ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಗಾತಿ ಜೊತೆ ಇದ್ದ ಇದ್ದ ಮನಸ್ತಾಪ ದೂರವಾಗುತ್ತದೆ, ಭೂವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ; ವಾರ ಭವಿಷ್ಯ

ಸಂಗಾತಿ ಜೊತೆ ಇದ್ದ ಇದ್ದ ಮನಸ್ತಾಪ ದೂರವಾಗುತ್ತದೆ, ಭೂವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ; ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಸಂಗಾತಿ ಜೊತೆ ಇದ್ದ ಇದ್ದ ಮನಸ್ತಾಪ ದೂರವಾಗುತ್ತದೆ, ಭೂವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ; ವಾರ ಭವಿಷ್ಯ
ಸಂಗಾತಿ ಜೊತೆ ಇದ್ದ ಇದ್ದ ಮನಸ್ತಾಪ ದೂರವಾಗುತ್ತದೆ, ಭೂವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ; ವಾರ ಭವಿಷ್ಯ

ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (June 16th to June 22nd Weekly Horoscope)

ಮೇಷ

ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಕುಟುಂಬದ ಹಿಂದಿನ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ದ್ರವರೂಪದ ಆಹಾರದಿಂದ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯ ಲಾಭವಿರುತ್ತದೆ. ಹಣದ ಕೊರತೆ ಕಂಡು ಬರುತ್ತದೆ. ಆತ್ಮೀಯರ ಮೇಲಿನ ನಂಬಿಕೆ ಕಡಿಮೆ ಯಾಗುತ್ತದೆ. ಉದ್ಯೋಗದಲ್ಲಿ ಮಾತ್ರ ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳು ನಡೆಯಲಿದೆ. ಆಪತ್ತಿನಲ್ಲಿ ಇರುವವರಿಗೆ ಸೂಕ್ತ ಮಾರ್ಗದರ್ಶನ ನೀಡುವಿರಿ. ನಿಮ್ಮನ್ನು ನಂಬಿದವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಕಾರ್ಯದಕ್ಷತೆಯಿಂದಾಗಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ವೃಷಭ

ನಿಮ್ಮಲ್ಲಿ ಸ್ನೇಹ ಮಮತೆಯ ಗುಣವಿರುತ್ತದೆ. ಕುಟುಂಬದ ಸದಸ್ಯರ ನಡುವೆ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸಾಧಾರಣ ಪ್ರಗತಿ ದೊರೆಯುತ್ತದೆ. ಮಕ್ಕಳ ವಿಚಾರದಲ್ಲಿ ಹೊಸ ಕನಸು ಕಾಣುವಿರಿ. ಕಾಲ ಕ್ರಮೇಣ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಆರೋಗ್ಯವು ಸುಧಾರಿಸುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭಿಸುತ್ತದೆ. ಹಿರಿಯರ ಬುದ್ಧಿವಾದ ಜೀವನದಲ್ಲಿ ಹೊಸ ನಿರೀಕ್ಷೆ ಉಂಟುಮಾಡಲಿದೆ. ಯೋಚಿಸಿ ಆಡುವ ಮಾತು ಬೇರೆಯವರಿಗೆ ದಾರಿದೀಪವಾಗುತ್ತದೆ. ಸ್ವಂತ ಕೆಲಸ ಕಾರ್ಯಗಳ ಮೊದಲು ಪೂರ್ಣಗೊಳಿಸುವಿರಿ. ಅನಿರೀಕ್ಷಿತ ಧನ ಲಾಭವಿದೆ. ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ

