ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೂರನೇ ವ್ಯಕ್ತಿಯ ಮಧ್ಯಸ್ತಿಕೆಯಿಂದ ಆಸ್ತಿ ವಿವಾದಕ್ಕೆ ಪರಿಹಾರ; ಮೇ 12 ರಿಂದ 18ವರೆಗಿನ ವಾರ ಭವಿಷ್ಯ

ಮೂರನೇ ವ್ಯಕ್ತಿಯ ಮಧ್ಯಸ್ತಿಕೆಯಿಂದ ಆಸ್ತಿ ವಿವಾದಕ್ಕೆ ಪರಿಹಾರ; ಮೇ 12 ರಿಂದ 18ವರೆಗಿನ ವಾರ ಭವಿಷ್ಯ

Weekly Horoscope: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (May 12th to May 18th Weekly Horoscope)

ಮೇ 12 ರಿಂದ 18ವರೆಗಿನ ವಾರ ಭವಿಷ್ಯ
ಮೇ 12 ರಿಂದ 18ವರೆಗಿನ ವಾರ ಭವಿಷ್ಯ

ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (May 12th to May 18th Weekly Horoscope)

ಮೇಷ

ಹಣಕಾಸಿನ ವಿಚಾರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸಹನೆಯಿಂದ ವರ್ತಿಸಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಕೌಟುಂಬಿಕ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು. ಮಕ್ಕಳ ಆಗಮನದಿಂದ ಸಂತಸದ ವಾತಾವರಣ ಉಂಟಾಗಲಿದೆ. ಸರಿಯಾದ ಸಂದರ್ಭದಲ್ಲಿ ಸಂಗಾತಿಯಿಂದ ಸೂಕ್ತ ಸಲಹೆ ಮತ್ತು ಸಹಾಯ ದೊರೆಯುತ್ತದೆ ಉದ್ಯೋಗದಲ್ಲಿದ್ದ ಅಡಚಣೆ ಮರೆಯಾಗಲಿದೆ. ಸೋದರನ ವೈವಾಹಿಕ ಜೀವನದ ವಿವಾದವನ್ನು ಬಗೆಹರಿಸುವಿರಿ. ಕಲುಷಿತ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕಾನೂನಿನ ಅನುದಾನದಲ್ಲಿ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ. ಅತಿಯಾದ ಆತ್ಮವಿಶ್ವಾಸ ತೊಂದರೆಗೆ ಕಾರಣವಾಗುತ್ತದೆ.

ವೃಷಭ

ಆತ್ಮೀಯರ ಸಹಾಯದಿಂದ ಮುಖ್ಯವಾದ ಕೆಲಸವೊಂದು ನೆರವೇರುತ್ತದೆ. ಸೋಲಿಗೆ ಕುಗ್ಗದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಹಣಕಾಸಿನ ಕೊರತೆ ಕಡಿಮೆ ಆಗಲಿದೆ. ಕುಟುಂಬದವರ ನಿರ್ಣಯವನ್ನು ಒಪ್ಪಿ ವಾಸಸ್ಥಳವನ್ನು ಬದಲಿಸುವಿರಿ. ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ. ತಂದೆ ಮತ್ತು ಹಿರಿಯ ಸೋದರನ ನಡುವಿನ ಮನಸ್ತಾಪಕ್ಕೆ ಪರಿಹಾರ ಸೂಚಿಸುವಿರಿ. ವಿದ್ಯಾರ್ಥಿಗಳು ಏಕಾಂಗಿತನವನ್ನು ತೊರೆದು ಸಮೂಹ ವ್ಯಾಸಂಗ ಮಾಡುವುದು ಒಳ್ಳೆಯದು. ವ್ಯಾಪಾರ ವ್ಯವಹಾರಗಳಲ್ಲಿ ಖರ್ಚು ವೆಚ್ಚ ಸರಿ ಸಮಾನವಾಗಿರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರವಾಸಕ್ಕೆ ತೆರಳುವಿರಿ. ಉದ್ಯೋದಲ್ಲಿ ಆಂತರಿಕ ಬದಲಾವಣೆ ಉಂಟಾಗುತ್ತದೆ.

