ವಿದೇಶಕ್ಕೆ ತೆರಳುವ ಅವಕಾಶ ಕೈತಪ್ಪಲಿದೆ, ಅತಿಯಾದ ಒತ್ತಡವು ಚಿಂತೆಗೆ ಕಾರಣವಾಗಲಿದೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ಪ್ರತಿ ರಾಶಿಗೂ ಅದರದ್ದೇ ಆದರ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗ ನೀಡುತ್ತವೆ. ಮಾ 23 ರಿಂದ ಮಾ 29ರವರೆಗೆ, ಧನು ರಾಶಿಯಿಂದ ಮೀನದವರೆಗೆ ಏನೆಲ್ಲಾ ಪರಿಣಾಮಗಳಿವೆ ಎಂಬ ವಿವರ ಇಲ್ಲಿದೆ.

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮಾರ್ಚ್ 23 ರ ಭಾನುವಾರದಿಂದ ಮಾರ್ಚ್ 29ರ ಶನಿವಾರದವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಧನು
ಆತುರದಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರಯತ್ನಿಸದಿರಿ. ಕಣ್ಣಿಗೆ ಸಂಬಂಧಿಸಿದ ದೋಷ ಇರುತ್ತದೆ. ಆರೋಗ್ಯವನ್ನು ಉಳಿಸಿಕೊಳ್ಳಲು ಹೆಚ್ಚಿನ ಗಮನ ತೋರುವುದು ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳಬೇಕಾದ ಅವಕಾಶವು ಕೈತಪ್ಪಲಿದೆ. ಉದ್ಯೋಗದಲ್ಲಿ ಅನಗತ್ಯ ಸಮಸ್ಯೆಗಳು ಎದುರಾಗಲಿವೆ. ಸಮಯಕ್ಕೆ ತಕ್ಕನಾದ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಹೊಸ ಬಗೆಯ ಜೀವನವನ್ನು ಆಯ್ಕೆ ಮಾಡುವಲ್ಲಿ ವಿಫಲರಾಗುವಿರಿ. ಸಂಗೀತ ನಾಟ್ಯದಲ್ಲಿ ಉತ್ತಮ ಸಾಧನೆ ಮಾಡುವಿರಿ. ಮಕ್ಕಳ ವಿವಾಹದ ಬಗ್ಗೆ ಚರ್ಚೆ ನಡೆಯಲಿದೆ. ದಂಪತಿಗಳ ನಡುವೆ ಕುಟುಂಬದ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿರುತ್ತದೆ.
ಪರಿಹಾರ: ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಮಕರ
ನಿತ್ಯ ಜೀವನದಲ್ಲಿ ಆರೋಗ್ಯದ ಸಮಸ್ಯೆ ಎದುರಾಗುತ್ತದೆ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಮನಸ್ಸಿಗೆ ಒಪ್ಪುವ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಮನಸ್ಸು ಒಳ್ಳೆಯದಾದರೂ ದುಡುಕಿನ ಮಾತಿನ ಕಾರಣ ಜನರ ವಿರೋಧ ಎದುರಿಸುವಿರಿ. ಉದ್ಯೋಗದಲ್ಲಿ ನಿಮಗೆ ಇಷ್ಟವೆನಿಸುವ ಬದಲಾವಣೆಗಳು ಕಂಡುಬರುತ್ತವೆ. ಮಕ್ಕಳ ಸಂತೋಷಕ್ಕೆ ನಿಮ್ಮ ಸಮಯವನ್ನು ಮೀಸಲಿಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಶೀತದ ತೊಂದರೆಯಿಂದ ಬಳಲುವಿರಿ. ಸೋದರರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಅಳುಕಿಲ್ಲದೆ ನಿಮ್ಮ ಮನಸ್ಸಿನ ತೀರ್ಮಾನಗಳನ್ನು ಎಲ್ಲರಿಗೂ ತಿಳಿಸುವಿರಿ. ಅದೃಷ್ಟದ ಕಾರಣದಿಂದ ಎದುರಾಗುವ ಸಮಸ್ಯೆಗಳಿಂದ ಪಾರಾಗುವಿರಿ. ನಿಮ್ಮ ಮನಸ್ಸನ್ನು ಅರಿಯಲು ಆತ್ಮೀಯರೂ ವಿಫಲರಾಗುತ್ತಾರೆ. ಮಕ್ಕಳ ವಿವಾಹವನ್ನು ನಿಶ್ಚಯ ಮಾಡುವಿರಿ. ದುಡುಕಿನ ಮಾತುಕತೆಯಿಂದ ಹಣದ ವಿವಾದ ಉಂಟಾಗಲಿದೆ.