ಗೆಲ್ಲುವ ಆಸೆ ಮನಸ್ಸಿನಲ್ಲಿ ಇದ್ದರೂ ಕೆಲಸ ಕಾರ್ಯಗಳಲ್ಲಿ ಆತಂಕದ ಕ್ಷಣ ಎದುರಾಗುತ್ತದೆ. ನಿಮ್ಮ ನಿರ್ಧಾರದಂತೆ ಸರಿಯಾದ ಮಾರ್ಗದಲ್ಲಿ ನಡೆದಲ್ಲಿ ಮಾನಸಿಕ ಒತ್ತಡ ಕಡೆಮೆಯಾಗುತ್ತದೆ. ಸೋದರರ ಜೊತೆ ಉತ್ತಮ ಬಾಂಧವ್ಯ ಇರುತ್ತದೆ. ಉದ್ಯೋಗದಲ್ಲಿನ ಒತ್ತಡವು ಅಧಿಕಾರಿಗಳ ಸಹಕಾರದಿಂದ ಕಡಿಮೆಯಾಗಲಿದೆ. ಮಹಿಳಾ ಉಧ್ಯಮಿಗಳಿಗೆ ವಿಶೇಷ ಸೌಲಭ್ಯ ದೊರೆಯುತ್ತವೆ. ಆತ್ಮೀಯರೊಬ್ಬರ ವಿವಾಹ ಕಾರ್ಯದಲ್ಲಿ ಭಾಗವಹಿಸುವಿರಿ. ಆತ್ಮೀಯರಿಂದ ಪರೋಕ್ಷವಾಗಿ ಹಣದ ಸಹಾಯ ದೊರೆಯಲಿದೆ. ಗೃಹಲಂಕಾರ ವಸ್ತುಗಳಿಗೆ ಹೆಚ್ಚಿನ ಹಣ ಖರ್ಚಾಗುವ ಸಾಧ್ಯತೆಗಳಿವೆ. ಮಾತಿನ ಮೇಲೆ ಹಿಡಿತ ಇರಲಿ.

ಕಟಕ

ನಿಮಗೆ ಉತ್ತಮ ಆರೋಗ್ಯ ಇರುತ್ತದೆ. ಹಣಕಾಸಿನ ತೊಂದರೆ ಕಡಿಮೆ ಆಗಲಿದೆ. ಉದ್ಯೋಗದಲ್ಲಿನ ಜವಾಬ್ದಾರಿಯನ್ನು ಪೂರೈಸಲು ಹೆಚ್ಚಿನ ಆಸಕ್ತಿ ವಹಿಸುವಿರಿ. ವಯಸ್ಸಿನ ಪರಿಮಿತಿ ಇಲ್ಲದೆ ಎಲ್ಲರನ್ನೂ ಗೌರವ ಭಾವದಿಂದ ಕಾಣುವಿರಿ. ವಿದ್ಯಾರ್ಥಿಗಳು ಉನ್ನತ ಅಧ್ಯಯನದಲ್ಲಿ ತೊಡಗುವರು. ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ನಿರತರಾಗುವಿರಿ. ಅವಿರತ ದುಡಿಮೆಗೆ ಎಲ್ಲರ ಪ್ರಶಂಸೆ ದೊರೆಯುತ್ತದೆ. ಕುಟುಂಬದ ಹಿರಿಯರು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ದೈಹಿಕ ಶಕ್ತಿಯ ಕೊರತೆ ಇರುತ್ತದೆ. ಮೊಮ್ಮಕ್ಕಳ ಒಡನಾಟ ಮನದ ಬೇಸರವನ್ನು ಮರೆಸುತ್ತದೆ. ಸುದೀರ್ಘ ಪ್ರವಾಸಕ್ಕೆ ತಯಾರಿ ನಡೆಸುವಿರಿ.

