ವಾರ ಭವಿಷ್ಯ: ಮೀನ ರಾಶಿಯವರಿಗೆ ಹಣದ ಕೊರತೆ ಕಾಡುತ್ತೆ, ಮಕರ ರಾಶಿಯವರು ವೃತ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ
ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರ ಭವಿಷ್ಯ ಇದೆ.

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ 2025ರ ಮಾರ್ಚ್ 30 ರಿಂದ ಏಪ್ರಿಲ್ 3 ರವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಧನು ರಾಶಿ
ಕುಟುಂಬದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಆತ್ಮವಿಶ್ವಾಸದಿಂದ ನಡೆದುಕೊಂಡಲ್ಲಿ ಉತ್ತಮ ಆದಾಯ ಗಳಿಸಬಹುದು. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ನಿಶ್ಚಿತ ಲಾಭ ದೊರೆಯುತ್ತದೆ. ಪ್ರತಿಯೊಂದು ವಿಚಾರಗಳಿಗೂ ಬೇರೆಯವರನ್ನು ಅವಲಂಬಿಸುವಿರಿ. ಗೃಹಿಣಿಯರ ಬುದ್ಧಿವಂತಿಕೆ ಕುಟುಂಬದಲ್ಲಿ ನೆಮ್ಮದಿ ನೆನೆಸುವಂತೆ ಮಾಡುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯಬೇಕಾಗುತ್ತದೆ. ಮನದ ಬೇಸರದಿಂದ ದೂರವಾಗಲು ಪ್ರವಾಸಕ್ಕೆ ತೆರಳುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ವಿಶ್ವಾಸದ ಕಾರಣ ನೆಮ್ಮದಿ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವಹಿಸುವುದು ಒಳ್ಳೆಯದು. ಅತಿಯಾದ ಆತ್ಮ ವಿಶ್ವಾಸದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕಾದು ನೋಡುವ ತಂತ್ರವನ್ನು ಅನುಸರಿಸಿದರೆ ನಿರೀಕ್ಷಿತ ಫಲಗಳನ್ನು ಪಡೆಯಬಹುದು.
ಪರಿಹಾರ: ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ಮಕರ ರಾಶಿ
ನಿಮಗೆ ಅರಿವೇ ಇಲ್ಲದಂತೆ ಸುಳ್ಳು ಮಾತುಗಳನ್ನು ಆಡುವಿರಿ. ಇದರಿಂದ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತದೆ. ಕುಟುಂಬದ ಆಸ್ತಿಯ ವಿಚಾರವಾಗಿ ಶಾಂತಿ ಸಂಧಾನ ನಡೆಸುವಿರಿ. ನಿಮ್ಮ ತಪ್ಪಾದ ನಡುವಳಿಕೆಯಿಂದ ಕಿರಿಕಿರಿಯ ಅನುಭವ ಆಗುತ್ತದೆ. ಅದೃಷ್ಟದಿಂದ ವೃತ್ತಿ ಕ್ಷೇತ್ರದಲ್ಲಿ ಸಮಸ್ಯೆಯೊಂದರಿಂದ ಪಾರಾಗುವಿರಿ. ಅತಿಯಾದ ಮಾತುಗಾರಿಕೆ ವಿವಾದಕ್ಕೆ ಕಾರಣವಾಗುತ್ತದೆ. ಗಂಟಲಿನ ಸೋಂಕು ಉಂಟಾಗುತ್ತದೆ. ಉದ್ಯೋಗ ಬದಲಿಸುವಲ್ಲಿ ಯಶಸ್ಸು ಕಾಣುವಿರಿ. ವಿದ್ಯಾರ್ಥಿಗಳು ಅತಿಯಾದ ಯೋಚನೆಯಿಂದ ಕಲಿಕೆಯಲ್ಲಿ ಹಿಂದೆ ಉಳಿಯುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಆಸಕ್ತಿ ನಂಬಿಕೆ ಇರುವುದಿಲ್ಲ. ಆದಾಯಕ್ಕಿಂತಲೂ ಖರ್ಚು ವೆಚ್ಚಗಳು ಹೆಚ್ಚಿನದಾಗಿರುತ್ತದೆ. ಸಮಾಜದಲ್ಲಿ ಜವಾಬ್ದಾರಿಯುತ ಕೆಲಸ ಕಾರ್ಯಗಳನ್ನು ನಡೆಸುವಿರಿ. ಮರೆವಿನ ತೊಂದರೆಯಿಂದ ಬಳಲುವಿರಿ.