ಮಿಥುನ

ಎದುರಾಗುವ ಸವಾಲುಗಳನ್ನು ಆತ್ಮಸ್ಥೈಯದಿಂದ ಗೆಲ್ಲುವಿರಿ. ಚಾಡಿ ಮಾತನ್ನು ನಂಬುವುದರಿಂದ ಆತ್ಮೀಯರಲ್ಲಿ ಬೇಸರ ಉಂಟಾಗುತ್ತದೆ. ಮನರಂಜನೆಗೆ ಮನಸೋಲುವ ಕಾರಣ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದವರೊಂದಿಗೆ ಸಂತಸದಿಂದ ಬಾಳುವಿರಿ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಒತ್ತಡಕ್ಕೆ ಮಣಿದು ಉದ್ಯೋಗ ಬದಲಿಸುವಿರಿ. ಕಣ್ಣಿನ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಹಣಕಾಸಿನ ವಿವಾದವು ದೂರವಾಗಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯುತ್ತದೆ. ಉದ್ಯೋಗಸ್ಥರು ಪರೀಕ್ಷೆಗಳ ಮೂಲಕ ಉನ್ನತ ಅಧಿಕಾರವನ್ನು ಗಳಿಸುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಭವಿಷ್ಯವಿದೆ.

ಕಟಕ

ಮಿತಿ ಇಲ್ಲದ ಜವಾಬ್ದಾರಿಗಳು ನೆಮ್ಮದಿಯನ್ನು ಮರೆ ಮಾಡುತ್ತದೆ. ಕುಟುಂಬದ ಎಲ್ಲಾ ವಿಚಾರಗಳು ನಿಮ್ಮನ್ನು ಅವಲಂಬಿಸಿರುತ್ತದೆ. ಜೀವನದಲ್ಲಿ ವಾದ ವಿವಾದಗಳು ಕೊನೆಗೊಂಡು ಸಂತೋಷದಿಂದ ಬಾಳುವಿರಿ. ಉದ್ಯೋಗದಲ್ಲಿನ ಬದಲಾವಣೆಗಳು ನಿಮ್ಮ ಪರವಾಗಿರುತ್ತವೆ. ಕುಟುಂಬದ ಹಿರಿಯರು ನಡೆಸುವ ವ್ಯಾಪಾರ ವ್ಯವಹಾರ ನಿಮ್ಮದಾಗುತ್ತದೆ. ತಡವಾದರೂ ಯಾವುದೇ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ನಿಮ್ಮ ಪಾಲಿನ ಆಸ್ತಿಯಲ್ಲಿನ ವಿವಾದವು ಸಂಬಂಧಿಕರ ಮಧ್ಯಸ್ಥಿಕೆಯಿಂದ ಪರಿಹಾರವಾಗಲಿದೆ. ವಿದ್ಯಾರ್ಥಿಗಳು ತಮ್ಮ ದ್ವಂಧ್ವ ನೀತಿಯಿಂದ ತೊಂದರೆಗೆ ಒಳಗಾಗುತ್ತಾರೆ. ಅನಿರೀಕ್ಷಿತ ಧನಲಾಭ ಇರುತ್ತದೆ. ತಾಳ್ಮೆ ಇರಲಿ.

