ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ತಲೆ ತಿರುಗುವ ಸಮಸ್ಯೆ ಎದುರಾಗುತ್ತದೆ, ನೆರೆಹೊರೆಯವರ ಜೊತೆ ವಾದವಿವಾದ ಉಂಟಾಗಲಿದೆ; ವಾರಭವಿಷ್ಯ

Weekly Horoscope: ತಲೆ ತಿರುಗುವ ಸಮಸ್ಯೆ ಎದುರಾಗುತ್ತದೆ, ನೆರೆಹೊರೆಯವರ ಜೊತೆ ವಾದವಿವಾದ ಉಂಟಾಗಲಿದೆ; ವಾರಭವಿಷ್ಯ

Weekly Horoscope: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (May 5th to May 11th Weekly Horoscope)

ಮೇ 5 ರಿಂದ ಮೇ 11ರವರೆಗೆ ವಾರಭವಿಷ್ಯ
ಮೇ 5 ರಿಂದ ಮೇ 11ರವರೆಗೆ ವಾರಭವಿಷ್ಯ

ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (May 5th to May 11th Weekly Horoscope in Kannada)

ಮೇಷ

ಯಾವುದೇ ಅಡಚಣೆ ಇಲ್ಲದೆ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ದಿನ ಕಳೆದಂತೆ ಕ್ರಮೇಣ ಪ್ರಯತ್ನಕ್ಕೆ ತಕ್ಕಂತಹ ಶುಭಫಲಗಳು ದೊರೆಯುತ್ತವೆ. ಕಷ್ಟದ ಸಂದರ್ಭದಲ್ಲಿ ಸ್ನೇಹಿತರಿಗೆ ಸಹಾಯ ಮಾಡಬೇಕಾಗುತ್ತದೆ. ಅತಿಯಾದ ಜವಾಬ್ದಾರಿಯಿಂದ ಸ್ವಂತ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದು. ಹಣಕಾಸಿನ ಕೊರತೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಕೌಟುಂಬಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಇರುತ್ತವೆ. ಉದ್ಯೋಗದಲ್ಲಿ ಬದಲಾವಣೆಗಳು ಮಾನಸಿಕ ನೆಮ್ಮದಿಯನ್ನು ನೀಡುತ್ತವೆ. ಕುಟುಂಬದ ಸಂಪೂರ್ಣ ಜವಾಬ್ದಾರಿಯಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಆತುರದ ನಿರ್ಧಾರ ಬೇಡ.

ವೃಷಭ

ದೈನಂದಿನ ಜೀವನದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರಲಿವೆ. ಕುಟುಂಬದಲ್ಲಿನ ಪರಸ್ಪರ ಸಹಕಾರದಿಂದಾಗಿ ನೆಮ್ಮದಿ ಇರುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮದಂತಹ ಪ್ರಾಚೀನ ಮಾರ್ಗಗಳನ್ನು ಅನುಸರಿಸುವಿರಿ. ಉದ್ಯೋಗದಲ್ಲಿ ಅನುಕೂಲಕಾರಿ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಅನಿರೀಕ್ಷಿತವಾದ ಕೆಲಸಕಾರ್ಯಗಳ ಕಾರಣ ಆಹಾರ ಮತ್ತು ದೈನಂದಿನ ಕಾರ್ಯಕ್ರಮಗಳ ಬದಲಾವಣೆ ಮಾಡುವಿರಿ. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಕಂಡುಬರುತ್ತದೆ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮದಾಗಲಿದೆ. ಸ್ವಂತ ಬಳಕೆಗಾಗಿ ವಾಹನವೊಂದನ್ನು ಕೊಳ್ಳುವಿರಿ. ನೂತನ ಹಣಕಾಸಿನ ಯೋಜನೆಯನ್ನು ರೂಪಿಸುವಿರಿ.

