ಜೀವನದಲ್ಲಿ ನಿರೀಕ್ಷಿತ ಬದಲಾವಣೆ ಎದುರಾಗಲಿದೆ, ಒಳ್ಳೆಯ ಮಾತನಾಡಿಯೂ ಕೆಟ್ಟವರಾಗುವ ಸಂಭವ; ಸಿಂಹದಿಂದ ವೃಶ್ಚಿಕ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೀವನದಲ್ಲಿ ನಿರೀಕ್ಷಿತ ಬದಲಾವಣೆ ಎದುರಾಗಲಿದೆ, ಒಳ್ಳೆಯ ಮಾತನಾಡಿಯೂ ಕೆಟ್ಟವರಾಗುವ ಸಂಭವ; ಸಿಂಹದಿಂದ ವೃಶ್ಚಿಕ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ

ಜೀವನದಲ್ಲಿ ನಿರೀಕ್ಷಿತ ಬದಲಾವಣೆ ಎದುರಾಗಲಿದೆ, ಒಳ್ಳೆಯ ಮಾತನಾಡಿಯೂ ಕೆಟ್ಟವರಾಗುವ ಸಂಭವ; ಸಿಂಹದಿಂದ ವೃಶ್ಚಿಕ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

 ಸಿಂಹದಿಂದ ವೃಶ್ಚಿಕ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ
ಸಿಂಹದಿಂದ ವೃಶ್ಚಿಕ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 20 ರ ಶುಕ್ರವಾರದಿಂದ 26ರ ಗುರುವಾರದವರೆಗೆ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಸಿಂಹ ರಾಶಿ

ಮನೆ ಮಂದಿಯ ಸಂತೋಷದಿಂದ ಬಾಳುವಿರಿ. ಮಕ್ಕಳ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪರಪ್ರದೇಶಕ್ಕೆ ತೆರಳುವಿರಿ. ಬೇಡದ ವಿಚಾರಗಳಿಗೆ ಯೋಚನೆ ಮಾಡುವಿರಿ. ಕೆಲಸ ಕಾರ್ಯಗಳ ಆಳವನ್ನು ತಿಳಿಯದೆ ಕಷ್ಟಕ್ಕೆ ಸಿಲುಕುವಿರಿ. ದುಡುಕಿನ ನಿರ್ಧಾರದಿಂದ ಕುಟುಂಬದವರ ವಿರೋಧಕ್ಕೆ ಗುರಿಯಾಗುವಿರಿ. ಆತುರದ ಮನಸ್ಥಿತಿಯ ಕಾರಣ ಕೆಲಸ ಕಾರ್ಯಗಳು ಅಪೂರ್ಣವಾಗುತ್ತವೆ. ಉದ್ಯೋಗದಲ್ಲಿ ನಿಮ್ಮ ನಿಲುವನ್ನು ಎಲ್ಲರೂ ಬೆಂಬಲಿಸುತ್ತಾರೆ. ಜೀವನದಲ್ಲಿ ನೀವು ನಿರೀಕ್ಷಿಸಿದಂತೆ ಬದಲಾವಣೆಗಳು ಕಂಡುಬರುತ್ತವೆ. ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ತವರು ಮನೆಯಿಂದ ಸಹಾಯ ಸಹಕಾರ ದೊರೆಯುತ್ತದೆ. ಅವಿವಾಹಿತರು ವಿವಾಹದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಲುಷಿತ ಆಹಾರ ಸೇವಿಸಿ ತೊಂದರೆಗೆ ಒಳಗಾಗುವಿರಿ. ಪತಿಯ ಸಾಲ ತೀರಲು ಹಣದ ಸಹಾಯ ಮಾಡುವಿರಿ. ಕೋಪದಿಂದ ಎಲ್ಲರ ಜೊತೆಯಲ್ಲಿ ವರ್ತಿಸುವಿರಿ.

ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಬೂದು ಬಣ್ಣ

ಕನ್ಯಾ ರಾಶಿ

ನಿಮ್ಮ ಮನಸ್ಸಿನಲ್ಲಿ ಹಣಕಾಸಿನ ವಿಚಾರವಾಗಿ ಆತಂಕ ಮನೆ ಮಾಡಿರುತ್ತದೆ. ಆತ್ಮೀಯರ ಮಾತನ್ನು ಆಲಿಸುವ ಮನಸ್ಸಿರುವುದಿಲ್ಲ. ತಪ್ಪದಾ ಜೀವನ ಕ್ರಮದಿಂದ ಅಭಿವೃದ್ದಿ ನಿಧಾನವಾಗಲಿದೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುವಿರಿ. ಮಾತಿನ ಬಲದಿಂದ ಸಹೋದರಿಯ ಕೌಟುಂಬಿಕ ಕಲಹವನ್ನು ಸರಿಪಡಿಸುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ವಿವಾದವನ್ನು ಎದುರಿಸಬೇಕಾಗುತ್ತದೆ. ಒಳ್ಳೆಯ ಮಾತನಾಡಿದರೂ ಕೆಟ್ಟವರಾಗುವ ಸಂಭವ ಇರುತ್ತದೆ. ಬೇಸರದಿಂದ ಮೌನಕ್ಕೆ ಶರಣಾಗುವಿರಿ. ಸಂಗಾತಿಯ ಸಹಕಾರ ನಿಮ್ಮಲ್ಲಿ ಚೈತನ್ಯವನ್ನು ತುಂಬುತ್ತದೆ. ತಪ್ಪಾದ ಆಹಾರದ ಅಭ್ಯಾಸಗಳು ಅನಾರೋಗ್ಯಕ್ಕೆ ಕಾರಣವಾಗಲಿದೆ. ಹಣಕಾಸಿನ ಕೊರತೆ ಕಂಡು ಬರುತ್ತದೆ. ಪತಿಯ ಜೊತೆಗಿನ ಪಾಲುಗಾರಿಕೆಯ ವ್ಯಾಪಾರ ಉತ್ತಮ ಲಾಭಾಂಶ ನೀಡುತ್ತದೆ. ದಿನನಿತ್ಯದ ಬಳಕೆಗೆ ವಾಹನ ಕೊಳ್ಳುವಿರಿ. ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕುವ ಹಂಬಲ ಈಡೇರಲಿದೆ. ಧಾರ್ಮಿಕ ಕೇಂದ್ರಗಳಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ.

