ಮೀನ ರಾಶಿ ವಾರದ ಭವಿಷ್ಯ: ವೃತ್ತಿ ಜೀವನದಲ್ಲಿ ಜಾಕ್‌ಪಾಟ್ ಹೊಡೆಯುವ ಸಂಭವ, ಅನಗತ್ಯ ಖರ್ಚಿಗೆ ಕಡಿವಾಣ ಹಾಕಲು ಮರೆಯದಿರಿ-weekly horoscope from august 11th to august 17th 2024 meena rashi vara bhavishya love finance money ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೀನ ರಾಶಿ ವಾರದ ಭವಿಷ್ಯ: ವೃತ್ತಿ ಜೀವನದಲ್ಲಿ ಜಾಕ್‌ಪಾಟ್ ಹೊಡೆಯುವ ಸಂಭವ, ಅನಗತ್ಯ ಖರ್ಚಿಗೆ ಕಡಿವಾಣ ಹಾಕಲು ಮರೆಯದಿರಿ

ಮೀನ ರಾಶಿ ವಾರದ ಭವಿಷ್ಯ: ವೃತ್ತಿ ಜೀವನದಲ್ಲಿ ಜಾಕ್‌ಪಾಟ್ ಹೊಡೆಯುವ ಸಂಭವ, ಅನಗತ್ಯ ಖರ್ಚಿಗೆ ಕಡಿವಾಣ ಹಾಕಲು ಮರೆಯದಿರಿ

Pisces Daily Horoscope August 11- August 17, 2024: ರಾಶಿ ಚಕ್ರಗಳ ಪೈಕಿ ಕೊನೆಯದ್ದು ಮೀನ ರಾಶಿ. 12ನೇ ರಾಶಿಚಕ್ರದಲ್ಲಿ ಚಂದ್ರ ಸಾಗುವ ಸಮಯದಲ್ಲಿ ಜನಿಸಿದವರ ರಾಶಿಚಕ್ರ ಇದು. ಆಗಸ್ಟ್‌ 11 ರಿಂದ ಆಗಸ್ಟ್ 17 ರವರೆಗೆ ಮೀನ ರಾಶಿಯವರ ವಾರದ ಭವಿಷ್ಯದ ಪ್ರಕಾರ,

ಮೀನ ರಾಶಿ ವಾರದ ಭವಿಷ್ಯ: ವೃತ್ತಿಜೀವನದಲ್ಲಿ ಬರುವ ಅವಕಾಶಗಳನ್ನು ಬಳಸಿಕೊಳ್ಳಿ. ಆರೋಗ್ಯ ಸುಧಾರಣೆಯ ಬಗ್ಗೆ ಯೋಚಿಸಿ
ಮೀನ ರಾಶಿ ವಾರದ ಭವಿಷ್ಯ: ವೃತ್ತಿಜೀವನದಲ್ಲಿ ಬರುವ ಅವಕಾಶಗಳನ್ನು ಬಳಸಿಕೊಳ್ಳಿ. ಆರೋಗ್ಯ ಸುಧಾರಣೆಯ ಬಗ್ಗೆ ಯೋಚಿಸಿ

ಮೀನ ರಾಶಿಯವರಿಗೆ ಈ ವಾರವು (ಆಗಸ್ಟ್‌ 11 ರಿಂದ ಆಗಸ್ಟ್ 17) ಬೆಳವಣಿಗೆಯ ಅವಕಾಶಗಳಿಂದ ತುಂಬಿದ ವಾರವಾಗಿರಲಿದೆ. ಕ್ರಿಯಾತ್ಮಕ ಬದಲಾವಣೆಗಳಿಗೆ ನೀವು ಒಡ್ಡಿಕೊಳ್ಲುವ ಮನಸು ಮಾಡಬೇಕಿದೆ. ನಿಮ್ಮ ಪ್ರೀತಿಯ ಜೀವನ, ವೃತ್ತಿ, ಹಣಕಾಸು ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೊಸ ಆರಂಭಗಳಿಗೆ ನೀವು ತೆರೆದುಕೊಳ್ಳಬೇಕು. ನಿಮ್ಮ ಗ್ರಹಗತಿಗಳು ಸಹ ನಿಮ್ಮನ್ನು ಹೊಸ ಅವಕಾಶಗಳತ್ತ ಕರೆದೊಯ್ಯಲಿವೆ.