ಸಿಂಹ

ವಿಶ್ರಾಂತಿ ಇಲ್ಲದ ದುಡಿಮೆ ಇದ್ದರೂ ಆತ್ಮವಿಶ್ವಾಸದಿಂದ ಮುನ್ನಡೆಯುವಿರಿ. ಕೈಕಾಲುಗಳಲ್ಲಿ ನೋವಿರುತ್ತದೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಮುಂದಾಳತ್ವ ವಹಿಸುವಿರಿ. ಕೋಪಗೊಳ್ಳದೆ ಶಾಂತಿ ಸಹನೆಯಿಂದ ಎಲ್ಲರ ಜೊತೆ ನಡೆದುಕೊಳ್ಳುವಿರಿ. ವೃತ್ತಿ ಕ್ಷೇತ್ರದಲ್ಲಿ ಗೌರವಯುತ ಸ್ಥಾನ ಗಳಿಸುವಿರಿ. ಉತ್ತಮ ಆರೋಗ್ಯಕ್ಕಾಗಿ ಶ್ರಮಿಸುವಿರಿ. ಸಹೋದ್ಯೋಗಿಗಳ ಕೆಲಸದಲ್ಲಿ ನೆರವಾಗುವಿರಿ. ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಬೆಂಬಲ ಲಭ್ಯವಾಗುತ್ತದೆ. ಕುಟುಂಬದಲ್ಲಿ ಭಾವನಾತ್ಮಕ ಸನ್ನಿವೇಶವೊಂದು ಎದುರಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ವಿದ್ಯಾಭ್ಯಾದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ವ್ಯಾಪಾರದ ಉದ್ದೇಶದಿಂದ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ.

ಕನ್ಯಾ

ವರಮಾನದಲ್ಲಿದ್ದ ಅಡ್ಡಿ ಆತಂಕಗಳು ಕ್ರಮೇಣವಾಗಿ ಮರೆಯಾಗಲಿವೆ. ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದಲ್ಲಿನ ತೊಂದರೆ ದೂರಾಗುತ್ತದೆ. ಮಕ್ಕಳಿಗೆ ವಿದೇಶಿ ಆಡಳಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ನಿಮ್ಮಲ್ಲಿರುವ ಬದಲಾಗದ ಮನಸ್ಸು ಉತ್ತಮ ಭವಿಷ್ಯಕ್ಕೆ ನಾಂದಿಯಾಗುತ್ತದೆ. ಕುಟುಂಬದಲ್ಲಿರುವ ಪ್ರೀತಿ ವಿಶ್ವಾಸದಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ. ಧಾರ್ಮಿಕ ಕೇಂದ್ರಗಳಿಗೆ ಹಣದ ಸಹಾಯ ಮಾಡುವಿರಿ. ಸಂಗಾತಿಯ ಜೊತೆ ಇದ್ದ ಇದ್ದ ಮನಸ್ತಾಪವು ದೂರವಾಗುತ್ತದೆ. ಆತ್ಮೀಯ ಸ್ನೇಹಿತರೊಬ್ಬರು ವಿವಾದಕ್ಕೆ ಸಿಲುಕುತ್ತಾರೆ. ನಿಮ್ಮದಲ್ಲದ ಹಣಕಾಸಿನ ವ್ಯವಹಾರದಲ್ಲಿ ವಿವಾದಕ್ಕೆ ಸಿಲುಕುವಿರಿ. ಸಂತಾನ ಲಾಭವಿದೆ.

ತುಲಾ

ಆತ್ಮೀಯರ ತೊಂದರೆಯು ನಿಮ್ಮಿಂದ ದೂರವಾಗಲಿದೆ. ಸಹೋದ್ಯೋಗಿಗಳ ಸಹಕಾರ ಹೊಸ ನಿರೀಕ್ಷೆಗೆ ಕಾರಣವಾಗಲಿದೆ. ಅನಿರೀಕ್ಷಿತ ಧನಲಾಭ ನೆಮ್ಮದಿ ನೀಡುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಮುನ್ನಡೆಯಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆಯ ಗುಣವಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುವರು. ಅವಿವಾಹಿತರಿಗೆ ವಿವಾಹವಾಗುತ್ತದೆ. ಷೇರುಮಾರುಕಟ್ಟೆಯಲ್ಲಿ ಬಡವಾಳ ತೊಡಗಿಸಿ ಲಾಭ ಪಡೆಯುವಿರಿ. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳದೆ ಯೋಚಿಸಿ ನೋಡಿ. ಧಾರ್ಮಿಕ ಕ್ರೀಯಾ ವಿಧಿಗಳಲ್ಲಿ ಆಸಕ್ತಿ ಮೂಡುತ್ತದೆ.