ಮಿಥುನ

ಮುಗಿಯದ ಕೆಲಸ ಕಾರ್ಯವಿದ್ದರೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ಕುಟುಂಬದಲ್ಲಿ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಮಯಾಧಾರಿತ ತೀರ್ಮಾನಗಳ ಕಾರಣ ಜೀವನದ ತೊಂದರೆಗಳು ಮರೆಯಾಗಲಿವೆ. ಜೀವನದಲ್ಲಿ ಮಹತ್ತರ ಬದಲಾವಣೆಗಳು ಸಂತಸವನ್ನು ಉಂಟುಮಾಡಲಿವೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಉದ್ಯೋಗದ ಕಾರ್ಯನಿರ್ವಹಣೆಗೆ ಸರ್ಕಾರದ ಸಹಾಯ ದೊರೆಯುತ್ತದೆ. ತಂದೆಯಿಂದ ಹಣದ ಸಹಾಯ ದೊರೆಯಲಿದೆ. ಪದೇ ಪದೇ ಮನಸ್ಸನ್ನು ಬದಲಿಸದಿರಿ. ಮನಸ್ಸು ಒಳ್ಳೆಯದಾದರು ದುಡುಕಿ ಮಾತನಾಡಿ ವಿವಾದವನ್ನು ಎದುರಿಸಬೇಕಾಗುತ್ತದೆ. ದೇವತಾಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ತಲೆ ತಿರುಗುವ ಸಮಸ್ಯೆ ಎದುರಾಗುತ್ತದೆ.

ಕಟಕ

ಖರ್ಚು ವೆಚ್ಚಗಳನ್ನು ಸರಿದೂಗಿಸುವಷ್ಟು ಆದಾಯ ನಿಮಗಿರುತ್ತದೆ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಜನ್ಮಸ್ಥಳಕ್ಕೆ ಭೇಟಿ ನೀಡುವಿರಿ. ಮನೆಯನ್ನು ಅಲಂಕರಿಸಲು ದುಬಾರಿ ವೆಚ್ಚದ ಪದಾರ್ಥಗಳನ್ನು ಕೊಳ್ಳುವಿರಿ. ತಪ್ಪಾಗದಂತೆ ಮುಂಜಾಗರೂಕತೆ ವಹಿಸಿ ಕೆಲಸ ಕಾರ್ಯದಲ್ಲಿ ತಲ್ಲೀನರಾಗುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಬರಲಿರುವ ದಿನಗಳಿಗಾಗಿ ಹಣ ಉಳಿಸುವ ಯೋಚನೆ ಮಾಡುವಿರಿ. ಸರ್ಕಾರದ ಅನುದಾನದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಸ್ವಗೃಹ ಭೂಲಾಭವಿದೆ. ಹಣದ ತೊಂದರೆಬಾರದು. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಸಾಲವಾಗಿ ಕೊಟ್ಟ ಹಣವನ್ನು ಮರಳಿ ಕೇಳುವುದಿಲ್ಲ. ಮಗಳ ಜೊತೆಯಲ್ಲಿ ವಾದ ವಿವಾದ ಇರುತ್ತದೆ.

ಸಿಂಹ

ಸಿಡುಕುತನದ ಕಾರಣ ಯಾರೂ ನಿಮ್ಮ ಮಾತನ್ನು ಮೀರುವುದಿಲ್ಲ. ಆದರೆ ಈ ಕಾರಣದಿಂದ ಶಾಂತಿ ನೆಮ್ಮದಿ ನಿಮ್ಮಿಂದ ದೂರ ಉಳಿಯುತ್ತದೆ. ಸಂಯಮದಿಂದ ವರ್ತಿಸಿದಲ್ಲಿ ಸುಖಮಯ ಜೀವನ ನಿಮ್ಮದಾಗಲಿದೆ. ತಪ್ಪು ಗ್ರಹಿಕೆಯಿಂದಾಗಿ ಉದ್ಯೋಗವನ್ನು ಬದಲಾಯಿಸುವ ನಿರ್ಧಾರ ಮಾಡುವಿರಿ. ವಿದ್ಯಾರ್ಥಿಗಳು ದೊರೆವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ. ಅನಿರೀಕ್ಷತವಾಗಿ ಹಣದ ಸಹಾಯ ದೊರೆಯುತ್ತದೆ. ಹಳೆಯ ಭೂವಿವಾದವು ಅಂತ್ಯಗೊಳ್ಳುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ಕೆಲವರ ವಿರೋಧವನ್ನು ಎದುರಿಸಬೇಕಾಗುತ್ತದೆ. ಜನಸೇವೆಯಲ್ಲಿ ಸಂತಸವನ್ನುಕಾಣುವಿರಿ. ಐಷಾರಾಮಿ ವಾಹನವನ್ನು ಕೊಳ್ಳುವಿರಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪರಸ್ಥಳಕ್ಕೆ ತೆರಳುವಿರಿ.