ಅದೃಷ್ಟದ ಸಂಖ್ಯೆ : 9 ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕಂದು ಬಣ್ಣ

ತುಲಾ ರಾಶಿ

ಬಂಧು-ಬಳಗದವರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರ್ವಹಿಸುವಿರಿ. ಕುಟುಂಬದ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಿರಿ. ಬೇಸರ ಕಳೆಯಲು ಮನರಂಜನೆಯನ್ನು ಆಶ್ರಯಿಸುವಿರಿ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ದೀರ್ಘ ಪ್ರವಾಸಕ್ಕೆ ತೆರಳುವಿರಿ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವಿರಿ. ಚುರುಕುತನದಿಂದ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಉದ್ಯೋಗದಲ್ಲಿ ಯಾವುದೇ ಪ್ರಗತಿ ಕಾಣದು. ಸತತ ಪ್ರಯತ್ನದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಪತಿಯ ಸಣ್ಣ ತಪ್ಪನ್ನು ದೊಡ್ಡದಾಗಿ ಬಿಂಭಿಸುವಿರಿ. ಮಕ್ಕಳೊಂದಿಗೆ ಆನಂದದಿಂದ ಕಳೆಯುವಿರಿ. ಅನಾಥಾಶ್ರಮದ ಮಕ್ಕಳಿಗೆ ಆಹಾರ ನೀಡುವಲ್ಲಿ ಸಂತಸ ಪಡುವಿರಿ. ಬೇರೆಯವರ ಕಾರ್ಯದಲ್ಲಿ ತಪ್ಪು ಒಪ್ಪುಗಳನ್ನು ಕಂಡುಹಿಡಿಯುವಿರಿ. ಅನಾವಶ್ಯಕವಾಗಿ ಬೇರೆಯವರನ್ನು ಟೀಕಿಸುವಿರಿ. ಆತುರದ ಮನಸ್ಥಿತಿಯಿಂದ ಹಣದ ವಿವಾದವೊಂದರಲ್ಲಿ ಸಿಲುಕುವಿರಿ. ತಂದೆ ಮತ್ತು ತಾಯಿಯ ಜೊತೆಯಲ್ಲಿ ಹಣಕಾಸಿನ ವಿಚಾರವಾಗಿ ವಿವಾದ ಇರುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ವೃಶ್ಚಿಕ ರಾಶಿ

ಅತಿಯಾದ ಬುದ್ಧಿವಂತಿಕೆ ಇರುತ್ತದೆ. ಜೊತೆಗೆ ಹಠವೂ ಇರುತ್ತದೆ. ನಿಮ್ಮ ಬದಲಾಗದ ಮನಸ್ಸು ಪತಿಯ ಕೋಪವನ್ನು ಹೆಚ್ಚಿಸುತ್ತದೆ. ಆದರೆ ನಿಮ್ಮ ಮೌನ ಪರಿಸ್ಥಿತಿಯನ್ನು ತಿಳಿಗೊಳಿಸುತ್ತದೆ. ದುಡುಕಿ ನೀವು ಮಾಡಿದ ತಪ್ಪಿಗೆ ಬೇರೆಯವರನ್ನು ನಿಂದಿಸುವಿರಿ. ಮನೆತನದ ಹಣಕಾಸಿನ ವಿಚಾರದಲ್ಲಿ ವಾದ ವಿವಾದ ಎದುರಾಗುತ್ತದೆ. ತಾಳ್ಮೆಯಿಂದ ವರ್ತಿಸಿದಲ್ಲಿ ಮಾತ್ರ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಆದರೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಸಂಗಾತಿ ಮತ್ತು ಮಕ್ಕಳೊಂದಿಗೆ ವೇಳೆ ಕಳೆಯಲು ಸಾಧ್ಯವಾಗುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಿರಿ. ಅದ್ಭುತವಾದ ಅವಕಾಶವು ನಿಮ್ಮದಾಗುತ್ತದೆ. ಧಾರ್ಮಿಕ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಕೌಟುಂಬಿಕ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಹೊಸ ವಾಹನ ಕೊಳ್ಳುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಪರಿಹಾರ: ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ತಿಳಿ ಹಸಿರು ಬಣ್ಣ

ಬರಹ: ಎಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.