ಮೀನ ರಾಶಿಯವರ ವಾರದ ಪ್ರೇಮ ಜೀವನ ಭವಿಷ್ಯ (Pisces Weekly Love Horoscope)

ನಿಮ್ಮ ವೈವಾಹಿಕ ಮತ್ತು ಪ್ರೇಮದ ಜೀವನದಲ್ಲಿ ಸಹ ನೀವು ಹೊಸ ಬದಲಾವಣೆ ಅಥವಾ ಅನುಭವಗಳತ್ತ ತೆರೆದುಕೊಳ್ಳುವ ಮನಸು ಮಾಡಬೇಕಿದೆ. ನಿಮಗೆ ಮದುವೆ ಆಗಿರಲಿ ಅಥವಾ ಇನ್ನೂ ಆಗದಿರಲಿ, ಹೊಸ ಅನುಭವ ಎದುರಾದರೆ ಅದರತ್ತ ಬೆನ್ನು ತಿರುಗಿಸಬೇಡಿ. ಮುಖ ನೀಡಿ ಏನಾಗುತ್ತದೆ ಎಂದು ನೋಡಿಯೇ ಬಿಡೋಣ ಎಮದು ಭಾವಿಸಿ. ಇದು ನಿಮ್ಮ ಜೀವನವನ್ನು ಹೊಸ ದಿಕ್ಕಿಗೆ ಒಯ್ಯಬಲ್ಲ ಜನರನ್ನು ಪರಿಚಯ ಮಾಡಿಕೊಡಬಲ್ಲದು. ಮುರಿದುಹೋದ ಸಂಬಂಧವನ್ನು ಸರಿಪಡಿಸಲು ಇದು ಸುಸಮಯ. ಆದರೆ ಎಂದಿಗೂ ಪ್ರಾಮಾಣಿಕರಾಗಿರಿ. ತಿಳಿವಳಿಕೆಯುಕ್ತ ಮಾತು ನಿಮ್ಮದಾಗಿರಲಿ.

ಮೀನ ರಾಶಿಯವರ ವಾರದ ಉದ್ಯೋಗ ಭವಿಷ್ಯ (Pisces Weekly Professional Horoscope)

ಈ ವಾರ ನಿಮ್ಮ ವೃತ್ತಿ ಜೀವನದ ಜಾಕ್‌ಪಾಟ್ ವಾರ ಎಂದರೂ ತಪ್ಪಾಗಲ್ಲ. ಯಾವುದೇ ಸವಾಲುಗಳಿಗೂ ಅಂಜಬೇಡಿ. ಅವಕಾಶಗಳನ್ನು ಮುಕ್ತವಾಗಿ ಎದುರಿಸಿ. ಇದು ನಿಮ್ಮ ವೃತ್ತಿಯಲ್ಲಿ ಬಹು ದೂರಕ್ಕೆ ನಿಮ್ಮನ್ನು ಕೈಹಿಡಿದು ಕರೆದೊಯ್ಯಲಿದೆ. ನಿಮ್ಮ ಸೃಜನಶೀಲತೆ ಮತ್ತು ಹೊಸ ಆಲೋಚನೆಗಳನ್ನು ಪ್ರದರ್ಶಿಸಲು ಇದು ಸೂಕ್ತ ಸಮಯ. ಆದರೆ ಈ ಪ್ರಕ್ರಿಯೆಯಲ್ಲಿ ನಿಮ್ಮ ಮಾರ್ಗದರ್ಶಕರು ಅಥವಾ ಸಹೋದ್ಯೋಗಿಗಳ ಸಲಹೆ ಪಡೆಯಲು ಹಿಂಜರಿಕೆ ಪಡೆಯಬೇಡಿ. ನಿಮ್ಮ ಕಂಫರ್ಟ್ ಝೋನ್‌ನಿಂದ ಈಚೆಗೆ ಬಮದು ಕೆಲಸ ಮಾಡಲು ಸಹ ಹಿಂಜರಿಕೆ ಬೇಡವೇ ಬೇಡ. ನಿಮ್ಮ ಗುರಿ ಏನಿದೆಯೋ ಅದನ್ನು ಪ್ರಾಮಾಣಿಕವಾಗಿ ಮಾಡಿ. 

