ವಿರೋಧಿಗಳ ಕಿರಿಕಿರಿ ಇರಲಿದೆ, ಭೂವಿವಾದ ಬಗೆಹರಿಯಲಿದೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿರೋಧಿಗಳ ಕಿರಿಕಿರಿ ಇರಲಿದೆ, ಭೂವಿವಾದ ಬಗೆಹರಿಯಲಿದೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ

ವಿರೋಧಿಗಳ ಕಿರಿಕಿರಿ ಇರಲಿದೆ, ಭೂವಿವಾದ ಬಗೆಹರಿಯಲಿದೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರ ಭವಿಷ್ಯ ಇದೆ.

ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ವಾರ ಭವಿಷ್ಯ
ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ವಾರ ಭವಿಷ್ಯ

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 25ರ ಭಾನುವಾರದಿಂದ ಮೇ 31ರ ಶನಿವಾರದವರಿಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ವಾರ ಭವಿಷ್ಯ.

ಧನಸ್ಸು

ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಅಜೀರ್ಣದ ತೊಂದರೆ ಇರುತ್ತದೆ. ಯಾವುದೇ ವಿಚಾರದಲ್ಲಿಯೂ ದೃಢವಾದ ನಿಲುವು ತಾಳಲು ಸಾಧ್ಯವಾಗುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ಗುರು ಹಿರಿಯರ ಅನುಗ್ರಹ ನಿಮಗೆ ದೊರೆಯುತ್ತದೆ, ಕೌಟುಂಬಿಕ ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ವಿರೋಧಿಗಳ ಉಪಠಳದಿಂದ ಮನಸ್ಥೈರ್ಯ ಕಡಿಮೆ ಆಗುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಗಳಿಸುವಿರಿ. ಮೌನವಾಗಿದ್ದುಕೊಂಡು ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕಷ್ಟ ನಷ್ಟದ ಪರಿಸ್ಥಿತಿಗಳನ್ನೂ ಏಕಾಂಗಿಯಾಗಿ ಎದುರಿಸಬಲ್ಲಿರಿ. ವಿದ್ಯಾರ್ಥಿಗಳು ಸತತ ಪರಿಶ್ರಮದ ನಂತರ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ.

ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ

ಮಕರ

ಮಾತಿನ ಮೇಲೆ ಹಿಡಿತ ಸಾಧಿಸುವಿರಿ. ಆತುರದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವ ಕಾರಣ ಸಮಸ್ಯೆಗಳು ಎದುರಾಗುತ್ತವೆ. ದಿಢೀರನೆ ಆರೋಗ್ಯದಲ್ಲಿ ಸಮಸ್ಯೆಯೊಂದು ಎದುರಾಗಲಿದೆ. ಉದ್ಯೋಗದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಎದುರಾಗುತ್ತವೆ. ಆತ್ಮವಿಶ್ವಾಸದಿಂದ ಹಣಕಾಸಿನ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸುವಿರಿ. ಕುಟುಂಬದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಕಷ್ಟದ ಸಂದರ್ಭದಲ್ಲಿ ಹಣದ ಸಮಸ್ಯೆಯನ್ನು ಎದುರಿಸುವಿರಿ. ದೀರ್ಘ ಕಾಲದ ಭೂವಿವಾದವನ್ನು ಮಾತುಕತೆಯ ಮುಖೇನ ಪರಿಹರಿಸುವಿರಿ. ವೈವಾಹಿಕ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಹೊಸ ವಾಹನವನ್ನು ಕೊಳ್ಳುವ ಸಂಭವವಿದೆ. ಆದಾಯವನ್ನು ಮೀರಿದ ಖರ್ಚುವೆಚ್ಚಗಳು ಎದುರಾಗುತ್ತದೆ. ಉದ್ಯೋಗವನ್ನು ಬದಲಾಯಿಸುವ ತೀರ್ಮಾನಕ್ಕೆ ಬರುವಿರಿ. ಮಕ್ಕಳ ಹಠದ ಗುಣದಿಂದಾಗಿ ಸಂದಿಗ್ಧ ಪರಿಸ್ಥಿಯಲ್ಲಿ ಸಿಲುಕುವಿರಿ. ಆತ್ಮೀಯರ ಸಲಹೆಯನ್ನು ಪಾಲಿಸುವುದು ಒಳ್ಳೆಯದು. ವಿದ್ಯಾರ್ಥಿಗಳು ಮನರಂಜನೆಯಲ್ಲಿ ಸಮಯ ವ್ಯರ್ಥ ಮಾಡುತ್ತಾರೆ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ರಕ್ತದ ಬಣ್ಣ