ಸಿಂಹ

ದಿನನಿತ್ಯದ ಜೀವನದಲ್ಲಿನ ಬದಲಾವಣೆಗಳು ಹೊಸ ಚೇತನಕ್ಕೆ ಕಾರಣವಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಸಫಲರಾಗುವಿರಿ. ವೃತ್ತಿ ಜೀವನದಲ್ಲಿ ವಿಶೇಷವಾದ ಮಾರ್ಪಾಡುಗಳು ಉಂಟಾಗಲಿವೆ. ಜನಸೇವೆ ಮಾಡುವ ಆಸೆ ನೆರವೇರಲಿದೆ. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಹೊರ ಹೊಮ್ಮುವಿರಿ. ವಂಶದ ಹಿರಿಯರನ್ನು ಭೇಟಿ ಮಾಡುವಿರಿ. ಸಂಗಾತಿಯ ಸಹಕಾರದಿಂದ ವ್ಯಾಪಾರ ಆರಂಭಿಸುವಿರಿ. ಯಾರ ಮಾತನ್ನು ಕೇಳದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಹಿರಿಯರ ಮಾತನ್ನು ಚಾಚೂ ತಪ್ಪದೆ ಅನುಸರಿಸುವಿರಿ. ಉದ್ಯೋಗದಲ್ಲಿ ವಿಶೇಷ ಸೌಲಭ್ಯ ದೊರೆಯುತ್ತದೆ. ವಿದ್ಯಾರ್ಥಿಗಳು ಆಟ ಮತ್ತು ಸಂತೋಷ ಕೂಟದಲ್ಲಿ ನಿರತರಾಗುತ್ತಾರೆ.

ಕನ್ಯಾ

ಬೇಸರದ ಕಾರಣ ಏಕಾಂಗಿಯಾಗಿ ಇರಲು ಬಯಸುವಿರಿ. ಹಿರಿಯರ ಅನುಭವದಿಂದ ಬಾಳಿನ ಪಾಠವನ್ನು ಕಲಿಯುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ತೊಂದರೆ ಇರದು. ನಿರೀಕ್ಷಿತ ಫಲಿತಾಂಶಗಳು ದೊರೆಯುವುದರಿಂದ ಸಂತಸದಿಂದ ಬಾಳುವಿರಿ. ಆತ್ಮೀಯರಿಂದ ಅನಿರೀಕ್ಷಿತ ಧನ ಸಹಾಯವಿರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳಿರುತ್ತವೆ. ಪ್ರಸಕ್ತ ಇರುವ ವ್ಯಾಪಾರ ವ್ಯವಹಾರಗಳನ್ನು ಮುಂದುವರೆಸುವಿರಿ. ಯಾವುದೇ ಬದಲಾವಣೆಗಳನ್ನು ಇಷ್ಟ ಪಡುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರವನ್ನು ಮುಂದೂಡದಿರಿ. ವಾರಂತ್ಯಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಹಣವನ್ನು ಉಳಿಸಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಹಟದಿಂದ ಅಭ್ಯಾಸದಲ್ಲಿ ತೊಡಗುತ್ತಾರೆ. ಉನ್ನತ ಶಿಕ್ಷಣಕ್ಕೆ ಅವಕಾಶ ಪಡೆಯುತ್ತಾರೆ.

ತುಲಾ

ಬೇರೆಯವರ ಕೆಲಸ ಕಾರ್ಯಗಳಲ್ಲಿ ತಪ್ಪು ಕಂಡುಹಿಡಿಯುವಿರಿ. ಕುಟುಂಬದವರ ವಿರೋಧದ ನಡುವೆಯೂ ಹಣದ ವ್ಯವಹಾರವನ್ನುಆರಂಭಿಸುವಿರಿ. ಆತುರ ಮತ್ತು ಅತಿಯಾದ ಆತ್ಮವಿಶ್ವಾಸ ಸಂದಿಗ್ಧ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಉದ್ಯೋಗದಲ್ಲಿ ಉತ್ತಮ ಪ್ರತಿಫಲ ಲಭಿಸುತ್ತದೆ. ಉದ್ಯೋಗ ಬದಲಿಸುವ ಅವಕಾಶ ದೊರೆಯುತ್ತದೆ. ಸರ್ಕಾರದ ಅನುಮತಿಯಿಂದ ಲೇವಾದೇವಿ ವ್ಯವಹಾರವನ್ನು ಆರಂಭಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಪರಸ್ಥಳಕ್ಕೆ ತೆರಳುತ್ತಾರೆ. ಕೆಲವೊಂದು ಆಸೆ ಆಕಾಂಕ್ಷೆಗಳು ನಿರಾಸೆಗೆ ಕಾರಣವಾಗುತ್ತದೆ. ಪಾಲುಗಾರಿಕೆ ವ್ಯವಹಾರದಲ್ಲಿ ನಂಬಿಕೆ ಇರುವುದಿಲ್ಲ.

