ವಾರ ಭವಿಷ್ಯ: ತುಲಾ ರಾಶಿಯ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ, ವೃಶ್ಚಿಕ ರಾಶಿಯವರಿಗೆ ಅನಿರೀಕ್ಷಿತ ಧನಲಾಭವಿರುತ್ತೆ
ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ವಾರ ಭವಿಷ್ಯ ಇಲ್ಲಿದೆ.

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 18ರ ಭಾನುವಾರದಿಂದ 24ರ ಶನಿವಾರದವರಿಗೆ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಟಿಕ ರಾಶಿಯವರ ವಾರ ಭವಿಷ್ಯ ಇಲ್ಲಿದೆ.
ಸಿಂಹ ರಾಶಿ
ಬಹು ದಿನಗಳ ನಂತರ ಉತ್ತಮ ಆರೋಗ್ಯವನ್ನು ಗಳಿಸುವಿರಿ. ಬಿಡುವಿಲ್ಲದ ಕೆಲಸ ಕಾರ್ಯದ ನಡುವೆಯೂ ಕುಟುಂಬದ ಸದಸ್ಯರನ್ನು ಪ್ರೀತಿಯಿಂದ ಕಾಣುವಿರಿ. ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಮನೆಯನ್ನು ನವೀಕರಣಗೊಳಿಸಲು ಆರ್ಕಷಕ ವಸ್ತುಗಳನ್ನು ಕೊಳ್ಳುವಿರಿ. ಕುಟುಂಬದಲ್ಲಿ ನೆಲೆಸಿದ್ದ ಮನಸ್ತಾಪವು ದೂರವಾಗುತ್ತದೆ. ಕಷ್ಟ ಎನಿಸಿದರು ಹಣವನ್ನು ಉಳಿಸುವಿರಿ. ಮನೆತನದಲ್ಲಿ ನಿಮಗೆ ಉನ್ನತ ಗೌರವ ಲಭಿಸುತ್ತದೆ. ಗೆಲ್ಲುವ ಹಠದಿಂದಲೇ ನಿಮ್ಮ ಕೆಲಸ ಕಾರ್ಯಗಳು ಆರಂಭಿಸುವಿರಿ. ವಿದ್ಯಾರ್ಥಿಗಳು ಹೊಸ ರೀತಿಯ ಪರಿಸರಕ್ಕೆ ಹೊಂದಿಕೊಂಡು ಬಾಳುತ್ತಾರೆ. ಉನ್ನತ ವಿದ್ಯಾಭ್ಯಾಸಕ್ಕೆ ಆತ್ಮೀಯರಿಂದ ಸಹಾಯ ಸಹಕಾರ ದೊರೆಯುತ್ತದೆ. ಕೋಪ ತಾಪದ ಗುಣದ ಕಾರಣದಿಂದ ಆತ್ಮೀಯರಿಂದ ದೂರ ಉಳಿಯಬೇಕಾಗುತ್ತದೆ.
ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಕನ್ಯಾ ರಾಶಿ
ಆತ್ಮವಿಶ್ವಾಸದಿಂದ ನಿಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನಿರೀಕ್ಷೆಯಂತೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಮಾನಸಿಕ ಶಕ್ತಿಯಿಂದ ಎದುರಾಗುವ ಸವಾಲುಗಳನ್ನು ಸುಲಭವಾಗಿ ಬಗೆಹರಿಸುವಿರಿ. ಕುಟುಂಬದಲ್ಲಿನ ಜವಾಬ್ದಾರಿಯನ್ನು ಸೋದರರ ಸಹಾಯದಿಂದ ಪೂರ್ಣಗೊಳಿಸುವಿರಿ. ಇರುವ ಆದಾಯದಲ್ಲಿ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಸುಲಭವಾಗಿ ಬೇರೆಯವರನ್ನು ನಂಬುವುದಿಲ್ಲ. ಉದ್ಯೋಗದಲ್ಲಿ ಎದುರಾಗುವ ಸವಾಲುಗಳನ್ನು ಗೆಲ್ಲಲು ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ವಾದ ವಿವಾದಗಳು ಉಂಟಾಗಲಿವೆ. ತಾಳ್ಮೆಯಿಂದ ವರ್ತಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕೆ ಅವಕಾಶವನ್ನು ಪಡೆಯುತ್ತಾರೆ. ಆದಾಯ ಮತ್ತು ಖರ್ಚು ವೆಚ್ಚಗಳನ್ನು ಸಮಾನವಾಗಿ ಸ್ವೀಕರಿಸುವಿರಿ. ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಫಲರಾಗುವಿರಿ. ವಾಹನ ದುರಸ್ತಿಗೆ ಹೆಚ್ಚಿನ ಹಣ ಹೊಂದಿಸಬೇಕಾಗುತ್ತದೆ.
