತಾಯಿಯ ಜೊತೆಗಿನ ಮನಸ್ತಾಪ ಕೊನೆಗೊಳ್ಳುತ್ತದೆ. ವಂಶದ ಹಿರಿಯರ ಆಗಮನ ಸಂತಸ ನೀಡುತ್ತದೆ.

ಕಟಕ

ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಆಹಾರ ಸೇವನೆಯಲ್ಲಿ ನಿಮಗೆ ನೀವೇ ನಿಯಮವನ್ನು ರೂಪಿಸಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಕಂಡುಬರದು. ನಿಮ್ಮ ದುಡುಕಿನ ಮಾತು ಹೊಸ ವಿವಾದವನ್ನು ಸೃಷ್ಟಿಸಲಿದೆ. ಎಲ್ಲರ ಜೊತೆ ಹೊಂದಿಕೊಂಡು ಬಾಳಲು ಪ್ರಯತ್ನಿಸುವಿರಿ. ಕೆಲಸ-ಕಾರ್ಯಗಳಲ್ಲಿ ಅತಿಯಾದ ಅತುರ ತೋರಿದಲ್ಲಿ ತೊಂದರೆ ಉಂಟಾಗುತ್ತದೆ. ಭೂವಿವಾದವೊಂದು ಕಾನೂನಿನ ಸಹಾಯದಿಂದ ಪರಿಹಾರವಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬುವುದಿಲ್ಲ. ಪಾಲುದಾರಿಕೆ ವ್ಯಾಪಾರದಿಂದ ದೂರವಾಗುವಿರಿ.

ಸಿಂಹ

ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮಕ್ಕಳ ಸಲುವಾಗಿ ಅನಾವಶ್ಯಕ ವಿವಾದ ಎದುರಿಸುವಿರಿ. ಸಮಾಜದ ಮುಖ್ಯ ಸ್ಥಾನ ಅಲಂಕರಿಸುತ್ತೀರಿ. ಮನದ ಆಸೆಗಳನ್ನು ದೂರವಿಟ್ಟು ಕುಟುಂಬದ ಒಳಿತಿಗಾಗಿ ಬಾಳುವಿರಿ. ಉತ್ತಮ ಆದಾಯವಿರುತ್ತದೆ. ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಜೊತೆ ಸಂತಸದಿಂದ ಬಾಳುವಿರಿ. ಅನಾವಶ್ಯಕವಾಗಿ ಎಲ್ಲರನ್ನೂ ಅನುಮಾನಿಸುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಮುಂಗೋಪ ಕಡಿಮೆ ಮಾಡಿಕೊಳ್ಳಿ. ಸಮಾಜದ ಗಣ್ಯ ವ್ಯಕ್ತಿ ಒಬ್ಬರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಸ್ವಂತ ಬಳಕೆಗಾಗಿ ದೊಡ್ಡ ವಾಹನ ಕೊಳ್ಳುವಿರಿ. ಮನರಂಜನೆಯಲ್ಲಿ ಆಸಕ್ತಿ ಇರುವುದಿಲ್ಲ.

ಕನ್ಯಾ

ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಕಾರ್ಯಗತಗೊಳಿಸುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಯಶಸ್ಸು ಗಳಿಸುತ್ತಾರೆ. ಮಾನಸಿಕ ಒತ್ತಡವಿರುತ್ತದೆ. ವದಂತಿಯನ್ನು ನಂಬಿ ಸುತ್ತಮುತ್ತಲಿನ ಜನರೊಂದಿಗೆ ವಾದವಿವಾದ ಮಾಡಲಿದ್ದೀರಿ. ಕುಟುಂಬ ಸದಸ್ಯರ ಜೊತೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಹಠ ಬಿಟ್ಟು ಎಲ್ಲರೊಂದಿಗೆ ಪ್ರೀತಿಯಿಂದ ವ್ಯವಹರಿಸಲು ಪ್ರಯತ್ನಿಸುವಿರಿ. ಏಕಾಂಗಿತನವನ್ನು ಇಷ್ಟಪಡುವಿರಿ. ಆಪತ್ಕಾಲಕ್ಕೆ ಹಣವನ್ನು ಉಳಿಸಲು ತೀರ್ಮಾನಿಸುವಿರಿ. ಅನಿರೀಕ್ಷಿತವಾದ ಹಣ ಸಹಾಯ ನೆಮ್ಮದಿ ನೀಡುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ನೀರಿರುವ ಸ್ಥಳಗಳಲ್ಲಿ ಎಚ್ಚರಿಕೆ ಇರಲಿ. ಮಕ್ಕಳ ಪ್ರೀತಿಯನ್ನು ಸವಿಯುವಿರಿ.

