ಅನಾವಶ್ಯಕ ವಿಚಾರಗಳಿಂದ ಮಾನಸಿಕ ಒತ್ತಡ, ಅನಿರೀಕ್ಷಿತ ಧನಲಾಭ, ಅನಾವಶ್ಯಕ ಓಡಾಟ; ಸಿಂಹದಿಂದ ವೃಶ್ಚಿಕ ರಾಶಿವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ಪ್ರತಿ ರಾಶಿಗೂ ಅದರದ್ದೇ ಆದರ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗ ನೀಡುತ್ತವೆ. ಫೆ 16 ರಿಂದ ಫೆ 22ರವರೆಗೆ, ಸಿಂಹದಿಂದ ವೃಶ್ಚಿಕ ರಾಶಿವರೆಗೆ ಏನೆಲ್ಲಾ ಪರಿಣಾಮಗಳಿವೆ ಎಂಬ ವಿವರ ಇಲ್ಲಿದೆ.

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಫೆಬ್ರವರಿ 16ರ ಭಾನುವಾರದಿಂದ 22ರ ಶನಿವಾರದವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಸಿಂಹ ರಾಶಿ
ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮಕ್ಕಳ ಜೊತೆಯಲ್ಲಿ ಸಂತೋಷದಿಂದ ದಿನ ಕಳೆಯುವಿರಿ. ಮನರಂಜನೆಗೆ ಮೊದಲ ಆದ್ಯತೆ ನೀಡುವಿರಿ. ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ದೊರೆಯುತ್ತದೆ. ಅನಾವಶ್ಯಕವಾದ ವಿಚಾರಗಳಿಗೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉತ್ತಮ ಪ್ರಯತ್ನದಿಂದ ಮಾತ್ರ ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಲಭಿಸುತ್ತದೆ. ಬೇರೆಯವರಿಂದ ಹಣದ ಸಹಾಯ ಪಡೆಯಲು ಮನಸ್ಸು ಒಪ್ಪುವುದಿಲ್ಲ. ಸಮಾಜ ಸೇವೆ ಮಾಡುವ ಇಂಗಿತ ಇರುತ್ತದೆ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಪಾಲುದಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುತ್ತದೆ. ಆರೋಗ್ಯದ ಕಾರಣ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿಯುತ್ತಾರೆ. ನಿಮ್ಮಲ್ಲಿ ಕೋಪ ಮತ್ತು ಹಠದ ಗುಣವು ಇರುತ್ತವೆ. ಆಡುವ ಮಾತಿನ ಮೇಲೆ ಹತೋಟಿ ಇರಲಿ. ನೂತನ ವಾಹನವಿದೆ.
ಪರಿಹಾರ: ಸಿಹಿತಿಂದು ನೀರನ್ನು ಕುಡಿದು ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 12 ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಕನ್ಯಾ ರಾಶಿ
ಕುಟುಂಬದ ಕೆಲಸ ಕಾರ್ಯಗಳಲ್ಲಿ ಅಡಚಣೆ ಇರುವ ಕಾರಣ ಮಾನಸಿಕ ಒತ್ತಡವಿರುತ್ತದೆ. ಕ್ರಮೇಣ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬರಬಹುದು. ಅನಿರೀಕ್ಷಿತ ಧನಲಾಭವಿರುತ್ತದೆ. ಬೇಡದ ವಿಚಾರಗಳಿಗಾಗಿ ಹಣ ಖರ್ಚು ಮಾಡುವಿರಿ. ನಿಮ್ಮ ದುಡುಕಿನ ರೀತಿ ನೀತಿಗಳು ಆತ್ಮೀಯರಲ್ಲಿ ಬೇಸರವನ್ನು ಉಂಟುಮಾಡುತ್ತದೆ. ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ವಿದ್ಯಾರ್ಥಿಗಳ ಜೀವನದಲ್ಲಿ ನಿರೀಕ್ಷಿತ ಬದಲಾವಣೆಯೊಂದು ಕಂಡುಬರುತ್ತದೆ. ತಪ್ಪು ಮಾಡಿದವರನ್ನು ಕಟುವಾಗಿ ಟೀಕಿಸುವಿರಿ. ದುಡುಕು ಮಾತಿನಿಂದ ಬೇರೆಯವರ ಬೇಸರಕ್ಕೆ ಕಾರಣವಾಗುವಿರಿ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗವನ್ನು ಬದಲಿಸುವಿರಿ. ದಾಂಪತ್ಯ ಜೀವನದಲ್ಲಿ ಇದ್ದ ಮನಸ್ತಾಪವು ದೂರವಾಗುತ್ತದೆ. ಆತ್ಮೀಯರೊಬ್ಬರ ಹಣದ ಸಮಸ್ಯೆಯನ್ನು ಬಗೆಹರಿಸುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಹಾಲು ಮೊಸರು ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 9 ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ತುಲಾ ರಾಶಿ
ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ನಿಮ್ಮ ಮನದ ಭಾವನೆಯನ್ನು ಅರ್ಥಮಾಡಿಕೊಳ್ಳುವ ಸ್ನೇಹಿತರು ದೊರೆಯುತ್ತಾರೆ. ಆತುರದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ ಯಾವುದೇ ತೊಂದರೆ ಎದುರಾಗುವುದಿಲ್ಲ. ನೇರ ಮತ್ತು ನಿಷ್ಠೂರದ ಗುಣವಿರುತ್ತದೆ. ಆದಾಯಕ್ಕಿಂತಲೂ ಹೆಚ್ಚು ಖರ್ಚು ವೆಚ್ಚಗಳು ಹೆಚ್ಚಿನದಾಗಿರುತ್ತದೆ. ಸಹೋದ್ಯೋಗಿಗಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ವಾಸಸ್ಥಳವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ನಿಧಾನಗತಿಯ ಯಶಸ್ಸು ದೊರೆಯುತ್ತದೆ. ತಾಯಿಯವರ ಸಹಾಯ ಸಹಕಾರ ನಿಮಗಿರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಕೆಲಸದ ನಡುವೆ ವಿಶ್ರಾಂತಿಯನ್ನು ಬಯಸುವಿರಿ.
ಪರಿಹಾರ: ಹಸುವಿಗೆ ಆಹಾರವನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 8 ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಹಸಿರು ಬಣ್ಣ
ವೃಶ್ಚಿಕ ರಾಶಿ
ಜೀವನದಲ್ಲಿ ನೀವು ನಿರೀಕ್ಷಿಸಿದಂತೆ ಯಶಸ್ಸು ದೊರೆಯುತ್ತದೆ. ಉತ್ತಮ ಆರೋಗ್ಯವನ್ನು ಗಳಿಸುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳು ಇರುತ್ತವೆ. ಸಣ್ಣ ಪುಟ್ಟ ತಪ್ಪುಗಳನ್ನು ಖಂಡಿಸುವಿರಿ. ಸುಲಭವಾಗಿ ಬೇರೆಯವರ ಸಲಹೆ ಸೂಚನೆಯನ್ನು ಒಪ್ಪುವುದಿಲ್ಲ. ಕುಟುಂಬದವರಿಂದ ಸಹಾಯ ಸಹಕಾರ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ದೂರದ ಸ್ಥಳಕ್ಕೆ ತೆರಳುತ್ತಾರೆ. ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆಗಳಿವೆ. ಇಲಾಖೆಯ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವಿರಿ. ಕೆಲಸ ಕಾರ್ಯಗಳಲ್ಲಿ ಎದುರಾಗುವ ಅಡೆತಡೆಗಳನ್ನು ಸಮರ್ಥಕವಾಗಿ ನಿರ್ವಹಿಸುವಿರಿ. ಎದುರಾಗುವ ಒತ್ತಡಗಳನ್ನು ಗೆಲ್ಲುವಿರಿ. ಸದಾಕಾಲ ಸಂತೋಷದಿಂದ ಬಾಳುವಿರಿ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಆತ್ಮೀಯರಿಗೆ ದುಬಾರಿ ಕಾಣಿಕೆಯನ್ನು ನೀಡುವಿರಿ. ಅನಾವಶ್ಯಕ ಓಡಾಟ ಇರುತ್ತದೆ.
ಪರಿಹಾರ: ಮನೆಯಲ್ಲಿನ ಸಾಕುಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು, ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)