ಕನ್ಯಾ

ಆದಾಯದಲ್ಲಿನ ಹೆಚ್ಚಳ ಆತ್ಮವಿಶ್ವಾಸಕ್ಕೆ ಕಾರಣವಾಗುತ್ತದೆ. ಉದ್ಯೋಗದಲ್ಲಿ ಒಂದೆರಡು ದಿನ ಆತಂಕದ ಕ್ಷಣಗಳು ಎದುರಾಗುತ್ತವೆ. ಬೇರೆಯವರ ಬುದ್ಧಿಮಾತನ್ನು ಕೇಳದೆ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಯಾವುದೇ ರೀತಿಯ ಹಿನ್ನಡೆ ಎದುರಾಗದು. ನೂತನ ವಾಹನವನ್ನು ಕೊಳ್ಳುವಿರಿ. ಕುಟುಂಬದಲ್ಲಿ ಶಾಂತಿ ಸಾಮರಸ್ಯ ಕಂಡುಬರುತ್ತದೆ. ಭೂವ್ಯವಹಾರದ ಮದ್ಯಸ್ಥಿಕೆಯಲ್ಲಿ ಉತ್ತಮ ಆದಾಯ ಗಳಿಸುವಿರಿ. ಹಣದ ತೊಂದರೆ ಇರುವುದಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನಮಾನ ಸಂಪಾದಿಸುವಿರಿ. ಸ್ನೇಹಿತರ ಸಹಯೋಗದಲ್ಲಿ ವ್ಯಾಪಾರೀ ಸಂಸ್ಥೆ ಆರಂಭಿಸುವ ಯೋಚನೆ ಇರುತ್ತದೆ. ಯಾರೊಂದಿಗೂ ಬೆರೆಯದೆ ಏಕಾಂಗಿತನವನ್ನು ಇಷ್ಟಪಡುವಿರಿ.

ತುಲಾ

ಜನಸಾಮಾನ್ಯರ ಜೊತೆಯಲ್ಲಿ ಬೆರೆತು ಸಮಾಜದ ಕೇಂದ್ರಬಿಂದುವಾಗುವಿರಿ. ಫಲಿತಾಂಶದ ಬಗ್ಗೆ ಯೋಚಿಸದೆ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಪ್ರತಿಷ್ಠಿತ ಕಂಪನಿಯೊಂದರಲ್ಲಿ ನೌಕರಿ ದೊರೆಯುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಆತಂಕದ ಪರಿಸ್ಥಿತಿ ಎದುರಾಗಲಿದೆ. ಕೂಡು ಕುಟುಂಬದಲ್ಲಿ ಸುಖ ಮತ್ತು ಸಂತೃಪ್ತಿಯ ಜೀವನ ನಡೆಸುವಿರಿ. ಒಳ್ಳೆಯ ಆಹಾರದ ಅಭ್ಯಾಸದಿಂದಾಗಿ ಆರೋಗ್ಯ ಕಾಪಾಡಿಕೊಳ್ಳುವಿರಿ. ವಂಶದ ಹಿರಿಯರ ಸಹಾಯ ಮತ್ತು ಮಾರ್ಗದರ್ಶನ ದೊರೆಯುತ್ತದೆ. ಕೃಷಿ ಸಂಪನ್ಮೂಲಗಳ ಬಳಕೆಗಳ ಬಗ್ಗೆ ಉನ್ನತ ಅಧ್ಯಯನ ಮಾಡುವಿರಿ. ಸಂಗೀತ ನಾಟ್ಯ ಬಲ್ಲವರಿಗೆ ವಿಶೇಷವಾದ ಅವಕಾಶ ದೊರೆಯಲಿದೆ. ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ.