ಪರಿಹಾರ: ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನೀಲಿ ಬಣ್ಣ
ಕುಂಭ
ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಗೆ ಒಳಗಾಗುವಿರಿ. ಸಣ್ಣಪುಟ್ಟ ಸೋಲನ್ನು ಸಹ ಸಹಿಸಿಕೊಳ್ಳುವುದಿಲ್ಲ. ಅತಿಯಾದ ಭಾವುಕತೆಯಿಂದ ವರ್ತಿಸುವಿರಿ. ಆತಂಕಕ್ಕೆ ಒಳಗಾಗದೆ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವಿರಿ. ಸ್ನಾಯುವಿನ ಎಳೆತದ ದೋಷದಿಂದ ಬಳಲುವಿರಿ. ಕ್ರಮೇಣ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಒಲ್ಲದ ಮನಸ್ಸಿನಿಂದ ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಕುಟುಂಬದಲ್ಲಿ ಗಂಭೀರದ ವಾತಾವರಣವಿರುತ್ತದೆ. ವಿದ್ಯಾರ್ಥಿಗಳು ತಮ್ಮ ಮನದ ಆಶಯವನ್ನು ಯಾರಿಗೂ ತಿಳಿಸುವುದಿಲ್ಲ. ದೊರೆಯುವ ಅವಕಾಶಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿ. ಸ್ತ್ರೀಯರಿಗೆ ಹಾರ್ಮೋನ್‌ಗೆ ಸಂಬಂಧಿಸಿದ ತೊಂದರೆ ಇರಲಿದೆ. ಸರಳವಾದ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ.
ಪರಿಹಾರ: ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ಮೀನ
ಒತ್ತಡದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಗಂಭೀರವಾಗಿ ಸ್ವೀಕರಿಸುವ ಕಾರಣ ಮಾನಸಿಕ ಚಿಂತೆ ಇರುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಬಿಡುವಿಲ್ಲದ ಕೆಲಸ ಕಾರ್ಯಗಳು ಇರಲಿವೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ನಿಮ್ಮದಾಗುತ್ತದೆ. ಯಾವುದೇ ಕೆಲಸವನ್ನು ಆರಂಭಿಸಲು ನಿಮ್ಮ ಮನಸ್ಸು ಒಪ್ಪುವುದಿಲ್ಲ. ವಿದ್ಯಾರ್ಥಿಗಳನ್ನು ಸೋಮಾರಿತನ ಕಾಡುತ್ತದೆ. ಗೃಹಿಣಿಯರಿಗೆ ನಿರೀಕ್ಷಿತ ಶುಭ ಫಲಗಳು ದೊರೆಯಲಿವೆ. ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಬದಲಿಸುವಿರಿ. ಬೇಗನೆ ಕೋಪಗೊಂಡರು ಕ್ಷಣಮಾತ್ರದಲ್ಲಿ ಶಾಂತರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಾಲದ ವ್ಯವಹಾರದಲ್ಲಿ ವಿವಾದಕ್ಕೆ ಸಿಲುಕುವಿರಿ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ಕುಟುಂಬದ ಹಿರಿಯರೊಂದಿಗೆ ಮನಸ್ತಾಪ ಉಂಟಾಗುತ್ತದೆ.
ಪರಿಹಾರ: ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು, ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