ವೃಶ್ಚಿಕ

ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಹೆಚ್ಚಿನ ಕಾಳಜಿಯಿಂದ ಕುಟುಬದ ಜವಾಬ್ದಾರಿಯನ್ನು ವಹಿಸಿಕೊಳ್ಳುವಿರಿ. ಹೆಚ್ಚಾದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ದೈಹಿಕ ವ್ಯಾಯಾಮವನ್ನು ಅವಲಂಭಿಸುವಿರಿ. ನೀವು ಆಡುವ ಮಾತನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಾಗದು. ಪರಿಸ್ಥಿತಿಯ ಒತ್ತಡಕ್ಕೆ ಕಟ್ಟುಬಿದ್ದು ಉದ್ಯೋಗ ಬದಲಿಸುವಿರಿ. ಬೇರೆಯವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುವಿರಿ. ಭೂವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ನಿರೀಕ್ಷಿತ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೋಪ ತೊರೆದು ಆತ್ಮಸ್ಥೈರ್ಯದಿಂದ ಮುಂದುವರೆಯುವುದು ಕ್ಷೇಮಕರ. ಲಾಭವಿಲ್ಲದ ಓಡಾಟ ಇರುತ್ತದೆ. ಬಿಡುವಿಲ್ಲದೆ ಕೆಲಸ ಮಾಡಬೇಕಾಗುತ್ತದೆ.

ಧನಸ್ಸು

ವಿದ್ಯಾರ್ಥಿಗಳು ಕೆಲವು ದಿನಗಳ ಸಮಯ ಅಧ್ಯಯನದಿಂದ ದೂರವಿರಲು ಬಯಸುತ್ತಾರೆ. ಹಿರಿಯರು ಕುಟುಂಬದ ಕೆಲಸ ಕಾರ್ಯಗಳಲ್ಲಿ ನಿರತರಾಗುತ್ತಾರೆ. ಉದ್ಯೋಗದ ಬಗ್ಗೆ ವಿಶೇಷ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವಿರಿ. ಕುಟುಂಬದ ಕೆಲಸವೊಂದನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಬಂಧು ಬಳಗದವರ ಕೆಲಸಗಳು ನಿಮ್ಮಿಂದ ಯಶಸ್ವಿಯಾಗುತ್ತದೆ. ವಾಸ ಸ್ಥಳ ಬದಲಿಸಬೇಕಾದ ಸಂದರ್ಭ ಒದಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳ ಕಾರಣ ಸಹನೆ ಕಳೆದುಕೊಳ್ಳುವಿರಿ. ಹಿರಿಯರ ಸಲಹೆಯನ್ನು ಪಾಲಿಸಿದರೆ ಕಷ್ಟ ದೂರವಾಗುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ಆಸಕ್ತಿ ಮೂಡುತ್ತದೆ. ಆದಾಯದಲ್ಲಿ ಪ್ರಗತಿ ದೊರೆಯುತ್ತದೆ. ಅಜೀರ್ಣದ ತೊಂದರೆ ಉಂಟಾಗಲಿದೆ.

