ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮದೇ ತಪ್ಪಿನಿಂದ ಉದ್ಯೋಗದಲ್ಲಿ ಸಮಸ್ಯೆ ಎದುರಿಸುವಿರಿ; ದಂಪತಿ ನಡುವೆ ಮನಸ್ತಾಪ ದೂರ; ದ್ವಾದಶ ರಾಶಿಗಳ ವಾರ ಭವಿಷ್ಯ

ನಿಮ್ಮದೇ ತಪ್ಪಿನಿಂದ ಉದ್ಯೋಗದಲ್ಲಿ ಸಮಸ್ಯೆ ಎದುರಿಸುವಿರಿ; ದಂಪತಿ ನಡುವೆ ಮನಸ್ತಾಪ ದೂರ; ದ್ವಾದಶ ರಾಶಿಗಳ ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ನಿಮ್ಮದೇ ತಪ್ಪಿನಿಂದ ಉದ್ಯೋಗದಲ್ಲಿ ಸಮಸ್ಯೆ ಎದುರಿಸುವಿರಿ; ದಂಪತಿ ನಡುವೆ ಮನಸ್ತಾಪ ದೂರ; ದ್ವಾದಶ ರಾಶಿಗಳ ವಾರ ಭವಿಷ್ಯ
ನಿಮ್ಮದೇ ತಪ್ಪಿನಿಂದ ಉದ್ಯೋಗದಲ್ಲಿ ಸಮಸ್ಯೆ ಎದುರಿಸುವಿರಿ; ದಂಪತಿ ನಡುವೆ ಮನಸ್ತಾಪ ದೂರ; ದ್ವಾದಶ ರಾಶಿಗಳ ವಾರ ಭವಿಷ್ಯ

ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (June 23rd to June 29th , Weekly Horoscope in Kannada)

ಮೇಷ

ಸತತ ಸೋಲಿನಿಂದ ಹೊರಬಂದು ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುತ್ತದೆ. ಕುಟುಂಬದಲ್ಲಿ ಎಲ್ಲರ ಸಹಕಾರದಿಂದ ಹೊಸ ಕೆಲಸವೊಂದನ್ನು ಆರಂಭಿಸುವಿರಿ. ನಿಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಅವರ ಜೀವನವನ್ನು ರೂಪಿಸುವಿರಿ. ಎಲ್ಲರ ಒತ್ತಡಕ್ಕೆ ಮಣಿದು ಉದ್ಯೋಗವನ್ನು ಬದಲಿಸುವ ನಿರ್ಧಾರ ಮಾಡುವಿರಿ. ಸಹೋದ್ಯೋಗಿಗಳ ಜೊತೆ ಪ್ರೀತಿ ವಿಶ್ವಾಸದಿಂದ ಇರುವಿರಿ. ಕಾರ್ಮಿಕ ವೃಂದಕ್ಕೆ ವಿಶೇಷ ಅನುಕೂಲತೆಗಳು ದೊರೆಯುತ್ತದೆ. ಕುಟುಂಬದ ಸದಸ್ಯರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವಿರಿ. ಉತ್ತಮ ಆರೋಗ್ಯವನ್ನು ಗಳಿಸಲು ಯೋಗ ಪ್ರಾಣಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಆಶ್ರಯಿಸುವಿರಿ. ಹಣಕಾಸಿನ ವಿಚಾರದಲ್ಲಿ ದುರಾಸೆ ಇರುವುದಿಲ್ಲ.

ವೃಷಭ

ಹಣಕಾಸಿನ ವ್ಯವಹಾರದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಮತ್ತೊಬ್ಬರ ಸಹಾಯದಿಂದ ಸ್ವಂತ ಕೆಲಸ ನೆರವೇರುತ್ತದೆ. ಉದ್ಯೋಗಿಗಳಿಗೆ ಉನ್ನತ ಅಧಿಕಾರ ದೊರೆತು ಪರಸ್ಥಳಕ್ಕೆ ತೆರಳುತ್ತಾರೆ. ನಿಮ್ಮ ಹೊಂದಾಣಿಕೆಯ ಗುಣದಿಂದ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಗುರು ಹಿರಿಯರ ಮೇಲೆ ವಿಶೇಷ ಗೌರವ ಇರುತ್ತದೆ. ಗೃಹಿಣಿಯರು ಬಿಡುವಿಲ್ಲದ ಕೆಲಸದ ನಡುವೆ ವಿಶ್ರಾಂತಿ ಬಯಸುತ್ತಾರೆ. ಉತ್ತಮ ಆರೋಗ್ಯ ವಿರುತ್ತದೆ. ಮನಸ್ಸಿಲ್ಲದೇ ಹೋದರೂ ಅನಿವಾರ್ಯವಾಗಿ ಆತ್ಮೀಯರಿಂದ ಹಣ ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ವೆಚ್ಚ ಮಾಡುವಿರಿ. ಕ್ರಮೇಣವಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿಯು ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ.

