ವಾರ ಭವಿಷ್ಯ: ಕನ್ಯಾ ರಾಶಿಯವರು ನೆಮ್ಮದಿಯ ಜೀವನ ನಡೆಸುತ್ತಾರೆ, ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾರ ಭವಿಷ್ಯ: ಕನ್ಯಾ ರಾಶಿಯವರು ನೆಮ್ಮದಿಯ ಜೀವನ ನಡೆಸುತ್ತಾರೆ, ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯುತ್ತೆ

ವಾರ ಭವಿಷ್ಯ: ಕನ್ಯಾ ರಾಶಿಯವರು ನೆಮ್ಮದಿಯ ಜೀವನ ನಡೆಸುತ್ತಾರೆ, ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯುತ್ತೆ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರ ಭವಿಷ್ಯ ಇದೆ.

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ವಾರ ಭವಿಷ್ಯ
ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ವಾರ ಭವಿಷ್ಯ

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ 2025ರ ಮಾರ್ಚ್ 30 ರಿಂದ ಏಪ್ರಿಲ್ 5ರ ಶನಿವಾರದ ವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಸಿಂಹ ರಾಶಿ

ದೀರ್ಘಕಾಲದ ಆರೋಗ್ಯದ ಸಮಸ್ಯೆಯೊಂದು ಬಗೆಹರಿಯುತ್ತದೆ. ನಿಮ್ಮಲ್ಲಿನ ಆತ್ಮವಿಶ್ವಾಸವು ಕುಟುಂಬದ ಸಂತಸಕ್ಕೆ ಕಾರಣವಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸು ದೊರೆಯುತ್ತದೆ. ಮೂಳೆಗಳಿಗೆ ಪೆಟ್ಟಾಗುವ ಸಾಧ್ಯತೆ ಇದೆ. ಓಡಾಟದ ನಡುವೆ ಎಚ್ಚರಿಕೆ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಯಾರೊಬ್ಬರನ್ನೂ ನಂಬುವುದಿಲ್ಲ. ನಿಮ್ಮ ಸ್ವಂತ ನಿರ್ಧಾರಗಳಿಗೆ ಸದಾ ಬದ್ಧರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಕುಟುಂಬದ ಹಿರಿಯರ ಒಪ್ಪಿಗೆ ಪಡೆಯಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಸ್ಪಂದಿಸದೆ ವಿದ್ಯಾರ್ಥಿಗಳು ಬಹು ಮುಖ್ಯ ಅವಕಾಶ ಒಂದನ್ನು ಕಳೆದುಕೊಳ್ಳುತ್ತಾರೆ. ಅಧಿಕ ಪರಿಶ್ರಮದಿಂದ ಹಣಕಾಸಿನ ಪರಿಸ್ಥಿತಿಯಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಬಂಧಿಕರ ನಡುವೆ ಸಂಧಿಗ್ದ ಪರಿಸ್ಥಿತಿ ಎದುರಾಗುತ್ತದೆ. ದುಡುಕದೆ ನಿಮ್ಮ ಮನಸ್ಸನ್ನು ಯಾವುದೇ ವಿಚಾರದಲ್ಲಿಯೂ ಕೇಂದ್ರೀಕೃತಗೊಳಿಸಲು ಸಾಧ್ಯವಾಗುವುದಿಲ್ಲ. ಮನಸ್ಸಿನ ಶಾಂತಿ ಮತ್ತು ನೆಮ್ಮದಿಗಾಗಿ ಧ್ಯಾನದ ಮಾರ್ಗವನ್ನು ಅವಲಂಬಿಸುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ತಿಳಿ ಹಸಿರು

ಕನ್ಯಾ ರಾಶಿ

ದುಡುಕಿನ ಸ್ವಭಾವ ಇಲ್ಲದ ಕಾರಣ ನೆಮ್ಮದಿಯ ಜೀವನವನ್ನು ನಡೆಸುವಿರಿ. ನಿಮ್ಮ ವ್ಯಕ್ತಿತ್ವವನ್ನು ಬಂದು ಮಿತ್ರರು ಶ್ಲಾಘಿಸುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ದೈಹಿಕ ವ್ಯಾಯಾಮವನ್ನು ಅವಲಂಬಿಸುವಿರಿ. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಮೂಡುತ್ತದೆ. ಇದರಿಂದ ಕೃಷಿ ಭೂಮಿಯನ್ನು ಕೊಳ್ಳುವ ಸಾಧ್ಯತೆಗಳಿವೆ. ಕೈಕಾಲುಗಳಿಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಸ್ನೇಹಿತರೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಖರ್ಚು ವೆಚ್ಚಗಳಿಗಿಂತ ಹೆಚ್ಚಿನ ಆದಾಯ ನಿಮ್ಮದಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಯಂತೆ ಉನ್ನತ ಅಭ್ಯಾಸದಲ್ಲಿ ತೊಡಗಲು ಸಾಧ್ಯವಾಗುತ್ತದೆ. ದಂಪತಿ ತಮ್ಮ ಆದಾಯದ ಒಂದು ಪಾಲನ್ನು ಜನಸೇವೆಗೆ ಮೀಸಲಿಡುತ್ತಾರೆ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಎದುರಾಗದು.