ವೃಶ್ಚಿಕ

ಕೌಟುಂಬಿಕ ವಿಚಾರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ನಿಂತುಹೋಗಿದ್ದ ವ್ಯಾಪಾರವನ್ನು ಮತ್ತೊಮ್ಮೆ ಆರಂಭಿಸುವಿರಿ. ಉದ್ಯೋಗಸ್ಥರ ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಮಕ್ಕಳಿಗೆ ಪರಸ್ಥಳದಲ್ಲಿ ಉದ್ಯೋಗ ದೊರೆಯುತ್ತದೆ. ತಂದೆಗೆ ಸೇರಿದ ಭೂಮಿಯು ನಿಮ್ಮ ಪಾಲಾಗುತ್ತದೆ. ಹಳೆಯ ವಾಹನವನ್ನು ಮಾರಾಟದ ಮಾಡಿ ಹೊಸ ವಾಹನ ಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಮನಗೊಪ್ಪುವ ಧನಾತ್ಮಕ ಬದಲಾವಣೆಗಳಿವೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯಿರಿ. ಮುಂಗೋಪವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಹಠದ ಗುಣ ಸಂಗಾತಿಯಲ್ಲಿ ಬೇಸರ ಮೂಡಿಸುತ್ತದೆ.

ಧನಸ್ಸು

ನಿಮ್ಮ ಎಣಿಕೆಯಂತೆ ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಜೀವನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲವೆಂದು ಸಾಧಿಸಿ ತೋರಿಸುವಿರಿ. ಸಮಾಜದಲ್ಲಿ ಮುಖ್ಯಸ್ಥರ ಪಟ್ಟ ನಿಮ್ಮದಾಗುತ್ತದೆ. ಸುಖ ಸಂತೋಷದ ಜೀವನ ನಡೆಸುವಿರಿ. ವ್ಯಾಪಾರೋದ್ದೇಶಕ್ಕಾಗಿ ಬೃಹತ್ ವಾಹನವನ್ನು ಖರೀದಿಸುವಿರಿ. ಸಂತಾನ ಲಾಭವಿದೆ. ವಂಶದ ಹಿರಿಯರಿಗೆ ಸೇರಿದ ಆಸ್ತಿಯ ವಿವಾದ ದೂರ ಮಾಡುವಿರಿ. ದೃಢ ಸಂಕಲ್ಪದಿಂದ ಸಾರ್ವಜನಿಕ ಸೇವಾಕೇಂದ್ರವನ್ನು ಆರಂಭಿಸುವಿರಿ. ಬಿಡುವಿಲ್ಲದ ಕಾರ್ಯಕ್ರಮದ ನಡುವೆ ವಿಶ್ರಾಂತಿ ಪಡೆಯುವಿರಿ. ನೆರೆಹೊರೆಯ ಜನರ ಜೊತೆ ವಾದವಿವಾದ ಉಂಟಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಅತಿ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ.

ಮಕರ

ಕೆಲಸದಲ್ಲಿನ ನಿಮ್ಮ ಸಮರ್ಪಣಾ ಮನೋಭಾವನೆ ಎಲ್ಲರಿಗೂ ಇಷ್ಟವೆನಿಸುತ್ತದೆ. ಕಾರ್ಯನಿರ್ವಹಿಸುವ ರೀತಿಯಲ್ಲಿ ಎಲ್ಲರಿಗೂ ಮಾದರಿಯಾಗುವಿರಿ. ಕಷ್ಟ ನಷ್ಟಗಳಿಗೆ ಭಯ ಪಡುವುದಿಲ್ಲ. ಸಂಬಂಧವನ್ನೂ ಲೆಕ್ಕಿಸದೆ ನ್ಯಾಯದ ಪಕ್ಷಪಾತಿಯಾಗುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಗೌರವದಿಂದ ನೋಡುವಿರಿ. ಉದ್ಯೋಗದಲ್ಲಿ ಉನ್ನತ ದರ್ಜೆಯನ್ನು ತಲುಪುವಿರಿ. ಮಕ್ಕಳು ಎಲ್ಲರ ಸಹಕಾರದಿಂದ ವಿದೇಶಕ್ಕೆ ತೆರಳಲಿದ್ದಾರೆ. ಕುಟುಂಬದ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಯಲಿದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಂಗಾತಿಯ ಮಾತುಕತೆ ಭಾವನೆಗಳನ್ನು ಗೌರವಿಸುವಲ್ಲಿ ವಿಫಲರಾಗುವಿರಿ. ಗುಟ್ಟಾಗಿ ಹಣವನ್ನು ಸಂಪಾದಿಸುವ ಉಳಿಸುವ ಕೆಲಸ ಮಾಡುವಿರಿ.