ಪರಿಹಾರ: ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ
ಕುಂಭ ರಾಶಿ
ಮನದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಆಶಯ ಇರುತ್ತದೆ. ಆದರೆ ಬಿಡುವಿಲ್ಲದೆ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ಬೇರೆಯವರ ಅನುಪಸ್ಥಿತಿಯಲ್ಲಿ ಮಾಡಬೇಕಾದ ಕೆಲಸವೂ ಹೆಚ್ಚುತ್ತದೆ. ಯಾವುದೇ ವಿಚಾರದಲ್ಲಿ ನಿರೀಕ್ಷಿತ ಫಲ ದೊರೆಯದ ಕಾರಣ ಬೇಸರದ ಇರುತ್ತದೆ. ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಯಾವುದೇ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೊಸ ಅವಕಾಶಗಳಿಗಾಗಿ ಕಾಯುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ದೊರೆಯುತ್ತದೆ. ಕುಟುಂಬದಲ್ಲಿ ಸಹಬಾಳ್ವೆಯ ಕೊರತೆ ಕಂಡು ಬರುತ್ತದೆ. ಮನೆತನದ ಮನೆಯನ್ನು ಅಲಂಕರಿಸುವಲ್ಲಿ ಸಂತೋಷ ಪಡುವಿರಿ. ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯುತ್ತದೆ. ನೆರೆಹೊರೆಯವರ ಜೊತೆಯಲ್ಲಿ ಅನಾವಶ್ಯಕವಾಗಿ ವಾದ ವಿವಾದದಲ್ಲಿ ತೊಡಗುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ರಕ್ತದ ಬಣ್ಣ
ಮೀನ ರಾಶಿ
ಜೀವನದಲ್ಲಿನ ಸೂಕ್ಷ್ಮವಾದ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವಿರಿ. ಸದಾಕಾಲ ಕೆಲಸ ಕಾರ್ಯಗಳಲ್ಲಿ ನಿರತರಾಗುವ ಕಾರಣ ಸಂಗಾತಿ ಮತ್ತು ಮಕ್ಕಳಲ್ಲಿ ಬೇಸರ ಉಂಟಾಗುತ್ತದೆ. ಉತ್ತಮ ಆದಾಯವಿದ್ದರೂ ಅನಾವಶ್ಯಕವಾದ ಖರ್ಚು ವೆಚ್ಚಗಳು ಇರಲಿವೆ. ಇದರಿಂದ ಹಣದ ಕೊರತೆ ನಿಮ್ಮನ್ನು ಕಾಡುತ್ತದೆ. ಹಿರಿಯ ಸೋದರ ಅಥವಾ ಹಿರಿಯ ಸೋದರಿ ಯಿಂದ ಹಣದ ನೆರವು ದೊರೆಯುತ್ತದೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಬೇರೆಯವರಿಗೆ ನೀಡಿದ ಹಣವು ಮರಳಿ ದೊರೆಯುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಕಂಡುಬರುತ್ತದೆ. ಸಮಾಜ ಸೇವೆ ಮಾಡುವ ಹಂಬಲವಿರುತ್ತದೆ. ಕುಟುಂಬದ ಸದಸ್ಯರ ಜೊತೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಸಮಯ ವ್ಯರ್ಥ ಮಾಡುವುದಿಲ್ಲ. ಹೊಸ ವಿಚಾರಗಳಲ್ಲಿ ಆಸಕ್ತಿ ತೋರುವಿರಿ. ಮಕ್ಕಳ ಮನದ ಆಶಯವನ್ನು ಪೂರೈಸುವಿರಿ.
ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)