ಪರಿಹಾರ: ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ

ತುಲಾ ರಾಶಿ

ಹೊಸ ವಾಹನವನ್ನು ಕೊಳ್ಳುವಿರಿ. ಆದರೆ ವಾಹನ ಚಾಲನೆ ಮಾಡುವ ವೇಳೆ ಸಹನೆ ಮತ್ತು ಗಮನವಿರಲಿ. ನಿಮ್ಮದಲ್ಲದ ತಪ್ಪಿಗೆ ದಂಡವನ್ನು ತೆರಬೇಕಾಗಬಹುದು. ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ ತೋರದೆ ಹೋದಲ್ಲಿ ಯಾವುದೇ ತೊಂದರೆ ಕಾಣುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿರುತ್ತದೆ. ಉದ್ಯೋಗದಲ್ಲಿ ಪ್ರತಿಷ್ಠಿತ ಸ್ಥಾನಮಾನ ದೊರೆಯುತ್ತದೆ. ಅನಾವಶ್ಯಕವಾಗಿ ವಾದ ವಿವಾದಗಳಿಗೆ ಕಾರಣರಾಗುವಿರಿ. ಮಕ್ಕಳ ಬಗ್ಗೆ ಅನಾವಶ್ಯಕವಾದ ಸಂದೇಹದಿಂದ ವರ್ತಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಕಂಡುಬರುತ್ತದೆ. ಹೆಚ್ಚಿನ ಆದಾಯ ಗಳಿಸಲು ಹಣಕಾಸಿನ ಯೋಜನೆಗಳಲ್ಲಿ ಹಣವನ್ನು ಹೂಡುವಿರಿ. ವಿದೇಶ ಪ್ರಯಾಣದ ಆಸೆ ಕೈಗೂಡುವುದಿಲ್ಲ. ಸಾಲದ ವ್ಯವಹಾರವು ಹೊಸ ವಿವಾದವನ್ನು ಸೃಷ್ಟಿಸುತ್ತದೆ. ಹಿರಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ.

ಪರಿಹಾರ: ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ನೀಲಿ ಮಿಶಿತ ಬಿಳಿ ಬಣ್ಣ

ವೃಶ್ಚಿಕ ರಾಶಿ

ಉತ್ತಮ ಆರೋಗ್ಯವನ್ನು ಗಳಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಮರುಕಳಿಸುತ್ತದೆ. ಆತ್ಮವಿಶ್ವಾಸದಿಂದ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಸಂಗಾತಿಯ ಸಹಾಯದಿಂದ ಹಣಕಾಸಿನ ಕೊರತೆ ದೂರವಾಗುತ್ತದೆ. ಮಾನಸಿಕ ನೆಮ್ಮದಿಯು ಹೊಸ ಜೀವನವನ್ನು ರೂಪಿಸುತ್ತದೆ. ಕುಟುಂಬದ ಹಿರಿಯರ ಜೊತೆಯಲ್ಲಿ ಮನಸ್ತಾಪವಿರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಶ್ರದ್ಧೆಯಿಂದ ಕಾರ್ಯನಿರ್ವಹಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಬಹುದಿನದ ಬೇಡಿಕೆಗಳು ಈಡೇರುತ್ತವೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿರ್ವಹಿಸುವ ಕಾರಣ ಹಣ ಉಳಿತಾಯ ಮಾಡುವಿರಿ. ಕುಟುಂಬದಲ್ಲಿ ಮಂಗಳಕಾರ್ಯವೊಂದನ್ನು ಆಯೋಜಿಸುವಿರಿ. ಬಹುದಿನದ ಯೋಜನೆಯಂತೆ ದೀರ್ಘ ಕಾಲದ ಪ್ರವಾಸವನ್ನು ಕೈಗೊಳ್ಳುವಿರಿ. ಗುರು ಹಿರಿಯರಲ್ಲಿ ಹೆಚ್ಚಿನ ವಿಶ್ವಾಸ ಗೌರವ ತೋರುವಿರಿ.

ಪರಿಹಾರ: ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.