ಕುಂಭ

ಮನಬಿಚ್ಚಿ ಮಾತನಾಡಿದಲ್ಲಿ ಮನದ ಅಭಿಲಾಷೆಗಳು ನೆರವೇರಲಿವೆ. ಕುಟುಂಬದ ಅತಿ ಮುಖ್ಯ ಕೆಲಸವೊಂದು ಸುಲಭದಲ್ಲಿ ಈಡೇರಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆತು ದೂರದ ಊರಿಗೆ ತೆರಳುವಿರಿ. ಮಕ್ಕಳಿಗೆ ಪ್ರಖ್ಯಾತ ಸಂಸ್ಥೆಯಲ್ಲಿ ಉನ್ನತಾಧಿಕಾರ ದೊರೆಯಲಿದೆ. ಸಮಯ ಸಂದರ್ಭವನ್ನು ನಿಮ್ಮ ಒಳಿತಿಗೆ ಬಳಸಿಕೊಳ್ಳುವಿರಿ. ಕುಟುಂಬದಲ್ಲಿ ಬೇಸರದ ಸನ್ನಿವೇಶವೊಂದು ನಡೆಯಲಿದೆ. ತಾಯಿಗೆ ಸೇರಬೇಕಾಗಿದ್ದ ಆಸ್ತಿಯ ವಿಚಾರದಲ್ಲಿ ವಿವಾದ ಎದುರಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಕೆಲಸದ ಪ್ರತಿಫಲ ಪರರ ಪಾಲಾಗಲಿದೆ. ಕುಟುಂಬದ ಹಿರಿಯರ ಮನಸ್ಸಿಗೆ ಒಪ್ಪುವಂತಹ ಕೆಲಸಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿನ ಆಂತರ್ಯವನ್ನು ತಿಳಿಯುವುದು ಬಲುಕಷ್ಟ.

ಮೀನ

ದೊರೆಯುವ ಅವಕಾಶಗಳಿಗೆ ಬರವಿಲ್ಲ. ಅದರ ಪ್ರಯೋಜನ ಪಡೆದುಕೊಳ್ಳಿರಿ. ಬೇರೆಯವರ ಸಹಾಯವನ್ನು ಸದುಪಯೋಗ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲಿದ್ದೀರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಾಯಸ ಪಡುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಅದೃಷ್ಟವಿದೆ. ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ನಡೆಯುತ್ತಾರೆ. ಧಾರ್ಮಿಕ ಕಾರ್ಯವೊಂದಕ್ಕೆ ಹೆಚ್ಚಿನ ಹಣ ವೆಚ್ಚವಾಗುತದೆ. ಸಂತಾನಲಾಭವಿದೆ. ವಿದೇಶದಲ್ಲಿ ಉದ್ಯೋಗ ಲಭಿಸುತ್ತದೆ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ವಿಚಾರ ಮಾಡುವಿರಿ. ಪ್ರಾಣಿಗಳನ್ನು ಸಾಕುವ ನಿರ್ಧಾರ ಮಾಡುವಿರಿ. ಪಶು ಸಂಗೋಪನೆಯಲ್ಲಿ ಉತ್ತಮ ಆದಾಯ ದೊರೆಯುತ್ತದೆ.

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).