ಮಿಥುನ

ದೃಢವಾದ ಮನಸ್ಸಿದ್ದರೆ ಯಾವುದೂ ಅಸಾಧ್ಯವಿರುವುದಿಲ್ಲ. ಕುಟುಂಬದಲ್ಲಿನ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ದೂರ ಮಾಡುವಿರಿ. ಹಣಕಾಸಿನ ಸ್ಥಿತಿಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಸಾಧ್ಯವಾದಷ್ಟು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ. ನಿಮ್ಮದೇ ಆದ ತಪ್ಪಿನಿಂದ ಉದ್ಯೋಗದಲ್ಲಿ ಅಡಚಣೆಗಳು ಎದುರಾಗುತ್ತವೆ. ಆತ್ಮೀಯರೊಂದಿಗೆ ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸಲು ನಿರ್ಧರಿಸುವಿರಿ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಗೃಹಿಣಿಯರ ನಿರ್ಧಾರವೇ ಬಹುಮುಖ್ಯವಾಗುತ್ತದೆ. ಚಿಕ್ಕಪುಟ್ಟ ಪ್ರವಾಸಗಳಿಂದ ಮನಸ್ಸಿನ ಚಿಂತೆ ದೂರವಾಗುತ್ತದೆ. ಕುಟುಂಬದಲ್ಲಿ ಇರುವ ವಯೋವೃದ್ಧರಿಗೆ ಅನಾರೋಗ್ಯ ಉಂಟಾಗುತ್ತದೆ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಮನಸ್ಸಿಲ್ಲದೇ ಹೋದರು ವಾಸಸ್ಥಳವನ್ನು ಬದಲಿಸುವಿರಿ.

ಕಟಕ

ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಕಂಡು ಬರುತ್ತದೆ. ಯೋಚನೆಗಳಿಲ್ಲದೆ ಈ ದಿನವನ್ನು ಸಂತೋಷದಿಂದ ಕಳೆಯುವಿರಿ. ಸಂಗಾತಿಯಿಂದ ಉತ್ತಮ ಸಹಕಾರ ದೊರೆಯುತ್ತದೆ. ಮಕ್ಕಳ ಉತ್ತಮ ಸಾಧನೆಯಿಂದ ಮನಸ್ಸಿಗೆ ಸಮಾಧಾನವಿರುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. ತಂದೆಯವರ ಕೆಲಸ ಒಂದನ್ನು ಮುಂದುವರೆಸುವಿರಿ. ಉದ್ಯೋಗಕ್ಕೆ ಸಂಬಂಧಪಟ್ಟಂತೆ ದೀರ್ಘಕಾಲದ ಪ್ರವಾಸ ಮಾಡಬೇಕಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿದೆ. ಆತ್ಮವಿಶ್ವಾಸದಿಂದ ಜೀವನದಲ್ಲಿ ಮುಂದುವರೆಯುವಿರಿ. ದಾಂಪತ್ಯದಲ್ಲಿ ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ವಿಶೇಷ ಗೌರವವಿರುತ್ತದೆ. ಇದರಿಂದಾಗಿ ಕೌಟುಂಬಿಕ ಜೀವನವು ಯಶಸ್ವಿಯಾಗುತ್ತದೆ.