ಪರಿಹಾರ: ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ತುಲಾ ರಾಶಿ
ಆತ್ಮ ವಿಶ್ವಾಸದ ಕೊರತೆ ಇರುತ್ತದೆ. ಆದರೆ ಆತಂಕದ ಪರಿಸ್ಥಿತಿಯಲ್ಲಿಯೂ ಬುದ್ಧಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದ ಸದಸ್ಯರಲ್ಲದೆ ಬೇರೆಯವರನ್ನು ಸಹ ಸಮಾನ ಭಾವನೆಯಿಂದ ಕಾಣುವಿರಿ. ಉದ್ಯೋಗದಲ್ಲಿ ವಿವಾದಗಳಿದ್ದು ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸಮಾಜದಲ್ಲಿ ಗೌರವಯುತ ಸ್ಥಾನ ದೊರೆಯುತ್ತದೆ. ಆರೋಗ್ಯವನ್ನು ಉಳಿಸಿಕೊಳ್ಳಲು ಯೋಗ ವ್ಯಾಯಾಮವನ್ನು ಅವಲಂಬಿಸುವಿರಿ. ತಂದೆಯೊಂದಿಗೆ ಕೌಟುಂಬಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ದಂಪತಿ ನಡುವೆ ಮಧುರವಾದ ಸಂಬಂಧವಿರುತ್ತದೆ. ನಿರುದ್ಯೋಗಿಗಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ನಿಮ್ಮದೇ ಆದ ತಪ್ಪಿನಿಂದಾಗಿ ಹಣಕಾಸಿನ ಕೊರತೆ ಉಂಟಾಗುತ್ತದೆ. ಆಧುನಿಕತೆಗೆ ಮಾರು ಹೋಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಹಳದಿ ಬಣ್ಣ
ವೃಶ್ಚಿಕ ರಾಶಿ
ಶುಚಿಯಾದ ಆಹಾರ ಸೇವಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಒತ್ತಡದ ಸನ್ನಿವೇಶ ಎದುರಾಗುತ್ತದೆ. ನಿಮಗೆ ಸೇರಿದ ಮನೆ ಅಥವಾ ಜಮೀನಿನ ವಿಚಾರದ ತೊಂದರೆಯು ಮಾತುಕತೆಯಿಂದ ಬಗೆಹರಿಯುತ್ತದೆ. ಉತ್ತಮ ಆದಾಯವಿದ್ದರೂ ಹಣದ ಕೊರತೆ ಉಂಟಾಗುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯಲಿದೆ. ಅತಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಮುಖ್ಯವಾದ ಕೆಲಸಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿವೆ. ಮನೆತನದ ಹಿರಿಯರ ಜೊತೆಯಲ್ಲಿ ಉತ್ತಮ ಒಡನಾಟ ಮೂಡುತ್ತದೆ. ಸೋಲಿನ ಸಮಯದಲ್ಲಿ ಕೋಪದಿಂದ ವರ್ತಿಸುವಿರಿ. ನಿಮ್ಮ ತಪ್ಪಿಗೆ ಬೇರೆಯವರನ್ನು ಹೊಣೆ ಮಾಡುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