ಮಕರ

ಅನಾವಶ್ಯಕ ವಾದ ವಿವಾದದಿಂದ ಕುಟುಂಬದಲ್ಲಿ ಗೊಂದಲ ನಿರ್ಮಾಣವಾಗಲಿದೆ. ಭೂ ವಿವಾದದಿಂದ ಆತ್ಮೀಯರನ್ನು ಪಾರುಮಾಡುವಿರಿ. ಸಂಗಾತಿಯ ಸಹಾಯದಿಂದ ಹಣದ ತೊಂದರೆ ಬಗೆಹರಿಯುತ್ತದೆ. ಸೋದರ ಅಥವಾ ಸೋದರಿಯ ಜೊತೆ ಭೂಮಿಯ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ಅನಿರೀಕ್ಷಿತ ಧನಲಾಭವಿದೆ. ಸೋಲಿಗೆ ಅಂಜದೆ ಕಷ್ಟಪಟ್ಟು ದುಡಿಯುವಿರಿ. ವಿದ್ಯಾರ್ಥಿಗಳು ಅನಾವಶ್ಯಕ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಪಾಲುಗಾರಿಕೆ ವ್ಯಪಾರದಲ್ಲಿ ಲಾಭವಿದೆ. ಏಕಾಂಗಿಯಾಗಿ ಯಾವುದೇ ವ್ಯಾಪಾರ ವ್ಯವಹಾರಗಳನ್ನು ಮಾಡಲು ಇಚ್ಚಿಸುವುದಿಲ್ಲ. ಸಾಕುಪ್ರಾಣಿಗಳಿಂದ ದೂರವಿರುವುದು ಒಳ್ಳೆಯದು. ಸಂಗೀತ ನಾಟ್ಯ ಬಲ್ಲವರಿಗೆ ಉತ್ತಮ ಅವಕಾಶ ದೊರೆಯುತ್ತದೆ.

ಕುಂಭ

ಬುದ್ದಿವಂತಿಕೆಯಿಂದ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಮುಖ್ಯವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಕಾರಣ ತೊಂದರೆ ಇರದು. ಅತಿಯಾದ ನಿದ್ರೆಯಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿಂದುಳಿಯುವರು. ಶುಚಿಕರ ಆಹಾರವನ್ನು ಸೇವಿಸುವುದು ಒಳ್ಳೆಯದು. ಸದಾ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವಲ್ಲಿ ಆಸಕ್ತಿ ತೋರುವಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಆತ್ಮೀಯರೊಂದಿಗೆ ಚರ್ಚಿಸುವಿರಿ. ಉದ್ಯೋಗದಲ್ಲಿ ಇದ್ದ ಗೊಂದಲ ದೂರವಾಗುವುದು. ಕುಟುಂಬದ ಒಗ್ಗಟ್ಟು ನಿಮ್ಮನ್ನು ಕಷ್ಟದಿಂದ ಪಾರು ಮಾಡುತ್ತದೆ. ಹೊಸ ವಾಹನವನ್ನು ಕೊಳ್ಳುವ ಯೋಚನೆ ಮಾಡುವಿರಿ.

ಮೀನ

ಕೊಟ್ಟ ಮಾತಿಗೆ ಒಪ್ಪಿ ಆತ್ಮೀಯರಿಗೆ ಹಣಕಾಸಿನ ಸಹಾಯ ಮಾಡುವಿರಿ. ನಿಸ್ವಾರ್ಥದ ಗುಣದಿಂದಾಗಿ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸನ್ನು ಗಳಿಸುವಿರಿ. ಹೊಸ ಮನೆಯನ್ನು ಕೊಳ್ಳುವ ಕನಸು ನನಸಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಗೌರವಾದರಗಳು ಲಭಿಸುತ್ತವೆ. ಮನದ ಆಶೋತ್ತರಗಳಿಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಪ್ರಯ್ಕತ್ನಿಸುವಿರಿ. ಆತ್ಮೀಯರೊಂದಿಗೆ ಹೊಸ ವ್ಯಾಪಾರ ಆರಂಭಿಸುವಿರಿ. ಅವಿವಾಹಿತರಿಗೆ ವಿವಾಹದ ಮಾತುಕತೆ ನಡೆಯುತ್ತದೆ. ಸಾರ್ವಜನಿಕರ ಕುಂದು ಕೊರತೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನಕ್ಕೆ ಸಹಕಾರ ನೀಡುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.