ತುಲಾ

ಉತ್ತಮ ಕಾರ್ಯ ಯೋಜನೆ ಮತ್ತು ಸರಿಯಾದ ಪ್ರಯತ್ನದಿಂದ ಯಶಸ್ಸು ಗಳಿಸುತ್ತೀರಿ. ಒಮ್ಮೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಅನಗತ್ಯವಾಗಿ ಬದಲಿಸುವುದಿಲ್ಲ. ಸುತ್ತಮುತ್ತಲ ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಫಲರಾಗುವಿರಿ. ಅನಿರೀಕ್ಷಿತ ಧನಾಗಮ ಹೊಸ ಆಸೆಗೆ ಕಾರಣವಾಗುತ್ತದೆ. ಭೂ ವ್ಯವಹಾರದಲ್ಲಿ ಹಣವನ್ನು ವಿನಿಯೋಗಿಸುವಿರಿ, ಆದರೆ ಎಚ್ಚರಿಕೆ ಇರಲಿ. ಚಿನ್ನಾಭರಣ ಕೊಳ್ಳಲು ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಹಿರಿಯ ಸದಸ್ಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಒತ್ತಡಕ್ಕೆ ಒಳಗಾಗಿ ಮುಖ್ಯ ಕೆಲಸವನ್ನು ಮುಂದೂಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಯಶಸ್ಸಿನಿಂದಾಗಿ ಸಂತೋಷಗೊಳ್ಳುವಿರಿ. ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ.

ವೃಶ್ಚಿಕ

ಆರೋಗ್ಯದಲ್ಲಿನ ತೊಂದರೆ ದೂರವಾಗಲಿದೆ. ನೇರವಾದ ಮಾತುಗಳು ವಿವಾದವನ್ನು ಉಂಟುಮಾಡುತ್ತದೆ. ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಕಾರ್ಯದಲ್ಲಿ ನ್ಯಾಯದ ಹಾದಿಯಲ್ಲಿ ಇರುವಿರಿ. ಉಪವೃತ್ತಿಯನ್ನು ಆರಂಭಿಸಿ ಯಶಸ್ಸು ಕಾಣುವಿರಿ. ಹಣಕಾಸಿನ ಕೊರತೆ ಇರುವುದಿಲ್ಲ. ಆರೋಗ್ಯದಲ್ಲಿನ ಸಮಸ್ಯೆ ದೂರವಾಗುತ್ತದೆ. ಕುಟುಂಬದ ಮಂಗಳ ಕಾರ್ಯವೊಂದರ ಯಶಸ್ಸಿನ ಪಾಲು ನಿಮ್ಮದಾಗಲಿದೆ. ಸ್ವಂತ ಅಭಿಪ್ರಾಯಗಳನ್ನು ಯಾರ ಮೇಲೂ ಹೇರುವುದಿಲ್ಲ. ಬೇರೆಯವರ ಸಲಹೆಯನ್ನು ಸಹ ಗೌರವಿಸುವಿರಿ. ಮಕ್ಕಳ ಆಟ ಪಾಠಗಳ ಮಧ್ಯೆ ಸಂತಸದಿಂದ ದಿನ ಕಳೆಯುವಿರಿ. ಚಿಕ್ಕ ಪುಟ್ಟ ಪ್ರವಾಸಗಳನ್ನು ಆಯೋಜಿಸಿ ಹಣ ಗಳಿಸುವಿರಿ. ಸಹನೆಯಿಂದ ವರ್ತಿಸಿ ಎಲ್ಲರ ಮನಸ್ಸನ್ನು ಗೆಲ್ಲುವಿರಿ.

ಧನಸ್ಸು

ಕುಟುಂಬದಲ್ಲಿ ಒತ್ತಡದ ಸನ್ನಿವೇಶಗಳು ಇರಲಿವೆ. ಮಕ್ಕಳ ಅವಿಧೇಯತೆ ಬೇಸರವನ್ನು ಮೂಡಿಸುತ್ತದೆ. ಅವಕಾಶವಿದ್ದರೂ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸುವುದಿಲ್ಲ. ಕುಟುಂಬದ ಒಮ್ಮತ ಕಾಪಾಡಲು ವಿಫಲರಾಗುವಿರಿ. ಏಕಾಂಗಿಯಾಗಿ ಹೋರಾಡಿ ತೊಂದರೆಯಿಂದ ಪಾರಾಗುವಿರಿ. ಪ್ರತಿಭಾ ಪ್ರದರ್ಶನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯವಾಗುತ್ತದೆ. ಮುಖ್ಯವಾದ ನಿರ್ಧಾರಗಳನ್ನು ಬದಲಿಸುವ ಕಾರಣ ಆತಂಕ ಎದುರಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಸಮಸ್ಯೆಗಳು ಉದ್ಭವಿಸುತ್ತದೆ. ಕೇವಲ ಉತ್ತಮ ದೈನಂದಿನ ಜೀವನದ ಕ್ರಮದಿಂದ ಉತ್ತಮ ಆರೋಗ್ಯ ಗಳಿಸುವಿರಿ. ದಂಪತಿಗಳ ನಡುವಿನ ಮನಸ್ತಾಪ ಕೊನೆಯಾಗಲಿದೆ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಕಿರು ಪ್ರವಾಸವನ್ನು ಕೈಗೊಳ್ಳುವಿರಿ.