ಸಿಂಹ

ಹಣಕಾಸಿನ ತೊಂದರೆ ಕ್ರಮೇಣವಾಗಿ ಮರೆಯಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳು ಕುಟುಂಬದ ಹಿರಿಯರ ಸಲಹೆ ಸೂಚನೆ ದೊರೆಯುತ್ತದೆ. ಉದ್ಯೋಗದಲ್ಲಿ ಯಶಸ್ಸಿಗೆ ಕೊರತೆ ಇರುವುದಿಲ್ಲ. ನಿರೀಕ್ಷೆಗೂ ಮೀರಿದ ಯಶಸ್ಸು ಎಲ್ಲರಿಗೂ ಸ್ಪೂರ್ತಿಯಾಗುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ. ಆಕರ್ಷಕ ಉಡುಪಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ಸಾರ್ವಜನಿಕ ಸಮಾರಂಭ ಸಮಾರಂಭಕ್ಕೆ ಅತಿಥಿಗಳಾಗಿ ಭಾಗವಹಿಸುವಿರಿ. ಹೆಣ್ಣುಮಕ್ಕಳ ಕಷ್ಟಗಳಿಗೆ ನಿಜವಾದ ಬೆಲೆ ದೊರೆಯುತ್ತದೆ. ಗೃಹಿಣಿಯರು ಕುಟುಂಬದ ಅಧಿಕಾರವನ್ನು ನಿರ್ವಹಿಸುತ್ತಾರೆ. ಸೋಲುವ ಮನಸ್ಸಿಲ್ಲದೆ ಯಶಸ್ಸನ್ನು ಎದುರು ನೋಡುವಿರಿ. ಹಟವನ್ನು ಕಡಿಮೆ ಮಾಡಿ ಬೇರೆಯವರ ಮಾತನ್ನು ಕೇಳಿದಲ್ಲಿ ಸೋಲಿನ ಮಾತಿರುವುದಿಲ್ಲ. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

ಕನ್ಯಾ

ಬೇರೆಯವರ ಪ್ರತಿಕ್ರಿಯೆ ಬಗ್ಗೆ ಗಮನ ನೀಡದೆ ಎಲ್ಲರಿಗೂ ಸಲಹೆ ಸೂಚನೆ ನೀಡುವಿರಿ. ಬೇರೆಯವರ ಕೆಲಸದಲ್ಲಿ ತಪ್ಪನ್ನು ಹುಡುಕುವುದರಿಂದ ಕೆಲವರ ವಿರೋಧವನ್ನು ಎದುರಿಸಬೇಕಾಗುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಅನಾವಶ್ಯಕವಾಗಿ ಬದಲಾಯಿಸುವಿರಿ. ಹಣದ ಸಹಾಯ ದೊರೆಯುತ್ತದೆ. ಕಷ್ಟವೆನಿಸಿದರೂ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಸಣ್ಣ ಪ್ರಮಾಣದ ವ್ಯಾಪಾರ ಬೃಹದಾಕಾರವಾಗಿ ಬೆಳೆಯಲಿದೆ. ಬೇರೆಯವರ ಅಧಿಕಾರದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ವಿದ್ಯಾರ್ಥಿಗಳು ಉನ್ನತಮಟ್ಟದ ಸಾಧನೆ ಮಾಡುತ್ತಾರೆ. ಆತ್ಮೀಯರೊಬ್ಬರು ನಿಮ್ಮಿಂದ ದೂರ ನಡೆಯುತ್ತಾರೆ. ಮಕ್ಕಳ ವಿವಾಹದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಿರಿ. ಒಂದೇ ಕೆಲಸವನ್ನು ಪದೇ ಪದೇ ಮಾಡುವಿರಿ. ಗೆಲುವೊಂದೇ ನಿಮ್ಮ ಮುಖ್ಯ ಗುರಿಯಾಗುತ್ತದೆ.

ತುಲಾ

ಆತುರದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವ ಕಾರಣ ಹಿನ್ನಡೆ ಉಂಟಾಗುತ್ತದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳು ಸಂಗಾತಿಯ ಸಹಾಯದಿಂದ ಯಶಸ್ವಿಯಾಗುತ್ತದೆ ಕುಟುಂಬದ ಮುಖ್ಯ ವ್ಯವಹಾರಗಳು ಹೆಣ್ಣು ಮಕ್ಕಳ ಮುಖಾಂತರ ನಡೆಯಲಿದೆ ಮಕ್ಕಳ ಆರೋಗ್ಯದಲ್ಲಿ ಏರಳಿತವಿರುತ್ತದೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ನಿಮ್ಮ ಪಾಲಾಗುತ್ತದೆ ಉದ್ಯೋಗದಲ್ಲಿ ಬೇರೆಯವರ ಕೆಲಸಗಳನ್ನು ನೀವೇ ಮಾಡಬೇಕಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ ಹಣಕಾಸಿನ ವ್ಯವಹಾರದಲ್ಲಿ ಕಾನೂನು ಸಲಹೆ ಪಡೆಯುವುದು ಒಳ್ಳೆಯದು. ಸಂಪೂರ್ಣ ಅರ್ಥಮಾಡಿಕೊಳ್ಳದೆ ಯಾವುದೇ ವಿಚಾರಕ್ಕೂ ಒಪ್ಪಿಗೆ ನೀಡುವುದಿಲ್ಲ ಸುಲಭವಾಗಿ ಯಾರನ್ನು ನಂಬುವುದಿಲ್ಲ.