ಮೀನ ರಾಶಿಯವರ ವಾರದ ಆರ್ಥಿಕ ಭವಿಷ್ಯ (Pisces Weekly Money Horoscope)

ನಿಮ್ಮ ಹಣಕಾಸಿನ ಯೋಜನೆ-ಯೋಚನೆಗಳನ್ನು ಮತ್ತೊಮ್ಮೆ ಮೌಲ್ಯಮಾಪನ ಮಾಡಿಕೊಳ್ಳಲು ಈ ವಾರವನ್ನು ನೀವು ಬಳಸಿಕೊಳ್ಳುವುದು ಉತ್ತಮ. ದೀರ್ಘಾವಧಿಯ ಹಣಕಾಸಿನ ಹೂಡಿಕೆ ಮತ್ತು ಉಳಿತಾಯಗಳತ್ತ ಗಮನಹರಿಸಲು ಇದು ಅನುಕೂಲಕರ ಸಮಯ. ಹಠಾತ್ ನಿಮಗೆ ಎದುರಾಗುವ ಖರ್ಚುಗಳಲ್ಲಿ ಕೊಂಚ ಹುಶಾರಾಗಿರಿ. ಅಗತ್ಯ ವೆಚ್ಚಗಳಿಗೆ ಹೆಚ್ಚು ಆದ್ಯತೆ ನೀಡಿ. ಈ ಕುರಿತು ಹಣಕಾಸು ಸಲಹೆಗಾರರನ್ನು ಸಂಪರ್ಕಿಸಬಹುದು. ಇಲ್ಲವೇ, ನಿಮಗೆ ವಿಶ್ವಾಸಾರ್ಹ ಎನಿಸುವ ನಿಮ್ಮ ಆಪ್ತ ಮಾರ್ಗದರ್ಶಕರಿಂದ ಒಳನೋಟವನ್ನು ಮುಜುಗರವಿಲ್ಲದೇ ಪಡೆದುಕೊಳ್ಳಲು ಪ್ರಯತ್ನಿಸಿ.  ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವ ಅನಿರೀಕ್ಷಿತ ಅವಕಾಶಗಳತ್ತ ಗಮನವಿರಲಿ. ಜಾಗರೂಕತೆಯಿಂದ ಖರ್ಚು ಮಾಡುವುದನ್ನು ಅಭ್ಯಾಸ ಮಾಡಿ. 

ಮೀನ ರಾಶಿಯವರ ವಾರದ ಆರೋಗ್ಯ ಭವಿಷ್ಯ (Pisces Weekly Health Horoscope)

ಈ ವಾರ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವತ್ತ ಸ್ವಲ್ಪ ಹೆಚ್ಚು ಗಮನಹರಿಸಬೇಕಿದೆ. ಪ್ರತಿದಿನ ವ್ಯಾಯಾಮ ಮಾಡುವುದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ. ಧ್ಯಾನ ಅಥವಾ ಯೋಗದಂತಹ  ಉತ್ತಮ ಹವ್ಯಾಸಗಳನ್ನು ಆರಂಭಿಸಿ. ಈಗಾಗಲೇ ಇವುಗಳಲ್ಲಿ ತೊಡಗಿದ್ದರೆ ಮುಂದುವರೆಸಿ.  ಇವು ನಿಮ್ಮನ್ನು ಮಾನಸಿಕವಾಗಿ ಬಲಗೊಳಿಸುತ್ತವೆ ಅಲ್ಲದೇ, ನಿರ್ಧಾರಗಳಲ್ಲಿ ಸ್ಪಷ್ಟತೆಯನ್ನು ಸುಧಾರಿಸುತ್ತದೆ. ನಿಮಗೆ ಯಾವುದೇ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಅತ್ತ ಗಮನ ಕೊಡಿ. ಸೂಕ್ತ ವೈದ್ಯರ ಸಲಹೆಯನ್ನು ಪಡೆಯಿರಿ. ಧನಾತ್ಮಕ ವರ್ತನೆ ಮತ್ತು ಆರೋಗ್ಯಕರ ಜೀವನಶೈಲಿಯ ಆಯ್ಕೆಗಳನ್ನು ಕಾಪಾಡಿಕೊಳ್ಳುವುದು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ, ಈ ವಾರ ನೀವು ಸಾಕಷ್ಟು ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ ಎಂಬುದನ್ನು ಮರೆಯಬೇಡಿ.

ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.

ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.

2) ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.

3) ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.