ಕುಂಭ

ಮನೆತನದ ಹಿರಿಯರ ಸಹಾಯ ಸಹಕಾರ ನಿಮಗೆ ದೊರೆಯಲಿದೆ. ಕ್ಲಿಷ್ಟಕರ ಕೆಲಸಗಳನ್ನು ಹೆಚ್ಚಿನ ಪ್ರಯತ್ನದಿಂದ ಪೂರ್ಣಗೊಳಿಸುವಿರಿ. ಆತ್ಮವಿಶ್ವಾಸದಿಂದ ನಿಮ್ಮ ಕಾರ್ಯವನ್ನು ನಿರ್ವಹಿಸುವಿರಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ನಿಮ್ಮ ಹಣಕಾಸಿಗೆ ಸಂಬಂಧಿಸಿದ ಕಾರ್ಯಯೋಜನೆಯನ್ನು ರಹಸ್ಯವಾಗಿರಿಸುವಿರಿ. ಆಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಕುಟುಂಬಲ್ಲಿನ ಸೌಹಾರ್ಧತೆಗೆ ಧಕ್ಕೆ ಬರುವ ಸನ್ನಿವೇಶವೊಂದು ಎದುರಾಗುತ್ತದೆ. ಗೃಹಿಣಿಯರಿಗೆ ಮಾನಸಿಕ ಒತ್ತಡ ಹೆಚ್ಚುತ್ತದೆ. ನವವಿವಾಹಿತರಿಗೆ ಸಂತಾನ ಲಾಭವಿದೆ. ಹಣಕಾಸಿನ ವಹಿವಾಟಿನ ವಿಚಾರದಲ್ಲಿ ಸ್ವಂತ ನಿರ್ಣಯವನ್ನು ತೆಗೆದುಕೊಳ್ಳುವಿರಿ. ಸಮಯಕ್ಕೆ ಅನುಗುಣವಾಗಿ ನಿಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಉನ್ನತ ಅಧ್ಯಯನದಲ್ಲಿ ಉನ್ನತ ಸ್ಥಾನ ಗಳಿಸುತ್ತಾರೆ. ಇರುವ ಮನೆಯ ದುರಸ್ತಿಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿರುತ್ತದೆ. ಒಮ್ಮೆ ತೆಗೆದುಕೊಳ್ಳುವ ತೀರ್ಮಾನವನ್ನು ಬದಲಿಸುವುದಿಲ್ಲ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ಮೀನ

ಕಣ್ಣಿನ ತೊಂದರೆ ಇರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳಿಗೆ ಬದ್ದರಾಗುವುದಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರಲಿವೆ. ಕೌಟುಂಬಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ಉತ್ತಮ ಪರಿವರ್ತನೆಗಳು ಉಂಟಾಗಲಿವೆ. ಹಣದ ಸಮಸ್ಯೆಯಿಂದ ಪಾರಾಗಲು ಮನೆತನದ ವೃತ್ತಿಯನ್ನು ಅವಲಂಭಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಎಲ್ಲರ ಜೊತೆಯಲ್ಲಿ ತಾಳ್ಮೆಯಿಂದ ವರ್ತಿಸುವಿರಿ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ಬಂದು ಬಳಗದವರ ಜೊತೆ ಉತ್ತಮ ಬಾಂಧವ್ಯ ಇರುತ್ತದೆ. ಮಕ್ಕಳ ವಿಚಾರದಲ್ಲಿ ಸಂತಸದ ಕ್ಷಣಗಳನ್ನು ಆಸ್ವಾದಿಸುವಿರಿ. ಉದ್ಯೋಗ ಬದಲಿಸಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆ ತಾಳಲು ಸಾಧ್ಯವಾಗುವುದಿಲ್ಲ. ವಿದೇಶಪ್ರಯಾಣ ಯೋಗವಿದೆ. ಸಾಂಪ್ರದಾಯಿಕ ಆಚರಣೆಯಲ್ಲಿ ಆಸಕ್ತಿ ಇರುತ್ತದೆ. ಸಮಾಜಸೇವೆಯ ಬಗ್ಗೆ ಆಸಕ್ತಿ ಮೂಡುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.