ವೃಶ್ಚಿಕ

ಯಾರ ಮೇಲೂ ಅವಲಂಬಿತರಾಗದೆ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಸಾಮಾನ್ಯವಾಗಿ ನಿಮಗೆ ಸೋಲಿನ ಭಯವಿರುವುದಿಲ್ಲ. ಯಾವುದೇ ಕೆಲಸ ಕಾರ್ಯಗಳಾದರೂ ಮನಸಿಟ್ಟು ಮಾಡುವ ಕಾರಣ ಎಲ್ಲರ ನಂಬಿಕೆ ಗಳಿಸುವಿರಿ. ಬಂಧು ಬಳಗದವರಿಗಾಗಿ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ. ತಪ್ಪು ಮಾಡಿದವರನ್ನು ಕಂಡಾಗ ಸಿಡುಕುತನದಿಂದ ವರ್ತಿಸುವಿರಿ. ಸ್ವಂತ ಉದ್ದಿಮೆ ಇದ್ದಲ್ಲಿ ಕಾರ್ಮಿಕರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ. ನಿಮ್ಮ ಹಟವೇ ಮುಖ್ಯವಾಗುತ್ತದೆ. ಯಾರೊಬ್ಬರ ಸಲಹೆ ಸೂಚನೆಯನ್ನು ತೆಗೆದುಕೊಳ್ಳುವುದಿಲ್ಲ. ಭೂ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ವಂಶಕ್ಕೆ ಸಂಬಂಧ ಪಟ್ಟ ಆಸ್ತಿಯಲ್ಲಿ ನಿರೀಕ್ಷಿತ ಪಾಲು ದೊರೆಯುತ್ತದೆ.

ಧನಸ್ಸು

ಅತಿಯಾದ ಆತ್ಮವಿಶ್ವಾಸ ತಪ್ಪು ದಾರಿಯಲ್ಲಿ ನಡೆಸಲಿದೆ. ನಿಮ್ಮ ತೀರ್ಮಾನದಿಂದ ಕುಟುಂಬದವರಿಗೆ ಬೇಸರ ಉಂಟಾಗುತ್ತದೆ. ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತದೆ. ಕೋಪ ಕಡಿಮೆ ಮಾಡಿಕೊಂಡರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ ತಂದೆಯ ಹಣಕಾಸಿನ ವಿಚಾರದಲ್ಲಿ ವಿವಾದ ಕೊನೆಗೊಳ್ಳುತ್ತದೆ ಪಾಲುದಾರಿಕೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ ಉದ್ಯೋಗದಲ್ಲಿ ನಿಮ್ಮ ಯಶಸ್ಸಿನಲ್ಲಿ ಸಹೋದ್ಯೋಗಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ ಆರೋಗ್ಯದ ಬಗ್ಗೆ ಗಮನವಿರಲಿ. ಯೋಗಾಭ್ಯಾಸ ಮಾಡಲಿದ್ದೀರಿ.

ಮಕರ

ಯಾವುದೇ ತಾರತಮ್ಯ ತೋರದೆ ಎಲ್ಲರಿಗೂ ಸಮಾನವಾದ ಪ್ರೀತಿ ವಿಶ್ವಾಸವನ್ನು ತೋರುವಿರಿ. ನಿಮ್ಮ ಮನಸ್ಸಿನಲ್ಲಿರುವ ಹೊಂದಾಣಿಕೆಯ ಗುಣ ಆತ್ಮೀಯರನ್ನು ಹೆಚ್ಚಿಸುತ್ತದೆ. ಯಾವುದೇ ಕೆಲಸ ಆರಂಭಿಸಿದರೂ ತಡವಾಗಿ ಅದರಲ್ಲಿ ಯಶಸ್ಸನ್ನು ಕಾಣುವಿರಿ. ಆತುರದ ಮಾತುಕತೆಯಿಂದ ವೈರತ್ವ ಉಂಟಾಗಬಹುದು. ಮಾತನಾಡುವ ಮೊದಲು ಒಮ್ಮೆ ಯೋಚಿಸಿ ನೋಡಿ. ಉದ್ಯೋಗದಲ್ಲಿ ನಿಮ್ಮ ಕಾರ್ಯ ದಕ್ಷತೆಗೆ ಉತ್ತಮ ಪ್ರಶಂಸೆ ದೊರೆಯುತ್ತದೆ. ಬೇರೆಯವರ ಸಹಕಾರದಲ್ಲಿ ಹಣಕಾಸಿನ ವ್ಯವಹಾರವನ್ನು ಆರಂಭಿಸುವುದಿಲ್ಲ. ಭೂ ವಿವಾದದಲ್ಲಿ ಮಿಶ್ರಫಲವನ್ನು ಪಡೆಯುವಿರಿ. ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ದಂಪತಿ ನಡುವೆ ಇದ್ದ ಮನಸ್ತಾಪ ದೂರವಾಗುತ್ತದೆ.