ವೃಶ್ಚಿಕ

ಲಾಭವಿಲ್ಲದ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ಬಿಡುವಿಲ್ಲದ ಕಾರಣ ದೇಹಾಲಸ್ಯಕ್ಕೆ ಒಳಗಾಗುವಿರಿ. ಅನಾವಶ್ಯಕ ಕೋಪದಿಂದಾಗಿ ವಿವಾದ ಎದುರಿಸುವಿರಿ. ಕೌಟುಂಬಿಕ ವಿಚಾರಗಳಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಪ್ರಯೋಜನಕಾರಿ ಬೆಳವಣಿಗೆಗಳು ಸಂತೋಷ ಉಂಟು ಮಾಡುತ್ತದೆ. ವಿದ್ಯಾರ್ಥಿಗಳು ಹಿರಿಯರ ಆದೇಶವನ್ನು ಪಾಲಿಸುವುದು ಒಳ್ಳೆಯದು. ಉದ್ಯೋಗವನ್ನು ಬದಲಾಯಿಸುವ ಯೋಚನೆ ಕೈಬಿಡುವಿರಿ. ಕುಟುಂಬದ ಸದಸ್ಯರ ಸಹಾಯದಿಂದ ಸಣ್ಣಮಟ್ಟದಲ್ಲಿ ವ್ಯಾಪಾರವನ್ನು ಆರಂಭಿಸುವಿರಿ. ಮಕ್ಕಳಿಗೆ ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಕುಟುಂಬದಲ್ಲಿ ಮದುವೆಯ ಕಾರ್ಯ ನೆರವೇರುತ್ತದೆ.

ಧನಸ್ಸು

ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ವಯಸ್ಸಿಗೆ ಒಗ್ಗದ ಕೆಲಸ ಕಾರ್ಯಗಳನ್ನು ಮಾಡುವಿರಿ. ಅಗತ್ಯವಿರುವ ಅನುಕೂಲತೆಗಳು ತಾನಾಗಿಯೇ ದೊರೆಯುತ್ತದೆ. ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವಿರಿ. ಹಣದ ತೊಂದರೆ ಉಂಟಾಗದು. ಉದ್ಯೋಗದಲ್ಲಿ ನಿರೀಕ್ಷಿತ ಬೆಳವಣಿಗೆಗಳು ಕಂಡುಬರುತ್ತದೆ. ಉನ್ನತ ಅಧಿಕಾರ ಗಳಿಸುವಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳು ಆಟ ಪಾಠಗಳ ನಡುವೆ ಅಂತರ ಕಾಯ್ದುಕೊಳ್ಳಲ್ಲಿದ್ದಾರೆ. ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕುಟುಂಬದ ಸದಸ್ಯರೊಂದಿಗೆ ಮೋಜಿನ ಕೂಟಕ್ಕೆ ತೆರಳುವಿರಿ. ಸತತವಾಗಿ ಬದಲಾಗುವ ಮನಸ್ಸಿನಿಂದ ತಪ್ಪು ನಿರ್ಧಾರ ಕೈಗೊಳ್ಳುವಿರಿ.