ಮಕರ

ಆತುರದ ತೀರ್ಮಾನಗಳು ಹಣಕಾಸಿನ ವಿಚಾರದಲ್ಲಿ ತೊಂದರೆ ನೀಡಲಿದೆ. ಯಾವುದೇ ಕೆಲಸವಾದರೂ ದ್ವಂದ್ವ ಮನಸ್ಸಿನಿಂದ ಮಾಡುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಪ್ರವಾಸ ಕೈಗೊಳ್ಳುವಿರಿ. ಹೊಸ ಉದ್ಯೋಗಿಗಳು ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ತೆರಳಬಹುದು. ವಾಹನದಿಂದ ಅಥವಾ ಲೋಹದ ವಸ್ತುವಿನಿಂದ ತೊಂದರೆಯಾಗಬಹುದು ಎಚ್ಚರಿಕೆ ಇರಲಿ. ಸಹೋದರ ಮತ್ತು ತಾಯಿಯ ನಡುವೆ ಹಣಕಾಸಿನ ವಿಚಾರದಲ್ಲಿ ಇದ್ದ ಮನಸ್ತಾಪವನ್ನು ಬಗೆಹರಿಸುವಿರಿ. ಕುಟುಂಬದ ಬಹುತೇಕ ಜವಾಬ್ದಾರಿ ನಿಮ್ಮದಾಗುತ್ತದೆ. ಕಷ್ಟವಾದರೂ ಕೆಲಸದ ನಡುವೆ ವಿಶ್ರಾಂತಿಗೂ ಸಮಯ ನೀಡುವಿರಿ. ಆಪತ್ತಿನಲ್ಲಿ ಇರುವ ಜನರಿಗೆ ಸಹಾಯವನ್ನು ನೀಡುವಿರಿ. ಮುಂದಾಲೋಚನೆಯಿಂದ ಹಣ ಉಳಿತಾಯ ಮಾಡುವಿರಿ.

ಕುಂಭ

ಅನಗತ್ಯ ಖರ್ಚು ವೆಚ್ಚಗಳಿರುತ್ತವೆ. ಸೋಲಿನ ಭಯದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸಂಯಮದಿಂದ ನಡೆದುಕೊಂಡಲ್ಲಿ ಎದುರಾಗುವ ತೊಂದರೆ ಮರೆಯಾಗುತ್ತದೆ. ನಿಮ್ಮ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಆತ್ಮೀಯರೊಬ್ಬರು ದೂರವಾಗುತ್ತಾರೆ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನದಿಂದ ಸಹೋದ್ಯೋಗಿಗಳಿಗೂ ಒಳ್ಳೆಯದಾಗುತ್ತದೆ. ಬೇರೆಯವರ ತಪ್ಪಿಗೆ ನಿಂದಿಸುವ ಬದಲು ಸ್ನೇಹದಿಂದ ಇರುವಿರಿ. ಹಣಕಾಸಿನ ವಿವಾದವು ನಿಮ್ಮ ಮಧ್ಯಸ್ಥಿಕೆಯಿಂದ ಬಗೆಹರಿಯುವುದು. ಕುಟುಂಬದ ಎಲ್ಲರೂ ನಿಮ್ಮನ್ನು ಅವಲಂಬಿಸಿರುತ್ತಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯ ಒಂದು ನಡೆಯಲಿದೆ. ಅನಿರೀಕ್ಷಿತ ಹಣದ ಮುಗ್ಗಟ್ಟು ಕಿರಿಕಿರಿ ಉಂಟುಮಾಡುತ್ತದೆ. ತಾಳ್ಮೆಯಿಂದ ಎಲ್ಲರ ಮನ ಗೆಲ್ಲುವಿರಿ.

ಮೀನ

ಬಗೆಹರಿಯದ ಸಮಸ್ಯೆಗಳು ನಿಮ್ಮ ನೆರವಿನಿಂದ ಕೊನೆಗೊಳ್ಳಲಿವೆ. ಉತ್ತಮ ಆರೋಗ್ಯವಿರುತ್ತದೆ. ಮಕ್ಕಳ ಜೊತೆಯಲ್ಲಿ ಸಂತೋಷವಾಗಿ ದಿನಗಳನ್ನು ಕಳೆಯುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮಾತಿನ ಬಲದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಕಿರು ಪ್ರವಾಸಗಳನ್ನು ಆಯೋಜಿಸುವಿರಿ. ಅತಿಯಾದ ಒಳ್ಳೆಯತನ ಆಪತ್ತಿಗೆ ಸಿಲಿಕಿಸಲಿದೆ. ಬೇರೆಯವರ ಹಣಕಾಸಿನ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿದಲ್ಲಿ ತೊಂದರೆ ಎದುರಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ನಯವಿನಯದಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ. ಉದ್ಯೋಗ ಬದಲಾಗುವ ಸಾಧ್ಯತೆಗಳಿವೆ. ವಾದ ವಿವಾದಗಳಿಂದ ದೂರ ಉಳಿಯುವಿರಿ. ವಿಶೇಷವಾದ ಉಡುಗೊರೆ ದೊರೆಯಲಿದೆ.

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.