ಕುಂಭ

ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಾರ್ವಜನಿಕ ಸಂಘ ಸಂಸ್ಥೆಗಳ ನಿರ್ವಹಣೆಯ ಅಧಿಕಾರ ದೊರೆಯುತ್ತದೆ. ನಿಮ್ಮ ಮನಸ್ಸು ಒಳ್ಳೆಯದಾದರೂ ದುಡುಕಿನಿಂದ ಮಾತನಾಡುವಿರಿ. ಕುಟುಂಬ ಸದಸ್ಯರ ಜವಾಬ್ದಾರಿ ನಿಮ್ಮದಾಗುತ್ತದೆ. ರಾಜಕೀಯದಲ್ಲಿ ಆಸಕ್ತಿ ಇದ್ದಲ್ಲಿ ಉತ್ತಮ ಅವಕಾಶ ದೊರೆಯಲಿದೆ. ನಿಮ್ಮ ಮನದಲ್ಲಿ ಇರುವ ವಿಚಾರಗಳನ್ನು ಬೇರೆಯವರಲ್ಲಿ ತಿಳಿಸಿರಿ. ಮನ ಬಿಚ್ಚಿ ಮಾತನಾಡಿದಷ್ಟು ಒಳ್ಳೆಯದು. ಉದ್ಯೋಗದಲ್ಲಿ ಬಿಡುವಿಲ್ಲದ ಕೆಲಸ ನಿಮ್ಮದಾಗುತ್ತದೆ. ನಿಮ್ಮ ಕರ್ತವ್ಯ ನಿಷ್ಠೆಗೆ ತಕ್ಕಂತಹ ಪ್ರತಿಫಲ ದೊರೆಯುತ್ತದೆ. ಉತ್ತಮ ಆರೋಗ್ಯವಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ನವವಿವಾಹಿತರು ಶುಭ ಸುದ್ದಿ ಕೇಳಲಿದ್ದೀರಿ.

ಮೀನ

ಯೋಚಿಸದೆ ಬೇರೆಯವರೊಡನೆ ಚರ್ಚಿಸದೆ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಕಂಡು ಬರುತ್ತದೆ. ಮನಸ್ಸಿಗೆ ಒಪ್ಪದ ಕಾರ್ಯಗಳಿಗೆ ಗಮನ ನೀಡುವುದಿಲ್ಲ. ಸೋಲಿನ ದವಡೆಯಲ್ಲಿಯೂ ಸಹ ಪ್ರಯತ್ನವನ್ನು ನಿಲ್ಲಿಸದೆ ಗೆಲ್ಲುವಿರಿ. ಚಾಡಿ ಮಾತುಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಕುಟುಂಬದಲ್ಲಿನ ಶಾಂತಿ ಸೌಹಾರ್ದತೆ ಕಾಪಾಡುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮನೆಯವರೊಂದಿಗೆ ಕುಲದೇವರ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಮನಸ್ಸಿನಲ್ಲಿ ಕೆಲವೊಂದು ಆತಂಕಗಳು ಇರುತ್ತವೆ. ಕುಟುಂಬದ ಎಲ್ಲರಿಗೂ ಸಂತಸ ಹಂಚುವಿರಿ. ಉಪಯೋಗವಿಲ್ಲದ ಚರ್ಚೆಯಿಂದ ದೂರವಿರುವಿರಿ. ಖ್ಯಾತ ಸಂಸ್ಥೆಯಲ್ಲಿ ಉದ್ಯೋಗಾವಕಾಶ ದೊರೆಯುವ ಕಾರಣ ಉದ್ಯೋಗ ಬದಲಿಸುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.