ಮಕರ

ಆತುರದಿಂದ ತೆಗೆದುಕೊಳ್ಳುವ ತೀರ್ಮಾನವನ್ನು ಸರಿಪಡಿಸುವಿರಿ. ಮಿತಿ ಇಲ್ಲದ ಖರ್ಚು ವೆಚ್ಚ ಹಣದ ತೊಂದರೆಗೆ ಕಾರಣವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಕೆಲಸದ ಜವಾಬ್ದಾರಿಯೂ ನಿಮ್ಮದಾಗುತ್ತದೆ. ವಿಶ್ರಾಂತಿ ಇಲ್ಲದೆ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಆತ್ಮೀಯರಿಗೆ ಕಷ್ಟದ ಸಂದರ್ಭದಲ್ಲಿ ನೀಡಿದ ಹಣವು ಮರಳಿ ಕೈ ಸೇರುವುದು. ಮನೆಗೆ ಬೇಕಾದ ಅಲಂಕಾರಿಕ ಪದಾರ್ಥಗಳನ್ನು ಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ತುಂಬಿರುತ್ತದೆ. ಪಾಲುದಾರಿಕೆಯಲ್ಲಿ ಚಿಕ್ಕ ಬಂಡವಾಳದ ವ್ಯಾಪಾರವೊಂದನ್ನು ಆರಂಭಿಸುವಿರಿ.

ಕುಂಭ

ಮನದಲ್ಲಿ ಮುಚ್ಚಿಟ್ಟಿದ್ದ ವಿಚಾರವನ್ನು ಕುಟುಂಬದ ಸದಸ್ಯರ ಬಳಿ ಹಂಚಿಕೊಳ್ಳುವಿರಿ. ಉದರ ಸಂಬಂಧಿ ದೋಷದಿಂದ ಬಳಲುವಿರಿ. ಆಹಾರ ಸೇವನೆಯಲ್ಲಿ ಇತಿ ಮಿತಿ ಇದ್ದರೆ ಒಳ್ಳೆಯದು. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಉಂಟಾಗುತ್ತದೆ. ಮಕ್ಕಳ ಕಣ್ಣಿಗೆ ಪೆಟ್ಟಾಗಬಹುದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ವ್ಯಾಪಾರ ವ್ಯವಹಾರಗಳ ತೊಂದರೆ ಕಾಣದು. ಕೃಷಿ ಭೂಮಿಯನ್ನು ಕೊಳ್ಳುವ ಸಾಧ್ಯತೆಗಳಿವೆ. ಹೊಸ ವಾಹನವನ್ನು ಕೊಳ್ಳುವಿರಿ. ಮಕ್ಕಳ ಜೊತೆಯಲ್ಲಿ ಅನಾವಶ್ಯಕ ಮನಸ್ತಾಪ ಇರಲಿದೆ. ಸಾಲದ ವ್ಯವಹಾರದಲ್ಲಿ ತೊಂದರೆ ಇರುತ್ತದೆ.

ಮೀನ

ನೇರ ಮಾತಿನಿಂದ ನಿಮ್ಮ ಕೆಲಸ ಕಾರ್ಯಗಳನ್ನು ನೆರವೇರಿಸಿಕೊಳ್ಳುವಿರಿ. ಮಾತುಕತೆ ಮೂಲಕ ಕುಟುಂಬದಲ್ಲಿನ ಅಂತರ ನಿವಾರಣೆಯಾಗುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದ ಕೆಲಸಗಳನ್ನು ಆಯ್ದುಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ನಿಮ್ಮದಲ್ಲದ ಯಾವುದೇ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಮನೆಯ ಸುತ್ತಮುತ್ತಲಿನ ಅಂದವನ್ನು ಕಾಪಾಡಲು ಪ್ರಯತ್ನಿಸುವಿರಿ. ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಹಣವನ್ನು ಪೋಲು ಮಾಡುವುದಿಲ್ಲ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ವಾದ ಇರುತ್ತದೆ. ಕಷ್ಟದಲ್ಲಿದ್ದವರಿಗೆ ಹಣದ ಸಹಾಯ ಮಾಡುವಿರಿ. ರಾಜಕೀಯ ಪ್ರವೇಶಿಸುವ ಆಸೆ ಮನದಲ್ಲಿ ಮೂಡಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).