ವಿವಾದಗಳಲ್ಲಿ ಸಿಲುಕುವಿರಿ, ಕಣ್ಣಿನ ಸಮಸ್ಯೆ ಉಂಟಾಗಲಿದೆ, ಉದ್ಯೋಗ ಬದಲಾವಣೆ ಸಾಧ್ಯತೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿವಾದಗಳಲ್ಲಿ ಸಿಲುಕುವಿರಿ, ಕಣ್ಣಿನ ಸಮಸ್ಯೆ ಉಂಟಾಗಲಿದೆ, ಉದ್ಯೋಗ ಬದಲಾವಣೆ ಸಾಧ್ಯತೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ

ವಿವಾದಗಳಲ್ಲಿ ಸಿಲುಕುವಿರಿ, ಕಣ್ಣಿನ ಸಮಸ್ಯೆ ಉಂಟಾಗಲಿದೆ, ಉದ್ಯೋಗ ಬದಲಾವಣೆ ಸಾಧ್ಯತೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅದರದ್ದೇ ಆದರ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗ ನೀಡುತ್ತವೆ. ಫೆ 16 ರಿಂದ ಫೆ 22ರವರೆಗೆ, ಧನು ರಾಶಿಯಿಂದ ಮೀನದವರೆಗೆ ಏನೆಲ್ಲಾ ಪರಿಣಾಮಗಳಿವೆ ಎಂಬ ವಿವರ ಇಲ್ಲಿದೆ.

ಧನುದಿಂದ ಮೀನದವರೆಗೆ ವಾರ ಭವಿಷ್ಯ
ಧನುದಿಂದ ಮೀನದವರೆಗೆ ವಾರ ಭವಿಷ್ಯ

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಫೆಬ್ರವರಿ 16ರ ಭಾನುವಾರದಿಂದ 22ರ ಶನಿವಾರದವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಧನಸ್ಸು

ಅತಿಯಾದ ಭೋಜನದಿಂದ ಅಜೀರ್ಣ ತೊಂದರೆ ಉಂಟಾಗುತ್ತದೆ. ಯಾವುದೇ ವಿಚಾರವಾದರೂ ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸುಖ ದುಃಖವನ್ನು ಸಮಾನ ಮನಸ್ಸಿನಿಂದ ತೆಗೆದುಕೊಳ್ಳುವಿರಿ. ಆತುರಕ್ಕೆ ಒಳಗಾಗದೆ ಕ್ರಮೇಣ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸೋದರಿಯಿಂದ ಉತ್ತಮ ಆದಾಯ ದೊರೆಯುತ್ತದೆ. ಮನದಲ್ಲಿ ಅನಾವಶ್ಯಕವಾದ ಯೋಚನೆ ಇರುತ್ತದೆ. ಮಧ್ಯಮ ಗತಿಯ ಆದಾಯ ನಿಮಗಿರುತ್ತದೆ. ಯೋಚನೆ ಮಾಡದೆ ದುಡುಕನಿಂದ ಮಾತನಾಡುವಿರಿ. ನಿಮಗೆ ಅರಿವಿಲ್ಲದಂತೆಯೇ ವಿವಾದಗಳಿಗೆ ಸಿಲುಕುವಿರಿ. ತಪ್ಪನ್ನು ಮನ್ನಿಸುವ ದೊಡ್ಡ ಗುಣ ನಿಮ್ಮಲ್ಲಿರುತ್ತದೆ. ನಿಮಗೆ ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸಬಲ್ಲಿರಿ. ಸಂಗೀತ ನಾಟ್ಯದಲ್ಲಿ ಆಸಕ್ತಿ ಮೂಡುತ್ತದೆ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬರುವುದಿಲ್ಲ.

ಪರಿಹಾರ: ನಿಮ್ಮ ತಾಯಿಯವರ ಆಶೀರ್ವಾದ ಪಡೆದು ದಿನದ ಕೆಲಸ ಕಾರ್ಯಗಳನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 5 ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ಮಕರ

ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುವುದಿಲ್ಲ. ನೇರ ಮತ್ತು ನಿಷ್ಠೂರದ ಗುಣವನ್ನು ತೋರುವಿರಿ. ಸಮಯವನ್ನು ವ್ಯರ್ಥ ಮಾಡದೆ ಯಾವುದಾದರೂ ಒಂದು ಕೆಲಸದಲ್ಲಿ ನಿರತರಾಗುವಿರಿ. ಅಧಿಕವಾದ ಜವಾಬ್ದಾರಿಯು ದೊರೆಯುತ್ತದೆ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಯಾವುದೇ ಕೆಲಸ ಕಾರ್ಯವಾದರೂ ನಿಶ್ಚಿತ ಯಶಸ್ಸು ದೊರೆಯುತ್ತದೆ. ಮಕ್ಕಳಿಗೆ ವಿಶೇಷ ಅನುಕೂಲತೆ ಕಲ್ಪಿಸುವಿರಿ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆಯನ್ನು ಮಾಡುತ್ತಾರೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ಸಮಾಜ ಸೇವೆ ಮಾಡುವ ಆಸೆ ಉಂಟಾಗುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆ ದೊರೆಯುತ್ತದೆ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗ ಬದಲಿಸುವ ಸಾಧ್ಯತೆಗಳಿವೆ. ಕಣ್ಣಿಗೆ ಸಂಬಂಧಿಸಿದೆ ದೋಷ ಉಂಟಾಗುತ್ತದೆ. ಕುಟುಂಬದಲ್ಲಿನ ಸಮಸ್ಯೆಯೊಂದು ಪರಿಹಾರಗೊಳ್ಳುತ್ತದೆ.

ಪರಿಹಾರ: ಮನೆ ಮುಂದಿನ ಅಂಗಳವನ್ನು ಶುಚಿಗೊಳಿಸಿ ದಿನದ ಕೆಲಸ ಆರಂಬಿಸಿರಿ.

ಅದೃಷ್ಟದ ಸಂಖ್ಯೆ: 6 ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಕುಂಭ

ಪರಿಸ್ಥಿತಿಯನ್ನು ಅರಿತು ಮಾತನಾಡುವ ಕಾರಣ ಯಾವುದೇ ತೊಂದರೆ ಎದುರಾಗುವುದಿಲ್ಲ. ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತದೆ. ಹಠದ ಗುಣದ ಕಾರಣ ಕುಟುಂಬದಲ್ಲಿ ಶಾಂತಿಯ ಕೊರತೆ ಕಂಡು ಬರುತ್ತದೆ. ನಿಮ್ಮ ಮನಸ್ಸಿನ ನೋವನ್ನು ಯಾರಲ್ಲಿಯೂ ಹಂಚಿಕೊಳ್ಳುವುದಿಲ್ಲ. ಸಣ್ಣಪುಟ್ಟ ವಿವಾದವನ್ನು ದೊಡ್ಡದು ಮಾಡುವಿರಿ. ಉತ್ತಮ ಆದಾಯವಿರುತ್ತದೆ. ಕುಟುಂಬದ ಜವಾಬ್ದಾರಿಯು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಆದಾಯಕ್ಕಿಂತಲೂ ಖರ್ಚು ವೆಚ್ಚಗಳು ಅಧಿಕವಾಗಿರುತ್ತದೆ. ಬೇರೆಯವರ ಅಭಿಪ್ರಾಯವನ್ನು ಗೌರವಿಸುವುದಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಉತ್ತಮ ಭವಿಷ್ಯಕ್ಕಾಗಿ ಹಣಕಾಸು ಉಳಿತಾಯ ಮಾಡುವಿರಿ. ನಿಮ್ಮ ಆತ್ಮೀಯರೇ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಗಾಲಾಗುತ್ತಾರೆ.

ಪರಿಹಾರ: ಮನೆಯಲ್ಲಿರುವ ಎಳೆ ಮಕ್ಕಳಿಗೆ ಬೆಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 8 ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಹಸಿರು ಬಣ್ಣ

ಮೀನ

ಸದಾಕಾಲ ಯಾವುದಾದರೊಂದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಆಹಾರ ಸೇವನೆಯ ವಿಚಾರದಲ್ಲಿ ಕಾಳಜಿ ಇರಲಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಜೀವನದಲ್ಲಿ ದೊರೆಯುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮನಸ್ಸಿನಲ್ಲಿ ಹಣಕಾಸಿನ ವಿಚಾರದಲ್ಲಿ ಗೊಂದಲವಿರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ಹೆಚ್ಚಿನ ಶ್ರಮದ ಅವಶ್ಯಕತೆ ಇರುತ್ತದೆ. ಮಂಗಳಕರ ಕೆಲಸ ಒಂದು ನಡೆಯಲಿದೆ. ಉತ್ತಮ ವರಮಾನವಿದ್ದರೂ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫಲರಾಗುವಿರಿ. ಉದ್ಯೋಗವನ್ನು ಬದಲಿಸುವ ಸಾಧ್ಯತೆಗಳಿವೆ. ಕಣ್ಣಿನ ತೊಂದರೆ ಇರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಮಟ್ಟವನ್ನು ತಲುಪುತ್ತಾರೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ: ಕಪ್ಪು ಬಣ್ಣದ ನಾಯಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ: 7 ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಬಿಳಿ ಮತ್ತು ಕೆಂಪು ಬಣ್ಣ

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು, ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.